ಅಡ್ರೆಸ್‌ ಪ್ರೂಫ್‌ ಇಲ್ಲದಿದ್ದರೂ ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡಲು ಹೀಗೆ ಮಾಡಿ!

|

ಆಧಾರ್‌ ಕಾರ್ಡ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡೋರಿಗೆ UIDAI ಗುಡ್‌ ನ್ಯೂಸ್‌ ನೀಡಿದೆ. ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ಅಡ್ರೆಸ್‌ ಚೇಂಜ್‌ ಮಾಡಬೇಕಾದರೆ ಅಡ್ರೆಸ್‌ ಪ್ರೂಫ್‌ ಅನ್ನು ನೀಡಬೇಕಾಗುತ್ತದೆ. ಆದರೆ ಇನ್ಮುಂದೆ ನಿಮ್ಮ ಬಳಿ ಅಡ್ರೆಸ್‌ ಪ್ರೂಫ್‌ ಇಲ್ಲದಿದ್ದರೂ ಅಡ್ರೆಸ್‌ ಅನ್ನು ಬದಲಾಯಿಸುವುದಕ್ಕೆ ಅವಕಾಶ ಸಿಕ್ಕಿದೆ. ಈ ಮೂಲಕ UIDAI ಬಳಕೆದಾರರಿಗೆ ಸುಲಭವಾಗಿ ವಿಳಾಸವನ್ನು ಬದಲಾಯಿಸಲು ಅವಕಾಶ ನೀಡಿದೆ.

ಆಧಾರ್‌

ಹೌದು, UIDAI ಆಧಾರ್‌ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಬಯಸೋರಿಗೆ ಹೊಸ ಅವಕಾಶ ನೀಡಿದೆ. ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಅಪ್ಡೇಟ್‌ ಮಾಡಲು ಯಾವುದೇ ದಾಖಲೆ ಇಲ್ಲದಿದ್ದರೂ ಅವಕಾಶ ನೀಡಲು ಮುಂದಾಗಿದೆ. ಆದರೆ ಇದಕ್ಕಾಗಿ ನೀವು ನಿಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಲಿದ. ಹಾಗಾದ್ರೆ ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಮೂಲಕ ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ವಿಳಾಸ ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಧಾರ್‌ ಕಾರ್ಡ್‌

ಆಧಾರ್‌ ಕಾರ್ಡ್‌ ವಿಳಾಸವನ್ನು ಬದಲಾಯಿಸುವುದಕ್ಕೆ UIDAI ಇದೀಗ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ಆಧಾರ್‌ನಲ್ಲಿ ವಿಳಾಸವನ್ನು ಅಪ್ಡೇಟ್‌ ಮಾಡುವುದಕ್ಕೆ ಸಹಾಯ ಮಾಡುವ ನಿವಾಸಿ ಸ್ನೇಹಿ ಸೌಲಭ್ಯವನ್ನು ಜಾರಿಗೆ ತಂದಿದೆ. ಅದರಂತೆ ನೀವು ಆಧಾರ್‌ ವಿಳಾಸವನ್ನು ಬದಲಾಯಿಸುವಾಗ ನಿಮ್ಮ ಕುಟುಂಬದ ಮುಖ್ಯಸ್ಥರ (HoF) ಒಪ್ಪಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಅಂದರೆ ಆಧಾರ್‌ನಲ್ಲಿನ ಕುಟುಂಬದ ಮುಖ್ಯಸ್ಥರ ವಿಳಾಸದ ಆಧಾರದ ಮೇಲೆ ವಿಳಾಸವನ್ನು ಬದಲಾಯಿಸಬಹುದು.

ಫ್ಯಾಮಿಲಿ

ಹೆಡ್‌ ಆಫ್‌ ದ ಫ್ಯಾಮಿಲಿ ಆಧಾರಿತ ಆನ್‌ಲೈನ್ ವಿಳಾಸದ ಬದಲಾವಣೆಯ ಆಯ್ಕೆಯು ತಮ್ಮದೇ ಹೆಸರಿನಲ್ಲಿ ಯಾವುದೇ ಅಡ್ರೆಸ್‌ ಪ್ರೂಫ್‌ ಹೊಂದಿರದ ನಾಗರಿಕರಿಗೆ ಸಹಾಯವನ್ನು ಮಾಡಲಿದೆ ಎಂದು ಯುಐಡಿಎಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದರಲ್ಲಿ ಯಾವುದೇ ವಿಳಾಸದ ದಾಖಲೆಗಳು ನಿಮ್ಮ ಬಳಿ ಇಲ್ಲದಿದ್ದರೆ, ನಿವಾಸಿಯು UIDAI ನಿಗದಿತ ಸ್ವರೂಪದಲ್ಲಿ HOF ನಿಂದ ಸ್ವಯಂ ಘೋಷಣೆಯನ್ನು ಸಲ್ಲಿಸಬಹುದಾಗಿದೆ.

