ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ರಿಲಾಯನ್ಸ್ ಜಿಯೋ 4G ಉಚಿತ ಡಾಟಾವನ್ನು 1 ವರ್ಷದವರೆಗೆ ಪಡೆಯುವುದು ಹೇಗೆ?

By Suneel
|

ರಿಲಾಯನ್ಸ್ ಜಿಯೋ 2 ತಿಂಗಳಿಂದ ಶತತವಾಗಿ ಜನರನ್ನು ದೇಶದಾದ್ಯಂತ ಇಂಪ್ರೆಸ್‌ ಮಾಡುತ್ತಲೇ ಇದೆ. ಈ ಇಂಪ್ರೆಸ್‌ಗೆ ಉಚಿತ ಮತ್ತು ಅನ್‌ಲಿಮಿಟೆಡ್ 4G ಡಾಟಾ ಮತ್ತು ಉಚಿತ ಎಸ್‌ಎಂಎಸ್‌ಗಳು, ಉಚಿತ ಕರೆ. ಆದರೆ ಈ ಆಫರ್ ಕೇವಲ ಈ ವರ್ಷದ ಅಂತ್ಯದ ವರೆಗೆ ಎಂಬುದು ಸಹ ಜಿಯೋ ಸಿಮ್‌ ಖರೀದಿದಾರರಿಗೆ ತಿಳಿದಿದೆ. ಆದ್ರೆ ಈಗಿನ ಹೊಸ ಸುದ್ದಿ ಎಂದರೆ ಜಿಯೋ ವೆಲ್ಕಮ್‌ ಆಫರ್‌ 3 ತಿಂಗಳ ಬದಲಾಗಿ 1 ವರ್ಷಗಳ ಕಾಲ ಸಿಗುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಇದೊಂದು ಗುಡ್ ನ್ಯೂಸ್‌ ಎಂತಲೇ ಹೇಳಬಹುದು. ಹೌದು , ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡುವವರು ಈಗ 1 ವರ್ಷಗಳ ಕಾಲ ಉಚಿತ ರಿಲಾಯನ್ಸ್ ಜಿಯೋ(Jio) 4G ಡಾಟಾ ಮತ್ತು ಕರೆಗಳನ್ನು ಪಡೆಯಬಹುದು. ಆದ್ರೆ ಈ ಆಫರ್ ಕೇವಲ ಲೈಫ್‌(LYF) ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಮಾತ್ರ.

3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್ ಹೇಗೆ?

ಲೈಫ್‌(LYF) ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸಿದಲ್ಲಿ, 1 ವರ್ಷ ಅನ್‌ಲಿಮಿಟೆಡ್ 4G ಡಾಟಾ ಮತ್ತು ವಾಯ್ಸ್ ಕರೆಗಳನ್ನು ಯಾವುದೇ ಚಾರ್ಜ್‌ ಇಲ್ಲದೇ ಉಚಿತವಾಗಿ ಪಡೆಯಬಹುದು. ಈ ವೆಲ್ಕಮ್‌ ಆಫರ್‌ ಅನ್‌ಲಾಕ್ ಮಾಡಿ, 1 ವರ್ಷದ ವರೆಗೆ ಉಚಿತ 4G ಡಾಟಾ, ಉಚಿತ ಕರೆ ಮತ್ತು ಮೆಸೇಜ್‌ ಆಫರ್‌ ಪಡೆಯುವುದು ಹೇಗೆ ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌ ಆಗುತ್ತದೆ!

ಹೊಸ ಲೈಫ್‌ ಫೋನ್‌ ಖರೀದಿಸಿ

ಹೊಸ ಲೈಫ್‌ ಫೋನ್‌ ಖರೀದಿಸಿ

ಒಂದು ವರ್ಷದ ಕಾಲ ಉಚಿತ ಮತ್ತು ಅನ್‌ಲಿಮಿಟೆಡ್ 4G ಡಾಟಾ ಮತ್ತು ಉಚಿತ ವಾಯ್ಸ್ ಕರೆಯನ್ನು ರಿಲಾಯನ್ಸ್ ಜಿಯೋ ಸಿಮ್‌ನಲ್ಲಿ ಎಂಜಾಯ್‌ ಮಾಡಲು ಮೊದಲ ಹಂತವೆಂದರೆ, ಲೈಫ್‌ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿ. ಈ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಆರಂಭಿಕ ಮತ್ತು ಮಧ್ಯಮ ಬೆಲೆಯಲ್ಲಿ ರೂ.2,999 ರಿಂದ ಲಭ್ಯವಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ನಂತರ ರಿಲಾಯನ್ಸ್ ಜಿಯೋ ಸಿಮ್‌ ಕಾರ್ಡ್‌ ಪಡೆಯಿರಿ

