ಕ್ರಿಸ್‌ಮಸ್‌ ಸಂಭ್ರಮ; ವಾಟ್ಸಾಪ್‌ ಐಕಾನ್‌ ಮೇಲೆ ಕ್ರಿಸ್‌ಮಸ್‌ ಟೋಪಿ ಇರಿಸಿ!

|

ಕ್ರಿಸ್‌ಮಸ್ ಎಂಬುದು ಯೇಸುಕ್ರಿಸ್ತನ ಜನ್ಮವನ್ನು ಸ್ಮರಿಸುವ ಹಬ್ಬವಾಗಿದೆ. ಹಾಗೆಯೇ ಡಿಸೆಂಬರ್ 25 ರಂದು ಅಂದರೆ ನಾಳೆ ಪ್ರಪಂಚದಾದ್ಯಂತ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದರ ನಡುವೆ ವಾಟ್ಸಾಪ್‌ ಮೂಲಕ ಈ ಆಚರಣೆಗೆ ನೀವು ಇನ್ನಷ್ಟು ಮೆರಗು ನೀಡಬಹುದು. ಯಾವುದೇ ಹಬ್ಬ ಬಂದರೂ ಮೊದಲು ಶುಭಾಶಯಗಳು ರವಾನೆಯಾಗುವುದು ವಾಟ್ಸಾಪ್‌ ಮೂಲಕ. ಅದರಂತೆ ನೀವು ಇದೇ ಪ್ಲಾಟ್‌ಫಾರ್ಮ್‌ ನಲ್ಲಿ ಕ್ರಿಸ್‌ಮಸ್ ಆಚರಣೆ ಮಾಡಬಹುದಾಗಿದೆ.

ಕ್ರಿಸ್‌ಮಸ್

ಹೌದು, ಕ್ರಿಸ್‌ಮಸ್ ಹಿನ್ನೆಲೆ ಕೆಲವು ಆಪ್‌ಗಳು ವಿಶೇಷ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಥೀಮ್‌ಗಳನ್ನು ನೀಡಲು ಪ್ರಾರಂಭಿಸಿವೆ. ಈ ಮೂಲಕ ನೀವು ಸುಲಭವಾಗಿ ವಾಲ್‌ಪೇಪರ್ ಮತ್ತು ಥೀಮ್ ಅನ್ನು ಬದಲಾಯಿಸಬಹುದು. ಆದರೆ, ಕ್ರಿಸ್‌ಮಸ್ ವಿಷಯಕ್ಕೆ ಬಂದಾಗ ನಿಮ್ಮ ಆಪ್‌ನ ಐಕಾನ್‌ಗಳಿಗೆ ಕ್ರಿಸ್‌ಮಸ್‌ ಟೋಪಿ ತೊಡಿಸುವ ಮೂಲಕ ವಿಶೇ‍ವಾಗಿ ಐಕಾನ್‌ ಅನ್ನು ವೀಕ್ಷಿಸಬಹುದು. ಅದರಂತೆ ವಾಟ್ಸಾಪ್‌ ಹೆಚ್ಚು ಬಳಕೆ ಮಾಡುವ ಆಪ್‌ಗಳಲ್ಲಿ ಒಂದಾಗಿದ್ದು, ಈ ವಾಟ್ಸಾಪ್ ಐಕಾನ್‌ಗೆ ಹೇಗೆ ಕ್ರಿಸ್‌ಮಸ್‌ ಟೋಪಿ ತೊಡಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವುದು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಥರ್ಡ್‌ ಪಾರ್ಟಿ ಆಪ್‌ ಅವಶ್ಯಕ

ಥರ್ಡ್‌ ಪಾರ್ಟಿ ಆಪ್‌ ಅವಶ್ಯಕ

ವಾಟ್ಸಾಪ್‌ನಲ್ಲಿ ಹಲವಾರು ಫೀಚರ್ಸ್‌ಗಳು ಬಳಕೆದಾರರಿಗೆ ಲಭ್ಯ ಇದ್ದರೂ ಸಹ ವಾಟ್ಸಾಪ್‌ ಐಕಾನ್‌ ಅನ್ನು ಕಸ್ಟಮೈಸ್‌ ಮಾಡಿಕೊಳ್ಳುವ ಸೌಲಭ್ಯ ವಾಟ್ಸಾಪ್‌ನಲ್ಲಿ ಇಲ್ಲದಿರುವುದರಿಂದ ನೀವು ಥರ್ಡ್‌ ಪಾರ್ಟಿ ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಿದೆ. ಅದರಲ್ಲೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಆದ್ಯತೆಗಳ ಪ್ರಕಾರ ಆಪ್‌ ಐಕಾನ್‌ಗಳನ್ನು ಬದಲಾಯಿಸಲು ಹಲವಾರು ಲಾಂಚರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಅದರಲ್ಲಿ ಪ್ರಮುಖ ಸ್ಥಾನದಲ್ಲಿ ಇರುವುದು ಹಾಗೂ ಬಳಕೆಗೆ ಯೋಗ್ಯವಾಗಿರುವುದು ನೋವಾ ಲಾಂಚರ್. ಈ ಆಪ್‌ ಮೂಲಕ ವಾಟ್ಸಾಪ್‌ನ ಐಕಾನ್‌ ರಂಗನ್ನು ಹೆಚ್ಚಿಗೆ ಮಾಡಬಹುದು. ಈ ರೀತಿ ಮಾಡಲು ಈ ಕೆಳಗಿನ ಹಂತ ಅನುಸರಿಸಿ.

