ಗೂಗಲ್‌ ಪಿಕ್ಸೆಲ್ 7 ಫೋನ್‌ 49,999 ರಿಯಾಯಿತಿ ಬೆಲೆಯಲ್ಲಿ ಲಭ್ಯ

|

ಗೂಗಲ್ ಕಂಪೆನಿಯು ಕೇವಲ ಸರ್ಚ್‌ ಇಂಜಿನ್‌ ತಾಣವಾಗದೆ ಅತ್ಯಾಕರ್ಷಕ ಗ್ಯಾಜೆಟ್‌ಗಳನ್ನು ಪರಿಚಯಿಸಿ ಹೆಚ್ಚು ಜನಪ್ರಿಯಗೊಂಡಿವೆ. ಅದರಲ್ಲೂ ಗೂಗಲ್ ಟಿವಿ, ಗೂಗಲ್‌ ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಹಲವು ಫೀಚರ್ಸ್‌ ಇರುವ ಡಿವೈಸ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಿ ಹೆಸರು ಗಳಿಸಿದೆ. ಇದರ ಜೊತೆಗೆ ಸ್ಮಾರ್ಟ್‌ಫೋನ್‌ ವಿಭಾಗದಲ್ಲೂ ಗೂಗಲ್‌ ಪಿಕ್ಸೆಲ್ ಸರಣಿಯ ಗೂಗಲ್‌ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಗೂಗಲ್‌

ಹೌದು, ಮೂರು ವರ್ಷಗಳ ನಂತರ ಭಾರತದಲ್ಲಿ ಗೂಗಲ್‌ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಅನ್ನು ಗುರುವಾರ (ಅ. 6) ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಲಾಂಚ್ ಆದ ನಂತರ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಿವೆ. ಈ ಗೂಗಲ್‌ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಗಳು ಟೆನ್ಸರ್ G2 ಚಿಪ್‌ಸೆಟ್‌ನಿಂದ ರನ್‌ ಆಗಲಿವೆ. ಹಾಗಾದರೆ ಇವುಗಳ ಇನ್ನಿತರ ಫೀಚರ್ಸ್‌ ಏನು ಡಿಸ್ಕೌಂಟ್‌ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹೆಚ್ಚಿನ ಧಕ್ಷತೆ

ಹೆಚ್ಚಿನ ಧಕ್ಷತೆ

ಈ ಸ್ಮಾರ್ಟ್‌ಫೋನ್‌ಗಳ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ವೇಗ ಪಡೆದುಕೊಂಡಿವೆ. ಈ ಹಿಂದೆ ಗೂಗಲ್‌ ಲಾಂಚ್‌ ಮಾಡಿದ್ದ ಪಿಕ್ಸೆಲ್ 4a ಫೋನ್‌ಗೆ ಹೋಲಿಕೆ ಮಾಡಿದರೆ ಕಾರ್ಯಕ್ಷಮತೆಯಲ್ಲಿ ಹೆಚ್ಚಿನ ವೇಗ ಪಡೆದುಕೊಂಡಿವೆ. ಈ ವೇಗಕ್ಕೆ ಪ್ರಮುಖ ಕಾರಣ ಟೆನ್ಸರ್ ಜಿ 2 ಚಿಪ್‌ಸೆಟ್‌. ಕಳೆದ ಬಾರಿ ಲಾಂಚ್‌ ಆದ ಪಿಕ್ಸೆಲ್ 6 ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡಲಾಗಿದ್ದ ಟೆನ್ಸರ್ ಚಿಪ್‌ಗಿಂತ ಅಪ್‌ಗ್ರೇಡ್ ಚಿಪ್‌ಸೆಟ್‌ ಇದಾಗಿದೆ. ಆದರೆ, ಈ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿಲ್ಲ.

ಇನ್ನು ಪವರ್‌ ಸೇವಿಂಗ್‌ ವಿಷಯದಲ್ಲಿ ಈ ಹೊಸ ಚಿಪ್‌ಸೆಟ್‌ 40 % ಹೆಚ್ಚಿನ ದಕ್ಷತೆಯನ್ನು ನೀಡುತ್ತದೆ ಎಂದು ಗೂಗಲ್‌ ಹೇಳಿಕೊಂಡಿದೆ. ಅಂದರೆ ಈಗ ಲಾಂಚ್‌ ಆಗಿರುವ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ಗಳು ಪಿಕ್ಸೆಲ್ 4 ಸ್ಮಾರ್ಟ್‌ಫೋನ್‌ಗಿಂತ ಎಲ್ಲಾ ರೀತಿಯಲ್ಲೂ ಒಂದು ಹೆಜ್ಜೆ ಮುಂದೆ ಇವೆ. ಅದಕ್ಕೂ ಮಿಗಗಿಲಾಗಿ ದೈನಂದಿನ ಬಳಕೆಯಲ್ಲಿ ಹಾಗೂ ವಿಡಿಯೋ, ಫೋಟೋ ಸ್ಟೋರೇಜ್‌ ಆಯ್ಕೆಯನ್ನು ಈ ಫೋನ್‌ಗಳು ಪಿಕ್ಸೆಲ್ 4a ಫೋನ್‌ನ್ನು ಹಿಂದಿಕ್ಕುತ್ತವೆ.

