ವಾಟ್ಸಪ್ ಗ್ರೂಪ್ ಮೆಸೆಜ್ ನೋಟಿಫಿಕೇಶನ್ ಮ್ಯೂಟ್ ಮಾಡುವುದು ಹೇಗೆ ಗೊತ್ತೆ?

|

ಪ್ರಸ್ತುತ ಅತೀ ಹೆಚ್ಚು ಜನಪ್ರಿಯತೆಯಲ್ಲಿರುವ ಇನ್‌ಸ್ಟಂಟ್ ವಾಟ್ಸಪ್‌ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಮುಖ್ಯವಾಗಿ ಬಳಕೆದಾರರಿಗೆ ಮಾಹಿತಿಗೆ ಸುರಕ್ಷತೆಗೆ ಒದಗಿಸುವ ಫೀಚರ್ಸ್‌ಗಳಿಂದ ಹೆಚ್ಚು ಸದ್ದು ಮಾಡಿದೆ. ಇತ್ತೀಚಿಗೆ ವಾಟ್ಸಪ್‌ ಡಾರ್ಕ್‌ಮೋಡ್, ಫಿಂಗರ್‌ಪ್ರಿಂಟ್ ಲಾಕ್‌ನಂತಹ ಫೀಚರ್‌ಗಳ ಜೊತೆಗೆ ವಾಟ್ಸಪ್‌ ಗ್ರೂಪ್‌ಗಳನ್ನು ನಿಯಂತ್ರಿಸುವ ಆಯ್ಕೆಗಳು ಅಳವಡಿಸಿದ್ದು, ಅವು ಬಳಕೆದಾರರಿಗೆ ಹೆಚ್ಚು ಅನುಕೂಲಕವಾಗಿವೆ.

ವಾಟ್ಸಪ್‌ನಲ್ಲಿ ಬಳಕೆದಾರ

ಹೌದು, ವಾಟ್ಸಪ್‌ನಲ್ಲಿ ಬಳಕೆದಾರರು ಅವರ ಅನುಕೂಲಕ್ಕೆ ಅನುಗುಣವಾಗಿ ವಾಟ್ಸಪ್‌ ಸೆಟ್ ಮಾಡುವ ಕೆಲವು ಆಯ್ಕೆಗಳು ಇವೆ. ಅವುಗಳಲ್ಲಿ ಬಳಕೆದಾರರ ಅನುಮತಿ ಇಲ್ಲದೇ ವಾಟ್ಸಪ್ ಗ್ರೂಪ್ ಸೇರಿಸುವುದನ್ನು ನಿಯಂತ್ರಿಸಬಹುದು. ಗ್ರೂಪ್‌ಗಳ ಅಡ್ಮಿನ್‌ಗೆ ಗ್ರೂಪ್ ನಿಯಂತ್ರಿಸುವ ಅವಕಾಶಗಳಿವೆ. ಹಾಗೂ ವಾಟ್ಸಪ್‌ ಗ್ರೂಪ್‌ಗಳಿಂದ ನಿರಂತರ ಬರುವ ಮೆಸೆಜ್‌ಗಳ ಸೌಂಡ್‌ ನಿಯಂತ್ರಿಸುವ ಆಯ್ಕೆಯು ಬಳಕೆದಾರರಿಗೆ ಉಪಯುಕ್ತವಾಗಿದೆ.

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಿ

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಿ

ಸಾಮಾನ್ಯವಾಗಿ ಪ್ರತಿಯೊಬ್ಬರು ಕೆಲವು ವಾಟ್ಸಪ್‌ನ ಗ್ರೂಪ್‌ಗಳನ್ನು ಹೊಂದಿರುತ್ತಾರೆ. ಆ ಎಲ್ಲ ಗ್ರೂಪ್‌ಗಳಿಂದ ನಿರಂತರ ಮೆಸೆಜ್‌ಗಳು ಬರುತ್ತಲೆ ಇರುತ್ತವೆ. ಪ್ರತಿ ಬಾರಿ ಮೆಸೆಜ್ ಬಂದಾಗ ಸೌಂಡ್‌ ಆಗುತ್ತಲೆ ಇರುತ್ತದೆ. ಗ್ರೂಪ್‌ ಮೆಸೆಜ್ ಸೌಂಡ್‌ ಜೊತೆಗೆ ಸ್ನೇಹಿತರಿಂದ ನೇರವಾಗಿ ಬರುವ ಮೆಸೆಜ್‌ಗಳ ಸೌಂಡ್‌ ಸಹ ಸೇರಿರುತ್ತವೆ. ಮೆಸೆಜ್ ಬಂದಿರುವುದು ತಿಳಿಯಲು ಸೌಂಡ್ ಬೇಕು ಆದರೆ ಗ್ರೂಪ್ ಮೆಸೆಜ್‌ ಕಿರಿಕಿರಿ ಅನಿಸಿದ್ದರೇ ಗ್ರೂಪ್‌ ಮೆಸೆಜ್‌ಗಳ ನೋಟಿಫಿಕೇಶನ್‌ ಮ್ಯೂಟ್ ಮಾಡಬಹುದು.

