ನೀವು ಸ್ಮಾರ್ಟ್‌ವಾಚ್‌ ಬಳಕೆ ಮಾಡುತ್ತೀರಾ!?... ಈ ಸೆನ್ಸರ್‌ಗಳ ಬಗ್ಗೆ ತಿಳಿಯಿರಿ!

|

ವಾಚ್‌ಗಳನ್ನು ಈ ಹಿಂದೆ ಕೇವಲ ಸಮಯ ನೋಡಲು ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ, ಕಾಲ ಕಳೆದಂತೆ ವಾಚ್‌ಗಳು ಫ್ಯಾಶನ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದವು. ಇದೆಲ್ಲದರ ಜೊತೆಗೆ ಈಗ ವಾಚ್‌ಗಳು ಬಳಕೆದಾರರಿಗೆ ಡಾಕ್ಟರ್‌ ರೀತಿಯಲ್ಲಿ ಸೇವೆ ನೀಡಲು ಮುಂದಾಗಿವೆ. ಈ ಕಾರಣಕ್ಕೆ ಇಂದು ಬಹುಪಾಲು ಮಂದಿ ಸ್ಮಾರ್ಟ್‌ವಾಚ್‌ಗಳ ಮೊರೆಹೋಗುತ್ತಿದ್ದಾರೆ.

ಸ್ಮಾರ್ಟ್‌ವಾಚ್‌

ಹೌದು, ಸ್ಮಾರ್ಟ್‌ವಾಚ್‌ಗಳು ಇಂದು ಬಳಕೆದಾರರಿಗೆ ಸಮಯದ ಜೊತೆಗೆ ವಿವಿಧ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ನೀಡುತ್ತಾ ಬರುತ್ತಿದ್ದು, ಅನಾರೋಗಕ್ಕೆ ತುತ್ತಾಗುವ ಮುನ್ನವೇ ಎಚ್ಚೆತ್ತುಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಸ್ಮಾರ್ಟ್‌‌ವಾಚ್‌ಗಳಲ್ಲಿ ವಿವಿಧ ರೀತಿಯ ಸೆನ್ಸರ್‌ ಆಯ್ಕೆ ನೀಡಲಾಗಿದ್ದು, ಈ ಸೆನ್ಸರ್‌ಗಳು ಹೇಗೆಲ್ಲಾ ಕಾರ್ಯನಿರ್ವಹಿಸಲಿವೆ, ಇವುಗಳಿಂದ ಆಗುವ ಪ್ರಯೋಜನ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ನೀಡಿದ್ದೇವೆ ಓದಿರಿ.

ಹಾರ್ಡ್‌ವೇರ್‌

ಸ್ಮಾರ್ಟ್‌ವಾಚ್‌ಗಳಲ್ಲಿ ಹಾರ್ಡ್‌ವೇರ್‌ಗಳಾದ ಜಿಪಿಎಸ್‌, ಅಕ್ಸೆಲೆರೊಮೀಟರ್, ಹೃದಯ ಬಡಿತ ಮಾನಿಟರ್, ಮೈಕ್ರೊಫೋನ್ ಮತ್ತು ಸ್ಪೀಕರ್‌ಗಳನ್ನು ಇತ್ತೀಚೆಗೆ ಸಾಮಾನ್ಯವಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಕೆಲವು ಸ್ಮಾರ್ಟ್‌ವಾಚ್‌ಗಳು ಎತ್ತರವನ್ನು ಅಳೆಯಲು ಬ್ಯಾರೋಮೀಟರ್‌ನಂತಹ ಹೆಚ್ಚುವರಿ ಸೆನ್ಸರ್‌ ಆಯ್ಕೆಯನ್ನೂ ಸಹ ಪಡೆದುಕೊಂಡಿವೆ. ಇನ್ನೂ ಕೆಲವು ವಾಚ್‌ಗಳು ಡಿಸ್‌ಪ್ಲೇಯಲ್ಲಿನ ಹೊಳಪನ್ನು ಸರಿಹೊಂದಿಸಲು ಬೆಳಕಿನ ಸೆನ್ಸರ್‌ ಆಯ್ಕೆ ಸಹ ಹೊಂದಿರುವುದು ವಿಶೇಷ. ಅಂತೆಯೇ ಯಾವೆಲ್ಲಾ ಸೆನ್ಸರ್‌ಗಳು ಹೇಗೆ ಕೆಲಸ ಮಾಡಲಿವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಹೃದಯ ಬಡಿತ ಸೆನ್ಸರ್‌

ಹೃದಯ ಬಡಿತ ಸೆನ್ಸರ್‌

ಹೃದಯ ಬಡಿತ ಸೆನ್ಸರ್‌ ಅನ್ನು ಫೋಟೋಪ್ಲೆಥಿಸ್ಮೊಗ್ರಾಮ್ (PPG) ಸೆನ್ಸರ್‌ ಎಂದೂ ಸಹ ಕರೆಯಲಾಗುತ್ತದೆ. ಇದು ನಾಡಿಯ ರೇಟ್ ಅನ್ನು ನಿರ್ಧರಿಸಲು ಮತ್ತು ಅದನ್ನು ದಾಖಲಿಸಲು ಸಹಾಯ ಮಾಡಲಿದೆ. ಅಂದರೆ ಮಣಿಕಟ್ಟಿನ ಕ್ಯಾಪಿಲ್ಲರಿಗಳ ಮೂಲಕ ರಕ್ತದ ಹರಿವನ್ನು ಪತ್ತೆಹಚ್ಚಲು ಬಳಸುವ ಸೆನ್ಸರ್‌ ಇದಾಗಿದೆ. ಹಾಗೆಯೇ ಫಿಟ್‌ನೆಸ್ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನು ಅಳೆಯಲು ಇದನ್ನು ಬಳಕೆ ಮಾಡಬಹುದಾಗಿದ್ದು, ಒತ್ತಡ ಅಥವಾ ಇತರ ಆರೋಗ್ಯ ಸಮಸ್ಯೆಗಳ ಯಾವುದೇ ಸೂಚನೆಗಳನ್ನು ಇದರಿಂದ ನೋಡಬಹುದಾಗಿದೆ.

