ಗೂಗಲ್‌ನಲ್ಲಿ 'Thanos' ಸರ್ಚ್ ಮಾಡಿದರೇ ಅರ್ಧ ರಿಸಲ್ಟ್ ವಾಶ್‌ಔಟ್!

|

ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಿಗೆ ಬರುವುದೇ ಗೂಗಲ್ ಸರ್ಚ್ ಇಂಜಿನ್. ನೀವು ಕೇಳಿರುವ ಮಾಹಿತಿಗೆ ಗೂಗಲ್ ಅನೇಕ ಫಲಿತಾಂಶಗಳ ಪಟ್ಟಿಯನ್ನೆ ನೀಡುತ್ತದೆ. ಆದರೆ ಗೂಗಲ್‌ನ 'ಇನ್ಫಿನಿಟಿ ಗೌಂಟ್ಲ್ಟ್' ಅಥವಾ ಥಾನ್ಸ್ ಪದವನ್ನು ನೀವು ಸರ್ಚ್ ಮಾಡಿದರೇ ನಿಮ್ಮ ಸರ್ಚ್ ರಿಸಲ್ಟ್‌ನ ಅರ್ಧದಷ್ಟು ಫಲಿತಾಂಶಗಳನ್ನು ಫುಲ್‌ ಕ್ಲಿನ್‌ ವಾಶ್‌ಔಟ್ ಮಾಡಲಿದೆ. ಅಚ್ಚರಿಯನಿಸಿದರು ಇದನ್ನು ನೀವು ನಂಬಲೇ ಬೇಕು.

ಹೌದು, ಇಂದು ಬಹುನಿರೀಕ್ಷಿತ ಅವೆಂಜರ್ಸ್‌ ಎಂಡ್‌ಗೇಮ್‌ ಎಂಬ ಇಂಗ್ಲೀಷ ಸಿನಿಮಾ ಇಂದು ಬಿಡುಗಡೆ ಆಗಿದ್ದು, ಅದರ ಸ್ಮರಣಾರ್ಥಕವಾಗಿ ಗೂಗಲ್ 'ಇನ್ಫಿನಿಟಿ ಗೌಂಟ್ಲ್ಟ್' ಅನ್ನು ಪರಿಚಯಿಸಿದೆ. ಸರ್ಚ್‌ ಇಂಜಿನ್‌ನಲ್ಲಿ ನೀವು Thanos ಪದ ಸರ್ಚ್‌ ಮಾಡಿದರೇ ಬರುವ ಫಲಿತಾಂಶದಲ್ಲಿ ಅರ್ಧದಷ್ಟು ಫಲಿತಾಂಶವನ್ನು ಅಳಿಸಿ ಹೋಗುತ್ತದೆ. ಹಾಗಾದರೇ 'ಇನ್ಫಿನಿಟಿ ಗೌಂಟ್ಲ್ಟ್' ಹೇಗೆ ಅರ್ಧದಷ್ಟು ರಿಸಲ್ಟ್‌ ವಾಶ್‌ಔಟ್‌ ಆಗಲಿದೆ ಎಂಬುದನ್ನು ತಿಳಿಯಲು ಈ ಮುಂದಿನ ಹಂತಗಳನ್ನು ಓದಿರಿ.

ಏನಿದು Thanos

ಏನಿದು Thanos

Thanos ಎಂಬುದು ಒಂದು ಜನಪ್ರಿಯ ಕಾಲ್ಪನಿಕ ಪಾತ್ರವಾಗಿದ್ದು, ಅಮೆರಿಕಾದ ಪ್ರಸಿದ್ಧ ಕಾಮಿಕ್ಸ್ ಪುಸ್ತಕದ ಕಥೆಗಳಲ್ಲಿ ಈ ಪಾತ್ರ ಪ್ರಮುಖವಾಗಿ ಕಂಡು ಬರುತ್ತದೆ. 'ಮಾರ್ವೆಲ್ ಕಾಮಿಕ್ಸ್‌ ಪಬ್ಲಿಕೇಶನ್‌' ವತಿಯಿಂದ ಪ್ರಕಟವಾದ ಕಾಮಿಕ್ಸ್ ಪುಸ್ತಕದ ಕಥೆಗಳಲ್ಲಿ ಈ ಪಾತ್ರ ಇದೆ.

