ಐಫೋನ್‌ನಲ್ಲಿ ಹೆಚ್ಚು ಡೇಟಾ ವ್ಯಯವಾಗುತ್ತಿದೆಯೇ...? ಇಲ್ಲಿದೆ ಪರಿಹಾರ!

|

ಸ್ಮಾರ್ಟ್‌ಡಿವೈಸ್‌ಗಳ ಬಳಕೆಗೆ ಇಂಟರ್ನೆಟ್‌ ಅಗತ್ಯ. ಇದನ್ನು ವೈ-ಫೈ, ಸೆಲ್ಯುಲರ್‌ ಅಥವಾ ಇನ್ನಿತರೆ ಹಲವು ಮೂಲಗಳಲ್ಲಿ ಬಳಕೆ ಮಾಡಿಕೊಳ್ಳಬಹುದು. ಅದರಂತೆ ಹಲವಾರು ಟೆಲಿಕಾಂ ಸೇವೆಗಳು ಆಕರ್ಷಕವಾದ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಸಹ ಬಳಕೆದಾರರಿಗೆ ನೀಡುತ್ತಿದ್ದು, ಅಗತ್ಯವಾದ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಮಾಡಿಸಿಕೊಳ್ಳಲು ಬಳಕೆದಾರರಿಗೆ ಹಲವು ಅವಕಾಶ ಇದೆ. ಇದರಲ್ಲಿ ಸೆಲ್ಯುಲಾರ್ ಡೇಟಾವು ಹೆಚ್ಚು ದುಬಾರಿಯಾಗಿದ್ದು, ಇದು ಅನವಶ್ಯಕವಾಗಿ ವ್ಯಯವಾಗದಂತೆ ತಡೆಯುವುದು ಹೇಗೆ ಗೊತ್ತಾ?.

ಐಫೋನ್‌ನಲ್ಲಿ ಹೆಚ್ಚು ಡೇಟಾ ವ್ಯಯವಾಗುತ್ತಿದೆಯೇ...? ಇಲ್ಲಿದೆ ಪರಿಹಾರ!

ಹೌದು, ಸ್ಮಾರ್ಟ್‌ಡಿವೈಸ್‌ ಅಥವಾ ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಇಂಟರ್ನೆಟ್‌ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ವೈ ಫೈ ಸಂಪರ್ಕಕ್ಕಿಂತ ಸೆಲ್ಯುಲಾರ್ ಡೇಟಾವು ಹೆಚ್ಚು ದುಬಾರಿಯಾಗಿದ್ದು, ಬಳಕೆದಾರರು ಸಾಕಷ್ಟು ಹಣ ವ್ಯಯ ಮಾಡಬೇಕಾಗುತ್ತದೆ. ಹಾಗೆಯೇ ಐಫೋನ್‌ ಬಳಕೆದಾರರು ಇದಕ್ಕೆ ವಿಶೇಷ ರೀಚಾರ್ಜ್‌ಗಳನ್ನೇ ಮಾಡಿಸಿಕೊಳ್ಳಬೇಕಿದೆ. ಯಾಕೆಂದರೆ ಐಫೋನ್‌ನಲ್ಲಿ ಆಂಡ್ರಾಯ್ಡ್‌ಗಿಂತ ಭಿನ್ನವಾದ ಆಪ್‌ಗಳು ಇರುವುದರಿಂದ ಹೆಚ್ಚು ಡೇಟಾ ಕೇಳುತ್ತವೆ. ಹಾಗಿದ್ರೆ, ಇದನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಆಪಲ್‌ ಡಿವೈಸ್‌ಗಳು ಹೆಚ್ಚು ಕಾರ್ಯಕ್ಷಮತೆ ಜೊತೆಗೆ ಇದರಲ್ಲಿನ ಹಲವು ಆಪ್‌ಗಳು ಹೆಚ್ಚಿನ ಡೇಟಾವನ್ನು ಹೀರಿಕೊಳ್ಳುವ ಕೆಲಸವನ್ನೂ ಸಹ ಮಾಡುತ್ತಿವೆ. ಅದರಲ್ಲೂ ಪ್ರಮುಖವಾಗಿ ವಿಡಿಯೋವನ್ನು ಸ್ಟ್ರೀಮ್ ಮಾಡುವ ಆಪ್‌ಗಳ ಕಡೆ ಗಮನಹರಿಸಬೇಕಿದೆ. ಜೊತೆಗೆ ಮೆಸೆಜ್‌ ಕಳುಹಿಸುವ ಆಪ್‌ಗಳು ಸಾಮಾನ್ಯವಾಗಿ ಕಡಿಮೆ ಡೇಟಾವನ್ನು ಬಳಸುತ್ತವೆ. ಆದರೆ, ನಿಮ್ಮ ಕೆಲವು ಮೊಬೈಲ್ ಆಪ್‌ಗಳನ್ನು ನೀವು ಬಳಕೆ ಮಾಡದಿದ್ದರೂ ಸಹ ಡೇಟಾವನ್ನು ಬಳಕೆ ಮಾಡುವುದು ಸಾಮಾನ್ಯ. ಇದಕ್ಕೆ ನೀವು ನಿಯಂತ್ರಣ ತರಬಹುದು.

