ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಸೌಲಭ್ಯ; ನಿಮ್ಮ ಖಾತೆ ಹ್ಯಾಕ್‌ ಆದರೂ ಚಿಂತೆಪಡಬೇಡಿ!

|

'ನನ್ನ ಖಾತೆ ಹ್ಯಾಕ್‌ ಆಗಿದೆ, ಯಾರು ಪ್ರತಿಕ್ರಿಯೆ ಕೊಡಬೇಡಿ, ಹಾಗೆಯೇ ಅವರು ಹಣ ಕೇಳುತ್ತಾರೆ ಹಣ ನೀಡಬೇಡಿ' ಎಂದು ನಿಮ್ಮ ಸ್ನೇಹಿತರು ಅಥವಾ ನಿಮಗೆ ತಿಳಿದಿರುವವರು ತಮ್ಮ ವಾಟ್ಸಾಪ್‌ ಸ್ಟೇಟಸ್‌ ಹಾಗೂ ಫೇಸ್‌ಬುಕ್‌ ಸೇರಿದಂತೆ ಇನ್ನಿತರೆ ಪ್ಲಾಟ್‌ಫಾರ್ಮ್‌ನಲ್ಲಿ ಬರೆದುಕೊಳ್ಳುವ ಈ ರೀತಿಯ ಮೇಸೆಜ್‌ಗಳನ್ನು ನೀವು ನೋಡಿರಬಹುದು. ಈ ಎಲ್ಲಾ ಕಾರಣಗಳ ಜೊತೆಗೆ ಹೆಚ್ಚುತ್ತಿರುವ ಸೈಬರ್‌ ಅಪರಾಧಗಳನ್ನು ಕಡಿಮೆ ಮಾಡಲು ಮೆಟಾ ಮುಂದಾಗಿದ್ದು, ನಿಮಗೆ ಅನುಕೂಲ ಆಗುವ ಫೀಚರ್ಸ್‌ ಒಂದನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ ಖಾತೆಗಳು ಹೆಚ್ಚಾಗಿ ಹ್ಯಾಕಿಂಗ್‌ಗೆ ಒಳಗಾಗುತ್ತದೆ. ಈ ಮೂಲಕ ಕಿಡಿಗೇಡಿಗಳು ಬಳಕೆದಾರರ ಬಳಿ ಅಥವಾ ಅವರ ಸ್ನೇಹಿತರ ಬಳಿ ಹಣ ಪೀಕುವ ಕೆಲಸ ಮಾಡುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೆಟಾ ಇದರ ವಿರುದ್ಧ ಕ್ರಮ ಜರುಗಿಸುವ ಜೊತೆಗೆ ಬಳಕೆದಾರರಿಗೆ ವಿಶೇಷ ಸೌಲಭ್ಯವೊಂದನ್ನು ಕಲ್ಪಿಸಿಕೊಟ್ಟಿದೆ. ಈ ಮೂಲಕ ನೀವು ನಿಮ್ಮ ಖಾತೆ ಹ್ಯಾಕ್‌ ಆಗಿದ್ದರೂ ಸಹ ಲಾಗಿನ್‌ ಆಗಬಹುದು.

ಏನಿದು ಹೊಸ ಸೌಲಭ್ಯ

ಏನಿದು ಹೊಸ ಸೌಲಭ್ಯ

ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಎದುರಿಸಲು ಇನ್‌ಸ್ಟಾಗ್ರಾಮ್‌ ಹೊಸ ಮಾರ್ಗವನ್ನು ಕಂಡುಕೊಂಡಿದೆ. ಈ ಮೂಲಕ ಹ್ಯಾಕ್ ಆಗಿರುವ ತಮ್ಮ ಖಾತೆಗಳಿಗೆ ಪ್ರವೇಶವನ್ನು ಮರಳಿ ಪಡೆಯಲು ಸಹಾಯ ಮಾಡಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ನಕಲಿ ಕ್ರಿಪ್ಟೋಕರೆನ್ಸಿ ರಿಟರ್ನ್‌ಗಳೊಂದಿಗೆ ಬಳಕೆದಾರರನ್ನು ಸೈಬರ್‌ ಅಪರಾಧಿಗಳು ಆಕರ್ಷಿಸಿಸಿ ಮೋಸ ಮಾಡುವ ಪ್ರಕರಣ ಸದ್ಯಕ್ಕೆ ಜಾಸ್ತಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದೆ.

