ನಿಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯನ್ನು ಫೇಸ್‌ಬುಕ್‌ಗೆ ಈ ರೀತಿ ಶೇರ್ ಮಾಡಿ

|

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಇರುವ ಎಲ್ಲರೂ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಸೇರಿದಂತೆ ಇತರೆ ಆಪ್‌ಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಈ ಆಪ್‌ಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಮೆಟಾ ತನ್ನ ಭಿನ್ನ ವಿಭಿನ್ನ ಫೀಚರ್ಸ್‌ ನೀಡುತ್ತಿದೆ. ಇದರ ನಡುವೆ ಮೆಟಾದ ಎಲ್ಲಾ ಆಪ್‌ಗಳಿಗೂ ಪರಸ್ಪರ ಸಂಪರ್ಕ ಕಲ್ಪಿಸಿಕೊಳ್ಳುವ ಆಯ್ಕೆ ನೀಡಲಾಗಿದೆ.

ಮೆಟಾ

ಹೌದು, ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಪ್ರಸ್ತುತ ಹೆಚ್ಚಾಗಿ ಬಳಕೆಯಾಗುತ್ತಿದೆ. ಅದರಲ್ಲೂ ಕೋವಿಡ್‌ ನಂತರದ ಸಮಯದಲ್ಲಿ ಈ ಎರಡು ಫ್ಲಾಟ್‌ಫಾರ್ಮ್‌ ಮೂಲಕ ಸಾಕಷ್ಟು ಬಳಕೆದಾರರನ್ನು ಪಡೆದುಕೊಂಡಿದೆ. ಹಾಗೆಯೇ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಎರಡರಲ್ಲೂ ಒಂದೇ ಮಾಹಿತಿಯನ್ನು ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.

ಸಾಮಾಜಿಕ ಮಾಧ್ಯಮ

vಮೆಟಾ ಸಂಸ್ಥೆ ಈ ಎರಡೂ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ಏಕಕಾಲದಲ್ಲಿ ಕ್ರಾಸ್ ಪೋಸ್ಟಿಂಗ್ ಅನ್ನು ಅನುಮತಿಸಿರುವುದು ನಿಮಗೆ ಖಂಡಿತಾ ತಿಳಿದಿರುತ್ತದೆ. ಈ ಮೂಲಕ ನೀವು ಒಂದೇ ವಿಷಯವನ್ನು ಒಂದೇ ಸಮಯದಲ್ಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಳ್ಳಬಹುದಾಗಿದೆ. ಆದರೆ, ಈ ಫೀಚರ್ಸ್‌ ಅನ್ನು ಈ ಹಿಂದೆ ನೀಡಿರಲಿಲ್ಲ. ಪರಿಣಾಮ ಎರಡೂ ಪ್ಲಾಟ್‌ಫಾರ್ಮ್‌ನಲ್ಲೂ ಬೇರೆ ಬೇರೆಯಾಗಿಯೇ ಪೋಸ್ಟ್‌ ಮಾಡಬೇಕಿತ್ತು. ಹಾಗಿದ್ರೆ ಈ ಫೀಚರ್ಸ್‌ ಅನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ನೋಡಿ.

ಇನ್‌ಸ್ಟಾಗ್ರಾಮ್‌ ನಿಂದ ಫೇಸ್‌ಬುಕ್‌ ಗೆ ಶೇರ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ನಿಂದ ಫೇಸ್‌ಬುಕ್‌ ಗೆ ಶೇರ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಬೇಕು ಎಂದುಕೊಂಡಿರುವ ವಿಷಯವನ್ನು ಅದೇ ಸಮಯದಲ್ಲಿ ಫೇಸ್‌ಬುಕ್‌ ಗೂ ಶೇರ್‌ ಮಾಡಬೇಕು ಎಂದರೆ ನೀವು ಮೊದಲು ಇನ್‌ಸ್ಟಾಗ್ರಾಮ್‌ ಸೆಟ್ಟಿಂಗ್‌ ಆಯ್ಕೆಯ ವಿಭಾಗಕ್ಕೆ ಹೋಗಬೇಕಿದೆ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಆಪ್‌ ಅನ್ನು ಓಪನ್‌ ಮಾಡಿ, ನಂತರ ಸ್ಟೋರಿ ವಿಭಾಗಕ್ಕೆ ತೆರಳಿ. ಅಲ್ಲಿ ಸ್ಕ್ರೀನ್‌ ಅನ್ನು ಬಲಕ್ಕೆ ಸ್ವೈಪ್ ಮಾಡಿದರೆ ಇದಾದ ನಂತರ ಡಿಸ್‌ಪ್ಲೇನ ಮೇಲಿನ ಎಡ ಮೂಲೆಯಲ್ಲಿ ಸೆಟ್ಟಿಂಗ್ ಆಯ್ಕೆಯ ಚಿಹ್ನೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 2

