ಉಚಿತವಾಗಿ ವಿಂಡೋಸ್ 10 ಆಪ್ಡೇಟ್ ಮಾಡಿಕೊಳ್ಳುವುದು ಹೇಗೆ....? ಇಲ್ಲಿದೆ ಮಾಹಿತಿ

Written By:

ಮೈಕ್ರೋಸಾಫ್ಟ್‌ನಿಂದ ವಿಂಡೋಸ್ 10 ಘೋಷಣೆ ಮಾಡಿದ ಸಂದರ್ಭದಲ್ಲಿ ಪ್ರಸ್ತುತ ಬಳಕೆದಾರರಿಗೆ ಉಚಿತ ಆಪ್ಡೇಟ್ ನೀಡುವುದಾಗಿ ಘೋಷಿಸಿತು. ಆದರೆ ಉಚಿತ ಆಪ್ಡೇಟ್ ಅವಧಿ ಮುಗಿದರು ಸಾಕಷ್ಟು ಮಂದಿ ತಮ್ಮ ಸಿಸ್ಟಮ್‌ಗಳನ್ನು ಆಪ್ಡೇಟ್ ಗಳನ್ನು ಮಾಡಿಕೊಂಡಿಲ್ಲ. ಇದಕ್ಕಾಗಿ 2016ರ ಜುಲೈವರೆಗೂ ಉಚಿವಾಗಿದ್ದ ಆಪ್ಡೇಟ್‌ಗೆ ಸದ್ಯ ಹಣ ಪಾವತಿ ಮಾಡಬೇಕಾಗಿದ್ದು, ಈ ಹಿನ್ನಲೆಯಲ್ಲಿ ಈಗಲೂ ವಿಂಡೋಸ್ 1೦ ಗೆ ಉಚಿತವಾಗಿ ಆಪ್ಡೇಟ್ ಮಾಡಿಕೊಳ್ಳುವುದು ಹೇಗೆ ಎಂಬುದು ಇಲ್ಲಿದೆ.

ಉಚಿತವಾಗಿ ವಿಂಡೋಸ್ 10 ಆಪ್ಡೇಟ್ ಮಾಡಿಕೊಳ್ಳುವುದು ಹೇಗೆ....? ಇಲ್ಲಿದೆ ಮಾಹಿತಿ

ವಾಟ್ಸಪ್ ಹೊಸ ದಾಖಲೆ: ಹೊಸ ವರ್ಷದಂದು ವಿಶ್ವದಾದ್ಯಂತ ಹರಿದಾಡಿದ್ದು 63 ಬಿಲಿಯನ್ ಸಂದೇಶ

ವಿಂಡೋಸ್ 10ಗೆ ಸದ್ಯ ಆಪ್ಡೇಟ್ ಮಾಡಿಕೊಳ್ಳಲು ಹೇಗೆ ಎಂಬುದಕ್ಕೆ ನೋಡವುದಾದರೆ, Windows 7 ಮತ್ತು Windows 8.1 ಕಂಪ್ಯೂಟರ್‌ಗಳಿಗೆ ಈಗಲೂ ಉಚಿತ ಅಪ್ಡೇಟ್ ಮಾಡಿಕೊಳ್ಳುವ ಅವಕಾಶವು ಲಭ್ಯವಿದ್ದು, ನಿಮ್ಮ ಕಂಪ್ಯೂಟರ್ ನಲ್ಲಿ ಆಪ್ಡೇಟ್ ಪಾಪ್ ಆಪ್ ಕಾಣಿಸುತ್ತಿಲ್ಲವಾದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಕಂಪ್ಯೂಟರ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ.

ಉಚಿತವಾಗಿ ವಿಂಡೋಸ್ 10 ಆಪ್ಡೇಟ್ ಮಾಡಿಕೊಳ್ಳುವುದು ಹೇಗೆ....? ಇಲ್ಲಿದೆ ಮಾಹಿತಿ

ಕ್ಸಿಯೋಮಿ Mi MIX: 6GB RAM ಮತ್ತು 256GB ಮೆಮೊರಿ

ವಿಂಡೋಸ್ 10 ಆಪ್ಡೇಟ್ ಮಾಡುವ ಮೊದಲು ನಿಮ್ಮ ಕಂಪ್ಯೂಟರ್ ನಲ್ಲಿ ಮಾಡುತ್ತಿರುವ ಕೆಲಸಗಳನ್ನು ಸೇವ್ ಮಾಡಿ ಕ್ಲೋಸ್ ಮಾಡಿ. ನಂತರ ಈ ವಿಧಾನವನ್ನು ಅನುಸರಿಸಿ.

1 ವಿಂಡೋಸ್ 10 ಡೌನ್‌ಲೋಡ್ ಪೇಜ್ ಓಪನ್ ಮಾಡಿರಿ
2 ಅಲ್ಲಿ 'ಡೌನ್‌ಲೋಡ್ ಟೂಲ್ ನೌ' ಮೇಲೆ ಕ್ಲಿಕ್ ಮಾಡಿರಿ
3 ಡೌನ್‌ಲೋಡ್ ಮುಗಿದ ಮೇಲೆ, ಡಬ್ಬಲ್ ಕ್ಲಿಕ್ ಮಾಡಿ ಆ ಫೈಲ್ ಓಪನ್ ಮಾಡಿ
4 ನಂತರ ಟರ್ಮ್ಸ ಅಂಡ್ ಕಂಡಿಷನ್ ಗೆ ಓಕೆ ಮಾಡಿ
5 ಆಪ್‌ಗ್ರೇಡ್ ಪಿಸಿ ನೌ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
6 ನಂತರ ವಿಂಡೋಸ್ 10 ಆಪ್ಡೇಟ್ ಆಗುವವರೆಗೆ ಕಾಯಿರಿ
7 ಇದಾದ ನಂತರ ಆಟೋಮೆಟಿಕ್ ಆಗಿ ಡೌನ್‌ಲೊಡ್ ವೆರಿಫಿಕೇಷನ್ ಆಗುತ್ತದೆ. ಆದಾದ ಮೇಲೆ ವಿಂಡೋಸ್ 10 ಮೀಡಿಯಾ ಕ್ರಿಯೆಟ್   ಆಗುತ್ತದೆ.
8 ನಂತರ ಲೈಸೆನ್ಸ್ ಗಾಗಿ ಓಕೆ ಮಾಡಿರಿ.
9 ಇದಾದ ನಂತರ ನಿಮ್ಮ ವಿಂಡೋಸ್‌ ಆಪ್ಡೇಟ್ ಕಂಪ್ಲಿಟ್ ಆಗಿರುತ್ತದೆ. ನಂತರ ಅಲ್ಲಿ ಇನ್‌ಸ್ಟಾಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
10. ಇದಾದ ಮೇಲೆ ಹತ್ತಿರ ಹತ್ತಿರ ಒಂದು ಗಂಟೆಗಳ ಕಾಲದಲ್ಲಿ ವಿಡೋಸ್ ಆಪ್ಡೇಟ್ ಆಗಿ ರಿ ಬೂಟ್ ಆಗಿ ಹೊಸದಾಗಿ ವಿಂಡೋಸ್   10 ಕಾರ್ಯಚರಣೆಗೆ ಸಿದ್ಧವಾಗಲಿದೆ.

English summary
When Windows 10 was announced, Microsoft had offered a free update for existing PC users, but only before July 29, 2016. If you haven't already upgraded to Windows 10 you'd think that this means you need to pay for it now. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot