ಹೋನರ್ 5x ಲಾಂಚ್‌ಗಾಗಿ ಹುವಾವೆ ಭರ್ಜರಿ ತಯಾರಿ

By Shwetha
|

ಹುವಾವೆಯ ಇ ಬ್ರ್ಯಾಂಡ್ ಹೋನರ್ ತನ್ನ ಭರ್ಜರಿ ಫೋನ್ ಹೋನರ್ 5X ಅನ್ನು ಭಾರತದಲ್ಲಿ ಲಾಂಚ್ ಮಾಡಲು ಎಲ್ಲಾ ತಯಾರಿಯನ್ನು ನಡೆಸಿದೆ. ಲಾಸ್ ವೇಗಸ್‌ನಲ್ಲಿ ನಡೆದ ಸಿಇಎಸ್ 2016 ರಲ್ಲಿ ಅನಾವರಣಗೊಂಡಿದ್ದ ಈ ಡಿವೈಸ್ ಮೆಟಲ್ ವಿನ್ಯಾಸ, ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಅದ್ಭುತ ವಿಶೇಷತೆಗಳು ಮತ್ತು ಫೀಚರ್‌ಗಳನ್ನೊಳಗೊಂಡು ಬಂದಿದೆ. ಮಾರುಕಟ್ಟೆಯಲ್ಲಿ ಈ ಡಿವೈಸ್ ಭರ್ಜರಿ ಸದ್ದುಮಾಡುವುದರಂತೂ ನಿಜ ಎಂಬುದಾಗಿ ಮೊಬೈಲ್ ಭವಿಷ್ಯಕಾರರು ನುಡಿದಿದ್ದಾರೆ.

ಹೋನರ್ 5x ಮೆಟಲ್ ಚೇಸಸ್ ಅನ್ನು ಪಡೆದುಕೊಂಡಿದ್ದು ತನ್ನ ಹೋನರ್ 7 ಸ್ಮಾರ್ಟ್‌ಫೋನ್‌ನಿಂದ ಇದನ್ನು ನಕಲಿಸಿದೆ. ವಜ್ರದ ಬಣ್ಣದ ಅಲ್ಯುಮಿನಿಯಮ್ ಅಲೊ ಕೇಸಿಂಗ್ ಅನ್ನು ಇದು ಪಡೆದುಕೊಂಡಿದ್ದು ಇದು ಪ್ರೀಮಿಯಮ ಲುಕ್ ಅನ್ನು ಪಡೆದುಕೊಂಡಿರುವುದರ ಜೊತೆಗೆ ಆಕರ್ಷಕ ಡಿವೈಸ್ ಆಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳೋಣ.

ಡಿಸ್‌ಪ್ಲೇ

ಡಿಸ್‌ಪ್ಲೇ

ಫೋನ್ 5.5 ಇಂಚಿನ ಎಫ್‌ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 1920x1080 ಪಿ ರೆಸಲ್ಯೂಶನ್ ಇದರಲ್ಲಿದೆ. ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ 2 ಜಿಬಿ RAM ಫೋನ್‌ನಲ್ಲಿದೆ ಅಂತೆಯೇ 16ಜಿಬಿ ಸಂಗ್ರಹಣೆ ಡಿವೈಸ್‌ನಲ್ಲಿದೆ.

ಕ್ಯಾಮೆರಾ

ಕ್ಯಾಮೆರಾ

ಹೋನರ್ 5X ತನ್ನಲ್ಲಿ 13ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಇದು ಕಡಿಮೆ ಬೆಳಕಿನಲ್ಲಿ ಕೂಡ ಅದ್ಭುತ ಫೋಟೋವನ್ನು ಒದಗಿಸಲಿದೆ.

ಮೆಟಲ್ ಬಾಡಿ

ಮೆಟಲ್ ಬಾಡಿ

ಸ್ಮಾರ್ಟ್‌ಫೋನ್ ಯುಎಸ್‌ಪಿ ಮೆಟಲ್ ಬಾಡಿಯನ್ನು ಪಡೆದುಕೊಂಡಿದ್ದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದೆ ಈ ಕಾಂಬಿನೇಶನ್ ಬಜೆಟ್ ಡಿವೈಸ್‌ಗಳಲ್ಲಿ ಕಂಡುಬರುವುದು ಬಹು ವಿರಳವಾಗಿದೆ.

ಮಧ್ಯಮ ಕ್ರಮಾಂಕಿತ ಬೆಲೆ

ಮಧ್ಯಮ ಕ್ರಮಾಂಕಿತ ಬೆಲೆ

ಫೋನ್ ಮಧ್ಯಮ ಕ್ರಮಾಂಕಿತ ಬೆಲೆಯಲ್ಲಿ ದೊರೆಯಲಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಫ್ಲ್ಯಾಶ್ ಸೇಲ್ ಮೋಡ್‌ನಲ್ಲಿ ಡಿವೈಸ್ ಲಭ್ಯವಾಗಲಿದೆ.

ಆಕರ್ಷಕ ಫೀಚರ್

ಆಕರ್ಷಕ ಫೀಚರ್

ಡಿವೈಸ್ ಮೆಟಲ್ ವಿನ್ಯಾಸ, ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಅದ್ಭುತ ವಿಶೇಷತೆಗಳು ಮತ್ತು ಫೀಚರ್‌ಗಳನ್ನೊಳಗೊಂಡು ಬಂದಿದೆ.

ಅಲ್ಯುಮಿನಿಯಮ್ ಅಲೊ ಕೇಸಿಂಗ್

ಅಲ್ಯುಮಿನಿಯಮ್ ಅಲೊ ಕೇಸಿಂಗ್

ವಜ್ರದ ಬಣ್ಣದ ಅಲ್ಯುಮಿನಿಯಮ್ ಅಲೊ ಕೇಸಿಂಗ್ ಅನ್ನು ಡಿವೈಸ್ ಪಡೆದುಕೊಂಡಿದೆ.

Best Mobiles in India

English summary
Huawei's e-brand Honor is all set to launch its specs-heavy smartphone, the Honor 5X in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X