ಫುಲ್‌ ಡಿಸ್ಕೌಂಟ್‌!..ಅಮೆಜಾನ್‌ನಲ್ಲಿ ಶುರುವಾಗಿದೆ 'ಹುವಾವೆ ವೀಕ್‌ ಸೇಲ್'‌ ಮೇಳ!

|

ಹುವಾವೆ ಕಂಪನಿಯು ಮೇಟ್‌ 20 ಪ್ರೊ, ಪಿ30 ಪ್ರೊ, ಪೊ30 ಲೈಟ್‌, ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತನ್ನ ವಿಶೇಷ ಫೀಚರ್ಸ್‌ಗಳಿಂದ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹುವಾವೆ ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಗ್ರಾಹಕರಿಗೆ ಈಗ ಒಳ್ಳೆಯ ಸಮಯ ಕೂಡಿ ಬಂದಿದೆ. ಏಕೆಂದರೇ ಅಮೆಜಾನ್ ಇಂಡಿಯಾ ಹುವಾವೆ ವೀಕ್‌ ಸೇಲ್‌ ಮೇಳವನ್ನು ಶುರುಮಾಡಿದೆ.

ಫುಲ್‌ ಡಿಸ್ಕೌಂಟ್‌!..ಅಮೆಜಾನ್‌ನಲ್ಲಿ ಶುರುವಾಗಿದೆ 'ಹುವಾವೆ ವೀಕ್‌ ಸೇಲ್'‌ ಮೇಳ!

ಹೌದು, ಜನಪ್ರಿಯ ಅಮೆಜಾನ್‌ ಇಂಡಿಯಾ ಇ ಕಾಮರ್ಸ್‌ ಜಾಲತಾಣವು 'ಹುವಾವೆ ವೀಕ್‌ ಸೇಲ್‌' ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಈ ಸೇಲ್‌ ಮೇಳವು ಇದೇ ಜೂನ್ 6 ರಂದು ಆರಂಭವಾಗಿದ್ದು, ಇದೇ ಜೂನ್ 10 ರ ವರೆಗೂ ಇರಲಿದೆ. ಈ ಮೇಳದಲ್ಲಿ ಹುವಾವೆ ಸ್ಮಾರ್ಟ್‌ಫೋನ್‌ ಮತ್ತು ಗ್ಯಾಜೆಟ್‌ಗಳಿಗೆ ಆಫರ್‌ ನೀಡಲಾಗಿದ್ದು, ಇಟ್ಟಾರೇ ಹುವಾವೆ ಉತ್ಪನ್ನಗಳ ಮೇಲೆ ಗ್ರಾಹಕರಿಗೆ 15,000 ರೂ.ಗಳಷ್ಟು ಆಫರ್ ಸೀಗಲಿದೆ.

ಓದಿರಿ : ಅಗ್ಗದ ಬೆಲೆಯಲ್ಲಿ ಲಾಂಚ್‌ ಆಯ್ತು 'ನೋಕಿಯಾ 2.2' ಸ್ಮಾರ್ಟ್‌ಫೋನ್! ಓದಿರಿ : ಅಗ್ಗದ ಬೆಲೆಯಲ್ಲಿ ಲಾಂಚ್‌ ಆಯ್ತು 'ನೋಕಿಯಾ 2.2' ಸ್ಮಾರ್ಟ್‌ಫೋನ್!

ಫುಲ್‌ ಡಿಸ್ಕೌಂಟ್‌!..ಅಮೆಜಾನ್‌ನಲ್ಲಿ ಶುರುವಾಗಿದೆ 'ಹುವಾವೆ ವೀಕ್‌ ಸೇಲ್'‌ ಮೇಳ!

