ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಬ್ಯಾಂಕ್ ಖಾತೆಗೆ ಈ ರೀತಿ ವರ್ಗಾಯಿಸಿ!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್ ಕ್ಲೌಡ್ ಕಂಪ್ಯೂಟಿಂಗ್, ಡಿಜಿಟಲ್ ಸ್ಟ್ರೀಮಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಾ ಬರುತ್ತಿದೆ. ಹಾಗೆಯೇ ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ಎಲ್ಲಾ ರೀತಿಯ ಫೀಚರ್ಸ್‌ಗಳನ್ನು ಅಮೆಜಾನ್‌ ನೀಡುತ್ತಿದ್ದು, ಇದರಲ್ಲಿ ಅಮೆಜಾನ್ ಪೇ ಬ್ಯಾಲೆನ್ಸ್ ಸಹ ಒಂದು ಪ್ರಮುಖ ಸೌಲಭ್ಯವಾಗಿದೆ.

ವಾಲೆಟ್

ಹೌದು, ಆನ್‌ಲೈನ್ ಶಾಪಿಂಗ್ ಜೊತೆಗೆ, ಅಮೆಜಾನ್‌ ಪೇ ಮೂಲಕ ಆನ್‌ಲೈನ್ ಪಾವತಿ ಆಯ್ಕೆಗಳನ್ನು ಅಮೆಜಾನ್ ತನ್ನ ಗ್ರಾಹಕರಿಗೆ ನೀಡಿದೆ. ಈ ಆಯ್ಕೆ ನಿಮ್ಮ ಬ್ಯಾಂಕ್ ಖಾತೆಯಿಂದ ಮತ್ತು ನೇರವಾಗಿ UPI ವಹಿವಾಟುಗಳ ಮೂಲಕ ಪಾವತಿಸುವ ಮಾರ್ಗವಾಗಿದೆ. ಅದರಲ್ಲೂ ಪ್ರಮುಖವಾಗಿ ಪೇಟಿಎಮ್‌, ಫೋನ್‌ಪೇ ಹಾಗೂ ಇತರೆ ಆನ್‌ಲೈನ್ ಪಾವತಿ ಪ್ಲಾಟ್‌ಫಾರ್ಮ್‌ಗಳಂತೆಯೇ ಅಮೆಜಾನ್‌ ಪೇ ಬ್ಯಾಲೆನ್ಸ್ ಕೆಲಸ ಮಾಡಲಿದ್ದು, ತನ್ನದೇ ಆದ ಇ-ವಾಲೆಟ್ ಅಯ್ಕೆಯನ್ನು ಇದು ಪಡೆದುಕೊಂಡಿದೆ.

ಅಮೆಜಾನ್ ಪೇ ಬ್ಯಾಲೆನ್ಸ್

ಅಮೆಜಾನ್ ಪೇ ಬ್ಯಾಲೆನ್ಸ್

ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಇತರೆ ಡಿವೈಸ್‌ನಲ್ಲಿ ಅಮೆಜಾನ್‌ ಪೇ ಬ್ಯಾಲೆನ್ಸ್ ಅನ್ನು ಬಳಕೆ ಮಾಡಬೇಕು ಎಂದುಕೊಂಡರೆ ನಿಮ್ಮ ಅಧಿಕೃತ ಐಡಿ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡಬೇಕಾಗುತ್ತದೆ. ಈ ಮೂಲಕ ಅಮೆಜಾನ್‌ ಪೇ ನಲ್ಲಿ ನೀವು ನೋಂದಣಿ ಮಾಡಿಕೊಳ್ಳಬಹುದು.

ಅಮೆಜಾನ್

ಇನ್ನು ಈ ಅಮೆಜಾನ್ ಪೇ ಬ್ಯಾಲೆನ್ಸ್‌ ಆಯ್ಕೆಯನ್ನು ನೀವು ನಿಮ್ಮ ಬ್ಯಾಂಕ್‌ ಖಾತೆ ಅಥವಾ ಇತರೆ ಯುಪಿಐ ಐಡಿ ಮೂಲಕ ಹಣ ಅಡ್‌ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಮತ್ತೊಂದು ಬ್ಯಾಂಕ್ ಖಾತೆಗೆ ವರ್ಗಾಯಿಸುವುದು ಹೇಗೆ ಎಂದು ನೀವು ಆಲೋಚಿಸಿದ್ದರೆ ಅದಕ್ಕೆ ಇಲ್ಲಿ ಸರಳ ಮಾರ್ಗ ಸೂಚಿಸಲಾಗಿದೆ.

