ಸ್ಮಾರ್ಟ್‌ಫೋನ್‌ನಲ್ಲಿ ಎಮರ್ಜೆನ್ಸಿ ಲೊಕೇಶನ್‌ ಶೇರ್ ಮಾಡುವುದು ಹೇಗೆ?.. ಇದರಿಂದ ಪ್ರಯೋಜನ ಏನು?

|

ಸ್ಮಾರ್ಟ್‌ಫೋನ್ ಕರೆ ಮಾಡುವುದಕ್ಕೆ, ಮನರಂಜನೆ ಪಡೆಯುವುದಕ್ಕಷ್ಟೇ ಅಲ್ಲದೆ ಜೀವ ರಕ್ಷಕವಾಗಿಯೂ ಕೆಲಸ ಮಾಡುತ್ತದೆ. ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆದಾರರಿಗೆ ಉಪಯೋಗ ಆಗುವ ಹಲವಾರು ಫೀಚರ್ಸ್‌ ಪರಿಚಯಿಸಿದ್ದು, ಬಹುಪಾಲು ಮಂದಿಗೆ ಈ ಫೀಚರ್ಸ್‌ಗಳನ್ನು ಹೇಗೆ ಬಳಕೆ ಮಾಡಬೇಕು?, ಯಾವಾಗ ಬಳಕೆ ಮಾಡಬೇಕು ಎಂಬ ಮಾಹಿತಿ ತಿಳಿದಿರುವುದಿಲ್ಲ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ನಿಮ್ಮ ಜೀವ ರಕ್ಷಕವಾಗಿಯೂ ಕೆಲಸ ಮಾಡುತ್ತದೆ. ನೀವು ಯಾವುದಾದರೂ ತೊಂದರೆಗೆ ಸಿಲುಕಿದಾಗ ಅಥವಾ ನಿಮ್ಮ ಜೀವಕ್ಕೆ ಕುತ್ತು ಬರುವ ಸಂದರ್ಭದಲ್ಲಿ ಈ ಫೀಚರ್ಸ್‌ ಅನ್ನು ಬಳಕೆ ಮಾಡಿಕೊಂಡು ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಸೆಟ್ಟಿಂಗ್‌ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ. ಇನ್ನು ಈ ಫೀಚರ್ಸ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಲಭ್ಯವಿದೆ.

ಫೀಚರ್ಸ್‌

ಈ ಫೀಚರ್ಸ್‌ ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಸ್ನೇಹಿತರು, ಕುಟುಂಬ ಅಥವಾ ಇತರ ವಿಶ್ವಾಸಾರ್ಹ ಸಂಪರ್ಕಗಳಿಗೆ ಎಚ್ಚರಿಕೆ ಸಂದೇಶ ನೀಡಬಹುದಾಗಿದೆ. ಈ ಫೀಚರ್ಸ್‌ ಮೂಲಕ ನಿಮ್ಮ ಆತ್ಮೀಯರಿಗೆ ನೀವಿರುವ ಸ್ಥಳ, ಅಥವಾ ಆ ಸಮಯದಲ್ಲಿ ಸಂಭವಿಸುವ ಕೆಲವು ಕ್ಷಣದ ಆಡಿಯೋ ಆಥವಾ ವಿಡಿಯೋವನ್ನು ಸೆಂಡ್‌ ಮಾಡಬಹುದಾಗಿದೆ. ಇದಾಗಿಯೂ ಎಮರ್ಜೆನ್ಸಿ ಲೊಕೇಶನ್‌ ಫೀಚರ್ಸ್‌ ಹಾಗೂ ಆರೋಗ್ಯ ಸಂಬಂಧದ ಮಾಹಿತಿ ಶೇರ್‌ ಆಗುವುದರಿಂದ ನಿಮಗೆ ಬಹಳಷ್ಟು ಅನುಕೂಲ ಆಗಲಿದೆ.

ಏನಿದು ಎಮರ್ಜೆನ್ಸಿ ಲೊಕೇಶನ್‌ ಪೀಚರ್ಸ್‌?

ಏನಿದು ಎಮರ್ಜೆನ್ಸಿ ಲೊಕೇಶನ್‌ ಪೀಚರ್ಸ್‌?

ಈಗಾಗಲೇ ನಿಮ್ಮ ಸ್ಮಾರ್ಟ್‌ಫೋನ್‌ ಲಾಕ್‌ ಲಾಕ್ ಸ್ಕ್ರೀನ್‌ ಸ್ಥಿತಿಯಲ್ಲಿರುವಾಗ ತುರ್ತು ಸೇವೆ ಮಾಹಿತಿ ಇರುವುದನ್ನು ಗಮನಿಸಿರಬೇಕು. ಸ್ಮಾರ್ಟ್‌ಫೋನ್‌ನ ಪವರ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳುವ ಮೂಲಕ ಈಗಾಗಲೇ ಸೆಟ್‌ ಮಾಡಲಾಗಿರುವ ಸಂಪರ್ಕಗಳಿಗೆ ಇದರಿಂದ ಮಾಹಿತಿ ನೀಡಬಹುದು.

