ನಿಮ್ಮ ಬಳಿ ಯಾವ ಕಂಪನಿ ಫೋನ್‌ ಇದೆ?..ಅದರಲ್ಲಿ 5G ಆಕ್ಟಿವ್ ಮಾಡುವುದು ಹೇಗೆ?

|

ಬಹುನಿರೀಕ್ಷಿತ 5G ನೆಟ್‌ವರ್ಕ್‌ ಸೇವೆ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಭಾರ್ತಿ ಏರ್‌ಟೆಲ್ 8 ಮೆಟ್ರೋ ನಗರಗಳಲ್ಲಿ ತನ್ನ 5G ಸೇವೆಗಳನ್ನು ಘೋಷಿಸಿತು. ಇನ್ನು ರಿಲಯನ್ಸ್ ಜಿಯೋ ತನ್ನ 5G ಸೇವೆಯ ಬೀಟಾ ಪರೀಕ್ಷೆಯನ್ನು ನಾಲ್ಕು ನಗರಗಳಲ್ಲಿ ಪ್ರಾರಂಭಿಸಿದೆ. ಹಾಗೆಯೇ ಏರ್‌ಟೆಲ್‌ ಹಾಗೂ ಜಿಯೋ ಟೆಲಿಕಾಂಗಳು ಶೀಘ್ರದಲ್ಲೇ 5G ಸೇವೆಯನ್ನು ವಿಸ್ತರಿಸುವುದಾಗಿ ತಿಳಿಸಿವೆ.

5G

ಬಹುನಿರೀಕ್ಷಿತ 5G ನೆಟ್‌ವರ್ಕ್‌ ಸೇವೆ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಭಾರ್ತಿ ಏರ್‌ಟೆಲ್ 8 ಮೆಟ್ರೋ ನಗರಗಳಲ್ಲಿ ತನ್ನ 5G ಸೇವೆಗಳನ್ನು ಘೋಷಿಸಿತು. ಇನ್ನು ರಿಲಯನ್ಸ್ ಜಿಯೋ ತನ್ನ 5G ಸೇವೆಯ ಬೀಟಾ ಪರೀಕ್ಷೆಯನ್ನು ನಾಲ್ಕು ನಗರಗಳಲ್ಲಿ ಪ್ರಾರಂಭಿಸಿದೆ. ಹಾಗೆಯೇ ಏರ್‌ಟೆಲ್‌ ಹಾಗೂ ಜಿಯೋ ಟೆಲಿಕಾಂಗಳು ಶೀಘ್ರದಲ್ಲೇ 5G ಸೇವೆಯನ್ನು ವಿಸ್ತರಿಸುವುದಾಗಿ ತಿಳಿಸಿವೆ.

ಇಲ್ಲವೇ

5G ನೆಟ್‌ವರ್ಕ್‌ ಲಭ್ಯವಾಗಿದೆ ಆದರೆ ಸದ್ಯ ಇರುವ ಸ್ಮಾರ್ಟ್‌ಫೋನ್‌ 5G ಸಪೋರ್ಟ್ ಮಾಡುತ್ತಾ ಅಥವಾ ಇಲ್ಲವೇ ಎನ್ನುವ ಗೊಂದಲ ಕೆಲವು ಬಳಕೆದಾರರಲ್ಲಿ ಇವೆ. ಪ್ರಸ್ತುತ ಬಳಕೆ ಮಾಡುತ್ತಿರುವ ಸ್ಯಾಮ್‌ಸಂಗ್, ಶಿಯೋಮಿ, ರೆಡ್ಮಿ, ಒಪ್ಪೋ, ವಿವೋ, ಒನ್‌ಪ್ಲಸ್‌, ಗೂಗಲ್‌ ಪಿಕ್ಸಲ್, ರಿಯಲ್‌ಮಿ, ಪೊಕೊ ಸಂಸ್ಥೆಯ ಕೆಲವು ಸ್ಮಾರ್ಟ್‌ಫೋನ್‌ಗಳು 5G ಸಪೋರ್ಟ್‌ ಪಡೆದಿವೆ. ಆದರೆ 5G ಲಭ್ಯತೆ ಇರುವ ಪ್ರದೇಶದ ಬಳಕೆದಾರರು ಫೋನಿನಲ್ಲಿ 5G ಆಯ್ಕೆ ಸಕ್ರಿಯ ಮಾಡಿಕೊಳ್ಳಬೇಕಿದೆ. ಹಾಗಾದರೇ ನಿಮ್ಮ ಫೋನಿನಲ್ಲಿ 5G ಆಯ್ಕೆ ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್ ಪಿಕ್ಸೆಲ್ ಫೋನ್‌ಗಳು