ಇನ್‌ಸ್ಟಾಗ್ರಾಮ್‌ ಹೇಳಿದ್ದೇನು?

ಇನ್‌ಸ್ಟಾಗ್ರಾಮ್‌ ಹೇಳಿದ್ದೇನು?

ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಏನಾದರೂ ಹ್ಯಾಕ್‌ ಆದರೆ Instagram.com/hacked ಎಂಬ ಆಯ್ಕೆ ನೀಡಲಾಗಿದ್ದು, ಇದರ ಸಹಾಯ ಪಡೆದುಕೊಳ್ಳಬಹುದಾಗಿದೆ. ಲಾಗಿನ್‌ ಸಮಸ್ಯೆಗಳನ್ನು ಎದುರಿಸುತ್ತಿರುವ ಅಥವಾ ಹ್ಯಾಕ್ ಆಗಿರುವ ಖಾತೆಗಳನ್ನು ಬೆಂಬಲಿಸಲು ನಾವು Instagram.com/hacked ಅನ್ನು ರಚಿಸಿದ್ದೇವೆ. ಈ ಮೂಲಕ ಸಮಗ್ರ ಹ್ಯಾಕಿಂಗ್‌ ವರದಿ ಮಾಡಲು ಮತ್ತು ಖಾತೆ ಪ್ರವೇಶ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬಳಕೆ ಮಾಡಿಕೊಳ್ಳಬಹುದು ಎಂದು ಇನ್‌ಸ್ಟಾಗ್ರಾಮ್‌ ತಿಳಿಸಿದೆ.

ಹ್ಯಾಕ್‌

ಖಾತೆಗಳು ಹ್ಯಾಕ್‌ ಆಗದ ರೀತಿಯಲ್ಲಿ ಕಾಪಾಡಿಕೊಳ್ಳುವ ಉದ್ದೇಶದಿಂದ ಈಗಾಗಲೇ ಹಲವಾರು ಸುರಕ್ಷತಾ ಟೂಲ್ಸ್‌ಗಳನ್ನು ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ. ಆದರೂ ಖಾತೆಯನ್ನು ಯಾರಾದರೂ ಹೈಜಾಕ್‌ ಮಾಡಿದರೆ ಬಳಕೆದಾರರಿಗೆ ಹೆಚ್ಚಿನ ನೋವು ಉಂಟಾಗುತ್ತದೆ. ಹಾಗೆಯೇ ಬಳಕೆದಾರರಲ್ಲಿ ಒತ್ತಡ ಉಂಟಾಗಿ ಏನು ಮಾಡಬೇಕು ಎಂಬುದೇ ಕೆಲವರಿಗೆ ತಿಳಿಯುವುದಿಲ್ಲ. ಇದನ್ನು ನಾವು ಕಂಡುಕೊಂಡಿದ್ದು, ಜನರ ಖಾತೆಗಳು ಅವರ ಕೈತಪ್ಪಿ ಹೋದರೆ ಆ ಖಾತೆಗಳನ್ನು ಮರಳಿ ಪಡೆಯಲು ಅನೇಕ ಆಯ್ಕೆಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ಮೂಲಕ ಬಯಸುತ್ತೇವೆ ಎಂದು ಇನ್‌ಸ್ಟಾಗ್ರಾಮ್‌ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.

ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಮರಳಿ ಪಡೆಯಲು ಈ ರೀತಿ ಮಾಡಿ

ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಮರಳಿ ಪಡೆಯಲು ಈ ರೀತಿ ಮಾಡಿ

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಪಿಸಿಯಲ್ಲಿ ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಗೆ ಲಾಗಿನ್‌ ಆಗಲು ಸಾಧ್ಯವಾಗದನ್ನು ಕಂಡುಕೊಂಡ ನಂತರ ಗೂಗಲ್‌ ಕ್ರೋಮ್‌ನಲ್ಲಿ Instagram.com/hacked ಎಂದು ಎಂಟ್ರಿ ಮಾಡಿ.

