Subscribe to Gizbot

ವಾಟ್ಸಪ್ ಹೊಸ ದಾಖಲೆ: ಹೊಸ ವರ್ಷದಂದು ವಿಶ್ವದಾದ್ಯಂತ ಹರಿದಾಡಿದ್ದು 63 ಬಿಲಿಯನ್ ಸಂದೇಶ

Written By:

ದಿನೇ ದಿನೇ ಸ್ಮಾರ್ಟ್‌ಪೋನು ಎಲ್ಲರ ಕಿಸೆ ಸೇರುತ್ತಿದ್ದು, ಸಾಮಾಜಿಕ ಜಾಲತಾಣಗಳ ಬಳಕೆ ಏರುಗತಿಯಲ್ಲಿ ಸಾಗುತ್ತಿದೆ ಎಂಬುದದಕ್ಕೆ ಇಲ್ಲಿದೆ ಸಾಕ್ಷಿ: ಹೊಸ ವರ್ಷದಂದು ಭಾರತೀಯರು ವಾಟ್ಸಪ್ ಮೂಲಕ 14 ಬಿಲಿಯನ್ ವಾಟ್ಸಪ್ ಮೇಸೆಜ್ ಕಳುಹಿಸುವ ಮೂಲಕ ಹೊಸದೊಂದು ದಾಖಲೆ ಕಾರಣವಾಗಿದ್ದ ವರದಿ ಮಾಸುವ ಮುನ್ನವೇ ಇದೇ ಹೊಸ ವರ್ಷದ ಸಂಭ್ರಮಾಚರಣೆಯಂದು ವಿಶ್ವದಾದ್ಯಂತ ಸುಮಾರು 63 ಬಿಲಿಯನ್ ವಾಟ್ಸಪ್ ಮೇಸೆಜ್‌ಗಳು ಹರಿದಾಡಿದ್ದು, ನೂತನ ವಿಶ್ವದಾಖಲೆಯೊಂದು ನಿರ್ಮಾಣವಾಗಿದೆ ಎನ್ನುವ ಸುದ್ದಿ ಹೊರ ಬಂದಿದೆ.

ವಾಟ್ಸಪ್ ಹೊಸ ದಾಖಲೆ: ಒಂದೇ ದಿನ ವಿಶ್ವದಾದ್ಯಂತ ಹರಿದಾಡಿದ್ದು 63 ಬಿಲಿಯನ್ ಸಂದೇಶ

ಕ್ಸಿಯೋಮಿ Mi MIX: 6GB RAM ಮತ್ತು 256GB ಮೆಮೊರಿ

ಒಂದೇ ದಿನದಲ್ಲಿ ಒಂದೇ ಮೆಸೆಂಜಿಂಗ್ ಆಪ್ ವೊಂದರಲ್ಲಿ 63 ಬಿಲಿಯನ್ ಮೇಸೆಜ್‌ಗಳು ಹರಿದಾಡಿರುವುದು ಇದೇ ಮೊದಲ ಬಾರಿಯಾಗಿದ್ದು, ಇದುವರೆಗೂ ಒಂದೇ ಒಂದು ಆಪ್ ನಲ್ಲಿ ಇಷ್ಟು ಪ್ರಮಾಣದ ಸಂದೇಶಗಳು ರವಾನೆಯಾಗಿರಲಿಲ್ಲ ಎನ್ನಲಾಗಿದೆ. ಈ ಅಂಕಿಅಂಶಗಳನ್ನು ನೋಡಿದರೆ ವಾಟ್ಸಪ್ ಜನಪ್ರಿಯತೆಯನ್ನು ಅರಿಯಬಹುದಾಗಿದೆ. ಈ ದಾಖಲೆ ನಿರ್ಮಾಣವಾಗುವಲ್ಲಿ ಭಾರತೀಯರ ಪಾಲು ಹೆಚ್ಚಿದ್ದು, ವಾಟ್ಸಪ್ ಸಂದೇಶಗಳ ರವಾನೆಯಲ್ಲಿ ಭಾರತೀಯರೇ ಮೊದಲ ಸ್ಥಾನದಲ್ಲಿದ್ದು, ಹೊಸ ವರ್ಷದಂದು ಸುಮಾರು 14 ಬಿಲಿಯನ್ ಮೇಸೆಜ್ ಮಾಡಿದ್ದಾರೆ.

ವಾಟ್ಸಪ್ ಮಾರುಕಟ್ಟೆಗೆ ಕಾಲಿಟ್ಟ ಮೇಲೆ ಅದರ ಬೆಳವಣಿಗೆಯನ್ನು ಗಮನಿಸಿದ ಸೋಶಿಯಲ್ ಮಿಡಿಯಾ ದೈತ್ಯ ಫೇಸ್‌ಬುಕ್ ಹಿಂದು ಮುಂದೂ ನೋಡದೆ ಅಪಾರ ಪ್ರಮಾಣದ ಹಣವನ್ನು ನೀಡಿ ವಾಟ್ಸಪ್ ಅನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಸದ್ಯ ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ನಿಂದ ನ್ಯೂ ಇಯರ್ ದಿನದಂದು 63 ಬಿಲಿಯನ್ ಮೇಸೆಜ್‌ಗಳು ಹರಿದಾಡಿದೆ ಎನ್ನಲಾಗಿದ್ದು, ಈ ಪೈಕಿ 7.9 ಮಿಲಿಯನ್ ಇಮೇಜ್ ಗಳು ಮತ್ತು 2.4 ಮಿಲಿಯನ್ ವಿಡಿಯೋಗಳು ರವಾನೆಯಾಗಿದೆ ಎಂದು ವರದಿಯಾಗಿದೆ.

ವಾಟ್ಸಪ್ ಹೊಸ ದಾಖಲೆ: ಒಂದೇ ದಿನ ವಿಶ್ವದಾದ್ಯಂತ ಹರಿದಾಡಿದ್ದು 63 ಬಿಲಿಯನ್ ಸಂದೇಶ

ಐಪೋನಿಗಿಂತಲೂ ತೆಳುವಾದ ಟಿವಿ ಬಿಡುಗಡೆ ಮಾಡಿದ ಕ್ಸಿಯೋಮಿ

63 ಬಿಲಿಯನ್ ಮೇಸೆಜ್‌ನಲ್ಲಿ ಭಾರತೀಯರ ಪಾಲು ಶೇ32 ರಷ್ಟಿದ್ದು, ಹೊಸ ವರ್ಷದಂದು ಶುಭಕೋರುವ ನಿಟ್ಟಿನಲ್ಲಿ ಭಾರತೀಯರು 3.1 ಮಿಲಿಯನ್ ಚಿತ್ರಗಳು, 700 ಮಿಲಿಯನ್ GIF ಇಮೇಜ್‌ಗಳು, 610 ಮಿಲಿಯನ್ ವಿಡಿಯೋಗಳು ಸೇರಿದಂತೆ 14 ಬಿಲಿಯನ್ ವಾಟ್ಸಪ್ ಮೇಸೆಜ್ ಮಾಡಿದ್ದಾರೆ ಎಂಬ ಅಂಕಿ-ಅಂಶವು ಲಭ್ಯವಾಗಿದೆ.

Read more about:
English summary
WhatsApp has revealed that New Year's Eve saw 63 billion messages being sent globally. As we reported last week, a very significant part of that massive number was generated by India. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot