ಸ್ಮಾರ್ಟ್‌ಗ್ಯಾಜೆಟ್‌ ಬಳಕೆ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ; ಆ ಸಮಯದಲ್ಲಂತೂ ಬಳಸಲೇ ಬೇಡಿ!

|

ಸ್ಮಾರ್ಟ್‌ಲೋಕದಲ್ಲಿ ಸ್ಮಾರ್ಟ್‌ ಗ್ಯಾಜೆಟ್‌ಗಳು ಇಂದು ಎಲ್ಲಾ ರೀತಿಯಲ್ಲೂ ಮನುಷ್ಯನಿಗೆ ಸಹಕಾರಿಯಾಗಿದ್ದು, ಅಷ್ಟೇ ಮಾರಕವಾಗಿವೆ. ಅದರಲ್ಲೂ ಸ್ಮಾರ್ಟ್‌ಫೋನ್‌ ನಮ್ಮ ಅವಿಭಾಜ್ಯ ಅಂಗದಂತೆ ಆಗಿಹೋಗಿದೆ. ಬಹುಪಾಲು ಮಂದಿ ದಿನದ 24 ಗಂಟೆಯೂ ಸ್ಮಾರ್ಟ್‌ಫೋನ್‌ ಅನ್ನು ಜೊತೆಯಲ್ಲೇ ಇರಿಸಿಕೊಂಡಿರುತ್ತಾರೆ. ಆದರೆ, ಈ ರೀತಿಯ ಅಭ್ಯಾಸ ಮನುಷ್ಯನಿಗೆ ಏನೆಲ್ಲಾ ಸಮಸ್ಯೆ ಉಂಟುಮಾಡುತ್ತವೆ ಎಂಬುದನ್ನು ಎಂದಾದರೂ ನೀವು ಯೋಚಿಸಿದ್ದೀರಾ?.

ರಾತ್ರಿವೇಳೆ

ಹೌದು ಸಾಮಾನ್ಯವಾಗಿ ರಾತ್ರಿವೇಳೆ ಸ್ಮಾರ್ಟ್‌ಫೋನ್ ಅಥವಾ ಬೆಳಕು ಚೆಲ್ಲುವ ಇತರೆ ಯಾವುದೇ ಗ್ಯಾಜೆಟ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಬಾರದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ, ಅದನ್ನು ಬದಿಗೊತ್ತಿ, ಮುಂಜಾನೆವರೆಗೂ ಮೊಬೈಲ್‌ ನೋಡಿ ಸೂರ್ಯ ನೆತ್ತಿಗೆ ಬರುವಾಗ ಏಳುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಈ ರೀತಿ ಮಾಡುವುದು ಅಥವಾ ನಿದ್ರೆ ಇಲ್ಲದೆ ರಾತ್ರಿ ಕಳೆಯುವುದರಿಂದ ಏನೆಲ್ಲಾ ಗಂಭೀರ ಸಮಸ್ಯೆ ಎದುರಾಗುತ್ತವೆ ಎಂಬುದನ್ನು ವಿವರಿಸಿದ್ದೇವೆ ಓದಿರಿ.

ಕೃತಕ ಬೆಳಕಿನಿಂದ ಎಚ್ಚರ ವಹಿಸಿ

ಕೃತಕ ಬೆಳಕಿನಿಂದ ಎಚ್ಚರ ವಹಿಸಿ

ಸಾಮಾನ್ಯವಾಗಿ ಬಹುಪಾಲು ಮಂದಿಗೆ ಸ್ವಲ್ಪ ಬೆಳಕಿದ್ದರೂ ಸಹ ನಿದ್ದೆ ಬರುವುದಿಲ್ಲ. ಕಡುಗತ್ತಲು ಆವರಿಸಿದ್ದರಷ್ಟೇ ನಿದ್ರೆ ಬರುತ್ತದೆ. ಇನ್ನೂ ಕೆಲವರೂ ಎಲ್ಲೆಂದರಲ್ಲಿ ನಿದ್ದೆ ಮಾಡುವುದನ್ನು ಕಾಣಬಹುದು. ವಿಷಯ ಏನೆಂದರೆ ಸರಿಯಾಗಿ ನಿದ್ದೆ ಮಾಡದಿರುವುದು ಆಲಸ್ಯ ಹಾಗೂ ನೀರಸ ಭಾವನೆ ಉಂಟಾಗಲು ಕಾರಣವಾಗುತ್ತದೆ. ಇದಕ್ಕೆ ಕಾರಣ ಕೃತಕ ಬೆಳಕು. ಇದು ನಿದ್ರೆಯ ಗುಣಮಟ್ಟ ಮತ್ತು ದೀರ್ಘಾವಧಿಯಲ್ಲಿ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮನೋವೈದ್ಯರು ತಿಳಿಸಿದ್ದಾರೆ.