ನಂತರ ರಿಲಾಯನ್ಸ್ ಜಿಯೋ ಸಿಮ್‌ ಕಾರ್ಡ್‌ ಪಡೆಯಿರಿ

ಹೊಸ ಲೈಫ್‌(LYF) ಫೋನ್‌ ಖರೀದಿಸಿದ ನಂತರ, ರಿಲಾಯನ್ಸ್ ಜಿಯೋ 4G ಸಿಮ್‌ ಖರೀದಿಸಿ. ಡಿಜಿಟಲ್‌ ಸ್ಟೋರ್‌ಗಳ ಮುಂದೆ ಸಾಲಿನಲ್ಲಿ ನಿಂತು ರಿಲಾಯನ್ಸ್ ಜಿಯೋದ ವೆಲ್ಕಮ್‌ ಆಫರ್‌ನಲ್ಲಿ ಸಿಮ್ ಖರೀದಿಸುವುದು ಸ್ವಲ್ಪ ಕಷ್ಟದ ಕೆಲಸವಾಗಿರಬಹುದು.

 ಬಾರ್‌ಕೋಡ್‌ ಜೆನೆರೇಟ್ ಮಾಡಿ

ಬಾರ್‌ಕೋಡ್‌ ಜೆನೆರೇಟ್ ಮಾಡಿ

ರಿಲಾಯನ್ಸ್ ಜಿಯೋ ಸಿಮ್ ಪಡೆಯಲು, ಮೊದಲು ಮೈಜಿಯೋ ಆಪ್‌ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ ನಂತರ ಬಾರ್‌ಕೋಡ್‌ ಅನ್ನು ಜೆನೆರೇಟ್‌ ಮಾಡಿ. ಬಾರ್‌ಕೋಡ್‌ ಜೆನೆರೇಟ್‌ ಆದ ನಂತರ ಬಾರ್‌ಕೋಡ್‌ ಮತ್ತು ನಿಮ್ಮ ಆಧಾರ್ ಕಾರ್ಡ್‌ ನೊಂದಿಗೆ ನಿಮ್ಮ ಹತ್ತಿರದ ರಿಲಾಯನ್ಸ್ ಡಿಜಿಟಲ್‌ ಸ್ಟೊರ್ ಅಥವಾ ಡಿಜಿಟಲ್ ಎಕ್ಸ್‌ಪ್ರೆಸ್ ಮಿನಿ ಸ್ಟೋರ್‌ಗಳಿಗೆ ಭೇಟಿ ನೀಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೆಲಿವೆರಿಫಿಕೇಶನ್ ಪೂರ್ಣಗೊಳಿಸಿ

ಟೆಲಿವೆರಿಫಿಕೇಶನ್ ಪೂರ್ಣಗೊಳಿಸಿ

ರಿಲಾಯನ್ಸ್ ಜಿಯೋ 4G ಸಿಮ್ ಕಾರ್ಡ್‌ ಪಡೆದ ನಂತರ, ಟೆಲಿವೆರಿಫಿಕೇಶನ್ ಕೈಗೊಳ್ಳಬೇಕು. ನಿಮ್ಮ ವಿವರಗಳನ್ನು ಸಿಮ್‌ ಆಕ್ಟಿವೇಟ್‌ ಮಾಡಲು ವೆರಿಫೈ ಮಾಡಿ ಎಲ್ಲಾ ಬೆನಿಫಿಟ್‌ಗಳನ್ನು ಪಡೆಯಿರಿ.

 1 ವರ್ಷದವರೆಗೆ ಉಚಿತ ಮತ್ತು ಅನ್‌ಲಿಮಿಟೆಡ್ 4G ಡಾಟಾ ಮತ್ತು ಕರೆ ಆಫರ್ ಪಡೆಯಿರಿ

1 ವರ್ಷದವರೆಗೆ ಉಚಿತ ಮತ್ತು ಅನ್‌ಲಿಮಿಟೆಡ್ 4G ಡಾಟಾ ಮತ್ತು ಕರೆ ಆಫರ್ ಪಡೆಯಿರಿ

ನೀವು ಮೇಲಿನ ಹಂತಗಳನ್ನು ಪಾಲಿಸಿದ ನಂತರ ಯಶಸ್ವಿಯಾಗಿ ಆಪ್‌ ಅನ್ನು ಅನ್‌ಲಾಕ್‌ ಮಾಡಿದಂತೆ ಮತ್ತು ವೆಲ್ಕಮ್‌ ಆಫರ್ ನಿಮ್ಮ ರಿಲಾಯನ್ಸ್ ಜಿಯೋ ಸಿಮ್‌ನಲ್ಲಿ 1 ವರ್ಷಗಳ ವರೆಗೆ ವಿಸ್ತರಣೆ ಆಗುತ್ತದೆ. ಅಂದಹಾಗೆ ಲೈಫ್ ಸ್ಮಾರ್ಟ್‌ಫೋನ್‌ ಖರೀದಿಸಿದವರಿಗೆ ಈ ಮಾಹಿತಿಯನ್ನು ರಿಲಾಯನ್ಸ್ ಜಿಯೋ ಅಧಿಕೃತವಾಗಿ ಪ್ರಕಟಣೆ ಮಾಡಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's a Trick to Get Free Reliance Jio 4G Data for 1 Year with Your New Smartphone. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X