ಇದು ಕೇವಲ ಸ್ಮಾರ್ಟ್‌ವಾಚ್‌ ಅಲ್ಲ, ಇಯರ್‌ಬಡ್ಸ್‌ ಕೂಡ ಹೌದು!: ಯಾವಾಗ ಲಾಂಚ್‌?

|

ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಭಿನ್ನ ವಿಭಿನ್ನ ರೀತಿಯ ವಾಚ್‌ಗಳು ಸದ್ದು ಮಾಡುತ್ತಿವೆ. ಅದರಲ್ಲೂ ದೀರ್ಘಾವಧಿಯ ಬ್ಯಾಟರಿ ಸಾಮರ್ಥ್ಯ, ಹಲವು ಸ್ಪೋರ್ಟ್ಸ್‌ಮೋಡ್‌ ಹಾಗೂ ಬೇಕಾದ ವಾಚ್‌ಫೇಸ್‌ಗಳು ಗ್ರಾಹಕರನ್ನು ಹೆಚ್ಚುಹೆಚ್ಚಾಗಿ ಆಕರ್ಷಿಸುತ್ತಿವೆ. ಇದರ ನಡುವೆ ಈಗ ಹುವಾವೇ ಹೊಸ ಸ್ಮಾರ್ಟ್‌ವಾಚ್‌ ಜೊತೆಗೆ ಇಯರ್‌ಬಡ್ಸ್‌ ಆಯ್ಕೆಯನ್ನು ನೀಡುತ್ತಿದೆ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ನಂತೆ ಹಾಗೂ ಇನ್ನಿತರೆ ಸ್ಮಾರ್ಟ್‌ ಗ್ಯಾಜೆಟ್‌ಗಳ ಹಾಗೆಯೇ ಸ್ಮಾರ್ಟ್‌ವಾಚ್‌ ಕೆಲಸ ಮಾಡುತ್ತಿದ್ದು, ಈಗ ಲಾಂಚ್‌ ಆಗುತ್ತಿರುವ ಸ್ಮಾರ್ಟ್‌ವಾಚ್‌ಗಳು ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಿವೆ. ಇದರ ಭಾಗವಾಗಿಯೇ ಈಗ ಹುವಾವೇ ಸ್ಮಾರ್ಟ್‌ವಾಚ್‌ನಲ್ಲೇ ಇಯರ್‌ಬಡ್ಸ್‌ ನೀಡುತ್ತಿದ್ದು, ಜಗತ್ತಿನಲ್ಲೇ ಮೊದಲ ಪ್ರಯತ್ನವಾಗಿದೆ ಎನ್ನಲಾಗಿದೆ.

ವಾಚ್ ಬಡ್ಸ್

ವಾಚ್ ಬಡ್ಸ್

ಸ್ಮಾರ್ಟ್ ವಾಚ್ ಮತ್ತು ವಾಯರ್‌ಲೆಸ್‌ ಇಯರ್‌ಫೋನ್‌ಗಳ ಸಂಯೋಜನೆಯ ಫೀಚರ್ಸ್‌ ಇರುವ 'ಹುವಾವೇ ವಾಚ್ ಬಡ್ಸ್' ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಈ ವಾಚ್‌ ಇಯರ್‌ಬಡ್ಸ್‌ಗೆ ಚಾರ್ಜಿಂಜ್‌ ಕೇಸ್‌ ಆಗಿ ಸಪೋರ್ಟ್‌ ಮಾಡಲಿದೆ. ಹಾಗೆಯೇ ಇದರಲ್ಲಿ ನೀಡಲಾಗುವ ಸ್ಟೋರೇಜ್‌ ಆಯ್ಕೆ ಸಂಗೀತ ಕೇಳಲು ಅನುವು ಮಾಡಿಕೊಡುತ್ತದೆ.

ಮುಚ್ಚಳದಂತಹ ರಚನೆ

ಮುಚ್ಚಳದಂತಹ ರಚನೆ

ಈ ಸ್ಮಾರ್ಟ್‌ವಾಚ್‌ ನಿಮ್ಮನ್ನು ತಲ್ಲೀನಗೊಳಿಸುವ ನೋಟದ ಜೊತೆಗೆ ಮುಚ್ಚಳದ ಆಯ್ಕೆ ಹೊಂದಿದ್ದು, ವಿಶೇಷವೆನಿಸಿದೆ. ಅಂದರೆ ಈ ವಾಚ್‌ ಡಿಸ್‌ಪ್ಲೇ ಒಂದು ಮುಚ್ಚಳದಂತೆ ಕೆಲಸ ಮಾಡಲಿದ್ದು, ಇದರ ಕೆಳಗೆ ಇಯರ್‌ಬಡ್ಸ್‌ಗಳನ್ನು ಇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಸ್ಮಾರ್ಟ್‌ವಾಚ್‌ನಲ್ಲಿ ಇರುವ ಬ್ಯಾಟರಿ ಮೂಲಕವೇ ಈ ಇಯರ್‌ಬಡ್ಸ್‌ ಅನ್ನು ಚಾರ್ಜ್‌ ಮಾಡಿಕೊಳ್ಳಲು ಅನುಕೂಲವಾಗುವ ಹಾಗೆ ರಚಿಸಲಾಗಿದೆ.

ಟೀಸರ್

ಈ ಸ್ಮಾರ್ಟ್‌ವಾಚ್‌ ಸಂಬಂಧ ಟೀಸರ್ ವಿಡಿಯೋವೊಂದು ರಿಲೀಸ್‌ ಆಗಿದ್ದು, ಆ ವಿಡಿಯೋ ಪ್ರಕಾರ ಸ್ಮಾರ್ಟ್‌ವಾಚ್‌ ದುಂಡಗಿನ ಆಕಾರದಲ್ಲಿ ಕಂಡುಬಂದಿದೆ. ಜೊತೆಗೆ ವಾಚ್ ಫೇಸ್‌ನಲ್ಲಿ ಬ್ಯಾಟರಿ ಮಟ್ಟವನ್ನು ತೋರಿಸಲಾಗಿದೆ. ನಂತರ ಇಯರ್‌ಬಡ್ಸ್‌ಗಳನ್ನು ವಾಚ್‌ನ ಒಳಗೆ ಇರಿಸಿದಾಗ ಅವುಗಳ ಚಾರ್ಜಿಂಗ್ ಸ್ಥಿತಿಯನ್ನು ತೋರಿಸಲಾಗುತ್ತದೆ. ಹಾಗೆಯೇ ಈ ವಾಚ್‌ ಬಡ್ಸ್‌ ಹುವಾವೇನ ಹಾರ್ಮೊನಿ ಓಸ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಯಾವುದೇ ಹೊಂದಾಣಿಕೆಯ ಡಿವೈಸ್‌ಗೆ ಬ್ಲೂಟೂತ್‌ ಮೂಲಕ ಕನೆಕ್ಟ್‌ ಆಗಲಿದೆ ಎಂದು ತಿಳಿದುಬಂದಿದೆ.

ಬಿಡುಗಡೆ ಯಾವಾಗ?

ಬಿಡುಗಡೆ ಯಾವಾಗ?

ಈ ಸ್ಮಾರ್ಟ್‌ವಾಚ್‌ ಅನ್ನು ನೋವಾ 10 SE ಹಾಗೂ ಎಂಜಾಯ್‌ 50Z ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡುವ ವೇಳೆಯಲ್ಲಿಯೇ ಲಾಂಚ್‌ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಇನ್ನು ಭಾರತದಲ್ಲಿ ಚೀನಾದ ಪ್ರೊಡಕ್ಟ್‌ಗಳಿಗೆ ಬೇಡಿಕೆ ಕುಸಿಯುತ್ತಾ ಬರುತ್ತಿದ್ದು, ಇದಕ್ಕಿಂತ ಹೆಚ್ಚಿನ ಆಯ್ಕೆ ಇರುವ ಸ್ಮಾರ್ಟ್‌ವಾಚ್‌ ಹಾಗೂ ಇನ್ನಿತರೆ ಗ್ಯಾಜೆಟ್‌ಗಳನ್ನು ಭಾರತದಲ್ಲಿ ಹಾಗೂ ಇತರೆ ದೇಶಗಳಲ್ಲಿ ಲಾಂಚ್ ಮಾಡಲಾಗುತ್ತಿದೆ. ಗ್ಯಾಜೆಟ್‌ ವಿಭಾಗದಲ್ಲಿ ಹಿನ್ನೆಡೆ ಅನುಭವಿಸಿರುವ ಚೀನಾ ಈ ರೀತಿಯ ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿ ಪರಿಚಯಿಸುವ ಮೂಲಕ ಭಾರತೀಯರನ್ನು ತನ್ನ ಕಡೆ ತಿರುಗಿನೋಡುವಂತೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಅನಾವರಣ

ಸದ್ಯಕ್ಕೆ ಚೀನಾದಲ್ಲಿ ಮಾತ್ರ ಅನಾವರಣ ಮಾಡಲು ಮುಂದಾಗಿರುವ ಹುವಾವೇ ಮುಂದಿನ ಯಾವ ದಿನದಲ್ಲಿ ಜಾಗತಿಕವಾಗಿ ಈ ವಾಚ್‌ಅನ್ನು ಲಾಂಚ್‌ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಹಾಗೆಯೇ ಈ ವಾಚ್‌ನ ಫೀಚರ್ಸ್‌ಗಳು ಈವರೆಗೂ ಎಲ್ಲೂ ತಿಳಿದುಬಂದಿಲ್ಲವಾದರೂ ರಿಲೀಸ್‌ ಆದ ವಿಡಿಯೋ ಮೂಲಕ ಕೆಲವು ಮಾಹಿತಿ ಈ ವಾಚ್‌ ಬಗ್ಗೆ ಹರಿದಾಡುತ್ತಿದೆ.

ಹುವಾವೇ ವಾಚ್‌ ಕಿಡ್ಸ್ 5X

ಹುವಾವೇ ವಾಚ್‌ ಕಿಡ್ಸ್ 5X

ಇದರ ನಡುವೆ ಕೆಲವು ದಿನಗಳ ಹಿಂದಷ್ಟೇ ಈ ಕಂಪೆನಿಯಿಂದ ಹುವಾವೇ ವಾಚ್‌ ಕಿಡ್ಸ್ 5X ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಈ ವಾಚ್‌ಗಳು ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯಕವಾಗುವುದರ ಜೊತೆಗೆ ರಕ್ಷಣೆಗೂ ಹೆಚ್ಚಿನ ಒತ್ತು ನೀಡುವಂತೆ ರೂಪಿಸಲಾಗಿದೆ. ಈ ವಾಚ್ ಡಿಟ್ಯಾಚೇಬಲ್ ಡ್ಯುಯಲ್ ಸೈಡೆಡ್ ಡಿಸ್ಪ್ಲೇ ಆಯ್ಕೆಯನ್ನು ಹೊಂದಿದ್ದು, ಇದರಲ್ಲಿ ಒಂದು ಬ್ಲಾಕ್ ವೈಟ್ ಎಲ್‌ಸಿಡಿ ಡಿಸ್‌ಪ್ಲೇ ಮತ್ತೊಂದು ಕಲರ್ ಡಿಸ್‌ಪ್ಲೇ ಆಯ್ಕೆಯಾಗಿದೆ. ಹೀಗಾಗಿ ಮಕ್ಕಳು ತಮಗೆ ಯಾವುದು ಅನುಕೂಲವೋ ಆ ಡಿಸ್‌ಪ್ಲೇಯನ್ನು ಬಳಸಬಹುದಾಗಿದೆ.

Best Mobiles in India

English summary
Huawei Watch Buds With Inbuilt True Wireless Earphones to Launch Soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X