ಪಿಕ್ಸೆಲ್ ವಾಚ್‌ನಲ್ಲಿ ಗೂಗಲ್ ಅಸಿಸ್ಟೆಂಟ್ ಆಕ್ಟಿವ್‌ ಮಾಡಬೇಕೆ?: ಈ ಮಾರ್ಗ ಅನುಸರಿಸಿ

|

ಈಗಂತೂ ಸ್ಮಾರ್ಟ್ ಮೊಬೈಲ್‌ಗಳನ್ನೇ ಮೀರಿಸುವಷ್ಟು ಸ್ಮಾರ್ಟ್‌ವಾಚ್‌ಗಳು ವಿವಿಧ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಈಗಾಗಲೇ ಹಲವಾರು ಪ್ರಮುಖ ಕಂಪೆನಿಗಳು ವಿವಿಧ ಆಯ್ಕೆ ಇರುವ ಸ್ಮಾರ್ಟ್‌ವಾಚ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಸ್ಮಾರ್ಟ್‌ವಾಚ್‌ಗಳು ಬಳಕೆದಾರರ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳ ಮೇಲೆ ನಿಗಾ ಇಡಲಿವೆ. ಇದರ ನಡುವೆ ಈ ವಾಚ್‌ಗಳನ್ನು ಇನ್ನಷ್ಟು ಸ್ಮಾರ್ಟ್‌ ಮಾಡಲು ಗೂಗಲ್‌ ಅಸಿಸ್ಟೆಂಟ್‌ ಆಯ್ಕೆಯನ್ನು ಪಡೆದುಕೊಂಡಿವೆ. ಗೂಗಲ್‌ ಅಸಿಸ್ಟೆಂಟ್ ಈಗಂತೂ ಅತ್ಯಾವಶ್ಯಕವಾದ ಆಯ್ಕೆಗಳಲ್ಲಿ ಒಂದಾಗಿದೆ. ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಲು ಮತ್ತು ಕಮಾಂಡ್‌ಗಳನ್ನು ಹೊಂದಿಸಲು ಇದನ್ನು ಬಳಕೆ ಮಾಡಲಾಗುತ್ತದೆ.

ಲಾಂಚ್‌

ಹೌದು, ಇತ್ತೀಚೆಗೆ ಲಾಂಚ್‌ ಆಗಿರುವ ಗೂಗಲ್‌ ಪಿಕ್ಸೆಲ್ ಸರಣಿಯ ಸ್ಮಾರ್ಟ್‌ವಾಚ್‌ಗಳಿ ಭಾರೀ ಸದ್ದು ಮಾಡುತ್ತಿವೆ. ಸುಧಾರಿತ ಹಲವು ಫೀಚರ್ಸ್‌ಗಳನ್ನು ಈ ವಾಚ್‌ ಹೊಂದಿದೆ. ಇದೆಲ್ಲಕ್ಕಿಂತಲೂ ಮಿಸಗಿಲಾಗಿ ಗೂಗಲ್ ಅಸಿಸ್ಟೆಂಟ್ ಆಯ್ಕೆ ಪಡೆದಿದ್ದು, ವಿಶೇಷವೆನಿಸಿದೆ. ನಿಮಗೇನಾದರೂ ಈ ಗೂಗಲ್‌ ಅಸಿಸ್ಟೆಂಟ್‌ ಅನ್ನು ಸ್ಮಾರ್ಟ್‌ವಾಚ್‌ನಲ್ಲಿ ಬಳಕೆ ಮಾಡುವುದು ಗೊತ್ತಿಲ್ಲದಿದ್ದರೆ ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ

ಸ್ಮಾರ್ಟ್‌ವಾಚ್‌

ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಗೂಗಲ್‌ ಅಸಿಸ್ಟೆಂಟ್ ಒಂದು ಅತ್ಯುತ್ತಮ ವೈಶಿಷ್ಟ್ಯವಾಗಿದ್ದು, ವೇರ್‌ OS 3 ಡಿವೈಸ್‌ಗಳ ಇತ್ತೀಚಿನ ಅಪ್‌ಡೇಟ್‌ನಲ್ಲಿ ಡಿಜಿಟಲ್ ಧ್ವನಿ ಸಹಾಯಕವು ಬಹಳ ಆಕರ್ಷಕವಾಗಿದೆ. ಗೂಗಲ್‌ ಪಿಕ್ಸೆಲ್ ಸ್ಮಾರ್ಟ್‌ವಾಚ್‌ಗಳಲ್ಲಿ ಮೊದಲ ದಿನದಿಂದಲೂ ಈ ಫೀಚರ್ಸ್‌ ಲಭ್ಯವಾಗಿದ್ದು, ಅದನ್ನು ಹೇಗೆ ಬಳಸುವುದು ಎಂಬುದನ್ನು ಈ ಕೆಳಕಂಡಂತೆ ವಿವರಿಸಲಾಗಿದೆ. ಗೂಗಲ್‌ ಅಸಿಸ್ಟೆಂಟ್‌ ಆಯ್ಕೆಗೆ ಪ್ರವೇಶಿಸುವುದಕ್ಕೆ ಕೆಲವು ವಿಭಿನ್ನ ರೀತಿಗಳ ಮಾರ್ಗಗಳಿವೆ. ವಾಚ್‌ನ ಆರಂಭಿಕ ಸೆಟಪ್ ಸಮಯದಲ್ಲಿ ನೀವು ಗೂಗಲ್‌ ಅಸಿಸ್ಟೆಂಟ್‌ ಅನ್ನು ಸಕ್ರಿಯಗೊಳಿಸದಿದ್ದರೆ ಈ ರೀತಿ ಮಾಡಿ.

ಸ್ಮಾರ್ಟ್‌ವಾಚ್‌
 • *ನಿಮ್ಮ ಸ್ಮಾರ್ಟ್‌ವಾಚ್‌ನ ಡಿಸ್‌ಪ್ಲೇಯನ್ನು ಮೇಲಿನಿಂದ ಕೆಳಕ್ಕೆ ಸ್ವೈಪ್ ಮಾಡಿ ಹಾಗೆ ಅಲ್ಲಿ ಸಿಗುವ ಸೆಟ್ಟಿಂಗ್‌ ಬಟನ್‌ ಮೇಲೆ ಟ್ಯಾಪ್‌ ಮಾಡಿ.
 • *ಇದರಲ್ಲಿ ಗೂಗಲ್‌ ಆಯ್ಕೆ ಸಿಗುವ ವರೆಗೆ ಸ್ಕ್ರಾಲ್ ಮಾಡಿ
 • *ಇದಾದ ನಂತರ ನಿಮಗೆ ಅಸಿಸ್ಟೆಂಟ್‌ ಆಯ್ಕೆ ಸಿಗಲಿದೆ ಅದರ ಮೇಲೆ ಕ್ಲಿಕ್‌ ಮಾಡಿ.
 • *ಅಲ್ಲಿ ಗೆಟ್‌ ಸ್ಟಾರ್ಟೆಡ್‌ ಎಂಬ ಆಯ್ಕೆಯನ್ನು ಆರಿಸಿ
 • *ಇದಾದ ಬಳಿಕ ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್ ಓಪನ್‌ ಮಾಡಿ ಅಲ್ಲಿ ಕೆಳಗಿನ ಬಲ ಮೂಲೆಯಲ್ಲಿ ಕಾಣುವ ಸೆಟಪ್‌ ಮೇಲೆ ಟ್ಯಾಪ್‌ ಮಾಡಿ.
 • *ನಂತರ ಅಲ್ಲಿ ನೀಡಲಾದ ಮಾಹಿತಿಯನ್ನು ಒಮ್ಮೆ ಓದಿಕೊಂಡು ಮೋರ್‌ಅನ್ನು ಟ್ಯಾಪ್ ಮಾಡಿ ಅಲ್ಲಿ ಕಂಡುಬರುವ ನಾನು ಒಪ್ಪುತ್ತೇನೆ (I agree) ಮೇಲೆ ಕ್ಲಿಕ್‌ ಮಾಡಿ.
 • ಇದರ ಹೊರತಾಗಿ ಈ ಆಯ್ಕೆಯನ್ನೂ ಅನುಸರಿಸಬಹುದು

