ಮೊಬೈಲ್‌ ಡಿಸ್‌ಪ್ಲೇಯನ್ನು ಲ್ಯಾಪ್‌ಟಾಪ್‌ನಲ್ಲಿ ನೋಡಬೇಕೆ?.. ಇಲ್ಲಿದೆ ನೋಡಿ ವಿವರ!

|

ದೊಡ್ಡ ಸ್ಕ್ರೀನ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡಲು ಮುಂದಾಗುವವರಿಗೆ ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ ಹಾಗೂ ಇನ್ನೂ ಅನೇಕ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಹಾಗೆಯೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಡಾಟಾವನ್ನು ಲ್ಯಾಪ್‌ಟಾಪ್‌ ಮೂಲಕ ವೀಕ್ಷಣೆ ಮಾಡಲು ಹಲವಾರು ವಿಧಗಳಿಗೆ. ಅದಾಗ್ಯೂ ಸ್ಕ್ರೀನ್‌ ಮಿರರ್ ಫೀಚರ್ಸ್‌ ಮೂಲಕವೂ ನೀವು ನಿಮ್ಮ ಲ್ಯಾಪ್‌ಟಾಪ್‌ ಹಾಗೂ ಪಿಸಿಯಲ್ಲಿ ಮೊಬೈಲ್‌ ಸ್ಕ್ರೀನ್‌ ಮಿರರ್‌ ಮಾಡಬಹುದು.

ಲ್ಯಾಪ್‌ಟಾಪ್

ಹೌದು, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಡಿಸ್‌ಪ್ಲೇ ನಲ್ಲಿ ನಿಮ್ಮ ಆಂಡ್ರಾಯ್ಡ್‌ ಅಥವಾ iOS ಡಿವೈಸ್‌ಗಳಲ್ಲಿರುವ ವಿಡಿಯೋ ವೀಕ್ಷಿಸಬಹುದು. ಆದರೆ, ಈ ಕಾರ್ಯಕ್ಕೆ ಕೆಲವು ಮಾರ್ಗಗಳ ಮೂಲಕ ಪ್ರವೇಶ ಪಡೆಯಬಹುದಾಗಿದೆ. ಇನ್ನು ಈ ಪ್ರಕ್ರಿಯೆ ಕಷ್ಟಸಾಧ್ಯ ಎಂದುಕೊಂಡರೆ ಚಿಂತೆ ಬೇಡ. ನಾವು ನಿಮಗೆ ಈ ಸ್ಕ್ರೀನ್ ಕಾಸ್ಟಿಂಗ್ ಫೀಚರ್ಸ್‌ ಅನ್ನು ಹೇಗೆ ಬಳಕೆ ಮಾಡಬಹುದು ಎಂಬುದನ್ನು ವಿವರಿಸಿದ್ದೇವೆ ಈ ಲೇಖನ ಓದಿ.

ಸ್ಕ್ರೀನ್ ಕಾಸ್ಟ್‌ ಎಂದರೇನು?

ಸ್ಕ್ರೀನ್ ಕಾಸ್ಟ್‌ ಎಂದರೇನು?

ಸ್ಕ್ರೀನ್ ಕ್ಯಾಸ್ಟಿಂಗ್ ಎನ್ನುವುದು ಬಳಕೆದಾರರಿಗೆ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳನ್ನು ಟಿವಿ ಅಥವಾ ಲ್ಯಾಪ್‌ಟಾಪ್‌ ಗೆ ಸಂಪರ್ಕಿಸಿ ಮಿರರ್‌ ಆಯ್ಕೆಯನ್ನು ಪಡೆಯುವುದಾಗಿದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಏನೆಲ್ಲಾ ಚಟುವಟಿಕೆ ನಡೆಸುತ್ತೀರೋ ಅದೆಲ್ಲಾ ಸಂಪರ್ಕಿತ ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಟಿವಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ದೊಡ್ಡ ಪರದೆಯ ವೀಕ್ಷಣೆ ನಿಮ್ಮನ್ನು ವಿನೋದಮಯವಾಗುವಂತೆ ಮಾಡುತ್ತದೆ.

