ಹಶ್ ಇದ್ದರೆ ಫೋನ್ ಬ್ಯಾಟರಿ ಖಾಲಿಯಾಗುತ್ತದೆ ಎಂಬ ಭಯ ಬೇಡ!!!

  By Shwetha
  |

  ಫೋನ್ ಸ್ಲೀಪ್ ಮೋಡ್‌ನಲ್ಲಿದ್ದರೂ, ಹಿನ್ನಲೆಯಲ್ಲಿರುವ ಅಪ್ಲಿಕೇಶನ್‌ಗಳು ಎಚ್ಚರವಾಗಿರುವಷ್ಟು ಹೊತ್ತು ಫೋನ್ ಬ್ಯಾಟರಿ ಡ್ರೈನ್ ಆಗುವುದು ಖಂಡಿತ. ಇನ್ನು ಬ್ಯಾಟರಿ ಡ್ರೈನ್ ಆಗಉವ ಸಮಸ್ಯೆಗೆ ಇಂಡಿಯಾನಾದ ಪರ್ಡ್ಯೂ ಯೂನಿವರ್ಸಿಟಿಯ ವಿಜ್ಞಾನಿಗಳು ಪರಿಹಾರವನ್ನು ಕಂಡುಹುಡುಕಿದ್ದು, ಇಂಟೆಲ್‌ನೊಂದಿಗೆ ಒಗ್ಗೂಡಿ ಮೊಬೈಲ್ ಎನಾರಲಿಟಿಕ್ ಹಶ್ ಪರಿಹಾರವನ್ನು ಕಂಡುಹುಡುಕಿದೆ.

  ಓದಿರಿ: ಫೋನ್ ಬ್ಯಾಟರಿ ಖಾಲಿಯಾಗುತ್ತಿದೆಯೇ? ಏನಿರಬಹುದು ಕಾರಣ

  ಆಂಡ್ರಾಯ್ಡ್ ಬಳಕೆದಾರರು ಗಿಟ್‌ಹಬ್ ವೆಬ್‌ಸೈಟ್‌ಗೆ ಹೋಗಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂತೆಯೇ ಈ ಅಪ್ಲಿಕೇಶನ್ ಅನ್ನು ಅನುಸರಿಸಲು ಹಲವಾರು ತಾಂತ್ರಿಕ ನೆರವನ್ನು ನೀವು ಪಡೆದುಕೊಳ್ಳಬೇಕಾಗಿದ್ದು ಇನ್‌ಸ್ಟಾಲ್ ಮಾಡಿಕೊಂಡ ನಂತರ ಇದು ಕಾರ್ಯನಿರ್ವಹಿಸುವ ಬಗೆ ನಿಮ್ಮನ್ನು ವಿಸ್ಮಿಯಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹಶ್ ಹೇಗೆ ಕಾರ್ಯನಿರ್ವಹಿಸುತ್ತದೆ

  ನೀವು ಆಗಾಗ್ಗೆ ಬಳಸಿದ ಅಪ್ಲಿಕೇಶನ್‌ಗಳನ್ನು ಇದು ಪತ್ತೆಹಚ್ಚುತ್ತದೆ ಮತ್ತು ನೀವು ಅಪರೂಪಕ್ಕೆ ಬಳಸುವ ಅಪ್ಲಿಕೇಶನ್‌ಗಳ ಹಿನ್ನಲೆ ಚಟುವಟಿಕೆಯನ್ನು ಇದು ನಿಲ್ಲಿಸುತ್ತದೆ.

  ಹೆಚ್ಚು ಬಳಸಿದ ಅಪ್ಲಿಕೇಶನ್‌ಗಳಿಗೆ ಆದ್ಯತೆ

  ಉದಾಹರಣೆಗೆ ಆಗಾಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಅಪರೂಪಕ್ಕೆ ಬಳಸುತ್ತಾರೆ ಎಂಬಂತಹ ಸಂದರ್ಭದಲ್ಲಿ ಫೋಟೋ ಶೇರಿಂಗ್ ಅಪ್ಲಿಕೇಶನ್ ಮುಚ್ಚುತ್ತದೆ.

  ಬ್ಯಾಟರಿ ಬಳಕೆ ಕಡಿಮೆ ಮಾಡುತ್ತದೆ

  ನಿತ್ಯವೂ ಖರ್ಚಾಗುವ ಬ್ಯಾಟರಿ ಮಟ್ಟವನ್ನು 16 ಪಟ್ಟಿನಷ್ಟು ಕಡಿಮೆಮಾಡುವುದೇ ನಮ್ಮ ಉದ್ದೇಶವಾಗಿದ್ದು ಬ್ಯಾಟರಿ ದೀರ್ಘತೆಯಿಂದ ಬಳಕೆದಾರರು ಇನ್ನಷ್ಟು ಹೆಚ್ಚಿನ ಬೇರೆ ಕೆಲಸಗಳನ್ನು ನಿರ್ವಹಿಸಬೇಕು ಎಂಬುದು ಈ ಅಪ್ಲಿಕೇಶನ್ ಗುರಿಯಾಗಿದೆ ಎಂಬುದಾಗಿ ಇಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್‌ನ ಪ್ರೊಫೆಸರ್ ಚಾರ್ಲಿ ಹು ಮಾತಾಗಿದೆ.