ಹಂತ 2

ಹಂತ 2

ಇದಾದ ನಂತರ ಅದರಲ್ಲಿ, ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ನಾನು ನನ್ನ ಪಾಸ್‌ವರ್ಡ್ ಅನ್ನು ಮರೆತಿದ್ದೇನೆ, ಲಾಗಿನ್ ಕೋಡ್ ಅನ್ನು ಮೊಬೈಲ್ ಸಂಖ್ಯೆಗೆ ಅಥವಾ ಮೇಲ್‌ ಗೆ ಕಳುಹಿಸಲಾಗಿದೆ. ಆದರೆ, ಲಾಗಿನ್‌ ಆಗಲು ಸಾಧ್ಯವಾಗುತ್ತಿಲ್ಲ, ಯಾರೋ ನನ್ನ ಫೋಟೋ, ಹೆಸರನ್ನು ಬಳಕೆ ಮಾಡಿಕೊಂಡು ಹೊಸ ಖಾತೆ ರಚಿಸಿದ್ದಾರೆ, ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಅಥವಾ ಏನೋ ಆಗಿದೆ ಎಂಬಿತ್ಯಾದಿ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ನಿಮ್ಮ ಸಮಸ್ಯೆ ಏನಾಗಿದೆ ಎಂಬುದರ ಮೇಲೆ ಟಿಕ್‌ ಮಾಡಿ.

ಹಂತ 3

ಹಂತ 3

ನಂತರದಲ್ಲಿ ಯಾವುದೇ ಆಯ್ಕೆಯನ್ನು ಟಿಕ್‌ ಮಾಡಿದರೂ ಸಹ ಹಲವಾರು ಮಾಹಿತಿಗಳ ಜೊತೆಗೆ ನೀವು ಏನು ಮಾಡಬೇಕು?, ಖಾತೆಗೆ ಲಾಗಿನ್‌ ಆಗುವುದು ಹೇಗೆ ಎಂಬಿತ್ಯಾದಿ ಮಾಹಿತಿ ಅಲ್ಲಿ ಕಾಣಿಸಿಕೊಳ್ಳುತ್ತದೆ. ಆ ಮೂಲಕ ನಿಮ್ಮ ಹ್ಯಾಕ್‌ ಆದ ಖಾತೆಗೆ ಪ್ರವೇಶ ಪಡೆಯುವ ಮೂಲಕ ಮುಂದೆ ಉಂಟಾಗುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಖಾತೆ ಹ್ಯಾಕ್ ವಿರುದ್ಧ ಕ್ರಮಕ್ಕೆ ಇನ್‌ಸ್ಟಾಗ್ರಾಮ್ ಸಿದ್ಧತೆ

ಖಾತೆ ಹ್ಯಾಕ್ ವಿರುದ್ಧ ಕ್ರಮಕ್ಕೆ ಇನ್‌ಸ್ಟಾಗ್ರಾಮ್ ಸಿದ್ಧತೆ

ಇನ್‌ಸ್ಟಾಗ್ರಾಮ್‌ನಲ್ಲಿ ಹ್ಯಾಕಿಂಗ್ ಸಂಭವಿಸುವ ಮೊದಲು ಅದನ್ನು ತಡೆಯಲು ಸಹಾಯ ಮಾಡುವ ಮಾರ್ಗಗಳನ್ನು ಪರೀಕ್ಷಿಸುತ್ತಿದೆ ಎಂದು ಇನ್‌ಸ್ಟಾಗ್ರಾಮ್ ತಿಳಿಸಿದೆ. ಈ ಕಾರಣಕ್ಕೆ ಕಂಪೆನಿಯು ಒಂದೇ ಹೆಸರಿನ ನಕಲಿ ಖಾತೆಗಳ ಮೇಲೆ ಕಣ್ಣಿಟ್ಟಿದೆ. ಜೊತೆಗೆ ಶಂಕಿತ ಖಾತೆ ಏನಾದರೂ ಕಂಡುಬಂದರೆ ಅದರ ವಿರುದ್ಧ ನೇರ ಸಂದೇಶ ಕಳುಹಿಸುವ ಆಯ್ಕೆ ನೀಡಲಾಗುತ್ತದೆ. ಈ ಮೂಲಕ ಆ ಖಾತೆಯನ್ನು ಪರಿಶೀಲಿಸಲು ನಾವು ಮುಂದಾಗುತ್ತೇವೆ ಎಂದು ಇನ್‌ಸ್ಟಾಗ್ರಾಮ್‌ ತಿಳಿಸಿದೆ.

Best Mobiles in India

English summary
How to Recover Hacked account; Instagram announce new tool will help people.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X