ಅಮೆಜಾನ್‌ ಆಯೋಜಿಸಿರುವ ಹುವಾವೆ ಸೇಲ್‌ ವೀಕ್‌ ಮೇಳದಲ್ಲಿ ಹುವಾವೆ ವಾಚ್‌ GT ಸ್ಮಾರ್ಟ್‌ವಾಚ್‌, ಬ್ಯಾಂಡ್‌ 3 ಪ್ರೊ ಫಿಟ್‌ನೆಸ್‌ ಬ್ಯಾಂಡ್‌ ಹಾಗೂ ಬ್ಯಾಂಡ್‌ 3e ಉತ್ಪನ್ನಗಳಿಗೂ ಸಹ ಭಾರೀ ಡಿಸ್ಕೌಂಟ್‌ ನೀಡಲಾಗಿದೆ. ಹಾಗಾದರೇ ಅಮೆಜಾನ್‌ನ ಹುವಾವೆ ಸೇಲ್‌ ವೀಕ್‌ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಮತ್ತು ಸ್ಮಾರ್ಟ್‌ಬ್ಯಾಂಡ್‌ಗಳಿಗೆ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

ಓದಿರಿ : 43 ಇಂಚಿನ ಅಗ್ಗದ 'ಮಾರ್ಕ್' ಸ್ಮಾರ್ಟ್‌ಟಿವಿ ಹೇಗಿದೆ ಗೊತ್ತಾ!..ಬೆಲೆ 21,999ರೂ!ಓದಿರಿ : 43 ಇಂಚಿನ ಅಗ್ಗದ 'ಮಾರ್ಕ್' ಸ್ಮಾರ್ಟ್‌ಟಿವಿ ಹೇಗಿದೆ ಗೊತ್ತಾ!..ಬೆಲೆ 21,999ರೂ!

ಹುವಾವೆ ಪಿ30 ಪ್ರೊ

ಹುವಾವೆ ಪಿ30 ಪ್ರೊ

2340x1080 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.47 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಿರನ್ 980 ಪ್ರೊಸೆಸರ್ ಈ ಫೋನಿನಲ್ಲಿ ಕಾರ್ಯನಿರ್ವಹಿಸುತ್ತದೆ. 4,200mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿರುವ ಜೊತೆಗೆ 40W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಈಗ ಅಮೆಜಾನ್‌ ಸೇಲ್‌ ಮೇಳದಲ್ಲಿ 8,000ರೂ.ಗಳ ಎಕ್ಸ್‌ಚೇಂಜ್ ಆಫರ್‌ ನೀಡಲಾಗುತ್ತಿದೆ. ಹಾಗೆಯೇ ಇಎಮ್‌ಐ ಆಯ್ಕೆ ಸಹ ಇದೆ.

ಹುವಾವೆ ಮೇಟ್‌ 20 ಪ್ರೊ

ಹುವಾವೆ ಮೇಟ್‌ 20 ಪ್ರೊ

ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಅವು ಕ್ರಮವಾಗಿ 40ಎಂಪಿ + 20ಎಂಪಿ + 8ಎಂಪಿ ಸಾಮರ್ಥ್ಯದಲ್ಲಿದ್ದು, ಸೆಲ್ಫಿಗಾಗಿ 24ಎಂಪಿ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ 3D ಫೇಸಿಯಲ್ ಅನ್‌ಲಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಗಳನ್ನು ಸಹ ಒಳಗೊಂಡಿದೆ. ಇನ್ನು ಹಿಲಿಸಿಲಿಕಾನ್ ಕಿರಿನ್ 980 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತಲಿದ್ದು, 4,200mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆಫರ್‌ನಲ್ಲಿ 59,990ರೂ.ಗಳಿಗೆ ದೊರೆಯಲಿದೆ.

ಓದಿರಿ : ಗ್ರಾಹಕ ಸ್ನೇಹಿ ಬೆಲೆಯಲ್ಲಿ ಲಭ್ಯವಿರುವ 5 'ಬಿಗ್‌ ಸ್ಕ್ರೀನ್‌' ಸ್ಮಾರ್ಟ್‌ಟಿವಿಗಳು!ಓದಿರಿ : ಗ್ರಾಹಕ ಸ್ನೇಹಿ ಬೆಲೆಯಲ್ಲಿ ಲಭ್ಯವಿರುವ 5 'ಬಿಗ್‌ ಸ್ಕ್ರೀನ್‌' ಸ್ಮಾರ್ಟ್‌ಟಿವಿಗಳು!