ಸೆಲ್ಯುಲಾರ್ ಡೇಟಾ ಬಳಕೆಯಲ್ಲಿ ಬದಲಾವಣೆ ಮಾಡಿ
ಯಾವುದೇ ಆಪ್‌ಗಳು ಬ್ಯಾಗ್ರೌಂಟ್‌ನಲ್ಲಿ ಡೇಟಾವನ್ನು ಹೀರಿಕೊಳ್ಳಬಹುದು, ಇದು ಪ್ರತಿ ಬಾರಿ ಆಪ್‌ಗಳನ್ನು ಅಪ್‌ಡೇಟ್‌ ಮಾಡಿದಾಗ ಹೆಚ್ಚಾಗಿ ಸಂಭವಿಸುತ್ತದೆ. ಕೇವಲ ಮೊಬೈಲ್ ಡೇಟಾವನ್ನು ಬಳಸುವುದರ ಹೊರತಾಗಿ, ನಿಮ್ಮ ಐಫೋನ್ ಡೀಫಾಲ್ಟ್ ಆಗಿ ವೈ-ಫೈ ಅಸಿಸ್ಟ್ ಅನ್ನು ಸಕ್ರಿಯಗೊಳಿಸುತ್ತದೆ. ಈ ವೇಳೆ ಏನಾದರೂ ವೈ ಫೈ ಸಂಪರ್ಕ ದುರ್ಬಲವಾಗಿದ್ದರೆ ಸಿಗ್ನಲ್ ಅನ್ನು ಸುಧಾರಿಸಲು ಆಟೋಮ್ಯಾಟಿಕ್‌ ಆಗಿ ಸೆಲ್ಯುಲಾರ್ ಡೇಟಾಗೆ ಬದಲಾಗುತ್ತದೆ. ಆದರೆ, ನಿಮ್ಮ ಡೇಟಾ ಯೋಜನೆಯನ್ನು ಅವಲಂಬಿಸಿ, ನೀವು ಹೆಚ್ಚಿನ ಸೆಲ್ಯುಲಾರ್ ಡೇಟಾವನ್ನು ಬಳಸುವುದು ಯೋಗ್ಯ. ಇಲ್ಲವಾದರೆ ಇದಕ್ಕೆ ನಿಯಂತ್ರಣ ತರಬೇಕಿದೆ.

ಐಫೋನ್‌ನಲ್ಲಿ ಹೆಚ್ಚು ಡೇಟಾ ವ್ಯಯವಾಗುತ್ತಿದೆಯೇ...? ಇಲ್ಲಿದೆ ಪರಿಹಾರ!

ನೀವು ಫೋನ್‌ ಬಳಕೆ ಮಾಡದಿದ್ದರೂ ಸಹ ನಿಮ್ಮ ಡೇಟಾ ಖಾಲಿಯಾಗುತ್ತಿದ್ದರೆ ಮೊಬೈಲ್ ಡೇಟಾವನ್ನು ಸಂಪೂರ್ಣವಾಗಿ ಆಫ್ ಮಾಡುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ಆದರೆ, ಈ ರೀತಿ ಮಾಡುವುದರಿಂದ ನಿಮ್ಮ ಫೋನ್‌ ಅನ್ನು ನೀವು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಬದಲಾಗಿ ಯಾವೆಲ್ಲಾ ಆಪ್‌ಗಳು ಸುಖಾ ಸುಮ್ಮನೇ ನಿಮ್ಮ ಡೇಟಾವನ್ನು ಹೀರಿಕೊಳ್ಳುತ್ತವೆಯೋ ಅದನ್ನು ನಿಸ್ಕ್ರಿಯಗೊಳಿಸಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ಗಮನಿಸಿ.

ಹಂತ 1
ಮೊದಲು ನಿಮ್ಮ ಐಫೋನ್‌ ಸೆಟ್ಟಿಂಗ್‌ಗಳ ವಿಭಾಗಕ್ಕೆ ತಲುಪಿ ಸೆಲ್ಯುಲಾರ್ ಆಯ್ಕೆಯನ್ನು ಆರಿಸಿ.ಇದಾದ ಬಳಿಕ ಕೆಳಗಿನ ಪೇಜ್‌ ನಿಮ್ಮ ಇತ್ತೀಚಿನ ಡೇಟಾ ಬಳಕೆಯನ್ನು ಡಿಸ್‌ಪ್ಲೇ ಮಾಡುತ್ತದೆ. ಇದರಲ್ಲಿ ನೀವು ರೋಮಿಂಗ್ ಡೇಟಾವನ್ನು ಬಳಸುವ ಬಗ್ಗೆ ಹಾಗೂ ಮೊಬೈಲ್ ಡೇಟಾ ಬಳಸುವ ಆಪ್‌ಗಳ ಬಗ್ಗೆ ಒಂದು ಪಟ್ಟಿಯನ್ನು ಪ್ರದರ್ಶಿಸುತ್ತದೆ.

ಐಫೋನ್‌ನಲ್ಲಿ ಹೆಚ್ಚು ಡೇಟಾ ವ್ಯಯವಾಗುತ್ತಿದೆಯೇ...? ಇಲ್ಲಿದೆ ಪರಿಹಾರ!

ಹಂತ 2
ಈಗ ನಿಮ್ಮ ಮೊಬೈಲ್ ಡೇಟಾವನ್ನು ಬಳಸದಂತೆ ಆಪ್‌ಗಳನ್ನು ನಿರ್ಬಂಧಿಸಲು ಹಸಿರು ಬಟನ್ ಅನ್ನು ಟಾಗಲ್ ಮಾಡಿ. ನಿಮ್ಮ ಐಫೋನ್ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಾಗ ಮಾತ್ರ ನೀವು ಟಾಗಲ್ ಮಾಡಿದ ಆಪ್‌ಗಳು ಡೇಟಾವನ್ನು ಬಳಸುತ್ತದೆ. ಈ ಮೂಲಕ ಅನಗತ್ಯವಾಗಿ ಸೆಲ್ಯುಲಾರ್ ಡೇಟಾ ಬಳಕೆ ಕಡಿಮೆಯಾಗಲಿದೆ.
Best Mobiles in India

English summary
How to prevent specific apps from using more cellular data on iPhone .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X