ಮೆದುಳಿನ ಮೇಲೆ ಎಫೆಕ್ಟ್‌

ಮೆದುಳಿನ ಮೇಲೆ ಎಫೆಕ್ಟ್‌

ಸರಿಯಾದ ನಿದ್ದೆ ಆರೋಗ್ಯಕರ ಜೀವನಕ್ಕೆ ತುಂಬಾ ಅವಶ್ಯಕವಾಗಿದ್ದು, ನೀವೇನಾದರೂ ಸರಿಯಾಗಿ ನಿದ್ದೆ ಮಾಡದೆ ಇದ್ದರೆ ಮೆದುಳಿನ ಜೈವಿಕ ನಿದ್ರೆಯ ಚಕ್ರದ ಮೇಲೆ ಪರಿಣಾಮ ಉಂಟಾಗುತ್ತದೆ. ಯಾಕೆಂದರೆ, ಮೆದುಳಿನಲ್ಲಿ ಸುಪ್ರಾಚಿಯಾಸ್ಮ್ಯಾಟಿಕ್ ನ್ಯೂಕ್ಲಿಯಸ್ ಇದ್ದು, ಇದು ದೇಹದಲ್ಲಿ ಹೆಚ್ಚಿನ ಸಿರ್ಕಾಡಿಯನ್ ಲಯಗಳನ್ನು ನಿಯಂತ್ರಿಸುತ್ತದೆ. ಇದು ನಿದ್ರೆಯ ಲಯ ಮತ್ತು ನಿದ್ರೆ-ಎಚ್ಚರ ಚಕ್ರವನ್ನು ನಿಯಮಿತವಾಗಿ ಕಂಟ್ರೋಲ್‌ ಮಾಡುವ ಕೆಲಸ ಮಾಡಿಕೊಂಡು ಬರುತ್ತದೆ. ಆದರೆ, ಇದರ ವಿರುದ್ಧವಾಗಿ ನಾವು ನಡೆದುಕೊಂಡರೆ ತೊಂದರೆಗೊಳಗಾಗಿ ಆರೋಗ್ಯ ಸಮಸ್ಯೆ ಎದುರಿಸುವಂತೆ ಮಾಡುತ್ತದೆ.

ಆಧುನಿಕ ಜೀವನದ ಸಮಸ್ಯೆ

ಆಧುನಿಕ ಜೀವನದ ಸಮಸ್ಯೆ

ನಿದ್ರೆಯ ಸಮಸ್ಯೆ ಎಂಬುದು ಇಂದಿನ ಆಧುನಿಕ ಜೀವನದ ಸಮಸ್ಯೆಯಾಗಿದೆ. ಯಾಕೆಂದೆರೆ ಪ್ರತಿನಿತ್ಯ ಸಂಚಾರ ದಟ್ಟಣೆಯಲ್ಲೇ ಬಹುಪಾಲು ಸಮಯ ಕಳೆದರೆ ಉಳಿದ ಸಮಯವನ್ನು ಆಫೀಸ್‌ನಲ್ಲಿ ಕಳೆಯಲಾಗುತ್ತದೆ. ಇದಾದ ನಂತರ ಮನೆಗೆ ಬಂದಾಗ ಸ್ಮಾರ್ಟ್‌ಫೋನ್‌ ಅಥವಾ ಟಿವಿ ನಮ್ಮನ್ನು ಸೆಳೆದು, ತಡರಾತ್ರಿವರೆಗೂ ನಿದ್ದೆ ಮಾಡಲು ಅವಕಾಶ ಮಾಡಿಕೊಡದೆ ಸಮಸ್ಯೆ ಎದುರಾಗುವಂತೆ ಮಾಡುತ್ತದೆ. ಈ ಕಾರಣಕ್ಕೆ ಇದೊಂದು ಆಧುನಿಕ ಜೀವನದ ಸಮಸ್ಯೆ ಎಂದು ಪುಣೆಯ ಮೈಂಡ್ ಏಡ್ ಸೈಕೋಮೆಟ್ರಿ ಲ್ಯಾಬ್‌ನ ನಿರ್ದೇಶಕ ಮತ್ತು ಸಲಹೆಗಾರ ಮನೋವೈದ್ಯ ಮತ್ತು ಪುಣೆಯ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಅಧ್ಯಕ್ಷ ಡಾ. ನಿಕೇತ್ ಕಾಸರ್ ಹೇಳುತ್ತಾರೆ.

ನೆನಪಿನ ಶಕ್ತಿ ಕಡಿಮೆಯಾಗುತ್ತದೆ

ನೆನಪಿನ ಶಕ್ತಿ ಕಡಿಮೆಯಾಗುತ್ತದೆ

ನಿದ್ರೆಯ ನಷ್ಟಕ್ಕೆ ಬೆಳಕು ಪ್ರಮುಖ ಕಾರಣವಾಗಿದ್ದು, ನೀವು ಬೆಳಕಿಗೆ ಒಡ್ಡಿಕೊಂಡಾಗ, ನಿಮ್ಮ ದೈನಂದಿನ ನಿದ್ರೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದರ ಜೊತೆಗೆ ಆಲಸ್ಯ, ಮಂದ ಅಥವಾ ಅಸ್ವಸ್ಥ ಭಾವನೆ ಉಂಟಾಗುತ್ತದೆ ಎಂದು ಡಾ ಕಾಸರ್ ಹೇಳಿದ್ದಾರೆ. ಇದಿಷ್ಟೇ ಅಲ್ಲದೆ, ಈ ಸಮಸ್ಯೆಯಿಂದ ಅರಿವಿನ ಮಂದತೆಯನ್ನು ಅನುಭವಿಸಬೇಕಾಗುತ್ತದೆ. ಜೊತೆಗೆ ಯೋಚಿಸಲು ಅಥವಾ ನೆನಪಿಸಿಕೊಳ್ಳಲು ಅಸಮರ್ಥತೆಯನ್ನು ಅನುಭವಿಸುತ್ತೇವೆ ಎಂದಿದ್ದಾರೆ.

ನರಮಂಡಲದ ಮೇಲೂ ಪರಿಣಾಮ..

ನರಮಂಡಲದ ಮೇಲೂ ಪರಿಣಾಮ..

ಅಸಮರ್ಪಕ ನಿದ್ರೆಯು ಕಣ್ಣಿನ ಸುತ್ತ ಕಪ್ಪು ಗುರುತು ಉಂಟಾಗಲು ಕಾರಣವಾಗುವುದಷ್ಟೇ ಅಲ್ಲದೆ, ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಇದು ಸಕ್ಕರೆಯ ಮಟ್ಟದಲ್ಲಿ ಹೆಚ್ಚಳವಾಗಲಿದ್ದು, ಕಾಲಾನಂತರದಲ್ಲಿ ಮಧುಮೇಹಕ್ಕೆ ಕಾರಣವಾಗುತ್ತದೆ. ಇದಿಷ್ಟೆ ಅಲ್ಲದೆಮ ನಿದ್ರಾಹೀನ ಅನುಭವಿಸುವವರ ಹೃದಯ ಬಡಿತವು ನಿಮಿಷಕ್ಕೆ ಸರಾಸರಿ ಹೃದಯ ಬಡಿತಗಳಿಂದ ಹೆಚ್ಚಾಗುತ್ತದೆ. ಹಾಗೆಯೇ ನಿದ್ರೆಯು ಸ್ವನಿಯಂತ್ರಿತ ನರಮಂಡಲದ ಮೇಲೂ ಪರಿಣಾಮ ಬೀರಲಿದ್ದು, ಜೀರ್ಣಕ್ರಿಯೆ ಮತ್ತು ಇತರ ದೇಹದ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ.

ಗ್ಯಾಜೆಟ್‌ಗಳ ಬಳಕೆ ಕಡಿಮೆ ಮಾಡಿ

ಗ್ಯಾಜೆಟ್‌ಗಳ ಬಳಕೆ ಕಡಿಮೆ ಮಾಡಿ

ಮಾನವನ ಮೆದುಳು ಪೀನಿಯಲ್ ಎಂಬ ಬಟಾಣಿ ಗಾತ್ರದ ಗ್ರಂಥಿಯನ್ನು ಹೊಂದಿದ್ದು, ಇದು ಮೆಲಟೋನಿನ್ ಅನ್ನು ಉತ್ಪಾದಿಸುತ್ತದೆ. ಇದನ್ನು ಸಾಮಾನ್ಯವಾಗಿ 'ಸ್ಲೀಪ್ ಹಾರ್ಮೋನ್' ಎಂದೂ ಸಹ ಕರೆಯಲಾಗುತ್ತದೆ. ಈ ಗ್ರಂಥಿಯು ನಮ್ಮ ಸುತ್ತಮುತ್ತಲ ಪರಿಸರದಿಂದ ಬೆಳಕಿನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಮೆಲಟೋನಿನ್ ಅನ್ನು ಉತ್ಪಾದಿಸುತ್ತದೆ.

ಮೆಲಟೋನಿನ್

ಆದರೆ, ಗ್ಯಾಜೆಟ್‌ಗಳಿಂದ ಹೊರಸೂಸುವ ಬೆಳಕು ಮೆಲಟೋನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದ್ದು, ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತದೆ. ಅಂದರೆ, ಮೆಲಟೋನಿನ್ ಉತ್ಪಾದನೆಯು ಸಂಜೆ ಪ್ರಾರಂಭವಾಗಲಿದ್ದು, ಬೆಳಗ್ಗೆ 3 ಗಂಟೆಗೆ ಉತ್ತುಂಗಕ್ಕೇರುತ್ತದೆ. ಇದು ನಮಗೆ ನಿದ್ರಿಸಲು ಮತ್ತು ನಿದ್ರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಡಿಸ್‌ಪ್ಲೇಯಿಂದ ಬರುವ ನೀಲಿ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದಕ್ಕೆ ನೀವು ಮಲಗುವ ಮುನ್ನ ಮೂರರಿಂದ ನಾಲ್ಕು ಗಂಟೆಗಳ ಮೊದಲು ಸ್ಮಾರ್ಟ್‌ಫೋನ್‌ ಅನ್ನು ಸ್ವಿಚ್ ಆಫ್ ಮಾಡಬೇಕಿದೆ.

ವೆಬ್ ಸರಣಿ ವೀಕ್ಷಣೆ ತಪ್ಪಿಸಿ

ವೆಬ್ ಸರಣಿ ವೀಕ್ಷಣೆ ತಪ್ಪಿಸಿ

ಕೊರೊನಾ ನಂತರ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚಾಗಿದ್ದು, ಮನೆಯಿಂದ ಕೆಲಸ ಮಾಡುವ ಪ್ರವೃತ್ತಿ ಈಗ ಹೆಚ್ಚಾಗಿದೆ. ಇದರಿಂದ ಹಲವರಿಗೆ ನಿದ್ರಾಭಂಗ ಅಥವಾ ನಿದ್ರೆಯ ಚಕ್ರವು ವ್ಯತಿರಿಕ್ತಗೊಳ್ಳುವ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಯಾಕೆಂದರೆ ಓಟಿಟಿ ಶೋಗಳನ್ನು ಅತಿಯಾಗಿ ನೋಡುವುದು ಅಥವಾ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮದ ಅಪ್‌ಡೇಟ್‌ಗಳಿಗಾಗಿ ಫೋನ್‌ಗಳನ್ನು ಸುಮ್ಮನೆ ಸ್ಕ್ರೋಲಿಂಗ್ ಮಾಡುವುದು ಕಳಪೆ ಗುಣಮಟ್ಟದ ನಿದ್ರೆಗೆ ಪ್ರಮುಖ ಕಾರಣವಾಗಿದೆ.

Best Mobiles in India

English summary
How your smartphone could be giving you sleepless nights.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X