ಆಂಡ್ರಾಯ್ಡ್ ಫೋನ್‌ನ ಡಿಸ್‌ಪ್ಲೇಯನ್ನು ಲ್ಯಾಪ್‌ಟಾಪ್‌ನಲ್ಲಿ ಈ ರೀತಿ ಪ್ರದರ್ಶಿಸಿ

ಆಂಡ್ರಾಯ್ಡ್ ಫೋನ್‌ನ ಡಿಸ್‌ಪ್ಲೇಯನ್ನು ಲ್ಯಾಪ್‌ಟಾಪ್‌ನಲ್ಲಿ ಈ ರೀತಿ ಪ್ರದರ್ಶಿಸಿ

ಮೈಕ್ರೋಸಾಫ್ಟ್ ವಿಂಡೋಸ್‌ ತನ್ನ 10 ನೇ ವಾರ್ಷಿಕೋತ್ಸವದಂದು ಹೊಸ ಕನೆಕ್ಟ್ ಆಪ್‌ ಒಂದನ್ನು ಪರಿಚಯಿಸಿದೆ. ಈ ಆಪ್‌ ಮೂಲಕ ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವಿಂಡೋಸ್ 10 ಲ್ಯಾಪ್‌ಟಾಪ್ ಅಥವಾ ಪಿಸಿ ಡಿಸ್‌ಪ್ಲೇನಲ್ಲಿ ಯಾವುದೇ ಮೂರನೇ ವ್ಯಕ್ತಿಯ ಆಪ್‌ ಅವಶ್ಯಕತೆ ಇಲ್ಲದೆ ಬಿತ್ತರಿಸಲು ಅನುಮತಿಸುತ್ತದೆ. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಸ್ಮಾರ್ಟ್‌ಫೋನ್‌ನ ಪರದೆಯನ್ನು ಬಿತ್ತರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ  1

ಹಂತ 1

ನೀವು ಮೊದಲು ಕಂಪ್ಯೂಟರ್‌ ಹಾಗೂ ಲ್ಯಾಪ್‌ಟಾಪ್‌ನ ಸೆಟ್ಟಿಗ್‌ ಆಯ್ಕೆಗೆ ತಲುಪಿ, ನಂತರ ಅದರಲ್ಲಿ 'ಸಿಸ್ಟಮ್' ಎಂಬುದನ್ನು ಆಯ್ಕೆಮಾಡಿ. ಇದಾದ ಬಳಿಕ ಕೆಳಗೆ ಸ್ಕ್ರಾಲ್ ಮಾಡಿದರೆ 'ಪ್ರೊಜೆಕ್ಟಿಂಗ್‌ ದಿಸ್‌ ಪಿಸಿ' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ಇದಾದ ಬಳಿಕ ನೀವು ಮೂರು ಆಯ್ಕೆಗಳನ್ನು ಕಂಡುಕೊಳ್ಳಬಹುದು.

ಹಂತ  2

ಹಂತ 2

ಇನ್ನು ಮೂರು ಆಯ್ಕೆಗಳಲ್ಲಿ ನೀವು ಒಂದನೇ ಆಯ್ಕೆಗೆ 'Available everywhere' ಎಂಬ ಆಯ್ಕೆಯನ್ನು ಆರಿಸಿ ಹಾಗೆಯೇ ಎರಡನೇ ಆಯ್ಕೆಗೆ 'First Time Only' ಎಂದು ಆರಿಸಿ. ಹಾಗೂ ಮೂರನೇ ಆಯ್ಕೆ ವಿಭಾಗದಲ್ಲಿ ನಿಮಗೆ ಪ್ರೈವೆಸಿ ಪಿನ್‌ ಆಯ್ಕೆ ಬೇಡ ಎಂದರೆ ಇದನ್ನು ಬಿಟ್ಟು ಬಿಡಿ. ಪ್ರಮುಖ ವಿಷಯ ಎಂದರೆ ನಿಮ್ಮ ಲ್ಯಾಪ್‌ಟಾಪ್ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಒಂದೇ ವೈ-ಫೈ ನೆಟ್‌ವರ್ಕ್‌ನಲ್ಲಿ ಸಂಪರ್ಕದಲ್ಲಿರಿವುದನ್ನು ಮೊದಲು ಕಂಡುಕೊಳ್ಳಿ. ಇಲ್ಲವಾದರೆ ಈ ಫೀಚರ್ಸ್‌ ಲಭ್ಯವಾಗುವುದಿಲ್ಲ.