ಗೂಗಲ್ ಪಿಕ್ಸೆಲ್ ಫೋನ್‌ಗಳು

(ಸ್ಟಾಕ್ ಆಂಡ್ರಾಯ್ಡ್ ಪಿಕ್ಸಲ್ ಫೋನ್‌ಗಳು) ಫೋನಿನ ಸೆಟ್ಟಿಂಗ್‌ ತೆರೆಯಿರಿ > ನೆಟ್‌ವರ್ಕ್ ಮತ್ತು ಇಂಟರ್ನೆಟ್ ಆಯ್ಕೆ > ಸಿಮ್‌ಗಳು ಆಯ್ಕೆ > ಆದ್ಯತೆಯ ನೆಟ್‌ವರ್ಕ್ ಪ್ರಕಾರ (Preferred network type) > 5G ಆಯ್ಕೆ ಮಾಡಿ.

ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ಹೀಗೆ ಮಾಡಿ

ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ಹೀಗೆ ಮಾಡಿ

ಫೋನಿನ ಸೆಟ್ಟಿಂಗ್‌ಗಳು ತೆರೆಯಿರಿ > ಕನೆಕ್ಷನ್ > ಮೊಬೈಲ್ ನೆಟ್‌ವರ್ಕ್‌ಗಳು > ನೆಟ್‌ವರ್ಕ್ ಮೋಡ್ > 5G/LTE/3G/2G ಆಯ್ಕೆ ಮಾಡಿ (ಆಟೋ ಕನೆಕ್ಟ್‌)

ಒನ್‌ಪ್ಲಸ್‌ ಫೋನ್‌ಗಳಲ್ಲಿ ಹೀಗೆ ಮಾಡಿ

ಒನ್‌ಪ್ಲಸ್‌ ಫೋನ್‌ಗಳಲ್ಲಿ ಹೀಗೆ ಮಾಡಿ

ಫೋನಿನ ಸೆಟ್ಟಿಂಗ್‌ಗಳು ತೆರೆಯಿರಿ > ವೈ-ಫೈ ಮತ್ತು ನೆಟ್‌ವರ್ಕ್‌ಗಳು > ಸಿಮ್ ಮತ್ತು ನೆಟ್‌ವರ್ಕ್ > ಆದ್ಯತೆಯ ನೆಟ್‌ವರ್ಕ್ ಪ್ರಕಾರ > 2G/3G/4G/5G ಆಯ್ಕೆ ಮಾಡಿ (ಆಟೋ ಕನೆಕ್ಟ್‌)

ಒಪ್ಪೋ ಫೋನ್‌ಗಳಲ್ಲಿ ಹೀಗೆ ಮಾಡಿ

ಒಪ್ಪೋ ಫೋನ್‌ಗಳಲ್ಲಿ ಹೀಗೆ ಮಾಡಿ

ಫೋನಿನ ಸೆಟ್ಟಿಂಗ್‌ಗಳು ತೆರೆಯಿರಿ > ಕನೆಕ್ಷನ್ ಮತ್ತು ಶೇರಿಂಗ್ > SIM 1 ಅಥವಾ SIM 2 ಮೇಲೆ ಟ್ಯಾಪ್ ಮಾಡಿ > ಆದ್ಯತೆಯ ನೆಟ್‌ವರ್ಕ್ ಪ್ರಕಾರ > 2G/3G/4G/5G ಆಯ್ಕೆ ಮಾಡಿ (ಆಟೋ ಕನೆಕ್ಟ್‌)

