ಕ್ಸಿಯೋಮಿ Mi MIX: 6GB RAM ಮತ್ತು 256GB ಮೆಮೊರಿ

|

ಸದಾ ಒಂದಲ್ಲ ಒಂದು ಹೊಸ ಪೋನನನ್ನು ಲಾಂಚ್ ಮಾಡುವ ಕ್ಸಿಯೋಮಿ, ಸದ್ಯ ವೇಗಸ್‌ನಲ್ಲಿ ನಡೆಯುತ್ತಿರುವ ಕನ್ಸಸ್ಯೂಮರ್ ಎಲೆಕ್ಟ್ರಾನಿಕ್ ಶೋನಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಪೋನ್ Mi MIX ಅನ್ನು ಬಿಡುಗಡೆ ಮಾಡಿದೆ. ಈ ವರ್ಷದ ಮಧ್ಯಭಾಗದಲ್ಲಿ ಈ ಪೋನ್ ಗ್ರಾಹಕರ ಕೈ ಸೇರಲಿದ್ದು, ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಪೋನಿ ಬೆಲೆ ಮಾತ್ರ ಬಹಿರಂಗವಾಗಿಲ್ಲ.

ಕ್ಸಿಯೋಮಿ Mi MIX: 6GB RAM ಮತ್ತು 256GB ಮೆಮೊರಿ

ಐಪೋನಿಗಿಂತಲೂ ತೆಳುವಾದ ಟಿವಿ ಬಿಡುಗಡೆ ಮಾಡಿದ ಕ್ಸಿಯೋಮಿ

Mi MIX ಸ್ಮಾರ್ಟ್‌ಪೋನಿನ ಪ್ರಮುಖ ಗುಣವಿಶೇಷತೆ ಎಂದರೆ, 91.3% ಸ್ಕ್ರಿನ್ ಪೋನಿನಲ್ಲಿದ್ದು, ಮಿಕ್ಕ ಸ್ವಲ್ಪ ಭಾಗದಲ್ಲಿ ಮಾತ್ರ ಹೋಮ್ ಬಟನ್ ಮುಂತಾದವಿದೆ. ನೋಡಲು ಹೊಸ ಲುಕ್ ಹೊಂದಿದ್ದು, ಪೋನಿನ ತುಂಬ ಪರದೆಯೇ ಆಕ್ರಮಿಸಿಕೊಂಡತೆ ಕಾಣಲಿದೆ. ಬೇರೆ ಪೋನುಗಳಂತೆ ಮಧ್ಯಭಾಗದಲ್ಲಿ ಮಾತ್ರ ಸ್ಕ್ರಿನ್ ಇರುವ ಲುಕ್‌ ಈ ಪೋನ್ ಹೊಂದಿಲ್ಲ.

ಹೊಸ ಮಾದರಿಯ ಡಿಸ್‌ಪ್ಲೇ

ಹೊಸ ಮಾದರಿಯ ಡಿಸ್‌ಪ್ಲೇ

Mi MIX ಸ್ಮಾರ್ಟ್‌ಪೋನಿನ ಆಕರ್ಷಣೆ ಎಂದರೆ ಡಿಸ್‌ಪ್ಲೇ. 6.4 ಇಂಚಿನ ಸ್ಕ್ರಿನ್ ಈ ಪೋನಿನಲ್ಲಿದ್ದು, 17:9 ಅನುಪಾತ 1080x2040p ರೆಸಲ್ಯೂಷನ್ ಹೊಂದಿದೆ. ಉತ್ತಮ ಗುಣಮಟ್ಟದ ಪಿಚ್ಚರ್ ಕ್ಯಾಲಿಟಿ ಇರುವುದರಿಂದ ಈ ಪೋನಿನಲ್ಲಿ ಸಿನಿಮಾ ವೀಕ್ಷಣೆಯೂ ಹೆಚ್ಚು ಆರಾಮದಾಯಕ ಮತ್ತು ಕಲರ್ ಪುಲ್ ಆಗಿ ಮೂಡಿಬರಲಿದೆ. ಪೋನಿನ ತುಂಬ ಪರದೆಯೇ ಆಕ್ರಮಿಸಿರುವುದು ಇದಕ್ಕೆ ಕಾರಣವಾಗಿದೆ.

ಅತ್ಯಂತ ವೇಗದ ಪ್ರೋಸೆಸರ್:

ಅತ್ಯಂತ ವೇಗದ ಪ್ರೋಸೆಸರ್:

2.35GHz ವೇಗದ ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್ 821 ಪ್ರೋಸೆಸರ್ ಈ ಪೋನಿನಲ್ಲಿದ್ದು, ಯಾವುದೇ ತಡೆ ಇಲ್ಲದೇ ವೇಗವಾಗಿ ಕಾರ್ಯನಿರ್ವಹಿಸಲಿದೆ. ಈ ಪೋನು ಎರಡು ಮಾದರಿಯಲ್ಲಿ ಲಭ್ಯವಿದ್ದು, 4GB RAM ಮತ್ತು 128GB ಇಂಟರ್‌ನಲ್ ಮೆಮೊರಿ ಒಂದು ಮಾದರಿಯದ್ದು, ಹಾಗೂ 6GB RAM ಮತ್ತು 256GB ಇಂಟರ್ನಲ್ ಮೆಮೊರಿಯ ಇನ್ನೊಂದು ಮಾದರಿ ಸಹ ಲಭ್ಯವಿರಲಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

Mi MIX ಪೋನಿನ ಹಿಂಭಾಗದಲ್ಲಿ 16MP ಕ್ಯಾಮೆರಾ ಇದೆ, ಇದರಲ್ಲಿ f/2.0 ಅಪರ್ಚರ್ ಸಹ ಇದೆ. ಅಲ್ಲದೇ ಡುಯಲ್ ಟೋನ್ LED ಫ್ಲಾಷ್ ಹೊಂದಿದೆ. ಮುಂಭಾಗದಲ್ಲಿ 5MP ಕ್ಯಾಮೆರಾ ಇದ್ದು, ಸೆಲ್ಫಿ ತೆಗೆಯಲು ಹಲವರು ಆಯ್ಕೆಗಳನ್ನು ನೀಡಿದೆ.

4400mAh ಬ್ಯಾಟರಿ;

4400mAh ಬ್ಯಾಟರಿ;

ಇಷ್ಟೆಲ್ಲ ಆಯ್ಕೆಗಳನ್ನು ಹೊಂದಿರುವ Mi MIX ಸ್ಮಾರ್ಟ್‌ಪೊನಿನಲ್ಲಿ ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ 4400mAh ಬ್ಯಾಟರಿ ಅಳವಡಿಸಲಾಗಿದ್ದು, ಜೊತೆಗೆ ವೇಗವಾಗಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡುವ ಸಲುವಾಗಿ Quick Charge 3.0 ಸಹ ಈ ಪೋನಿನಲ್ಲಿದೆ.

Best Mobiles in India

English summary
Xiaomi announced a new Mi MIX variant in White colour option, which will be launched in China later this year. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X