ಹಂತ 3

ಹಂತ 3

ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ನಿಮ್ಮ ಫೋನ್ ತೆಗೆದುಕೊಂಡು ಅಧಿಸೂಚನೆ ಲಿಸ್ಟ್‌ ಓಪನ್‌ ಮಾಡಿ. ಅದರಲ್ಲಿ ಸ್ಕ್ರೀನ್ ಕಾಸ್ಟ್‌‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಆಕ್ಟಿವ್‌ ಮಾಡಿ. ಈ ಆಯ್ಕೆಯಲ್ಲಿ ಹೊಸ ಡಿವೈಸ್‌ಗಾಗಿ ನೀವು ಪಾಪ್-ಅಪ್ ಸರ್ಚ್‌ ಆಯ್ಕೆಯನ್ನು ನೋಡಬಹುದು. ಈ ಪ್ರಕ್ರಿಯೆಗೆ ಕೆಲವು ಸಮಯ ತೆಗೆದುಕೊಳ್ಳಬಹುದು.

ನಿಮ್ಮ iOS ಡಿವೈಸ್‌ನಲ್ಲಿ ಈ ರೀತಿ ಮಾಡಿ

ನಿಮ್ಮ iOS ಡಿವೈಸ್‌ನಲ್ಲಿ ಈ ರೀತಿ ಮಾಡಿ

ಸರಳ ಹಂತದ ಮೂಲಕ ನಿಮ್ಮ iOS ಮೊಬೈಲ್ ಡಿಸ್‌ಪ್ಲೇ ಅನ್ನು ಲ್ಯಾಪ್‌ಟಾಪ್‌ಗೆ ಬಿತ್ತರಿಸುವ ಅತ್ಯುತ್ತಮ ಮಾರ್ಗವನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದು, ಈ ಹಂತಗಳನ್ನು ಅನುಸರಿಸಿ.

ಹಂತ 1

ಹಂತ 1

ಮೊದಲಿಗೆ ನಿಮ್ಮ ಐಫೋನ್ ಮತ್ತು ನಿಮ್ಮ ಲ್ಯಾಪ್‌ಟಾಪ್ ಒಂದೇ ವೈ-ಫೈ ನೆಟ್‌ವರ್ಕ್‌ನಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. ಅದಕ್ಕೂ ಮೊದಲು ನೀವು ಏರ್‌ ಸರ್ವರ್‌ (AirServer) ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಿರುತ್ತದೆ. ನಂತರ ಲ್ಯಾಪ್‌ಟಾಪ್‌ನಲ್ಲಿ ಈ ಆಪ್‌ ಓಪನ್‌ ಮಾಡಿ ಅದರಲ್ಲಿ ಟ್ರೈ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಪ್ರಮುಖ ವಿಷಯ ಎಂದರೆ ಈ ಫೀಚರ್ಸ್‌ ನಿಮಗೆ ಆಪ್‌ ಡೌನ್‌ಲೋಡ್ ಮಾಡಿದ 31 ದಿನಗಳ ವರೆಗೆ ಇರುತ್ತದೆ.

ಹಂತ 2

ಹಂತ 2

ಇದಾದ ಬಳಿಕ ನಿಮ್ಮ ಫೋನ್‌ ನಲ್ಲಿ ನೋಟಿಫಿಕೇಶನ್‌ ವಿಭಾಗವನ್ನು ತೆರೆಯಿರಿ. ಅದರಲ್ಲಿ ಕಾಣಿಸಿಕೊಳ್ಳುವ ಸ್ಕ್ರೀನ್ ಮಿರರಿಂಗ್ ಮೇಲೆ ಟ್ಯಾಪ್ ಮಾಡಿ. ಆ ವೇಳೆ ನೀವು ಲ್ಯಾಪ್‌ಟಾಪ್‌ನ ಹೆಸರು ಹಾಗೂ ಮಾಡೆಲ್‌ ನಂಬರ್‌ಅನ್ನು ವೀಕ್ಷಿಸಬಹುದು. ಇದರ ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಫೋನ್‌ ಚಟುವಟಿಕೆಯನ್ನು ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಬಹುದು.

Best Mobiles in India

English summary
Many people like to watch videos on the big screen. Accordingly, see how to cast screen on laptop and PC through your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X