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಲು ಹೀಗೆ ಮಾಡಿ

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಲು ಹೀಗೆ ಮಾಡಿ

* ವಾಟ್ಸಪ್‌ ಖಾತೆ ತೆರೆಯಿರಿ.
* ಯಾವ ಗ್ರೂಪ್ ಮೆಸೆಜ್ ನೋಟಿಫಿಕೇಶನ್‌ ಮ್ಯೂಟ್ ಮಾಡಬೇಕು ಆ ಗ್ರೂಪ್ ಸೆಲೆಕ್ಟ್ ಮಾಡಿ.
* ಸೆಲೆಕ್ಟ್ ಮಾಡಿರುವ ಗ್ರೂಪ್ ಲಾಂಗ್ ಪ್ರೆಸ್‌ ಮಾಡಿ.
* ಆಗ ಮೇಲ್ಭಾಗದಲ್ಲಿ ಕಾಣಿಸುವ ಮ್ಯೂಟ್ ಐಕಾನ್‌ ಅನ್ನು ಒತ್ತಿರಿ.

ಹೀಗೂ ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಬಹುದು

ಹೀಗೂ ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಬಹುದು

* ವಾಟ್ಸಪ್ ಖಾತೆ ತೆರೆಯಿರಿ
* ಮ್ಯೂಟ್ ಮಾಡಬಯಸುವ ಗ್ರೂಪ್ ಸೆಲೆಕ್ಟ್ ಮಾಡಿ.
* ಗ್ರೂಪ್ ತೆರೆಯಿರಿ, ಹಾಗೂ ಕಾಣಿಸುವ ಮೂರು ಡಾಟ್ ಮೆನು ತೆರೆಯಿರಿ.
* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ಮ್ಯೂಟ್ ನೋಟಿಫಿಕೇಶನ್ ಆಯ್ಕೆ ಒತ್ತಿರಿ.

ಮೂರು ಆಯ್ಕೆಗಳು

ಮೂರು ಆಯ್ಕೆಗಳು

ವಾಟ್ಸಪ್‌ ಗ್ರೂಪ್‌ ಮೆಸೆಜ್ ನೋಟಿಫಿಕೇಶನ್ ಮ್ಯೂಟ್ ಆಯ್ಕೆ ಸೆಲೆಕ್ಟ್ ಮಾಡುವಾಗ ಮೂರು ಆಯ್ಕೆಗಳು ಕಾಣಿಸುತ್ತವೆ. ಅವುಗಳು ಕ್ರಮವಾಗಿ 8 ಗಂಟೆ, ಒಂದು ವಾರ ಮತ್ತು ಒಂದು ವರ್ಷ ಆಯ್ಕೆ ಹೊಂದಿವೆ. ಬಳಕೆದಾರರು ಯಾವ ಅವಧಿಗೆ ಮ್ಯೂಟ್ ಮಾಡಬೇಕೊ ಆ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೇ ಆಯಿತು. ಸೆಲೆಕ್ಟ್ ಮಾಡಿರುವ ಅವಧಿಯವರೆಗೂ ಮೆಸೆಜ್‌ಗಳ ನೋಟಿಫಿಕೇಶನ್ ಕಿರಿಕಿರಿ ಇರದು.

ಅನ್‌ಮ್ಯೂಟ್ ಮಾಡುವ ಆಯ್ಕೆ

ಅನ್‌ಮ್ಯೂಟ್ ಮಾಡುವ ಆಯ್ಕೆ

ಬಳಕೆದಾರರು ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್ ಮ್ಯೂಟ್‌ ಮಾಡಿರುವುದನ್ನು ತಗೆಯಬಹುದು. ಅದಕ್ಕಾಗಿ ಮ್ಯೂಟ್ ಮಾಡಲು ಬಳಸಿದ ಹಂತಗಳನ್ನೇ ಅನುಸರಿಸಿ, ಅನ್‌ಮ್ಯೂಟ್ ನೋಟಿಫಿಕೇಶನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

Best Mobiles in India

English summary
WhatsApp comes with an option that allows users to mute and unmute group notifications for a certain period of time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X