  ಟೂಲ್ ಅಭಿವೃದ್ಧಿಗೆ ಬೆಂಬಲ

  2,000 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್3 ಮತ್ತು ಎಸ್4 ಬಳಕೆದಾರರು ಈ ಪರಿಕರದ ಪರೀಕ್ಷೆಗೆ ಕೈಜೋಡಿಸಿದ್ದಾರೆ ಮತ್ತು ಇದನ್ನು ಅಭಿವೃದ್ಧಿಸುವ ನಿಟ್ಟಿನಲ್ಲಿ ಬೆಂಬಲವಾಗಿದ್ದಾರೆ.

  ಬ್ಯಾಟರಿ ಸಮಸ್ಯೆಗ ಪರಿಹಾರ

  ಇಡಿಯ ವಿಶ್ವದಲ್ಲಿಯೇ ಫೋನ್ ಬ್ಯಾಟರಿ ಕಡಿಮೆಯಾಗುತ್ತಿರುವುದಕ್ಕೆ ನಡೆಸಲಾದ ಅಧ್ಯಯನ ಇದಾಗಿದ್ದು ಬಳಕೆದಾರರು ನಿತ್ಯವೂ ಅನುಭವಿಸುತ್ತಿರುವ ಸಮಸ್ಯೆಗೆ ಇದು ಪರಿಹಾರವಾಗಲಿದೆ.

  ಬಗ್ ಸಮಸ್ಯೆ

  ಫೋನ್ ಸ್ಲೀಪ್ ಮೋಡ್‌ನಲ್ಲಿದ್ದರೂ ಹಿನ್ನಲೆಯಲ್ಲಿ ಇತರ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಿರುವುದು ಬಗ್‌ನ ಸಮಸ್ಯೆಯಿಂದಾಗಿದೆ ಎಂಬುದಾಗಿ ಪ್ರೊಫೆಸರ್ ಅನ್ವೇಷಿಸಿದ್ದಾರೆ.

  ಸೊನ್ನೆ ಪವರ್ ಮೋಡ್

  ಸ್ಕ್ರೀನ್ ಆಫ್ ಆದ ಸಂದರ್ಭದಲ್ಲಿ ಫೋನ್ ಹಾರ್ಡ್‌ವೇರ್ ಸ್ಲೀಪ್ ಮೋಡ್‌ಗೆ ಹೋಗುತ್ತದೆ ಮತ್ತು ಸೊನ್ನೆ ಪವರ್ ಮೋಡ್‌ಗೆ ಫೋನ್ ಬ್ಯಾಟರಿಯನ್ನು ಡ್ರೈ ಮಾಡುತ್ತದೆ.

  ಒಳಬರುವ ಕರೆ ಮತ್ತು ಡೇಟಾ

  ಫೋನ್ ಸ್ಕ್ರೀನ್ ಆಫ್ ಆಗುವ ವೇಳೆಯಲ್ಲಿ, ಅದರ ವೈಫೈ ಸಿಸ್ಟಮ್ ಪಿರಿಯಾಡಿಕ್ ಸಿಗ್ನಲ್ ಅನ್ನು ಆಕ್ಸೆಸ್ ಪಾಯಿಂಟ್‌ಗೆ 200 ಮಿಲಿಸೆಕೆಂಡ್‌ಗಳಿಗೊಮ್ಮೆ ಕಳುಹಿಸುವುದರಿಂದ ಬೇಸ್ ಸ್ಟೇಶನ್ ಪ್ರತೀ 1.28 ಸೆಕೆಂಡ್‌ಗಳಿಗೊಮ್ಮೆ ಒಳಬರುವ ಕರೆಗಳು ಮತ್ತು ಡೇಟಾಗಾಗಿ ಇದು ಪರಿಶೀಲಿಸುತ್ತಿರುತ್ತದೆ.

  ದ್ವಿಗುಣಗೊಳಿಸುವ ಗುರಿ

  ಬ್ಯಾಟರಿ ಬಳಕೆಯನ್ನು ನಿಯಂತ್ರಿಸಿ ಸ್ಮಾರ್ಟ್‌ಫೋನ್‌ಗಳಿಗಾಗಿ ಅದನ್ನು ದ್ವಿಗುಣಗೊಳಿಸುವ ಗುರಿ ಹೂನದ್ದಾಗಿದೆ ಮತ್ತು ಈ ಪರಿಕರ ಅದಕ್ಕೆ ಸಹಾಯ ಕೂಡ ಮಾಡಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  If you are fed up of constantly closing apps in a constant battle to save smartphone battery, a new tool may help.Called Hush, it automatically 'kills' the apps you rarely use so they don’t carry out any activity in the background, draining battery out of sight.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more