ಸೂಚಿಸಿದ

ಈ ಆಯ್ಕೆಯು ಯುಐಡಿಎಐ ಸೂಚಿಸಿದ ಯಾವುದೇ ಮಾನ್ಯವಾದ ವಿಳಾಸದ ದಾಖಲೆಯನ್ನು ಬಳಸಿಕೊಂಡು ಅಡ್ರೆಸ್‌ ಚೇಂಜ್‌ ಮಾಡೋರಿಗೆ ಸಹಾಯಕಾರಿಯಾಗಲಿದೆ. ಇದರಲ್ಲಿ ನೀವು ವಿಳಾಸ ಬದಲಾಯಿಸುವಾಗ ನಿಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆಯನ್ನು ಆನ್‌ಲೈನ್‌ನಲ್ಲಿ ಪಡೆಯಬೇಕಾಗುತ್ತದೆ. ಇದನ್ನು ದೃಡೀಕರಿಸುವುದಕ್ಕೆ ಅವರ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಅವರ ಸಂಬಂಧಿಕರೊಂದಿಗೆ ತಮ್ಮ ವಿಳಾಸವನ್ನು ಹಂಚಿಕೊಳ್ಳಬಹುದು ಎಂದು UIDAI ದೃಢಪಡಿಸಿದೆ.

ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್‌ ಪ್ರೂಫ್‌ ಇಲ್ಲದೆ ವಿಳಾಸವನ್ನು ಬದಲಾಯಿಸುವುದು ಹೇಗೆ?

ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್‌ ಪ್ರೂಫ್‌ ಇಲ್ಲದೆ ವಿಳಾಸವನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ https://myaadhaar.uidai.gov.in ವೆಬ್‌ಸೈಟ್‌ಗೆ ಬೇಟಿ ನೀಡಿ.
ಹಂತ:2 ಆನ್‌ಲೈನ್‌ನಲ್ಲಿ ಅಡ್ರೆಸ್‌ ಅಪ್ಡೇಟ್‌ ಮಾಡಲು ನೀವು ಹೊಸ ಆಯ್ಕೆಯನ್ನು ಆರಿಸಿಕೊಳ್ಳಬೇಕು.
ಹಂತ:3 ನಂತರ ನಿಮ್ಮ HOF ಅವರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಹಂತ:4 HOF ನ ಆಧಾರ್ ಸಂಖ್ಯೆಯ ದೃಡೀಕರಣ ಮಾಡಬೇಕಾಗುತ್ತದೆ.
ಹಂತ:5 ನಂತರ, ನೀವು ಸಂಬಂಧದ ಪುರಾವೆ ದಾಖಲೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಹಂತ:6 ಇದೀಗ ವಿಳಾಸ ಬದಲಾವಣೆಯ ಸೇವೆಗಾಗಿ ನೀವು 50ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹಂತ:7 ಹಣ ಪಾವತಿ ಯಶಸ್ವಿಯಾದ ನಂತರ SRN ನಂಬರ್‌ ದೊರೆಯಲಿದೆ. ಅಲ್ಲದೆ ವಿಳಾಸ ವಿನಂತಿಯ ಕುರಿತು HOF ಗೆ SMS ಕಳುಹಿಸಲಾಗುತ್ತದೆ
ಹಂತ: ಅಧಿಸೂಚನೆಯನ್ನು ಸ್ವೀಕರಿಸಿದ ನಂತರ ನಿಮ್ಮ ಕುಟುಂಬದ ಮುಖ್ಯಸ್ತರು 30 ದಿನಗಳ ಒಳಗೆ ಮೈ ಆಧಾರ್ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ HOF ವಿನಂತಿಯನ್ನು ಅನುಮೋದಿಸಬೇಕಾಗುತ್ತದೆ. ಅಲ್ಲದೆ ಅವರ ಒಪ್ಪಿಗೆಯನ್ನು ನೀಡಿದರೆ ಮಾತ್ರ ನಿಮ್ಮ ವಿಳಾಸ ಬದಲಾಗಲಿದೆ.

Best Mobiles in India

English summary
How to change address in Aadhaar without submitting new address proof

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X