ಉಚಿತ 'ಐಫೋನ್ 7' ಪಡೆಯಲು ನಿಮ್ಮ ಹೆಸರನ್ನು 'ಐಫೋನ್ 7'ಗೆ ಬದಲಿಸಿ ಬಿಡಿ!

By Suneel
|

ಬಿಸಿ ಬಿಸಿ ಕೇಕ್ ರೀತಿಯಲ್ಲಿ 'ಐಫೋನ್ 7' ಪ್ರಪಂಚದಾದ್ಯಂತರ ಖರೀದಿ ಆಗುತ್ತಿದೆ. ಅದರಲ್ಲೂ ಯೂರೋಪ್‌ನ ಪ್ರಶ್ಚಿಮ ದೇಶವಾದ ಉಕ್ರೇನ್‌ನಲ್ಲಿಯಂತೂ 'ಐಫೋನ್ 7' ಖರೀದಿಗೆ ಬೇಡಿಕೆ ಇತರೆ ದೇಶಗಳಿಗಿಂತ ಹೆಚ್ಚಾಗೆ ಇದೆ. ಅಲ್ಲಿ ಆಪಲ್‌ ಐಫೋನ್‌ಗೆ ಫ್ಯಾನ್‌ಗಳು ಸಹ ಹೆಚ್ಚಾಗೆ ಇದ್ದಾರೆ.

ಅಂದಹಾಗೆ ರೀಟೇಲರ್ 'Allo' 5 ಕಪ್ಪು 'ಐಫೋನ್ 7' ಡಿವೈಸ್‌ಗಳನ್ನು ಜನರಿಗೆ ಉಚಿತವಾಗಿ ನೀಡುತ್ತಿದೆ. ಉಚಿತವಾಗಿ ನೀಡುತ್ತಿರುವ ವಿಷಯದಲ್ಲಿ ಎಲ್ಲರಿಗೂ ಕುತೂಹಲ ಆಗುವ ವಿಷಯ ಅಂದ್ರೆ, ಯಾರು ತಮ್ಮ ಹೆಸರನ್ನು 'ಸಿಮ್‌ ಐಫೋನ್‌ಗೆ ಬದಲಾಯಿಸುತ್ತಾರೋ ಅವರಿಗೆ ಮಾತ್ರ ಈ ಐಫೋನ್ 7 ಉಚಿತವಾಗಿ ದೊರೆಯಲಿದೆ. ನೀವು 'ಐಫೋನ್ 7'(iPhone 7) ಅನ್ನು ಉಚಿತವಾಗಿ ಪಡೆಯುವ ಆಕಾಂಕ್ಷಿಗಳಾಗಿದ್ದರೆ ಲೇಖನದಲ್ಲಿ ಸಂಪೂರ್ಣ ಮಾಹಿತಿ ಓದಿರಿ.

ಭಾರತದಲ್ಲಿ 'ಐಫೋನ್‌ 7' ಖರೀದಿ ಬೆಲೆ: ಅತಿ ಕಡಿಮೆ ಬೆಲೆಗೆ ಎಲ್ಲಿ ಲಭ್ಯ?

ಮೊದಲ 5 ಜನರಿಗೆ ಮಾತ್ರ ಉಚಿತ 'ಐಫೋನ್ 7'

ಮೊದಲ 5 ಜನರಿಗೆ ಮಾತ್ರ ಉಚಿತ 'ಐಫೋನ್ 7'

ಮೊದಲ 5 ಜನರಿಗೆ ಮಾತ್ರ ಉಚಿತ 'ಐಫೋನ್ 7' ಅನ್ನು ನೀಡಲಾಗುತ್ತಿದ್ದು, ಈ ಮೊದಲ 5 ಜನರು ತಮ್ಮ ಹೆಸರನ್ನು ಬದಲಿಸಿದವರಿಗೆ ಮಾತ್ರ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಸ್‌ಪೋರ್ಟ್‌ನೊಂದಿಗೆ ಸೆಲ್ಫಿ ಕಳುಹಿಸಬೇಕು

ಪಾಸ್‌ಪೋರ್ಟ್‌ನೊಂದಿಗೆ ಸೆಲ್ಫಿ ಕಳುಹಿಸಬೇಕು

ಅಂದಹಾಗೆ 'Allo' ಆರಂಭಿಸಿರುವ ಉಚಿತ 'ಐಫೋನ್ 7' ಪಡೆಯುವ ಆಂದೋಲನದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ಬದಲಿಸಿ, ಪಾಸ್‌ಪೋರ್ಟ್‌ನೊಂದಿಗೆ ಸೆಲ್ಫಿ ತೆಗೆದು ಕಳುಹಿಸಬೇಕು. ಪಾಸ್‌ಪೋರ್ಟ್‌ನೊಂದಿಗೆ ಏಕೆ ಕಳುಹಿಸಬೇಕು ಎಂದರೆ ಹೆಸರು ಬದಲಾವಣೆ ಆಗಿರುವುದಕ್ಕೆ ಸಾಕ್ಷಿಯಾಗಿ.