ಅಕ್ಸೆಲೆರೊಮೀಟರ್

ಅಕ್ಸೆಲೆರೊಮೀಟರ್

ಸ್ಮಾರ್ಟ್ ವಾಚ್‌ನಲ್ಲಿನ ಅಕ್ಸೆಲೆರೊಮೀಟರ್ ಬಳಕೆದಾರರ ಚಲನೆ ಮತ್ತು ಇತರೆ ಚಟುವಟಿಕೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರೊಂದಿಗೆ ದೈಹಿಕ ಚಟುವಟಿಕೆ ಮತ್ತು ಫಿಟ್‌ನೆಸ್ ಅನ್ನು ನಿಖರವಾಗಿ ಅಳೆಯಲಿದ್ದು, ಸುಟ್ಟ ಕ್ಯಾಲೊರಿಗಳನ್ನು ಟ್ರ್ಯಾಕ್ ಮಾಡುವ ಮೂಲಕ, ಸಂಚರಿಸಿದ ಹೆಜ್ಜೆಗಳು ಮತ್ತು ಪ್ರಯಾಣದ ದೂರವನ್ನು ಇದು ಮಾನಿಟರ್‌ ಮಾಡುತ್ತದೆ. ಹಾಗೆಯೇ ಲಿಫ್ಟ್ ಟು ವೇಕ್‌ನಂತಹ ಫೀಚರ್ಸ್‌ಗಳನ್ನೂ ಸಹ ಇದರಿಂದ ಬಳಕೆ ಮಾಡಬಹುದಾಗಿದೆ.

ಬಾರೋಮೀಟರ್

ಬಾರೋಮೀಟರ್

ಈ ಬಾರೋಮೀಟರ್ ಮೂಲಕ ವಾಚ್‌ ಗಾಳಿಯ ಒತ್ತಡವನ್ನು ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ಹವಾಮಾನ ಬದಲಾವಣೆಗಳನ್ನು ಇದರಿಂದ ಸುಲಭವಾಗಿ ತಿಳಿದುಕೊಳ್ಳಬಹುದಾಗಿದ್ದು, ಕ್ಲೈಂಬಿಂಗ್ ಅಥವಾ ಹೈಕಿಂಗ್ ಮಾಡುವಾಗ ಎತ್ತರದಲ್ಲಿನ ಪ್ರದೇಶದ ಬದಲಾವಣೆಗಳನ್ನು ಟ್ರ್ಯಾಕ್ ಮಾಡುವುದು ಇದರಿಂದ ಸುಲಭವಾಗುತ್ತದೆ.

ಜಿಪಿಎಸ್

ಜಿಪಿಎಸ್

ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಅಥವಾ ಜಿಪಿಎಸ್‌ ಎನ್ನುವುದು ಸ್ಥಳವನ್ನು ಗುರುತಿಸಲು ಉಪಗ್ರಹಗಳಿಂದ ಸಂಕೇತಗಳನ್ನು ನಿಯಂತ್ರಿಸುವ ವ್ಯವಸ್ಥೆಯಾಗಿದೆ. ರನ್‌ ಟ್ರ್ಯಾಕಿಂಗ್, ಸೈಕ್ಲಿಂಗ್ ಮತ್ತು ಇತರ ಹೊರಾಂಗಣ ಚಟುವಟಿಕೆಗಳಂತಹ ಫಿಚರ್ಸ್‌ಗಳನ್ನು ಈ ಮೂಲಕ ಸಕ್ರಿಯಗೊಳಿಸಲಾಗುತ್ತದೆ. ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಸ್ಥಳ ಆಧಾರಿತ ಸೇವೆಗಳು ಮತ್ತು ಸ್ಥಳ ಆಧಾರಿತ ನೋಟಿಫಿಕೇಶನ್‌ಗಳು ಇದರಿಂದ ಲಭ್ಯ.

ಗೈರೊಸ್ಕೋಪ್

ಗೈರೊಸ್ಕೋಪ್

ಗೈರೊಸ್ಕೋಪ್ ಎಂಬುದು ಮತ್ತೊಂದು ವಿಶೇಷ ಸೆನ್ಸರ್‌ ಆಗಿದ್ದು, ಈ ಫೀಚರ್ಸ್‌ ಪಡೆದುಕೊಂಡಿರುವ ವಾಚ್‌ಗಳ ಮೂಲಕ ಧರಿಸಿದವರು ತಮ್ಮ ಚಲನೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಹಾಗೆಯೇ ಡಿಸ್‌ಪ್ಲೇ ತಿರುಗುವಿಕೆ ಮತ್ತು ನ್ಯಾವಿಗೇಷನ್‌ನಂತಹ ಫೀಚರ್ಸ್‌ಗಳನ್ನು ಈ ಸೆನ್ಸರ್‌ ಸಕ್ರಿಯಗೊಳಿಸುತ್ತದೆ.

Best Mobiles in India

English summary
If you are a smartwatches user then know how the various sensors in the watches will work. Details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X