ಡಿಲೀಟ್ ಆದ ಫೇಸ್‌ಬುಕ್ ಸಂದೇಶಗಳನ್ನು ಮತ್ತೆಪಡೆದುಕೊಳ್ಳಲು ಟಿಪ್ಸ್

By Shwetha
|

ನೀವು ಎಲ್ಲಿಯಾದರೂ ಏನಾದರೂ ಕೆಲಸ ಮಾಡುತ್ತಿರುವಾಗ ಅಕಸ್ಮತ್ತಾಗಿ ಫೇಸ್‌ಬುಕ್ ಸಂದೇಶಗಳನ್ನು ಅಳಿಸಿರುವಿರಾ? ಈ ಸಂದೇಶಗಳು ನಿಮಗೆ ಅತೀ ಅಮೂಲ್ಯವಾಗಿದ್ದು ಅದನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಆಲೋಚಿಸುತ್ತಿದ್ದೀರಾ? ಹಾಗಿದ್ದರೆ ಚಿಂತೆ ಬಿಟ್ಟು ನಮ್ಮ ಇಂದಿನ ಲೇಖನವನ್ನು ಓದಿ. ಫೇಸ್‌ಬುಕ್‌ನಲ್ಲಿ ಡಿಲೀಟ್ ಆಗಿರುವ ಸಂದೇಶಗಳನ್ನು ಮರೆಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ನಾವು ನಿಮಗೆ ತಿಳಿಸುತ್ತಿದ್ದೇವೆ.

ಓದಿರಿ: ಫೇಸ್‌ಬುಕ್ ಬಗ್ಗೆ ನೀವರಿಯದ ಮಾಹಿತಿಗಳು

ಫೇಸ್‌ಬುಕ್ ಖಾತೆ

ಫೇಸ್‌ಬುಕ್ ಖಾತೆ

ನಿಮ್ಮ ಫೇಸ್‌ಬುಕ್ ಖಾತೆಗೆ ಹೋಗಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ ತದನಂತರ ಜನರಲ್ ಅಕೌಂಟ್ ಸೆಟ್ಟಿಂಗ್ಸ್‌ಗೆ ತೆರಳಿ

ಡೌನ್‌ಲೋಡ್ ಕಾಪಿ

ಡೌನ್‌ಲೋಡ್ ಕಾಪಿ

ಇದೀಗ ನೀವು ನಿಮ್ಮ ಫೇಸ್‌ಬುಕ್ ಡೇಟಾದ ಡೌನ್‌ಲೋಡ್ ಮಾಡಿದ ನಕಲನ್ನು ಕಾಣಬಹುದು. ಈಗ ಡೌನ್‌ಲೋಡ್ ಕಾಪಿ ಲಿಂಕ್ ಕ್ಲಿಕ್ ಮಾಡಿ.

ಹೊಸ ಪುಟ ತೆರೆದುಕೊಳ್ಳುತ್ತದೆ

ಹೊಸ ಪುಟ ತೆರೆದುಕೊಳ್ಳುತ್ತದೆ

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗಿಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ ಮತ್ತು ಡೌನ್‌ಲೋಡ್ ಆರ್ಕೈವ್ ಬಟನ್ ಎಂಬುದು ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಿಮಗಾಗ ಪಾಸ್‌ವರ್ಡ್ ಅನ್ನು ಇದು ತೋರಿಸುತ್ತದೆ ಮತ್ತು ಫೇಸ್‌ಬುಕ್ ಭದ್ರತಾ ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಬಹುದು.

ಫೇಸ್‌ಬುಕ್ ಸಂದೇಶ

ಫೇಸ್‌ಬುಕ್ ಸಂದೇಶ

ನಿಮ್ಮ ಇಮೇಲ್ ಐಡಿಗೆ ಡೌನ್‌ಲೋಡ್ ಲಿಂಕ್ ಅನ್ನುಕಳುಹಿಸಲಾಗುತ್ತದೆ ನಿಮ್ಮ ಇಮೇಲ್ ಐಡಿ ನೀವು ಫೇಸ್‌ಬುಕ್ ಖಾತೆಯನ್ನು ತೆರೆಯಲು ಬಳಸಿರುವುದಾಗಿದೆ.

ಸ್ವಲ್ಪ ನಿಮಿಷ ಕಾಯಿರಿ

ಸ್ವಲ್ಪ ನಿಮಿಷ ಕಾಯಿರಿ

ಸ್ವಲ್ಪ ನಿಮಿಷ ಕಾಯಿರಿ ನಿಮ್ಮ ಇಮೇಲ್ ಪರಿಶೀಲಿಸಿ. ಡೌನ್‌ಲೋಡ್ ಲಿಂಕ್‌ನೊಂದಿಗೆ ಫೇಸ್‌ಬುಕ್‌ನಿಂದ ಸಂದೇಶವನ್ನು ನೀವು ಸ್ವೀಕರಿಸಿರುವುದನ್ನು ನಿಮಗೆ ಕಾಣಬಹುದು.

ಜಿಪ್ ಫೈಲ್ ಡೌನ್‌ಲೋಡ್

ಜಿಪ್ ಫೈಲ್ ಡೌನ್‌ಲೋಡ್

ಜಿಪ್ ಫೈಲ್ ಅನ್ನು ಡೌನ್‌ಲೋಡ್ ಮಾಡಿದ ನಂತರ ಅದನ್ನು ಬೇರ್ಪಡಿಸಿ ನಿಮ್ಮ ಕಳೆದುಹೋಗಿರುವ ಸಂದೇಶಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಎಚ್‌ಟಿಎಮ್‌ಎಲ್ ಫೈಲ್

ಎಚ್‌ಟಿಎಮ್‌ಎಲ್ ಫೈಲ್

ನಿಮ್ಮ ಫೈಲ್ ಅನ್ನು ಬೇರ್ಪಡಿಸಿದ ನಂತರ ಎಚ್‌ಟಿಎಮ್‌ಎಲ್ ಫೈಲ್ ಅನ್ನು ನಿಮಗೆ ಕಾಣಬಹುದು. ಫೈಲ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ರೌಸರ್ ಆರಿಸಿ ಮತ್ತು ಡೇಟಾವನ್ನು ನೋಡಿ.

Best Mobiles in India

English summary
Here we are guiding you on how you can get back deleted txt massages and photos..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X