  ಇದರ ಹೊರತಾಗಿ ಈ ಆಯ್ಕೆಯನ್ನೂ ಅನುಸರಿಸಬಹುದು

  • *ಹ್ಯಾಪ್ಟಿಕ್ ಕ್ರೌನ್‌ ಬಟನ್‌ ಮೇಲಿನ ಭಾಗದಲ್ಲಿ ಒತ್ತಿ ಮತ್ತು ಸ್ವಲ್ಪ ಸಮಯದವರೆಗೆ ಹಾಗೆ ಹಿಡಿದುಕೊಳ್ಳಿ.
  • *ಸ್ಕ್ರೀನ್ ಸಕ್ರಿಯವಾಗಿರುವಾಗ, ಹೇ ಗೂಗಲ್ ಎಂದು ಹೇಳಿ.
  • *ಇದಾದ ನಂತರ ಹ್ಯಾಪ್ಟಿಕ್ ಕ್ರೌನ್‌ ಬಟನ್‌ ಒತ್ತಿ ನಂತರ ಅಲ್ಲಿ ಕಾಣುವ ಅಪ್ಲಿಕೇಶನ್ ಪಟ್ಟಿಯಿಂದ ಅಸಿಸ್ಟೆಂಟ್‌ ಆಯ್ಕೆಮಾಡಿ.
  • ಸ್ಮಾರ್ಟ್‌ಫೋನ್‌

   ಈ ವಿಧಾನಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಸ್ಪೀಕರ್‌ಗಳಲ್ಲೂ ಈ ಆಯ್ಕೆ ಪಡೆಯಬಹುದಾಗಿದೆ. ಗೂಗಲ್‌ ಅಸಿಸ್ಟೆಂಟ್‌ ಹಳೆಯ ವೇರ್‌ OS ಡಿವೈಸ್‌ಗಳಲ್ಲಿ ಕಳೆದ ವರ್ಷಗಳಿಂದಲೂ ಇದೆ. ಆದರೆ, ಅಂಡರ್‌ಪವರ್ಡ್ ಹಾರ್ಡ್‌ವೇರ್‌ನಿಂದಾಗಿ ಹೆಚ್ಚಾಗಿ ಬಳಕೆಗೆ ಬಂದಿಲ್ಲ. ಅದರೂ, ಟಿಕ್‌ವಾಚ್ ಪ್ರೊ 3 ಅಲ್ಟ್ರಾದಂತಹ ವಾಚ್‌ಗಳು ಯಾವುದೇ ಸಮಸ್ಯೆಯಿಲ್ಲದೆ ಇದರಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ನಡುವೆ ಕಳೆದ ವರ್ಷದಿಂದ ವೇರ್‌ OS 3 ಬಳಕೆಯ ಸ್ಯಾಮ್‌ಸಂಗ್‌ ಗ್ಯಾಲಕ್ಷಿ ವಾಚ್‌ 4 ಸರಣಿಯು ಸಹ ಈ ಫೀಚರ್ಸ್‌ ಪ್ರಾರಂಭಿಸಿರಲಿಲ್ಲ. ಹಾಗೆಯೇ ಮಾರ್ಚ್ 2022 ರ ನಂತರ ಸ್ಯಾಮ್‌ಸಂಗ್‌ನಲ್ಲಿ ಗೂಗಲ್‌ ಅಸಿಟ್ಟೆಂಟ್ ಆಯ್ಕೆ ನೀಡಲಾಗಿದೆ. ವಿಶೇಷ ಎಂದರೆ ಗೂಗಲ್‌ ಕಂಪೆನಿ ಮಾತ್ರ ಪಿಕ್ಸೆಲ್‌ ವಾಚ್‌ಗಳಲ್ಲಿ ಈ ಫೀಚರ್ಸ್‌ ನೀಡಿ ಹೆಚ್ಚಿನ ಗಮನ ಸೆಳೆದಿದೆ.

Best Mobiles in India

English summary
Even now, the smartwatches have got various features that surpass the smart mobiles themselves. In this article we have given information about how to activate Google Assistant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X