ಹುವಾವೆ ಪಿ30 ಲೈಟ್‌

ಹುವಾವೆ ಪಿ30 ಲೈಟ್‌

ಈ ಸ್ಮಾರ್ಟ್‌ಫೋನ್‌ 6.15 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿದೆ. ಅವುಗಳುಕ್ರಮವಾಗಿ 24ಎಂಪಿ + 8ಎಂಪಿ + 2ಎಂಪಿ ಸಾಮರ್ಥ್ಯದಲ್ಲಿವೆ. ಹಾಗೆಯೇ ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸೆರ್‌ ಸ್ಮಾರ್ಟ್‌ಫೋನಿಗೆ ಬಲ ನೀಡಿದ್ದು, ಆಂಡ್ರಾಯ್ಡ್‌ ಪೈ ಓಎಸ್‌ ಸಹ ಇದೆ. 3340 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆಫರ್‌ನಲ್ಲಿ 14,490ರೂ.ಗಳಿಗೆ ಲಭ್ಯ.

ಹುವಾವೆ ವೈ9(2019)

ಹುವಾವೆ ವೈ9(2019)

1,080 x 2,340 ಪಿಕ್ಸಲ್‌ ರೆಸಲ್ಯೂಶನ ಬಲವನ್ನು ಹೊಂದಿರುವ ಜೊತೆಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸೆರ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದ್ದು, ಹಿಂಬದಿಯಲ್ಲಿ ಡ್ಯುಯನ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಬ್ಯಾಟರಿ ಬಾಳಿಕೆಯು ಅತ್ಯುತ್ತಮವಾಗಿದ್ದು, ಡಿಸೈನ್‌ ಸಹ ಸೊಗಸಾಗಿದೆ. ಅಮೆಜಾನ್‌ ಆಫರ್‌ ಮೇಳದಲ್ಲಿ 19,999ರೂ.ಗಳಿಗೆ ದೊರೆಯಲಿದೆ.

ಸ್ಮಾರ್ಟ್ ವೇರೆಬಲ್‌ ಡಿವೈಸ್‌ ಆಫರ್‌

ಸ್ಮಾರ್ಟ್ ವೇರೆಬಲ್‌ ಡಿವೈಸ್‌ ಆಫರ್‌

ಹುವಾವೆಯ ವಾಚ್‌ GT ಸ್ಮಾರ್ಟ್‌ವಾಚ್ ಉತ್ಪನ್ನವು ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಇದರ ಬೆಲೆಯು 16,990ರೂ.ಗಳು ಆಗಿದೆ. ಆದರೆ ಸದ್ಯ ಆಫರ್‌ನಲ್ಲಿ 15,490ರೂ.ಗಳಿಗೆ ದೊರೆಯುತ್ತಿದೆ. ಹಾಗೆಯೇ ಸ್ಪೋಟ್ಸ್‌ ಎಡಿಷನ್‌ ಡಿವೈಸ್‌ ಬೆಲೆಯು 15,990ರೂ.ಗಳು ಆಗಿದ್ದು, ಅಮೆಜಾನ್ ಆಫರ್‌ನಲ್ಲಿ 14,490ರೂ.ಗಳಿಗೆ ದೊರೆಯಲಿದೆ. ಈ ಅಮೆಜಾನ್ ಆಫರ್‌ ಇದೇ ಜೂನ್ 10ರಂದು ಕೊನೆಯಾಗಲಿದೆ.

Best Mobiles in India

English summary
Amazon India is hosting Huawei Week sale where you can get up to Rs 10,000 off on smartphones such as the Mate 20 Pro, P30 Lite, Y9 (2019) and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X