ಗೂಗಲ್ ಇನ್ಫಿನಿಟಿ ಗೌಂಟ್ಲ್ಟ್

ಗೂಗಲ್ ಇನ್ಫಿನಿಟಿ ಗೌಂಟ್ಲ್ಟ್

ಇನ್ಫಿನಿಟಿ ಗೌಂಟ್ಲ್ಟ್ ಎಂಬುದು ಕಾಲ್ಪನಿಕ ವಿಶೇಷ ಕೈಗವಸು ಆಗಿದೆ, ಅದು ಆರು ಬಗೆಯ ಇನ್ಫಿನಿಟಿ ಕಲ್ಲುಗಳ ಶಕ್ತಿಯನ್ನು ಪಡೆದಿರುತ್ತದೆ. ಇದನ್ನು ಧರಿಸಿದವರಿಗೆ ಶಕ್ತಿ ಪ್ರಯೋಗಿಸುವ ಅವಕಾಶ ಬರುತ್ತದೆ. ಆ ಆರು ಸ್ಟೋನ್‌ಗಳೆಂದರೆ ಸ್ಪೇಸ್ ಸ್ಟೋನ್ (ನೀಲಿ), ರಿಯಾಲಿಟಿ ಸ್ಟೋನ್ (ಕೆಂಪು), ಪವರ್ ಸ್ಟೋನ್ (ಪರ್ಪಲ್), ಮೈಂಡ್ ಸ್ಟೋನ್ (ಹಳದಿ), ಟೈಮ್ ಸ್ಟೋನ್ (ಹಸಿರು) ಮತ್ತು ಸೋಲ್ ಸ್ಟೋನ್ (ಕಿತ್ತಳೆ).

Thanos ಅಥವಾ Infinity Gauntlet

Thanos ಅಥವಾ Infinity Gauntlet

ಗೂಗಲ್ ಸರ್ಚ್‌ ಇಂಜಿನ್‌ನಲ್ಲಿ Thanos ಅಥವಾ Infinity Gauntlet ಪದವನ್ನು ಟೈಪ್‌ ಮಾಡಿ ಸರ್ಚ್ ಮಾಡಿದರೇ ನಿಮಗೆ ಮಾಹಿತಿಗಳ ದೊಡ್ಡ ಫಲಿತಾಂಶ ಕಾಣಿಸುತ್ತದೆ. ನಿಮ್ಮ ಬಲ ಭಾಗದಲ್ಲಿ ಇಂದು ಐಕಾನ್ ಕಾಣಿಸುತ್ತದೆ ಇದನ್ನು ಕ್ಲಿಕ್ ಮಾಡಿ ಮ್ಯಾಜಿಕ್ ನೋಡಿ. ಅರ್ಧ ರಿಸಲ್ಟ್ ವಾಶ್‌ಔಟ್ ಪಕ್ಕಾ.

 ಹೇಗೆ ಚೆಕ್‌ ಮಾಡಿ ನೋಡಿ

ಹೇಗೆ ಚೆಕ್‌ ಮಾಡಿ ನೋಡಿ

* ಗೂಗಲ್ ಸರ್ವ್ ಇಂಜಿನ್ ತೆರೆಯಿರಿ
* ಟೈಪ್ Thanos ಅಥವಾ Infinity Gauntlet
* ಬಲಭಾಗದಲ್ಲಿ ಕಾಣುವ ಕೈ ಚಿತ್ರದ ಮೇಲೆ ಕ್ಲಿಕ್ ಮಾಡಿ
* Thanos ಮಾಹಿತಿಯ ಅರ್ಧದಷ್ಟು ಫಲಿತಾಂಶ ವಾಶ್‌ಔಟ್ ಆಗುತ್ತದೆ.
* ಮತ್ತೆ ಆ ಕೈ ಚಿತ್ರದ ಮೇಲೆ ಕ್ಲಿಕ್ ಮಾಡಿ
* ವಾಶ್‌ಔಟ್ ಫಲಿತಾಂಶ ಮತ್ತೆ ಮರಳಿ ಬರುತ್ತದೆ.

Best Mobiles in India

English summary
How to use the Infinity Gauntlet from Google search to wipe out half search results?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X