ಪೇಟಿಎಮ್‌ ವ್ಯಾಲೆಟ್‌ನಿಂದ ಬ್ಯಾಂಕ್‌ಗೆ ಹಣವನ್ನು ಈ ರೀತಿ ಆಡ್‌ ಮಾಡಿ!

|

ಈಗಂತೂ ಎಲ್ಲವೂ ಡಿಜಿಟಲ್‌ ಮಯ, ಯಾರು ಏನೇ ಖರೀದಿ ಮಾಡಬೇಕೆಂದರೂ ಯುಪಿಐ ಅಥವಾ ಇನ್ನಿತರೆ ಡಿಜಿಟಲ್‌ ಸೇವೆಯ ಮೂಲಕ ಪಾವತಿ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಬಳಕೆದಾರರಿಗೆ ಇನ್ನಷ್ಟು ಅನುಕೂಲ ಆಗಲಿ ಎಂದು ಯುಪಿಐ ಆಪ್‌ಗಳು ಹಲವಾರು ರೀತಿಯ ಫೀಚರ್ಸ್‌ ನೀಡಿವೆ. ಅದರಲ್ಲೂ ಪ್ರಮುಖ ಇ-ಕಾಮರ್ಸ್‌ ತಾಣಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿನ ವ್ಯಾಲೆಟ್‌ನಿಂದ ನಿಮ್ಮ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿಕೊಳ್ಳುವುದು ಹಲವರಿಗೆ ತಿಳಿದಿರುತ್ತದೆ. ಅದೇ ರೀತಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಪೇಟಿಎಮ್‌ ವ್ಯಾಲೆಟ್‌ನಿಂದ ಹಣವನ್ನು ಹೇಗೆ ಸೇರಿಸುವುದು ಎಂಬುದರ ಬಗ್ಗೆ ಗೊತ್ತಾ?.

ಫೋನ್‌ಪೇ

ಹೌದು, ಸದ್ಯಕ್ಕೆ ಫೋನ್‌ಪೇ, ಗೂಗಲ್‌ ಪೇ ರೀತಿಯಲ್ಲಿಯೇ ಪೇಟಿಎಮ್‌ ಬಳಕೆಯೂ ಹೆಚ್ಚಿದ್ದು, ಈ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಇನ್ನಷ್ಟು ಅನುಕೂಲಕರ ಫೀಚರ್ಸ್‌ ಅನ್ನು ಪರಿಚಯಿಸುತ್ತಲೇ ಬರುತ್ತಿದೆ. ಅದರಲ್ಲೂ ಹಣ ಪಾವತಿ ಮಾಡುವುದಕ್ಕೆ ವಿವಿಧ ಪಾವತಿ ಮೋಡ್‌ ಆಯ್ಕೆ ನೀಡಲಾಗಿದ್ದು, ಅದರಲ್ಲಿ ವ್ಯಾಲೆಟ್ ಸೇವೆ ಸಹ ಒಂದು. ಹಾಗಿದ್ರೆ ವ್ಯಾಲೆಟ್‌ಲ್ಲಿರುವ ಹಣವನ್ನು ಬ್ಯಾಂಕ್‌ ಖಾತೆಗೆ ಹೇಗೆ ಹಾಕುವುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ವ್ಯಾಲೆಟ್ ಸೇವೆ

ವ್ಯಾಲೆಟ್ ಸೇವೆ

ಆನ್‌ಲೈನ್ ಪಾವತಿ ಪ್ಲಾಟ್‌ಫಾರ್ಮ್ ಪೇಟಿಎಮ್‌ ಬ್ಯಾಂಕ್-ಟು-ಬ್ಯಾಂಕ್ ವರ್ಗಾವಣೆಯ ಜೊತೆಗೆ ವ್ಯಾಲೆಟ್ ಸೇವೆಗಳನ್ನು ನೀಡಿದ್ದು, ಇಂಟರ್ಬ್ಯಾಂಕ್ ಹಣ ವರ್ಗಾವಣೆಗಾಗಿ ಪೇಟಿಎಮ್‌ ಯುಪಿಐ ಅನ್ನು ಬಳಕೆ ಮಾಡಬಹುದು. ಹಾಗೆಯೇ ಪೇಟಿಎಂನ ಇ-ವ್ಯಾಲೆಟ್ ಬಳಕೆದಾರರಿಗೆ ಡಿಜಿಟಲ್ ಪಾವತಿಗಳನ್ನು ಮಾಡಲು ಸುಲಭಗೊಳಿಸುತ್ತದೆ. ಪೇಟಿಎಮ್‌ ಬಳಕೆದಾರರು ತಮ್ಮ ಪೇಟಿಎಮ್‌ ವ್ಯಾಲೆಟ್‌ನಿಂದ ಇತರ ಬಳಕೆದಾರರ ವ್ಯಾಲೆಟ್‌ಗಳಿಗೆ ಅಥವಾ ಇತರ ಬ್ಯಾಂಕ್ ಖಾತೆಗಳಿಗೆ ಯಾವುದೇ ಶುಲ್ಕವನ್ನು ಭರಿಸದೆ ಸುಲಭವಾಗಿ ಹಣವನ್ನು ರವಾನಿಸಬಹದು. ಹಾಗಿದ್ರೆ ಈ ಹಂತಗಳನ್ನು ಅನುಸರಿಸಿ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೇಟಿಎಮ್‌ ಆಪ್‌ ಓಪನ್‌ ಮಾಡಿ. ಅಕಸ್ಮಾತ್ ನೀವು ಈಗಾಗಲೇ ಈ ಆಪ್ ಬಳಕೆ ಮಾಡದೇ ಇದ್ದರೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು.