ಹಂತ 1

ಹಂತ 1

ಮೊದಲು ನಿಮ್ಮ ಆಪ್‌ ಐಕಾನ್‌ ಮೇಲೆ ಯಾವ ಚಿತ್ರವನ್ನು ಕೂರಿಸಬೇಕೋ ಅಥವಾ ಏನೆಲ್ಲಾ ಬದಲಾವಣೆ ಮಾಡಬೇಕೋ ಎಂಬುದನ್ನು ಅರಿತುಕೊಂಡು ಆ ಚಿತ್ರಗಳನ್ನು ಬ್ರೌಸರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಮೊಬೈಲ್‌ನಲ್ಲಿ ಇರಿಸಿಕೊಳ್ಳಿ.

ಹಂತ 2

ಹಂತ 2

ಇದಾದ ಬಳಿಕ ಈಗಾಗಲೇ ಇನ್‌ಸ್ಟಾಲ್‌ ಮಾಡಿಕೊಂಡಿರುವ ನೋವಾ ಆಪ್‌ ಅನ್ನು ಓಪನ್‌ ಮಾಡಿ, ಅದರಲ್ಲಿ ಕೇಳಲಾಗುವ ಷರತ್ತನ್ನು ಓದಿ ಮತ್ತು ಒಪ್ಪಿಕೊಳ್ಳಿ. ತದನಂತರ ವಾಟ್ಸಾಪ್‌ ಐಕಾನ್‌ ಬಳಿ ಬಂದು ಅದನ್ನು ಕೆಲವು ಸೆಕೆಂಡುಗಳ ಕಾಲ ಹಾಗೆ ಟ್ಯಾಪ್‌ ಮಾಡಿ ಹಿಡಿಕೊಳ್ಳಿ.

ಹಂತ 3

ಹಂತ 3

ಈ ಸಂದರ್ಭದಲ್ಲಿ ನಿಮಗೆ ಎಡಿಟ್ ಬಟನ್‌ ಕಾಣಿಸಿಕೊಳ್ಳುತ್ತದೆ. ಅದನ್ನು ಗಮನಿಸಿ ನಂತರ ಈಗಾಗಲೇ ಡೌನ್‌ಲೋಡ್ ಮಾಡಲಾದ ಚಿತ್ರವನ್ನು ಆರಿಸಿಕೊಳ್ಳಿ. ಬಳಿಕ ನಿಮಗೆ ಹೇಗೆ ಬೇಕೋ ಹಾಗೆ ಕಸ್ಟಮೈಸ್‌ ಮಾಡಿಕೊಳ್ಳಿ. ನಂತರ ನಿಮ್ಮ ವಾಟ್ಸಾಪ್‌ ಲೋಗೋ ಸುಂದರವಾಗಿ ಕಾಣುವುದನ್ನು ಗಮನಿಸಿ.

ವಾಟ್ಸಾಪ್‌

ನೀವು ಇಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾದ ಮಾಹಿತಿ ಏನೆಂದರೆ ಇದು ಕೇವಲ ವಾಟ್ಸಾಪ್‌ ಐಕಾನ್‌ ಮಾತ್ರವಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿರುವ ಯಾವುದೇ ಆಪ್‌ನ ಐಕಾನ್‌ ಅನ್ನು ಸಹ ಕಸ್ಟಮೈಸ್ ಮಾಡಿಕೊಳ್ಳಬಹುದು.

ಕ್ರಿಸ್‌ಮಸ್‌

ಇದರ ಹೊರತಾಗಿಯೂ ವಾಟ್ಸಾಪ್‌ನಲ್ಲಿ ಕ್ರಿಸ್‌ಮಸ್‌ ಸಂದೇಶ ಕಳುಹಿಸುವಾಗ ಸ್ಟಿಕ್ಕರ್‌ಗಳನ್ನು ಬಳಕೆ ಮಾಡಿಕೊಂಡು ನಿಮಗೆ ಬೇಕಾದವರಿಗೆ ಶುಭಾಶಯ ಕೋರಿದರೆ ಅದು ಇನ್ನಷ್ಟು ಸ್ಮರಣೀಯವಾಗಿರುತ್ತದೆ. ಇದಕ್ಕಾಗಿ ನೀವು ವಾಟ್ಸಾಪ್‌ನ ಚಾಟ್‌ಬಾಕ್ಸ್‌ ವಿಭಾಗದಲ್ಲಿ ಕಾಣಿಸಿಕೊಳ್ಳುವ ಸ್ಟಿಕ್ಕರ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಅದರಲ್ಲಿ ಕ್ರಿಸ್‌ಮಸ್‌ ಎಂದು ಆಂಗ್ಲ ಅಕ್ಷರದಲ್ಲಿ ಹುಡುಕಿ. ನಂತರ ಹಲವಾರು ಸ್ಟಿಕ್ಕರ್‌ಗಳು ಕಾಣಿಸಿಕೊಳ್ಳುತ್ತವೆ, ಅದರಲ್ಲಿ ಯಾವ ಸ್ಟಿಕ್ಕರ್‌ಗಳು ನಿಮಗೆ ಇಷ್ಟವಾಗುತ್ತವೆಯೋ ಅದರ ಮೇಲೆ ಟ್ಯಾಪ್‌ ಮಾಡುವ ಮೂಲಕ ನಿಮ್ಮ ನೆಚ್ಚಿನವರಿಗೆ ಶುಭಾಶಯ ಕಳುಹಿಸಬಹುದು.

Best Mobiles in India

English summary
How to put Christmas hat on WhatsApp icon?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X