ಹಂತ 2

ಇದಾದ ಬಳಿಕ ಹಲವು ಹಂಚಿಕೆ ಟ್ಯಾಬ್‌ನ ಅಡಿಯಲ್ಲಿ 'ಸ್ಟೋರಿ' ಆಯ್ಕೆ ಮಾಡಿಕೊಳ್ಳಿ. ತದನಂತರ 'ನಿಮ್ಮ ಸ್ಟೋರಿಯನ್ನು ಫೇಸ್‌ಬುಕ್‌ಗೆ ಹಂಚಿಕೊಳ್ಳಿ' ಎಂಬ ಆಯ್ಕೆಯನ್ನು ಗಮನಿಸಿ ಅದನ್ನು ಆನ್‌ ಮಾಡಿ.

ಎಫ್‌ಬಿ ಪೋಸ್ಟ್‌ ಅನ್ನು ಇನ್‌ಸ್ಟಾಗ್ರಾಮ್‌ಗೆ ಈ ರೀತಿ ಶೇರ್‌ ಮಾಡಿ

ಎಫ್‌ಬಿ ಪೋಸ್ಟ್‌ ಅನ್ನು ಇನ್‌ಸ್ಟಾಗ್ರಾಮ್‌ಗೆ ಈ ರೀತಿ ಶೇರ್‌ ಮಾಡಿ

ನೀವು ಹೆಚ್ಚಾಗಿ ಫೇಸ್‌ಬುಕ್‌ ಅನ್ನೇ ಬಳಕೆ ಮಾಡಿತ್ತೀರಿ ಎಂದಾದರೆ ಇದು ಸಹಾಯಕವಾಗಲಿದೆ, ಇನ್‌ಸ್ಟಾಗ್ರಾಮ್‌ ಗೆ ಭೇಟಿ ನೀಡದೆಯೇ ನೀವು ನಿಮ್ಮ ಫೋಸ್ಟ್‌ ಅನ್ನು ಅದರಲ್ಲಿ ಶೇರ್‌ ಮಾಡಬಹುದು. ಅದಕ್ಕಾಗಿ ಈ ಕೆಳಗಿನ ಕ್ರಮ ಅನುಸರಿಸಿ.

ಹಂತ  1

ಹಂತ 1

ಇನ್‌ಸ್ಟಾಗ್ರಾಮ್‌ ನಲ್ಲಿ ಫೇಸ್‌ಬುಕ್‌ ಸ್ಟೋರಿಗಳನ್ನು ಈ ರೀತಿ ಹಂಚಿಕೊಳ್ಳಿ. ಇನ್‌ಸ್ಟಾಗ್ರಾಮ್‌ ಗಿಂತ ಫೇಸ್‌ಬುಕ್‌ನಲ್ಲಿಯೇ ಹೆಚ್ಚಿನ ಮಾಹಿತಿ ಪೋಸ್ಟ್‌ ಮಾಡಲು ಮುಂದಾಗುವ ಜನರಿಗೆ ಇದು ಅನುಕೂಲ. ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಆಪ್‌ ಓಪನ್‌ ಮಾಡಿ. ನಂತರ ನಿಮ್ಮ ಫೆಸ್‌ಬುಕ್‌ ಫೀಡ್‌ನ ಮೇಲ್ಭಾಗದಲ್ಲಿ ಲಭ್ಯವಿರುವ 'ಸ್ಟೋರಿ ಕ್ರಿಯೇಟ್‌' ಅನ್ನು ಗಮನಿಸಿ. ಇದಾದ ಬಳಿಕ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ  2

ಹಂತ 2

'ಸ್ಟೋರಿ ಕ್ರಿಯೇಟ್‌' ಆಯ್ಕೆಯ ಮೇಲೆ ಟ್ಯಾಪ್‌ ಮಾಡಿದ ನಂತರ ಏನನ್ನು ಶೇರ್‌ ಮಾಡಬೇಕು ಎಂದುಕೊಂಡಿದ್ದೀರೋ ಆ ಮಾಹಿತಿಯನ್ನು ಅಲ್ಲಿ ಪ್ರಕಟಿಸಿ. ಬಳಿಕ 'ಶೇರ್‌ ಆನ್‌ ಇನ್‌ಸ್ಟಾಗ್ರಾಮ್‌' ಆಯ್ಕೆಯ ಮೂಲಕ ನಿಮ್ಮ ಫೇಸ್‌ಬುಕ್‌ ಸ್ಟೋರಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಬಹುದಾಗಿದೆ.

Best Mobiles in India

English summary
Generally, everyone who has a smartphone uses Facebook, Instagram and other apps. Similarly FB post can be shared to Instagram.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X