ಹಂತ 2

ಹಂತ 2

ಪೇಟಿಎಮ್‌ ಓಪನ್‌ ಮಾಡಿದ ನಂತರ ನೀವು' ಮೈ ಪೇಟಿಎಮ್‌' ವಿಭಾಗದಲ್ಲಿ ಕಾಣಿಸಿಸುವ 'ವ್ಯಾಲೆಟ್' ಆಯ್ಕೆಯನ್ನು ಟ್ಯಾಪ್ ಮಾಡಿ.ಇದಾದ ನಂತರ ನಿಮಗೆ ನಿಮ್ಮ ಡಿಸ್‌ಪ್ಲೇ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ 'ಟ್ರಾನ್ಸ್ಫರ್‌ ಟು ಬ್ಯಾಂಕ್' ಆಯ್ಕೆ ಗಮನಿಸಿ.

ಹಂತ 3

ಹಂತ 3

ನಂತರದಲ್ಲಿ ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು 'Proceed' ಬಟನ್ ಮೇಲೆ ಟ್ಯಾಪ್‌ ಮಾಡಿ. ಬಳಿಕ 'Proceed' ವಿಭಾಗದಲ್ಲಿ ನಿಮ್ಮ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಮತ್ತು ಖಾತೆದಾರರ ಹೆಸರನ್ನು ಸರಿಯಾಗಿ ನಮೂದಿಸಿ ಹಾಗೂ ಮತ್ತೆ 'Proceed' ಆಯ್ಕೆಯ ಮೇಲೆ ಮತ್ತೆ ಟ್ಯಾಪ್‌ ಮಾಡಿ.

ಹಂತ 4

ಹಂತ 4

ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಮೆಸೆಜ್ ಬರುತ್ತದೆ. ಅದನ್ನು ಆಪ್‌ನಲ್ಲಿ ಕೇಳಲಾದ ವಿಭಾಗದಲ್ಲಿ ನಮೂದಿಸಿ ಮತ್ತು ಹೆಚ್ಚಿನ ಪರಿಶೀಲನಾ ಸೂಚನೆಗಳನ್ನು ಅನುಸರಿಸಿ.

ಹಂತ 5

ಹಂತ 5

ಬಳಿಕ ಹಣ ವರ್ಗಾವಣೆ ವಿವರಗಳನ್ನು ನಿಮ್ಮ ಡಿಸ್‌ಪ್ಲೇನಲ್ಲಿ ತೋರಿಸಲಾಗುತ್ತದೆ. ಆ ವೇಳೆ ಏನಾದರೂ ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಯಾವುದೇ ಸಮಸ್ಯೆ ಇಲ್ಲ ಎಂದು ಕಂಡುಕೊಂಡ ಮೇಲೆ 'Proceed' ಬಟನ್‌ ಮೇಲೆ ಟ್ಯಾಪ್‌ ಮಾಡಿ. ಈಗ ಪೇಟಿಎಮ್‌ ವ್ಯಾಲೆಟ್‌ನಲ್ಲಿ ಇರುವ ಹಣ ನೀವು ನಮೂದಿಸಿರುವ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುತ್ತದೆ.

ಭವಿಷ್ಯ

ಇನ್ನು ಪ್ರಮುಖ ವಿಷಯ ಎಂದರೆ ನೀವು ಈ ಪ್ರಕ್ರಿಯೆಗೆ ಬಳಕೆ ಮಾಡಿದ ಖಾತೆ ವಿವರ ವ್ಯಾಲೆಟ್‌ ವಿಭಾಗದಲ್ಲಿ ಸೇವ್‌ ಆಗುತ್ತದೆ. ಈ ಮೂಲಕ ನೀವು ಭವಿಷ್ಯದಲ್ಲಿ ಮತ್ತೆ ಹಣ ಪಾವತಿ ಮಾಡಬೇಕು ಎಂದುಕೊಂಡರೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಮತ್ತೆ ಹೊಸದಾಗಿ ಖಾತೆ ವಿವರ ಭರ್ತಿ ಮಾಡುವ ಸಮಯ ಉಳಿಸಬಹುದಾಗಿದೆ.

Best Mobiles in India

English summary
How to add money from Paytm wallet to your bank account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X