ರಿಲಾಯನ್ಸ್ ಜಿಯೋ ಇಂಟರ್ನೆಟ್ ವೇಗವನ್ನು ಆಂಡ್ರಾಯ್ಡ್ ನೋಟಿಫಿಕೇಶನ್ ಬಾರ್‌ನಲ್ಲಿ ಪಡೆಯುವುದು ಹೇಗೆ?

Written By:

ರಿಲಾಯನ್ಸ್ ಜಿಯೋ 4G ಸಿಮ್ ಲಾಂಚ್ ನಂತರ ಟೆಲಿಕಾಂ ಮಾರುಕಟ್ಟೆಯಲ್ಲಿ ಕರೆ ದರ, ಡಾಟಾ ದರದಲ್ಲಿ ಮಹತ್ತರ ಬದಲಾವಣೆ ಜೊತೆಗೆ, ಸ್ಮಾರ್ಟ್‌ಫೋನ್ ಮಾರುಕಟ್ಟೆ ಮಾರಾಟದಲ್ಲೂ ಸಹ ಹೊಸ ಬದಲಾವಣೆ ಆಗಿದೆ. ಕಾರಣ ಎಲ್ಲರೂ ಸಹ 4G ಸಪೋರ್ಟ್ ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ರಿಲಾಯನ್ಸ್ ಜಿಯೋದ ಉಚಿತ ಅನ್‌ಲಿಮಿಟೆಡ್ ಡಾಟಾ, ಕರೆಗಳು ಮತ್ತು ಉಚಿತ ಮೆಸೇಜ್‌ನ ವೆಲ್ಕಮ್ ಆಫರ್‌ನಿಂದ ಸಿಮ್ ಬೇಡಿಕೆ ಇನ್ನೂ ಸಹ ಹೆಚ್ಚುತ್ತಲೇ ಇದೆ. ಆದರೆ ಇತ್ತ ರಿಲಾಯನ್ಸ್ ಜಿಯೋ(Reliance) ಇಂಟರ್ನೆಟ್ ಸಂಪರ್ಕ ವೇಗ ಮಾತ್ರ ಕುಸಿಯುತ್ತಲೇ ಇದೆ. ಅಲ್ಲದೇ ಗ್ರಾಹಕರು ಹೆಚ್ಚಿದಂತೆಲ್ಲಾ ಜಿಯೋ ಇಂಟರ್ನೆಟ್ ಸಂಪರ್ಕದ ಬಗ್ಗೆ ದೂರುಗಳು ಸಹ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಿಲಾಯನ್ಸ್ ಜಿಯೋದ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ತಿಳಿಸಿದ್ದೆವು. ಹಾಗೆಯೇ ಇಂದಿನ ಲೇಖನದಲ್ಲಿ ಜಿಯೋ ಇಂಟರ್ನೆಟ್ ವೇಗ ಚೆಕ್‌ ಮಾಡುವುದು ಹಾಗೂ ವೇಗದ ನೋಟಿಫಿಕೇಶನ್‌ ಬಾರ್‌ ಅನ್ನು ಆಂಡ್ರಾಯ್ಡ್'ನಲ್ಲಿ ಪಡೆಯುವುದು ಹೇಗೆ ಎಂದು ತಿಳಿಯಿರಿ.

ರಿಲಾಯನ್ಸ್ ಜಿಯೋ ಸಿಮ್ ಮೆನೆಗೆ ಡೆಲಿವರಿ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಇಂಟರ್ನೆಟ್ ವೇಗ ಪರಿಶೀಲನೆ