ಕೆವೈಸಿ

ಅಮೆಜಾನ್‌ನಲ್ಲಿ ಸಂಪೂರ್ಣವಾಗಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಬಳಕೆದಾರರು ತಮ್ಮ ಅಮೆಜಾನ್‌ ಪೇ ಬ್ಯಾಲೆನ್ಸ್ ಅನ್ನು ಬೇಕಾದ ಬ್ಯಾಂಕ್ ಖಾತೆಗೆ ಅಥವಾ ವ್ಯಾಪಾರಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮೊದಲು ಗಮನಿಸಬೇಕಿದೆ. ಹಾಗಿದ್ರೆ ಹಣವನ್ನು ಹೇಗೆ ವರ್ಗಾಹಿಸಬಹುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ ನೋಡಿ.

ಹಂತ  1

ಹಂತ 1

ನಿಮ್ಮ ಫೋನ್‌ನಲ್ಲಿ ಅಮೆಜಾನ್‌ ಆಪ್ ಓಪನ್‌ ಮಾಡಿ, ನಂತರ ಅಲ್ಲಿ ಅಮೆಜಾನ್‌ ಪೇ ವಿಭಾಗಕ್ಕೆ ಹೋಗಿ. ಇದಾದ ಬಳಿಕ 'ಸೆಂಡ್‌ ಮನಿ' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 2

ಹಂತ 2

'ಸೆಂಡ್‌ ಮನಿ' ಆಯ್ಕೆ ಮೇಲೆ ಟ್ಯಾಪ್‌ ಮಾಡಿದ ನಂತರ 'ಟು ಬ್ಯಾಂಕ್' ಎಂಬ ಐಕಾನ್ ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ ನೀವು ಅಮೆಜಾನ್ ಬ್ಯಾಲೆನ್ಸ್ ಅನ್ನು ವರ್ಗಾಯಿಸಲು ಬಯಸುವ ಬ್ಯಾಂಕ್ ಖಾತೆಯ ವಿವರಗಳನ್ನು ಅಲ್ಲಿ ನಮೂದಿಸಿ. ಇದರಲ್ಲಿ IFSC ಕೋಡ್, ಖಾತೆ ಸಂಖ್ಯೆ, ಖಾತೆದಾರರ ಹೆಸರನ್ನು ಕೇಳಲಾಗುತ್ತದೆ.

ಹಂತ 3

ಹಂತ 3

ಅಕೌಂಟ್‌ ನಂಬರ್‌ ಅನ್ನು ನಮೂದಿಸಿದ ಬಳಿಕ ಅಲ್ಲಿ 'ಪೇ ನೌ' ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ಇದರ ನಂತರ ಅಲ್ಲಿ ಎಷ್ಟು ಹಣ ವರ್ಗಾಹಿಸಬೇಕು ಎಂಬುದನ್ನು ನಮೂದಿಸಿ 'ಕಂಟಿನ್ಯೂ' ಆಯ್ಕೆ ಮೇಲೆ ಟ್ಯಾಪ್ ಮಾಡಿ.

ಹಂತ 4

ಹಂತ 4

'ಕಂಟಿನ್ಯೂ' ಆಯ್ಕೆಯ ನಂತರ ನಿಮ್ಮ ಡಿಸ್‌ಪ್ಲೇ ಕೆಳಭಾಗದಲ್ಲಿ ಪಾಪ್‌-ಮೆನು ತೆರೆದುಕೊಳ್ಳುತ್ತದೆ. ಅದರಲ್ಲಿ ಅಮೆಜಾನ್‌ ಪೇ ಬ್ಯಾಲೆನ್ಸ್ ಆಯ್ಕೆ ಕಾಣಿಸಿಕೊಂಡರೆ ಅದನ್ನು ಟ್ಯಾಪ್‌ ಮಾಡಿ, ಅದು ಕಾಣಿಸಲಿಲ್ಲ ಎಂದರೆ 'ಶೋ ಮೋರ್‌ ವೇಯ್ಸ್‌' ಆಯ್ಕೆಯನ್ನ ಗಮನಿಸಿ ಹಾಗೂ ಅದರ ಮೇಲೆ ಟ್ಯಾಪ್‌ ಮಾಡಿ. ಅಲ್ಲಿ ನಿಮ್ಮ ಅಮೆಜಾನ್‌ ಪೇ ಬ್ಯಾಲೆನ್ಸ್‌ ಕಾಣಿಸಿಕೊಳ್ಳುತ್ತದೆ. ಹಾಗೆ ಅಲ್ಲೇ ಡಿಸ್‌ಪ್ಲೇ ಆಗುವ 'ಕಂಟಿನ್ಯೂ' ಬಟನ್‌ ಮೇಲೆ ಟ್ಯಾಪ್‌ ಮಾಡಿ ಇದಾದ ಬಳಿಕ ಅಗತ್ಯವಿರುವ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.

Best Mobiles in India

English summary
Amazon is an e-commerce giant. Here we explained how to transfer Amazon Pay balance to bank account found in it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X