ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ನಲ್ಲಿ 'ಪ್ಯಾನಿಕ್ ಮೋಡ್' ಬಳಕೆ ಹೇಗೆ?

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ಕಂಪೆನಿ ನೀಡುವ ಸ್ಮಾರ್ಟ್‌ ಫೀಚರ್ಸ್‌ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಪ್ರಸ್ತುತ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಕೆದಾರರು 'ಪ್ಯಾನಿಕ್ ಮೋಡ್' ಎಂಬ ಫೀಚರ್ಸ್‌ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ 'ಪ್ಯಾನಿಕ್ ಮೋಡ್' ಆಯ್ಕೆ ಇದ್ದು, ನಿಮಗೆ ಏನಾದರೂ ತುರ್ತು ಸಂದರ್ಭ ಉಂಟಾದರೆ ಅಥವಾ ಇನ್ಯಾವುದೇ ಸಮಸ್ಯೆ ಎದುರಾದರೆ 'ಪ್ಯಾನಿಕ್ ಮೋಡ್' ಆಯ್ಕೆಯಲ್ಲಿ ಸೇರಿಸಲಾದ ಸಂಪರ್ಕಗಳಿಗೆ ಮಾಹಿತಿ ಹೋಗುತ್ತದೆ. ಈ ಮೂಲಕ ಅವರು ನಿಮಗೆ ತ್ವರಿತವಾಗಿ ಸಹಾಯ ಮಾಡಲು ಮುಂದಾಗುತ್ತಾರೆ. ಹಾಗಿದ್ರೆ ಆ ಫೀಚರ್ಸ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಳಸುವುದು ಹೇಗೆ? ಏನೆಲ್ಲಾ ಪ್ರಯೋಜನೆ ಇದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ಓದಿರಿ.

'ಪ್ಯಾನಿಕ್ ಮೋಡ್' ಎಂದರೇನು?

'ಪ್ಯಾನಿಕ್ ಮೋಡ್' ಎಂದರೇನು?

ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೀಚರ್ಸ್‌ ನೀಡಿದೆ. ನೀವು ಮನೆಯಿಂದ ಹೊರ ಹೋಗಿದ್ದಾಗ. ಅಥವಾ ನೀವು ಮನೆಯಲ್ಲಿ ಒಬ್ಬರೇ ಇದ್ದಾಗ, ಕೆಲಸದ ಸ್ಥಳದಲ್ಲಿ ಆರೋಗ್ಯ ಪರಿಸ್ಥಿತಿ ಹದಗೆಟ್ಟರೆ, ಅಪಘಾತ ಸಂಭವಿಸಿದರೆ ಈ ಸೌಲಭ್ಯ ಬಳಕೆ ಮಾಡಬಹುದು. ಇದಕ್ಕೂ ಮೊದಲು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 'ಪ್ಯಾನಿಕ್ ಮೋಡ್' ಸಕ್ರಿಯಗೊಳಿಸಬೇಕಿದೆ.

ಸಕ್ರಿಯಗೊಳಿಸುವುದು ಹೇಗೆ?

ಸಕ್ರಿಯಗೊಳಿಸುವುದು ಹೇಗೆ?

ಮೊದಲು ನಿಮ್ಮ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿನ 'ಸೆಟ್ಟಿಂಗ್‌' ಹೋಗಿ. ಅಲ್ಲಿ ಕಾಣುವ 'ಅಡ್ವಾನ್ಸ್ ಫೀಚರ್ಸ್‌' ಆಯ್ಕೆಯ ಕೆಳಗೆ ಸ್ಕ್ರಾಲ್ ಮಾಡಿದರೆ 'ಪ್ಯಾನಿಕ್ ಮೋಡ್' ಕಾಣುತ್ತದೆ. ನಂತರ ಅಲ್ಲಿ ಕಾಣಿಸುವ 'ಸೆಂಡ್ SOS ಮೆಸೆಜ್' ಮೇಲೆ ಟ್ಯಾಪ್‌ ಮಾಡಿ.

ಸ್ಮಾರ್ಟ್‌ಫೋನ್‌

ನಂತರ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ತಿರುಗಿಸಿದಾಗ ಅಗತ್ಯವಿರುವ ಅನುಮತಿಗಳನ್ನು ಕೇಳುತ್ತದೆ ಅದನ್ನು ಒಪ್ಪಿದ ನಂತರ 'ಸ್ಟಾರ್ಟ್‌' ಆಯ್ಕೆಯ ಮೇಲೆ ಟ್ಯಾಪ್ ಮಾಡಿ ಅಲ್ಲಿ ನಿಮಗೆ ಅಗತ್ಯ ಎನಿಸುವ ತುರ್ತು ಸಂಪರ್ಕಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಪೋಷಕರು ನಂಬರ್, ಪೊಲೀಸರ ನಂಬರ್‌ ಅಥವಾ ಹಾಸ್ಟೆಲ್‌ನಲ್ಲಿದ್ದರೆ ವಾರ್ಡನ್‌ ನಂಬರ್‌ ಹೀಗೆ ಬೇಕಾದವರ ನಂಬರ್‌ ಅನ್ನು ಅಲ್ಲಿ ಸೇರಿಸಿ. ಇದಾದ ಮೇಲೆ 'ಪ್ಯಾನಿಕ್ ಮೋಡ್' ಫೀಚರ್ಸ್‌ ಕಾರ್ಯನಿರ್ವಹಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಈ ಪೀಚರ್ಸ್‌ ಅನ್ನು ಆಕ್ಟಿವ್ ಮಾಡಿದ ನಂತರ ನಿಮಗೆ ಏನಾದರೂ ತುರ್ತು ಸಂದರ್ಭ ಎದುರಾದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ. ಆಗ ತಕ್ಷಣಕ್ಕೆ 112 ಕ್ಕೆ ಕರೆ ಹೋಗುತ್ತದೆ. ಈ ಸಮಯದಲ್ಲಿ ನೀವು ಮೊದಲೇ ನೀಡಲಾದ ನಂಬರ್‌ಗಳಿಗೆ ಕರೆ ಅಥವಾ ಮೆಸೆಜ್‌ ಮಾಡಬಹುದು.

ಫೋಟೋಗಳನ್ನೂ ಕಳುಹಿಸಬಹುದು

ಫೋಟೋಗಳನ್ನೂ ಕಳುಹಿಸಬಹುದು

ನೀವು ಯಾವ ರೀತಿಯ ತುರ್ತು ಪರಿಸ್ಥಿತಿಯಲ್ಲಿರುವಿರಿ ಎಂಬುದನ್ನು ವಿವರಿಸಲು SOS ಸಂದೇಶದೊಂದಿಗೆ ಫೋಟೋಗಳನ್ನೂ ಸಹ ಕಳುಹಿಸಬಹುದಾಗಿದೆ. ಇನ್ನು ಎಲ್ಲಾ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ 'ಪ್ಯಾನಿಕ್ ಮೋಡ್' ಫೀಚರ್ಸ್‌ ಅನ್ನು 2017 ರಿಂದ ಆರಂಭಿಸಲಾಗಿದೆ. ಈ ಫೀಚರ್ಸ್‌ ನಿಮಗೆ ಅಗತ್ಯ ಇಲ್ಲ ಎಂದರೆ ನಿಷ್ಕ್ರಿಯಗೊಳಿಸಬಹುದಾಗಿದೆ.

ಮಹಿಳೆಯರಿಗೆ ಭದ್ರತೆ

ಮಹಿಳೆಯರಿಗೆ ಭದ್ರತೆ

ಈ ಫೀಚರ್ಸ್‌ ಅನ್ನು ಮಹಿಳೆಯರ ಭದ್ರತೆ ವಿಚಾರದ ಮೇಲೆ ಕೇಂದ್ರೀಕರಿಸಿಕೊಂಡು ಪರಿಚಯಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಕೆದಾರರು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸಂಪರ್ಕ ಮಾಡಲು ಈ ಫೀಚರ್ಸ್‌ ಸಹಾಯ ಮಾಡುತ್ತದೆ. ಇದರೊಂದಿಗೆ ಗೂಗಲ್ ಪಿಕ್ಸೆಲ್ ಸರಣಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಐಫೋನ್ 14 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರ್ಯಾಶ್ ಡಿಟೆಕ್ಷನ್ ಹಾಗೂ ತುರ್ತು SOS ನಂತಹ ಫೀಚರ್ಸ್‌ ಇವೆ.

Best Mobiles in India

English summary
There is a high demand for Samsung smartphones in the tech market. Meanwhile Panic Mode has been described in Samsung Galaxy smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X