ಜಿಯೋ ಇಂಟರ್ನೆಟ್ ವೇಗ ಪರಿಶೀಲನೆ

ಹಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕಸ್ಟಮ್‌ UI ಇಂದ ರನ್‌ ಆಗುತ್ತಿರುತ್ತವೆ. ಇವುಗಳು ಇಂಟರ್ನೆಟ್ ವೇಗವನ್ನು ನೋಟಿಫಿಕೇಶನ್ ಬಾರ್‌ನಲ್ಲಿ ಪ್ರದರ್ಶನ ನೀಡುತ್ತವೆ. ಸುಲಭವಾಗಿ ಆಂಡ್ರಾಯ್ಡ್‌ ಬಳಕೆದಾರರು ಯಾವುದೇ ಹೆಚ್ಚಿನ ಟ್ರಿಕ್ಸ್‌ಗಳಿಲ್ಲದೇ ಇಂಟರ್ನೆಟ್ ವೇಗವನ್ನು ನೋಟಿಫಿಕೇಶನ್‌ ಬಾರ್‌ನಲ್ಲಿ ಪಡೆಯಬಹುದು.

ಸ್ಪೀಡ್‌ ಮೀಟರ್ ಲೈಟ್ ಆಪ್‌ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಿ

ಸ್ಪೀಡ್‌ ಮೀಟರ್ ಲೈಟ್ ಆಪ್‌ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಿ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ 'ಸ್ಪೀಡ್‌ ಮೀಟರ್ ಲೈಟ್' ಆಪ್‌ ಅನ್ನು ಮೊದಲಿಗೆ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

ಪ್ರಿಫೆರೆನ್ಸ್ ಆಪ್ಶನ್‌ ಮೇಲೆ ಕ್ಲಿಕ್ ಮಾಡಿ (Preferences Option)

ಪ್ರಿಫೆರೆನ್ಸ್ ಆಪ್ಶನ್‌ ಮೇಲೆ ಕ್ಲಿಕ್ ಮಾಡಿ (Preferences Option)

ಆಪ್‌ ಲಾಂಚ್‌ ಮಾಡಿದ ನಂತರ, ಆಪ್‌ ಸ್ಕ್ರೀನ್‌ ಬಲಭಾಗದಲ್ಲಿ ಮೆನು ಕ್ಲಿಕ್‌ ಮಾಡಿ 'Preferences Option' ಕ್ಲಿಕ್‌ ಮಾಡಿ.

Show Up/Down Speed Option

Show Up/Down Speed Option

ನಂತರದಲ್ಲಿ ಲಾಕ್‌ ಸ್ಕ್ರೀನ್ ನೋಟಿಫಿಕೇಶನ್, ಲಿಮಿಟ್ ಡಾಟಾ ಯೂಸೇಜ್‌, Show Up/Down Speed Option ಸೇರಿದಂತೆ ಹಲವು ಆಪ್ಶನ್‌ಗಳು ಪ್ರದರ್ಶನವಾಗುತ್ತವೆ. ಅಲ್ಲಿ Show Up/Down Speed Option ಮೇಲೆ ಟ್ಯಾಪ್‌ ಮಾಡಿ. ನಂತರ ಇದು ಆಂಡ್ರಾಯ್ಡ್‌ನಲ್ಲಿ ಇಂಟರ್ನೆಟ್ ವೇಗವನ್ನು ನೋಟಿಫಿಕೇಶನ್‌ ಬಾರ್‌ನಲ್ಲಿ ತೋರಿಸಲು ಅವಕಾಶ ನೀಡುತ್ತದೆ.

ಸುಲಭ ಟ್ರಿಕ್ಸ್‌ಗಳು

ಸುಲಭ ಟ್ರಿಕ್ಸ್‌ಗಳು

ಈ ಹಂತಗಳನ್ನು ಪಾಲಿಸುವುದರೊಂದಿಗೆ, ಆಂಡ್ರಾಯ್ಡ್ ಬಳಕೆದಾರರು ರಿಲಾಯನ್ಸ್ ಜಿಯೋ ಇಂಟರ್ನೆಟ್‌ ವೇಗವನ್ನು ಸ್ಮಾರ್ಟ್‌ಫೋನ್‌ ಸ್ಕ್ರೀನ್ ಎಡಭಾಗದಲ್ಲಿ ದಿನನಿತ್ಯ ಡೀಪಾಲ್ಟ್'ನಿಂದ ನೋಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
How to Get Reliance Jio Internet Speed in Notification Bar on Your Android Phone. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot