Subscribe to Gizbot

ಜಿಯೋ-ಏರ್‌ಟೆಲ್‌ಗೆ ಶಾಕ್ ನೀಡಿದ ಐಡಿಯಾ: ದಿನಕ್ಕೆ 5GB ಡೇಟಾ ಆಫರ್..!

Written By:

ದೇಶಿಯ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿದೆ. ಅದರಲ್ಲೂ IPL ಶುರುವಾದ ನಂತರದಲ್ಲಿ ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುವುದರೊಂದಿಗೆ ಸ್ಮಾರ್ಟ್‌ಫೋನಿನಲ್ಲಿಯೇ ಕ್ರಿಕೆಟ್ ಮ್ಯಾಚ್ ನೋಡಲಿ ಎನ್ನುವ ಸಲುವಾಗಿ ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡುತ್ತಿವೆ.

ಜಿಯೋ-ಏರ್‌ಟೆಲ್‌ಗೆ ಶಾಕ್ ನೀಡಿದ ಐಡಿಯಾ: ದಿನಕ್ಕೆ 5GB ಡೇಟಾ ಆಫರ್..!

ಇದೇ ಮಾದರಿಯಲ್ಲಿ ಐಡಿಯಾ ಸದ್ಯ ತನ್ನ ಬಳಕೆದಾರರಿಗೆ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಜಿಯೋ ಏರ್‌ಟೆಲ್‌ ನೀಡಿರುವ ಆಫರ್ ಗೆ ಪ್ರತಿಯಾಗಿ ಡೇಟಾ ಆಫರ್ ವೊಂದನ್ನು ನೀಡಿದೆ. ಇದರಲ್ಲಿ ಡೇಟಾ ಮತ್ತು ಕರೆಯ ಲಾಭಗಳು ಎರಡು ಇದೆ.

ಓದಿರಿ: IPL ಬೆಟ್ಟಿಂಗ್ ಆಡದೇ ಕಾಸು ಮಾಡಿ: ಇಲ್ಲಿದೇ ಆಪ್‌ಗಳ ವಿವರ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಿನಕ್ಕೆ ಎರಡು GB:

ದಿನಕ್ಕೆ ಎರಡು GB:

ಐಡಿಯಾ ಈ ಬಾರಿ ಏರ್‌ಟೆಲ್ ಆಫರ್ ಅನ್ನು ಸಂಫೂರ್ಣವಾಗಿ ಕಾಪಿ ಮಾಡಿದ್ದು, ರೂ.249 ಪ್ಲಾನ್ ಘೋಷಣೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು 4G/3G ವೇಗದಲ್ಲಿ ನೀಡಲಿದ್ದು, ಒಟ್ಟು 56GB ಡೇಟಾ ಬಳಕೆಗೆ ದೊರೆಯಲಿದೆ. ಇದರಲ್ಲಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು, ಆದರೆ ಅದಕ್ಕೆ ಷರತ್ತು ವಿಧಿಸಿದ್ದು, ನಿತ್ಯ 250 ನಿಮಿಷಗಳ ಕಾಲ ಮಾತನಾಡುವ ಅವಕಾಶವನ್ನು ನೀಡಿದೆ.

ಉಚಿತ ಸೇವೆ:

ಉಚಿತ ಸೇವೆ:

ಇದಲ್ಲದೆ ಈ ಪ್ಲಾನ್‌ನಲ್ಲಿ ಬಳಕೆದಾರು ಉಚಿತವಾಗಿ SMS ಗಳನ್ನು ಕಳಹಿಸಬಹುದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಪ್ರತಿ ಟೆಲಿಕಾಂ ಕಂಪನಿಗಳು ನಿತ್ಯ 2GB ಡೇಟಾವನ್ನು ನೀಡುವ ಪ್ಲಾನ್‌ಗಳನ್ನು ಘೋಷಣೆ ಮಾಡಿದ್ದು, ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಲೈವ್ ಮ್ಯಾಚ್ ನೋಡವವರ ಸಂಖ್ಯೆಯೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ.

ದಿನಕ್ಕೆ 5GB:

ದಿನಕ್ಕೆ 5GB:

ಇದಲ್ಲದೇ ಐಡಿಯಾ ಬಳಕೆದಾರರಿಗೆ ನಿತ್ಯ 5GB ಡೇಟಾವನ್ನು ಬಳಕೆಗೆ ನೀಡುವ ಆಫರ್ ವೊಂದನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರು ನಿತ್ಯ 5GB ಡೇಟಾವನ್ನು ಪಡೆಯುವುದಲ್ಲದೇ ಉಚಿತ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. 35ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಬೆಲೆ ರೂ.998 ಆಗಿದೆ.

How to find out where you can get your Aadhaar card done (KANNADA)
ಏರ್‌ಟೆಲ್-ಜಿಯೋ:

ಏರ್‌ಟೆಲ್-ಜಿಯೋ:

ಇದೇ ಮಾದರಿಯಲ್ಲಿ ಏರ್‌ಟೆಲ್ ಮತ್ತು ಜಿಯೋ ಗಳು ತಮ್ಮ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ನೀಡುವುದಲ್ಲದೇ, IPL ಕ್ರೆಜ್ ಹೆಚ್ಚಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿವೆ. ದಿನಕ್ಕೆ 2GB ಡೇಟಾ ಹಾಗೂ ಉಚಿತ ಲೈವ್ ಮ್ಯಾಚ್ ಸೇವೆಯನ್ನು ನೀಡುತ್ತಿವೆ.

ಕಾಲ ಬದಲಾಗಿದೆ;

ಕಾಲ ಬದಲಾಗಿದೆ;

ಒಂದು ಕಾಲದಲ್ಲಿ ತಿಂಗಳಿಗೊಂದು GB ಡೇಟಾ ಪಡೆಯುವುದು ದುಬಾರಿಯಾಗಿತ್ತು. ಆದರೆ ಇಂದು ದಿನಕ್ಕೇ ಒಂದು GB ಡೇಟಾ ಸಾಲುತ್ತಿಲ್ಲ ಎನ್ನುವಂತೆ ಆಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ಯಾವುದೇ ಸಿಕ್ಕರು ಬೆಲೆ ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಈ ಪರಿಸ್ಥಿತಿಯೇ ಸಾಕ್ಷಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea's Rs. 249 Prepaid Pack Offers 2GB Data Per Day to Take on Airtel and Jio. ro know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot