ನಿಮ್ಮ ವಾಟ್ಸಾಪ್‌ನಲ್ಲಿ ಅನಗತ್ಯ ಫೋಟೋ, ವಿಡಿಯೋಗಳಿದ್ರೆ, ಮೊದಲು ಈ ಕೆಲಸ ಮಾಡಿ!

|

ಮೆಟಾ-ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಾಪ್‌ (WhatsApp) ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಹತ್ತಿರವಾಗಿದೆ. ವಾಟ್ಸಾಪ್‌ ಆಪ್‌ ಅತ್ಯುತ್ತಮ ಮೆಸೆಜ್‌ ತಾಣದ ಜೊತೆಗೆ ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು, GIF ಗಳು ಮತ್ತು ಸ್ಟಿಕ್ಕರ್‌ಗಳನ್ನು ಶೇರ್‌ ಮಾಡಬಹುದಾಗಿದೆ. ಹಾಗೆಯೇ ಬೇಡವಾದ ಫೋಟೊ, ವಿಡಿಯೋ ಸೇರಿದಂತೆ ಇತರೆ ಮೀಡಿಯಾ ಫೈಲ್‌ಗಳನ್ನು ತೆಗೆದು ಹಾಕಲು ಅವಕಾಶ ಇದೆ.

ವಾಟ್ಸಾಪ್‌ ಆಪ್‌

ಹೌದು, ವಾಟ್ಸಾಪ್‌ ಅಪ್ಲಿಕೇಶನ್ ಕಾಲಕಾಲಕ್ಕೆ ನೂತನ ಅಪ್‌ಡೇಟ್‌ ಪರಿಚಯಿಸುತ್ತ ಮುನ್ನಡೆದಿದ್ದು, ಆದಾಗ್ಯೂ, ವಾಟ್ಸಾಪ್‌ ಆಪ್‌ಗೆ ಬರುವ ಫೋಟೊಗಳು, ವಿಡಿಯೋಗಳು ಸೇರಿದಂತೆ ಇತರೆ ಫೈಲ್‌ಗಳಿಂದ ಡಾಟಾ ಸಂಗ್ರಹಣೆಯಲ್ಲಿ ರಾಶಿಯಾಗಿರುತ್ತದೆ ಹಾಗೂ ಇದ್ರಿಂದಾಗಿ ಸ್ಮಾರ್ಟ್‌ಫೋನ್‌ನ ಆಂತರಿಕ ಸ್ಟೋರೇಜ್‌ ಭರ್ತಿಯಾಗುತ್ತದೆ.

ಸ್ಥಳಾವಕಾಶವನ್ನು

ಈ ರೀತಿ ಅನಗತ್ಯ ಫೋಟೊ, ವಿಡಿಯೋಗಳಿಂದ ಫೋನಿನ ಸ್ಟೋರೇಜ್‌ ಭರ್ತಿಯಾದರೆ, ಫೋನ್ ಕೆಲಸವನ್ನು ನಿಧಾನಗೊಳಿಸುತ್ತದೆ. ಅಲ್ಲದೇ ವಾಟ್ಸಾಪ್‌ ಆಪ್ ಬಳಸುವುದನ್ನು ಮುಂದುವರಿಸಲು ಸ್ಥಳಾವಕಾಶವನ್ನು ಮುಕ್ತಗೊಳಿಸಲು ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಫೋನ್‌ನಲ್ಲಿ ಅಗತ್ಯವಿಲ್ಲದ ವೀಡಿಯೊಗಳು, ಫೋಟೋಗಳು ಹಾಗೂ ಇತರೆ ಫೈಲ್‌ಗಳ ಡಾಟಾ ಕ್ಲಿಯರ್‌ ಮಾಡಬೇಕಿರುತ್ತದೆ. ಹಾಗಾದರೆ ವಾಟ್ಸಾಪ್‌ನಲ್ಲಿ ಅನಗತ್ಯ ಫೋಟೊ, ವಿಡಿಯೋ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸಂಗ್ರಹಣೆ ಮತ್ತು ಡೇಟಾ

ಯಾವುದೇ ಡೇಟಾವನ್ನು ಡಿಲೀಟ್‌ ಮಾಡುವ ಮೊದಲು, ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಎಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಚೆಕ್‌ ಮಾಡಿ. ಆಂತರಿಕ ಸಂಗ್ರಹಣೆಯನ್ನು ಮುಕ್ತಗೊಳಿಸಲು ನೀವು ನಂತರ ಐಟಂಗಳನ್ನು ಡಿಲೀಟ್‌ ಮಾಡಬಹುದು. ವಾಟ್ಸಾಪ್‌ ತೆರೆಯಿರಿ > ಸೆಟ್ಟಿಂಗ್‌ಗಳು > ಸಂಗ್ರಹಣೆ ಮತ್ತು ಡೇಟಾ > ಸಂಗ್ರಹಣೆಯನ್ನು ನಿರ್ವಹಿಸಿ. ಲಭ್ಯವಿರುವ ಫೋನ್ ಮೆಮೊರಿ ಮತ್ತು ವಾಟ್ಸಾಪ್‌ ಮೀಡಿಯಾವು ಎಷ್ಟು ಜಾಗವನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ಬಳಕೆದಾರರು ಗಮನಿಸಬಹುದು.

ವಾಟ್ಸಾಪ್‌ ಮೀಡಿಯಾ ಚೆಕ್‌ ಮಾಡಿ, ಡಿಲೀಟ್ ಮಾಡಲು ಹೀಗೆ ಮಾಡಿ:

ವಾಟ್ಸಾಪ್‌ ಮೀಡಿಯಾ ಚೆಕ್‌ ಮಾಡಿ, ಡಿಲೀಟ್ ಮಾಡಲು ಹೀಗೆ ಮಾಡಿ:

* ಮ್ಯಾನೇಜ್‌ ಸ್ಟೋರೇಜ್‌ ಆಯ್ಕೆಯಲ್ಲಿ, '5 MB ಗಿಂತ ದೊಡ್ಡದು' ಮೇಲೆ ಟ್ಯಾಪ್ ಮಾಡಿ ಅಥವಾ ನಿರ್ದಿಷ್ಟ ಚಾಟ್ ಅನ್ನು ಆಯ್ಕೆ ಮಾಡಿ.
* Newest, Oldest, ಅಥವಾ Largest. ಎಂದು ವಿಂಗಡಿಸುವ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಮೀಡಿಯಾವನ್ನು ವಿಂಗಡಿಸಬಹುದು.
* ವೈಯಕ್ತಿಕ ಅಥವಾ ಮಲ್ಟಿಪಲ್ ಮೀಡಿಯಾವನ್ನು ಆಯ್ಕೆ ಮಾಡಿ ಮತ್ತು ಟ್ಯಾಪ್ ಮಾಡಿ ಮತ್ತು ನಂತರ ಅವುಗಳನ್ನು ಡಿಲೀಟ್ ಮಾಡಿರಿ.

ಸರ್ಚ್‌ ಮೂಲಕ ವಾಟ್ಸಾಪ್‌ ಮೀಡಿಯಾವನ್ನು ಹೀಗೆ ಡಿಲೀಟ್ ಮಾಡಿ:

ಸರ್ಚ್‌ ಮೂಲಕ ವಾಟ್ಸಾಪ್‌ ಮೀಡಿಯಾವನ್ನು ಹೀಗೆ ಡಿಲೀಟ್ ಮಾಡಿ:

* ವಾಟ್ಸಾಪ್‌ ಚಾಟ್ಸ್ ಟ್ಯಾಬ್ ತೆರೆಯಿರಿ ಮತ್ತು ನಂತರ ಸರ್ಚ್‌ ಆಯ್ಕೆ ಟ್ಯಾಪ್ ಮಾಡಿ.
* ಸರ್ಚ್‌ ಮಾಡಲು ಮತ್ತು ಡಿಲೀಟ್ ಮಾಡಲು ಬಯಸುವ ಯಾವುದೇ ಮೀಡಿಯಾವನ್ನು ಫೋಟೋಗಳು, ವೀಡಿಯೊಗಳು ಅಥವಾ ಡಾಕ್ಯುಮೆಂಟ್‌ಗಳನ್ನು ಆಯ್ಕೆ ಮಾಡಿ.
* ಡಿಲೀಟ್‌ ಮಾಡಲು ಬಯಸುವ ಐಟಂ ಅನ್ನು ಟ್ಯಾಪ್ ಮಾಡಿ ಮತ್ತು ತೆರೆಯಿರಿ.
* ನಂತರ ಮೋರ್ > ಡಿಲೀಟ್‌ ಆಯ್ಕೆ ಮೇಲೆ ಟ್ಯಾಪ್ ಮಾಡಿ.

ವಾಟ್ಸಾಪ್‌ ಫೋಟೊ ಅಪ್‌ಲೋಡ್ ಗುಣಮಟ್ಟ ಹೀಗೆ ಸೆಟ್‌ ಮಾಡಿ:

ವಾಟ್ಸಾಪ್‌ ಫೋಟೊ ಅಪ್‌ಲೋಡ್ ಗುಣಮಟ್ಟ ಹೀಗೆ ಸೆಟ್‌ ಮಾಡಿ:

- ವಾಟ್ಸಾಪ್‌ ಸೆಟ್ಟಿಂಗ್‌ ಆಯ್ಕೆ ಅನ್ನು ತೆರೆಯಿರಿ
- ಸಂಗ್ರಹಣೆ ಮತ್ತು ಡೇಟಾ ಮೇಲೆ ಟ್ಯಾಪ್ ಮಾಡಿ
- ಮೀಡಿಯಾ ಅಪ್‌ಲೋಡ್ ಗುಣಮಟ್ಟದಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ set Auto, Best quality ಅಥವಾ Data saver ಅನ್ನು ಸೆಟ್ ಮಾಡಿರಿ.
ಬಳಕೆದಾರರು ಮಾಧ್ಯಮ ಸ್ವಯಂ ಡೌನ್‌ಲೋಡ್ ಅನ್ನು ಸಹ ನಿಯಂತ್ರಿಸಬಹುದು ಇದರಿಂದ ಅನಗತ್ಯ ಮಾಧ್ಯಮವು ಮೊಬೈಲ್ ಡೇಟಾ ಅಥವಾ ವೈ-ಫೈನಲ್ಲಿ ಸ್ವಯಂ ಡೌನ್‌ಲೋಡ್ ಆಗುವುದಿಲ್ಲ.

Best Mobiles in India

English summary
How to delete unwanted WhatsApp media files: If memory is full WhatsApp prompts users to delete media to continue using the app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X