ರಿಯಲ್‌ಮಿ ಫೋನ್‌ಗಳಲ್ಲಿ ಈ ಕ್ರಮ ಫಾಲೋ ಮಾಡಿ

ರಿಯಲ್‌ಮಿ ಫೋನ್‌ಗಳಲ್ಲಿ ಈ ಕ್ರಮ ಫಾಲೋ ಮಾಡಿ

ಫೋನಿನ ಸೆಟ್ಟಿಂಗ್‌ಗಳು ತೆರೆಯಿರಿ > ಕನೆಕ್ಷನ್ ಮತ್ತು ಶೇರಿಂಗ್ > SIM 1 ಅಥವಾ SIM 2 ಮೇಲೆ ಟ್ಯಾಪ್ ಮಾಡಿ > ಆದ್ಯತೆಯ ನೆಟ್‌ವರ್ಕ್ ಪ್ರಕಾರ > 2G/3G/4G/5G ಆಯ್ಕೆ ಮಾಡಿ. (ಆಟೋ ಕನೆಕ್ಟ್‌)

ವಿವೋ ಮತ್ತು ಐಕ್ಯೂ ಫೋನ್‌ಗಳಲ್ಲಿ ಹೀಗೆ ಮಾಡಿ

ವಿವೋ ಮತ್ತು ಐಕ್ಯೂ ಫೋನ್‌ಗಳಲ್ಲಿ ಹೀಗೆ ಮಾಡಿ

ಫೋನಿನ ಸೆಟ್ಟಿಂಗ್‌ಗಳು ತೆರೆಯಿರಿ > ಸಿಮ್ 1 ಅಥವಾ ಸಿಮ್ 2 ಮೇಲೆ ಟ್ಯಾಪ್ ಮಾಡಿ > ಮೊಬೈಲ್ ನೆಟ್‌ವರ್ಕ್ > ನೆಟ್‌ವರ್ಕ್ ಮೋಡ್ > 5G ಮೋಡ್ ಆಯ್ಕೆ ಮಾಡಿ

ಶಿಯೋಮಿ ಮತ್ತು ಪೊಕೊ ಫೋನ್‌ಗಳಲ್ಲಿ ಹೀಗೆ ಮಾಡಿ

ಶಿಯೋಮಿ ಮತ್ತು ಪೊಕೊ ಫೋನ್‌ಗಳಲ್ಲಿ ಹೀಗೆ ಮಾಡಿ

ಫೋನಿನ ಸೆಟ್ಟಿಂಗ್‌ಗಳು ತೆರೆಯಿರಿ > ಸಿಮ್ ಕಾರ್ಡ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳು > ಆದ್ಯತೆಯ ನೆಟ್‌ವರ್ಕ್ ಪ್ರಕಾರ > ಆದ್ಯತೆ 5G ಆಯ್ಕೆ ಮಾಡಿ.

ಜಿಯೋ ಮತ್ತು ಏರ್‌ಟೆಲ್‌ 5G ಸೇವೆ:

ಜಿಯೋ ಮತ್ತು ಏರ್‌ಟೆಲ್‌ 5G ಸೇವೆ:

ರಿಲಾಯನ್ಸ್ ಜಿಯೋ ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ ಬೀಟ್ ಟ್ರಯಲ್ ಆಗಿ 5G ಸೇವೆಯನ್ನು ಪರಿಚಯಿಸಿದೆ. ಹಾಗೆಯೇ ಡಿಸೆಂಬರ್ 2023 ರ ವೇಳೆಗೆ 5G ಎಲ್ಲರಿಗೂ ಲಭ್ಯವಾಗಲಿದೆ ಎಂದಿದೆ. ಮತ್ತೊಂದೆಡೆ, ಏರ್‌ಟೆಲ್ ದೆಹಲಿ, ವಾರಣಾಸಿ, ನಾಗ್ಪುರ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಸಿಲಿಗುರಿ ಸೇರಿದಂತೆ 8 ನಗರಗಳಲ್ಲಿ ಈಗಾಗಲೇ 5G ಸೇವೆ ಪ್ರಾರಂಭಿಸಿದೆ.

Best Mobiles in India

English summary
How to Enable 5G on your Smartphone: Here's a brand-wise guide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X