ಎಚ್‌ಟಿಸಿಯಿಂದ ಭರ್ಜರಿ ಡ್ಯುಯಲ್ ಸಿಮ್ ಫೋನ್ ಲಾಂಚ್

By Shwetha
|

ಕೊನೆಗೂ ಎಚ್‌ಟಿಸಿ ಡಿಸೈರ್ 620 ಫೋನ್ ಅನ್ನು ಲಾಂಚ್ ಮಾಡಿದೆ. ನವೆಂಬರ್ 28 ರಂದು ತೈವಾನ್‌ನಲ್ಲಿ ಎರಡು ಶ್ರೇಣಿಗಳನ್ನು ಫೋನ್ ಬಿಡುಗಡೆ ಮಾಡಿದೆ. ಎರಡೂ ಡಿಸೈರ್ 620 ಡ್ಯುಯಲ್ ಸಿಮ್ ಮತ್ತು ಡಿಸೈರ್ 620ಜಿ ಡ್ಯುಯಲ್ ಸಿಮ್ ಅನ್ನು 6,990 ಮತ್ತು ಡಿಸೆಂಬರ್‌ನ ಮಧ್ಯಭಾಗದಲ್ಲಿ 4,990 ಕ್ಕೆ ಬಿಡುಗಡೆಗೊಳಿಸಲಿದೆ.

ಎಚ್‌ಟಿಸಿ ಡ್ಯುಯಲ್ ಸಿಮ್ ಫೋನ್‌ಗಳ ಭರ್ಜರಿ ಕೊಡುಗೆ

ಈ ಎರಡೂ ಡ್ಯುಯಲ್ ಸಿಮ್ ಫೋನ್‌ಗಳು ಒಂದೇ ರೀತಿಯ ವಿಶೇಷತೆಗಳನ್ನು ಒಳಗೊಂಡಿದ್ದು ನೆಟ್‌ವರ್ಕ್ ಸಂಪರ್ಕ ಮಾತ್ರ ಭಿನ್ನವಾಗಿದೆ. ಪ್ರೊಸೆಸರ್ ಮತ್ತು ಇನ್‌ಬಿಲ್ಟ್ ಸ್ಟೋರೇಜ್ ವಿಸ್ತರಣೆಯಲ್ಲಿ ಮಿತಿಯನ್ನು ಇದು ಹೊಂದಿದೆ. 4ಜಿ ಸಕ್ರಿಯಗೊಂಡಿರುವ ಎಚ್‌ಟಿಸಿ ಡಿಸೈರ್ 620 ಡ್ಯುಯಲ್ ಸಿಮ್ 64 ಬಿಟ್ 1.2GHZ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಅನ್ನು ಹೊಂದಿದೆ ಇದನ್ನೇ ಎಚ್‌ಟಿಸಿ ಡಿಸೈರ್ 510 ನಲ್ಲಿ ಹಿಂದೆ ಬಳಸಲಾಗಿತ್ತು. ಇದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಣೆಯನ್ನು ಪಡೆದುಕೊಂಡಿದೆ. ಇನ್ನು 3ಜಿ ಬೆಂಬಲವಿರುವ ಎಚ್‌ಟಿಸಿ ಡಿಸೈರ್ 620ಜಿ ಡ್ಯುಯಲ್ ಸಿಮ್ 1.7GHZ ಓಕ್ಟಾ ಕೋರ್ ಮೀಡಿಯಾ ಟೆಕ್ MT6592 MT6592 ಪ್ರೊಸೆಸರ್ ಜೊತೆಗೆ 32ಜಿಬಿ ವರೆಗೆ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸುವ ಬೆಂಬಲದೊಂದಿಗೆ ಇದು ಬಂದಿದೆ.

ಇದನ್ನೂ ಓದಿ: ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು ಹೇಗೆ?

ಎಚ್‌ಟಿಸಿ ಡ್ಯುಯಲ್ ಸಿಮ್ ಫೋನ್‌ಗಳ ಭರ್ಜರಿ ಕೊಡುಗೆ

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆಧಾರಿತ ಡಿಸೈರ್ 620 ಡ್ಯುಯಲ್ ಸಿಮ್ ಮತ್ತು ಡಿಸೈರ್ 620ಜಿ ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಎಚ್‌ಡಿ ರೆಸಲ್ಯೂಶನ್ ಪಡೆದುಕೊಂಡು ಬಂದಿದೆ. ಇದು 1ಜಿಬಿ RAM ಅನ್ನು ಪಡೆದುಕೊಂಡಿದ್ದು, ಸೆನ್ಸ್ 6 ಯುಐ, 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಜೊತೆಗೆ ಬಿಎಸ್‌ಐ ಸೆನ್ಸಾರ್, ಎಚ್‌ಟಿಸಿ ಐ ಎಕ್ಸ್‌ಪೀರಿಯನ್ಸ್, 8ಜಿಬಿ ಆಂತರಿಕ ಸಂಗ್ರಹ, ಮತ್ತು 2100mAh ರಿಮೂವೇಬಲ್ ಬ್ಯಾಟರಿಯೊಂದಿಗೆ ಇದು ಬಂದಿದೆ. ಇನ್ನು ಇತರ ಸಂಪರ್ಕ ಅಂಶಗಳಾದ ವೈಫೈ 802.11 b/g/n, ಬ್ಲ್ಯೂಟೂತ್ 4.0, ಜಿಪಿಎಸ್, ಎ-ಜಿಪಿಎಸ್ ಅನ್ನು ಮೊಬೈಲ್ ಪಡೆದುಕೊಂಡಿದೆ.

Best Mobiles in India

English summary
This article tells about HTC has finally unveiled the Desire 620 after numerous leaks, launching it on November 28 in Taiwan in two variants.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X