Subscribe to Gizbot

ವಿಶ್ವದ ಅತ್ಯಂತ ಕಡಿಮೆ ದರದ ಟ್ಯಾಬ್ಲೆಟ್ ಐಬಾಲ್ ಸ್ಲೈಡ್ i701

Written By:

ಐಬಾಲ್ ಮಂಗಳವಾರದಂದು ತನ್ನ ಅತ್ಯಾಧುನಿಕ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿದ್ದು ಇದರ ಹೆಸರು ಐಬಾಲ್ ಸ್ಲೈಡ್ i701 ಎಂದಾಗಿದ್ದು ಬೆಲೆ ರೂ 4,999 ಆಗಿದೆ. ಜಗತ್ತಿನ ಹೆಚ್ಚು ಇಕನಾಮಿಕಲ್ ವಿಂಡೋಸ್ ಟ್ಯಾಬ್ಲೆಟ್ ಎಂಬ ಹೆಸರನ್ನು ಇದು ಪಡೆದುಕೊಂಡಿದೆ. ಹೆಚ್ಚಿನ ಪ್ರಮುಖ ರೀಟೈಲ್ ಮಳಿಗೆಗಳು ಮತ್ತು ಇ ಕಾಮರ್ಸ್ ಪೋರ್ಟಲ್‌ಗಳಲ್ಲಿ ಗುರುವಾರದಿಂದ ಈ ಟ್ಯಾಬ್ಲೆಟ್ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ.

ವಿಶ್ವದ ಅತ್ಯಂತ ಕಡಿಮೆ ದರದ ಟ್ಯಾಬ್ಲೆಟ್ ಐಬಾಲ್ ಸ್ಲೈಡ್ i701

ಫೋನ್ ವಿಂಡೋಸ್ 8.1 ಅನ್ನು ಚಾಲನೆ ಮಾಡುತ್ತಿದ್ದು ಇದನ್ನು ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ ಮೈಕ್ರೋಸಾಫ್ಟ್ ಕಚೇರಿಯ 1 ವರ್ಷದ ಚಂದಾದಾರಿಕೆಯೊಂದಿಗೆ ಇದು ಬಂದಿದ್ದು, 1 ಟಿಬಿ ಉಚಿತ ಒನ್ ಡ್ರೈವ್ ಕ್ಲೌಡ್ ಸ್ಟೊರೇಜ್ ಅನ್ನು ಇದು ಪಡೆದುಕೊಂಡಿದೆ. ಇನ್ನು ಟ್ಯಾಬ್ಲೆಟ್ನಲ್ಲಿ 7 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಡ್ ಕೋರ್ ಇಂಟೆಲ್ ಆಟಮ್ ಸಾಕ್ ಅನ್ನು ಹೊಂದಿದೆ. ಅಂತೆಯೇ 1 ಜಿಬಿ DDR3 RAM ಅನ್ನು ಟ್ಯಾಬ್ಲೆಟ್ ಒಳಗೊಂಡಿದೆ. ಇನ್ನು ಡಿವೈಸ್‌ನಲ್ಲಿ 16ಜಿಬಿ ಸಂಗ್ರಹಣಾ ಸಾಮರ್ಥ್ಯವಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಟ್ಯಾಬ್ಲೆಟ್ 2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಫ್ಲ್ಯಾಶ್ ಅನ್ನು ಹೊಂದಿದೆ. ಮುಂಭಾಗದಲ್ಲಿ ವಿಜಿಎ ಕ್ಯಾಮೆರಾ ಇದ್ದು 3200mAh ಬ್ಯಾಟರಿಯನ್ನು ಟ್ಯಾಬ್ಲೆಟ್ನಲ್ಲಿ ಕಾಣಬಹುದಾಗಿದೆ. ಟ್ಯಾಬ್ಲೆಟ್ ವೈಫೈ, ಬ್ಲ್ಯೂಟೂತ್, ಯುಎಸ್‌ಬಿ, 3ಜಿ, ಯುಎಸ್‌ಬಿ ಡಾಂಗಲ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

English summary
iBall on Tuesday launched its latest tablet in the Indian market - the iBall Slide i701, at Rs. 4,999. The domestic brand is calling it the 'world's most economical Windows tablet," and says it will be available across leading retail stores and e-commerce portals from Thursday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot