ನಿಮ್ಮ ಫೋನಿನಲ್ಲಿ ಯಾವ ಡಿಸ್‌ಪ್ಲೇ ಇದೆ?..ತಿಳಿಯಲು ಹೀಗೆ ಮಾಡಿರಿ!

|

ಪ್ರಸ್ತುತ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ ಇವೆ. ಬಜೆಟ್‌ ದರದಿಂದ ಹೈ ಎಂಡ್‌ ಮಾದರಿಯ ಫೋನ್‌ಗಳ ಲಿಸ್ಟ್‌ ಇದ್ದು, ಫೋನ್‌ಗಳು ಭಿನ್ನ ಡಿಸ್‌ಪ್ಲೇ ಮಾದರಿ ಗಳನ್ನು ಒಳಗೊಂಡಿವೆ. ಸದ್ಯ ಇತ್ತೀಚಿನ ಬಹುತೇಕ ಫೋನ್‌ಗಳು LCD, OLED, Super AMOLED ಮತ್ತು AMOLED ಮಾದರಿಯ ಡಿಸ್‌ಪ್ಲೇ ಗಳನ್ನು ಒಳಗೊಂಡಿರುತ್ತವೆ. ಆದ್ರೆ ಬಹುತೇಕ ಬಳಕೆದಾರರಿಗೆ ಅವರು ಫೋನ್ ಡಿಸ್‌ಪ್ಲೇ ಯಾವ ಮಾದರಿ ಎಂಬುದು ತಿಳಿದಿರುವುದಿಲ್ಲ.

ಸೂಕ್ತ

ಹೌದು, ಬಹುತೇಕ ಬಳಕೆದಾರಿಗೆ ಅವರು ಬಳಕೆ ಮಾಡುವ ಫೋನಿನ ಡಿಸ್‌ಪ್ಲೇಯ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಆದರೆ ಬಳಕೆದಾರರು ಅವರು ಬಳಕೆ ಮಾಡುವ ಸ್ಮಾರ್ಟ್‌ಫೋನ್ ಯಾವ ರೀತಿಯ ಡಿಸ್‌ಪ್ಲೇ ಅನ್ನು ಹೊಂದಿದೆ ಎಂಬುದನ್ನು ತಿಳಿಯಲು ಬಯಸಿದರೆ, ಅದಕ್ಕೆ ಸೂಕ್ತ ಮಾರ್ಗವಿದೆ. ಹಾಗಾದರೆ ಬಳಕೆದಾರರು ತಮ್ಮ ಫೋನಿನಲ್ಲಿ ಯಾವ ಮಾದರಿಯ ಡಿಸ್‌ಪ್ಲೇ ಇದೆ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಮಾದರಿ ಯಾವುದು? ಹೀಗೆ ತಿಳಿಯಿರಿ

ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಮಾದರಿ ಯಾವುದು? ಹೀಗೆ ತಿಳಿಯಿರಿ

ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಯಾವ ಮಾದರಿಯದ್ದು ಎಂಬುದನ್ನು ತಿಳಿಯಲು ಹಲವಾರು ಮಾರ್ಗಗಳಿವೆ. ಬಳಕೆದಾರರು ಫೋನ್‌ನ ಫೀಚರ್ಸ್‌ಗಳನ್ನು ನೋಡುವ ಮೂಲಕ ಡಿಸ್‌ಪ್ಲೇಯ ಬಗ್ಗೆ ನೇರವಾಗಿ ಪರಿಶೀಲಿಸಬಹುದು. ಇದಲ್ಲದೇ ಸ್ಕ್ರೀನ್‌ ಯಾವ ಮಾದರಿಯದು ಎಂಬುದನ್ನು ತಿಳಿಯಲು ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಗಳು ಸಹ ಲಭ್ಯ ಇವೆ.

ಫೋನ್‌ ಫೀಚರ್ಸ್‌ ಶೀಟ್‌ ಮೂಲಕ ತಿಳಿಯಲು ಹೀಗೆ ಮಾಡಿ:

ಫೋನ್‌ ಫೀಚರ್ಸ್‌ ಶೀಟ್‌ ಮೂಲಕ ತಿಳಿಯಲು ಹೀಗೆ ಮಾಡಿ:

ಹಂತ 1: ನೀವು ಹೊಸ ಸ್ಮಾರ್ಟ್‌ಫೋನ್ ಹೊಂದಿದ್ದರೆ, ನೇರವಾಗಿ ಕಂಪನಿಯ ವೆಬ್‌ಸೈಟ್‌ ಗೆ ಹೋಗಿ ಮತ್ತು ಕೆಳಗಿನ ಹಂತ ಗಳನ್ನು ಅನುಸರಿಸಿ. ನೀವು ಹಳೆಯ ಸ್ಮಾರ್ಟ್‌ಫೋನ್ ಹೊಂದಿದ್ದರೆ, ವೆಬ್‌ನಲ್ಲಿ ಮಾಡೆಲ್ ಸಂಖ್ಯೆ ಯನ್ನು ಸರ್ಚ್ ಮಾಡಬಹುದು ಮತ್ತು ನಿಮ್ಮ ಸಾಧನದ ಸ್ಪೆಕ್ಸ್ ಅನ್ನು ತಿಳಿಯಬಹುದು.

ವಿಭಾಗಕ್ಕೆ

ಹಂತ 2: ಹೊಸ ಸಾಧನಕ್ಕಾಗಿ, ನೀವು ಕಂಪನಿಯ ವೆಬ್‌ಸೈಟ್ ಅನ್ನು ತೆರೆದ ನಂತರ, ಸರಳ ವಾಗಿ ಸ್ಮಾರ್ಟ್‌ಫೋನ್ ಅಥವಾ ಉತ್ಪನ್ನ ವಿಭಾಗಕ್ಕೆ ಹೋಗಿ, ಇದು ಪ್ರತಿ ಬ್ರ್ಯಾಂಡ್‌ಗೆ ವಿಭಿನ್ನವಾಗಿರುತ್ತದೆ. ಒಮ್ಮೆ ನೀವು ವಿಭಾಗಕ್ಕೆ ಹೋದರೆ, ನಿಮ್ಮ ಫೋನ್‌ ಅನ್ನು ಸರ್ಚ್ ಮಾಡಿ ಮತ್ತು ಅದರ ಫೀಚರ್ಸ್‌ ಗಳನ್ನು ತೆರೆಯಿರಿ.

ಹಂತ 3: ನಂತರ ಡಿಸ್‌ಪ್ಲೇ ವಿಭಾಗ ದಲ್ಲಿ, ನೀವು ಡಿಸ್‌ಪ್ಲೇ ಪ್ರಕಾರ ವನ್ನು ಹೆಚ್ಚಾಗಿ ಕಾಣಬಹುದು.

ಥರ್ಡ್‌ ಪಾರ್ಟಿ ಆಪ್‌ ಮೂಲಕ ಈ ಕ್ರಮ ಅನುಸರಿಸಿ:

ಥರ್ಡ್‌ ಪಾರ್ಟಿ ಆಪ್‌ ಮೂಲಕ ಈ ಕ್ರಮ ಅನುಸರಿಸಿ:

ಹಂತ 1: ಮೊದಲನೆಯದಾಗಿ, ಪ್ಲೇ ಸ್ಟೋರ್‌ ನಿಂದ Display Tester ಅಪ್ಲಿಕೇಶನ್ ಅನ್ನು ಡೌನ್‌ ಲೋಡ್ ಮಾಡಿ.

ಹಂತ 2: ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ ಅದನ್ನು ತೆರೆಯಿರಿ ಮತ್ತು 'Tests' ವಿಭಾಗದ ಮೇಲೆ ಟ್ಯಾಪ್ ಮಾಡಿ.

ಹಂತ 3: Defective pixel detection ಆಯ್ಕೆ ಮೇಲೆ ಟ್ಯಾಪ್ ಮಾಡಿ.

ಡಿಸ್‌ಪ್ಲೇಯು

ಹಂತ 4: ಈಗ, ನೀವು ಸ್ಕ್ರೀನ್‌ ಮೇಲೆ ವಿವಿಧ ಬಣ್ಣಗಳನ್ನು ನೋಡುತ್ತೀರಿ, ನೀವು ಕಪ್ಪು ಬಣ್ಣವನ್ನು ತಲುಪುವವರೆಗೆ ಅವುಗಳ ಮೂಲಕ ಸ್ಕ್ರಾಲ್ ಮಾಡಿ.

ಹಂತ 5: ಕೊನೆಯದಾಗಿ, ಡಿಸ್‌ಪ್ಲೇಯು ತುಂಬಾ ಪ್ರಕಾಶಮಾನವಾಗಿದೆಯೇ ಅಥವಾ ಅದು ಆಫ್ ಆಗಿರುವಂತೆ ಗೋಚರಿಸುತ್ತದೆಯೇ ಎಂದು ಪರಿಶೀಲಿಸಿ. ಡಿಸ್‌ಪ್ಲೇ ಆಫ್ ಆಗಿರುವಂತೆ ಕಂಡು ಬಂದರೆ, ನಿಮ್ಮ ಫೋನ್ AMOLED ಅಥವಾ OLED ಪ್ಯಾನೆಲ್ ಅನ್ನು ಹೊಂದಿರಬಹುದು.

Best Mobiles in India

English summary
How You Can find what Type of Display Your Smartphone Has.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X