 'Allo' ಸ್ಟೋರ್ ಕರೆ ಮಾಡುತ್ತದೆ

'Allo' ಸ್ಟೋರ್ ಕರೆ ಮಾಡುತ್ತದೆ

ಅಂದಹಾಗೆ ಸೆಲೆಕ್ಟ್‌ ಆದ ಅಭ್ಯರ್ಥಿಗಳನ್ನು 'Allo' ಸ್ಟೋರ್‌ ಸ್ವತಃ ಕರೆ ಮಾಡುತ್ತದೆ. ಸೆಲೆಕ್ಟ್ ಆದ ಮೊದಲ 5 ಜನರಿಗೆ 'ಐಫೋನ್ 7' ಅನ್ನು ಉಚಿತವಾಗಿ ನೀಡಲಾಗುತ್ತದೆ.

ಉಚಿತ 'ಐಫೋನ್ 7' ನೀಡುವ ಆಂದೋಲನ ನಡೆಯುತ್ತಿರುವುದು ಎಲ್ಲಿ?

ಉಚಿತ 'ಐಫೋನ್ 7' ನೀಡುವ ಆಂದೋಲನ ನಡೆಯುತ್ತಿರುವುದು ಎಲ್ಲಿ?

ಅಂದಹಾಗೆ ಉಚಿತ 'ಐಫೋನ್ 7' ನೀಡುವ ಆಂದೋಲನವನ್ನು ಯೂರೋಪ್‌ನ ಪಶ್ಚಿಮ ದೇಶವಾದ ಉಕ್ರೇನ್‌'ನ 'Allo' ಎಂಬ ಸ್ಥಳೀಯ ರೀಟೇಲರ್‌ ಕಂಪನಿ ಹಮ್ಮಿಕೊಂಡಿದ್ದು, ತಮ್ಮ ಹೆಸರನ್ನು 'Sim iPhone' ಗೆ ಬದಲಾಯಿಸಿದ ಮೊದಲ 5 ಜನರಿಗೆ ಉಚಿತವಾಗಿ 'ಐಫೋನ್ 7' ಅನ್ನು ನೀಡುತ್ತಿದೆ. ಆದರೆ ಆಂದೋಲನ ಆರಂಭ ಯಾವಾಗ, ಅಂತ್ಯ ಯಾವಾಗ, ಎಂಬ ಮಾಹಿತಿ ತಿಳಿದುಬಂದಿಲ್ಲ.

ಆಪಲ್‌ ಫ್ಯಾನ್‌ಗಳು ಇದಕ್ಕಿಂತ ಹೆಚ್ಚಿನದನ್ನೇ ಮಾಡುತ್ತಾರೆ!

ಆಪಲ್‌ ಫ್ಯಾನ್‌ಗಳು ಇದಕ್ಕಿಂತ ಹೆಚ್ಚಿನದನ್ನೇ ಮಾಡುತ್ತಾರೆ!

ಉಕ್ರೇನ್‌ನಲ್ಲಿನ ಫ್ಯಾನ್‌ಗಳು ಆಪಲ್‌ ಐಫೋನ್‌ಗಾಗಿ ಹೆಸರು ಬದಲಿಸುವುದಕ್ಕಿಂತ ಹೆಚ್ಚಿನ ಸಾಹಸಗಳನ್ನೇ ಮಾಡುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಅಲ್ಲಿನ ಬಹುಸಂಖ್ಯಾತ ಫ್ಯಾನ್‌ಗಳು ಈ ಆಫರ್‌ ಅನ್ನು ಮಿಸ್‌ ಮಾಡಿಕೊಳ್ಳಲು ಬಯಸುವುದಿಲ್ಲ. ಆದ್ರೆ ಹೆಸರು ಬದಲಿಸುವುದು ಸಹ ಉಚಿತವಲ್ಲವೇ.

'ಐಫೋನ್ 7' ಬಿಡುಗಡೆ ಮತ್ತು 20,000 ಡಿವೈಸ್‌ಗಳ ಆರ್ಡರ್‌

'ಐಫೋನ್ 7' ಬಿಡುಗಡೆ ಮತ್ತು 20,000 ಡಿವೈಸ್‌ಗಳ ಆರ್ಡರ್‌

'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್' ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ 20,000 ಡಿವೈಸ್‌ಗಳ ಖರೀದಿ ಆರ್ಡರ್‌ ಅನ್ನು ಪಡೆದಿರುವುದಾಗಿ ದಕ್ಷಿಣ ಕೊರಿಯಾದ 'ಎಸ್‌ಕೆ ಟೆಲಿಕಾಂ' ಕಂಪನಿ ಹೇಳಿದೆ.

 'ಐಫೋನ್ 7' ಪ್ರಮುಖ ವೈಶಿಷ್ಟಗಳು

'ಐಫೋನ್ 7' ಪ್ರಮುಖ ವೈಶಿಷ್ಟಗಳು

* 4.70 ಇಂಚಿನ ಡಿಸ್‌ಪ್ಲೇ
* ಕ್ವಾಡ್‌ಕೋರ್‌ ಪ್ರೊಸೆಸರ್ಸ್‌
* 750*1334p ರೆಸಲ್ಯೂಶನ್‌
* 7mp ಮುಂಭಾಗ ಕ್ಯಾಮೆರಾ ಮತ್ತು 12mp ಹಿಂಭಾಗ ಕ್ಯಾಮೆರಾ
* ಐಓಎಸ್ 10
* 32GB ಸ್ಟೋರೇಜ್‌
* 2GB RAM
* 1960mAh ಬ್ಯಾಟರಿ ಮತ್ತು ಒಂದು ವರ್ಷ ವಾರಂಟಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How to Get a Free iPhone 7: Change Your Name to “iPhone Seven”. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X