ಅಧ್ಬುತ ಕ್ಯಾಮೆರಾ

ಅಧ್ಬುತ ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ಗಳನ್ನು ಈ ಹಿಂದೆ ಲಾಂಚ್‌ ಆಗಿರುವ ಪಿಕ್ಸೆಲ್ 4a ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಬದಲಾವಣೆಯನ್ನು ಗಮನಿಸಬಹುದಾಗಿದೆ. ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ನಲ್ಲಿನ ಹೊಸ ಕಂಪ್ಯೂಟೇಶನಲ್ ಫೋಟೋಗ್ರಫಿ ಅಲ್ಗಾರಿದಮ್ ಫೀಚರ್ಸ್‌ ಉತ್ತಮ ಫೋಟೋಗಳನ್ನು ಶೂಟ್ ಮಾಡಲು ಅವಕಾಶ ಕಲ್ಪಿಸಿದೆ.

ಕಂಪೆನಿ

ಇನ್ನು ಪ್ರಮುಖವಾಗಿ ಗೂಗಲ್‌ ಕಂಪೆನಿ ಯಾವಾಗಲೂ ಹಾರ್ಡ್‌ವೇರ್‌ಗೆ ಪ್ರಾಮುಖ್ಯತೆ ಕೊಡುವುದಕ್ಕಿಂತ ಹೆಚ್ಚಾಗಿ ಸಾಫ್ಟ್‌ವೇರ್‌ನ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ. ಈ ಕಾರಣಕ್ಕೆ ಹೊಸ ಪಿಕ್ಸೆಲ್ ಫೋನ್‌ಗಳ ವಿಶೇಷ ಫೀಚರ್ಸ್‌ಗಳಾದ ಮ್ಯಾಕ್ರೋ ಫೋಕಸ್ ಮತ್ತು ಸಿನೆಮ್ಯಾಟಿಕ್ ಬ್ಲೂ ಆಯ್ಕೆ ನೀವು ಸೆರೆಹಿಡಿಯುವ ಫೋಟೋಗಳಿಗೆ ರಿಚ್‌ನೆಸ್‌ ಲುಕ್‌ ನೀಡುತ್ತದೆ. ಇದರಲ್ಲಿ ಡಾರ್ಕ್ ಸ್ಕಿನ್ ಹೊಂದಿರುವವರಿಗೆ ರಿಯಲ್ ಟೋನ್ ಫೀಚರ್ಸ್ ಅನ್ನು ಗೂಗಲ್‌ ಪರಿಚಯಿಸಿದೆ.

ಬೆಲೆ ವಿವರ

ಬೆಲೆ ವಿವರ

ಈ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಿದ ನಂತರ ಗ್ರಾಹಕರು ಹೆಚ್ಚಾಗಿ ಖರೀದಿ ಮಾಡಲು ಮುಂದಾಗಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ಬೆಲೆಗೆ ಈ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಪಿಕ್ಸೆಲ್ 7 ಫೋನ್‌ ಮೂಲ ಬೆಲೆಗಿಂತ 10,000 ರೂ. ರಿಯಾಯಿತಿ ಪಡೆದುಕೊಂಡು 49,999ರೂ. ಗಳಿಗೆ ಮಾರಾಟ ಆಗುತ್ತಿದೆ. ಇದರ ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಈ ಫೋನ್‌ ಮೇಲೆ 6,000 ಡಿಸ್ಕೌಂಟ್‌ ಪಡೆಯಬಹುದು. ಇಷ್ಟೇ ಅಲ್ಲದೆ ಹಳೆಯ ಫೋನ್‌ಗಳ ವಿನಿಮಯ ಆಯ್ಕೆಯನ್ನೂ ಫ್ಲಿಪ್‌ಕಾರ್ಟ್‌ ನೀಡಿದೆ.

ಫ್ಲಿಪ್‌ಕಾರ್ಟ್‌

ಪಿಕ್ಸೆಲ್ 7 ಪ್ರೊ ಬೆಲೆ ಬಗ್ಗೆ ತಿಳಿಸುವುದಾದರೆ ಇದು ಮೂಲ ಬೆಲೆ 84,999ರೂ. ಗಳನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್‌ 69,999ರೂ. ಗಳ ಬೆಲೆ ನಿಗದಿ ಮಾಡಿದೆ. ಇದರಲ್ಲಿ ನೀವು ಹೆಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ನಲ್ಲಿ ಖರೀದಿ ಮಾಡಿದರೆ ಬರೋಬ್ಬರಿ 15,000ರೂ. ಗಳ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ವಿನಿಮಯ ಆಫರ್‌ ಸಹ ಇದಕ್ಕೆ ಅನ್ವಯ ಆಗಲಿದೆ.

Best Mobiles in India

English summary
Google company is not just a search engine site but has become more popular by introducing exciting gadgets. Now Google has launched the Pixel series of smartphones, here are the details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X