ವೈದ್ಯಕೀಯ ಮಾಹಿತಿ ಸಹ ಲಭ್ಯ

ವೈದ್ಯಕೀಯ ಮಾಹಿತಿ ಸಹ ಲಭ್ಯ

ತುರ್ತು ಸ್ಥಳ ಹಂಚಿಕೆ ಫೀಚರ್ಸ್‌ ಬಹಳ ಹಿಂದಿನಿಂದಲೂ ಇದ್ದು, ಬಳಕೆದಾರರು 112 ಗೆ ತುರ್ತು ಕರೆ ಮಾಡಲು ಇದು ಸಹಾಯ ಮಾಡುತ್ತದೆ. ಆದರೆ, ಹೊಸದಾಗಿ ಪರಿಚಯಿಸಲಾಗುತ್ತಿರುವ ಸುಧಾರಿತ ತಂತ್ರಜ್ಞಾನದ ಮೂಲಕ ಇನ್‌ಬಿಲ್ಟ್‌ ತುರ್ತು ಸ್ಥಳ ಹಂಚಿಕೆ ಫೀಚರ್ಸ್‌, ರಕ್ತದ ಪ್ರಕಾರ, ಆರೋಗ್ಯ ಸ್ಥಿತಿ, ಇತರೆ ವೈದ್ಯಕೀಯ ಮಾಹಿತಿಯನ್ನು ಪೂರ್ವವಾಗಿಯೇ ಸೇರಿಸಲು ಅನುವು ಮಾಡಿಕೊಡುತ್ತದೆ.

ಸಮಸ್ಯೆ

ಇದರಿಂದ ನೀವು ಯಾವುದಾದರೂ ಸಮಸ್ಯೆಗೆ ಒಳಗಾದ ವೇಳೆ ಬೇಗನೆ ಸಹಾಯ ಮಾಡಲು ಸಹಾಯಕವಾಗುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವೈದ್ಯಕೀಯ ವಿವರಗಳೊಂದಿಗೆ ಸ್ಥಳವನ್ನು ಹಂಚಿಕೊಳ್ಳಲು ನೀವು ಇನ್‌ಬಿಲ್ಟ್‌ ತುರ್ತು SOS ಫೀಚರ್ಸ್‌ ಅನ್ನು ಹೇಗೆ ಸಕ್ರಿಯಗೊಳಿಸಬೇಕು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ ನೋಡಿ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನ ಪವರ್ ಬಟನ್ ಅನ್ನು ಕೆಲವು ಸೆಕೆಂಡುಗಳ ಕಾಲ ಒತ್ತಿ ಹಿಡಿದುಕೊಳ್ಳಿ. ನಂತರ, ಡಿಸ್‌ಪ್ಲೇ ಕೆಳಭಾಗದಲ್ಲಿ ಲಭ್ಯವಿರುವ ತುರ್ತು SOS ಬಟನ್ ಅನ್ನು ಟ್ಯಾಪ್ ಮಾಡಿ.

ಹಂತ 2

ಹಂತ 2

ಇದಾದ ಬಳಿಕ ನಿಮ್ಮ ಸ್ಮಾರ್ಟ್‌ಫೋನ್ ಆಟೋಮ್ಯಾಟಿಕ್‌ ಆಗಿ 112 ಗೆ ತುರ್ತು ಕರೆ ಮಾಡುತ್ತದೆ. ಅದನ್ನು ರದ್ದುಗೊಳಿಸಿ. ನಂತರ, ಇತರ ಆಯ್ಕೆಗಳೊಂದಿಗೆ ನಿಮ್ಮ ಡಿಸ್‌ಪ್ಲೇ ಕೆಳಭಾಗದಲ್ಲಿ ಲಭ್ಯವಿರುವ ವೈದ್ಯಕೀಯ ಮಾಹಿತಿ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3

ಹಂತ 3

ಈ ವಿಭಾಗದಲ್ಲಿ ನಮಗೆ ಏನಾದರೂ ತುರ್ತು ಸಂದರ್ಭ ಎದುರಾದಾಗ ಅಗತ್ಯ ಇರುವ ನಿಮ್ಮ ಎಲ್ಲಾ ವೈದ್ಯಕೀಯ ವಿವರಗಳನ್ನು ಅಲ್ಲಿ ನಮೂದಿಸಿ. ಇದೆಲ್ಲಾ ಪೂರ್ಣಗೊಂಡ ನಂತರ ಕಂಟಿನ್ಯೂ ಬಟನ್ ಮೇಲೆ ಟ್ಯಾಪ್‌ ಮಾಡಿ.

ಐಫೋನ್‌

ಇದರಲ್ಲಿ ಗಮನಿಸುವ ಅಂಶ ಎಂದರೆ ಆಪಲ್‌ ಐಫೋನ್‌ 14 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ SOS ಫೀಚರ್ಸ್‌ ಹೊಸ ಸೌಲಭ್ಯವನ್ನು ಹೊಂದಿದೆ. ಈ ಫೀಚರ್ಸ್‌ ಮೂಲಕ ಇತ್ತೀಚೆಗೆ ಯಾರಿಗೆ ಕಾಲ್‌ ಅಥವಾ ಮೆಸೆಜ್‌ ಮಾಡಿದ್ದೀರೋ ಅವರಿಗೆ ಮಾಹಿತಿ ರವಾನೆಯಾಗುತ್ತದೆ.

Best Mobiles in India

English summary
How to use emergency location sharing on your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X