ಸಾಕಪ್ಪಾ ಸಾಕು ಸ್ಮಾರ್ಟ್‎ಫೋನ್ ಸಹವಾಸ!

By Shwetha
|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಈ ಸಾಮಾನ್ಯತೆ ಹೇಗೆ ಮಾರ್ಪಟ್ಟಿದೆ ಎಂದರೆ ಅದಿಲ್ಲದೆ ನಮ್ಮ ಬದುಕು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಒಂದು ರೀತಿಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನಕ್ಕೆ ಶಾಪವಾಗಿ ಮಾರ್ಪಟ್ಟಿದೆ. ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಓದಿರಿ: ಸ್ಮಾರ್ಟ್‌ಫೋನ್‌ಗಳಲ್ಲೂ ಸುಲಭವಾಗಿ ಕನ್ನಡ ಟೈಪ್‌ ಮಾಡಿ

ಹಾಜರಾತಿ

ಹಾಜರಾತಿ

ಸ್ಮಾರ್ಟ್‌ಫೋನ್ ಬಳಸುತ್ತಿರುವವರು ಕೆಲವೊಮ್ಮೆ ತಾವು ಈ ಲೋಕದಲ್ಲಿ ಇಲ್ಲವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಸಂಭಾಷಣೆಯ ಪರಿಣಾಮ ಹೇಗಿದೆ ಎಂದರೆ ತಮ್ಮೊಡನೆ ಇರುವವರ ಹಾಜರಾತಿಯು ಅವರಿಗೆ ಮರೆತು ಹೋಗಿರುತ್ತದೆ.

ಹಾಳುಮಾಡಿಬಿಡುತ್ತದೆ

ಹಾಳುಮಾಡಿಬಿಡುತ್ತದೆ

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳ ಬಳಕೆ ಅಪಘಾತಗಳನ್ನು ಕೂಡ ಹೆಚ್ಚಿಸಿದೆ. ನಿಮ್ಮ ಜೀವನ ಅಥವಾ ಇತರರ ಜೀವನವನ್ನು ಇದು ಹಾಳುಮಾಡಿಬಿಡುತ್ತದೆ.

ಆನ್‌ಲೈನ್ ಪ್ರೊಫೈಲ್

ಆನ್‌ಲೈನ್ ಪ್ರೊಫೈಲ್

ಡೇಟಿಂಗ್ ಅಪ್ಲಿಕೇಶನ್‌ಗಳು ಹೆಚ್ಚು ಪ್ರಸಿದ್ಧವಾಗುತ್ತಿರುವಂತೆ ಪ್ರಣಯ ಎಂಬ ಅಂಶವೇ ಮರೆತು ಹೋಗಿಬಿಟ್ಟಿದೆ. ಬೆರಳಿನ ಸ್ವೈಪ್‌ನಿಂದ ವ್ಯಕ್ತಿಯ ಆನ್‌ಲೈನ್ ಪ್ರೊಫೈಲ್ ಅನ್ನೇ ಜಾಲಾಡುವ ವ್ಯವಸ್ಥೆ ಹುಟ್ಟಿಕೊಂಡಿದೆ.

ಗೂಗಲ್

ಗೂಗಲ್

ಗೂಗಲ್‌ನಲ್ಲಿ ಹುಡುಕಾಡಿದ ಅಂಶಗಳು ನಮ್ಮ ತಲೆಯಲ್ಲಿ ಇರುವುದಿಲ್ಲ. ಯಾರಾದರೂ ಮಾಹಿತಿ ಕೇಳಿದಲ್ಲಿ ಗೂಗಲ್ ಅನ್ನೇ ನಾವು ತಡಕಾಡುತ್ತೇವೆ.

ಚಾರ್ಜ್

ಚಾರ್ಜ್

ಫೋನ್ ಚಾರ್ಜ್ ಮುಗಿದ ಒಡನೆಯೇ ಅದನ್ನು ಚಾರ್ಜಿಂಗ್‌ಗೆ ಹಾಕಬೇಕೆಂಬ ತುಡಿತ ನಮ್ಮಲ್ಲಿರುತ್ತದೆ. ಫೋನ್ ಚಾರ್ಜ್ ಇರುವ ಪ್ರದೇಶವನ್ನು ಹುಡುಕಿಕೊಂಡೇ ನಾವು ಅಲೆದಾಟುತ್ತಿರುತ್ತೇವೆ.

ಸಂವಹನ

ಸಂವಹನ

ಇಂದಿನ ಕಾಲದಲ್ಲಿ ನಮ್ಮ ಸಂವಹನ ಇಮೇಲ್, ತ್ವರಿತ ಸಂದೇಶಿಸುವಿಕೆ ಇದಕ್ಕೆ ಮೀಸಲಾಗಿಬಿಟ್ಟಿದೆ.

ಸರಿಯಾದ ಭಂಗಿ

ಸರಿಯಾದ ಭಂಗಿ

ಫೋನ್‌ನಲ್ಲಿ ಹುಡುಕಾಡುವುದನ್ನು ನಾವು ನಡೆಸುತ್ತಾ ನಮ್ಮ ಸರಿಯಾದ ಭಂಗಿಯನ್ನೇ ನಾವು ಮರೆತುಬಿಟ್ಟಿದ್ದೇವೆ. ಇನ್ನು ನಮ್ಮ ಮುಂದಿನ ತಲೆಮಾರು 80 ರ ವಯಸ್ಸಿನಲ್ಲಿ ಯಾವ ಮಟ್ಟದಲ್ಲಿರಬಹುದು ಎಂಬುದು ಚಿಂತೆಯಾಗಿಬಿಟ್ಟಿದೆ.

ಸೋಮಾರಿ

ಸೋಮಾರಿ

ನಿಮಗೆ ಉದ್ಯೋಗ ಇಲ್ಲ ಎನ್ನುವಂತಹ ಸಂದರ್ಭದಲ್ಲಿ ಸೋಮಾರಿಗಳಾಗಿ ನಿಮ್ಮ ಫೋನ್‌ನಲ್ಲೇ ತಡಕಾಡುತ್ತಿರುತ್ತೀರಿ. ಅಂದರೆ ಕೆಲಸ ಇಲ್ಲ ಎಂದಾದಲ್ಲಿ ಫೋನ್‌ಗೆ ನಾವು ತೊಂದರೆಯನ್ನು ನೀಡುತ್ತಿರುತ್ತೇವೆ.

ಒತ್ತಡ

ಒತ್ತಡ

ನಿಮ್ಮ ಫೋನ್ ಕಳೆದುಹೋದಲ್ಲಿ ಅಥವಾ ಒಡೆದು ಹೋದಲ್ಲಿ ನೀವು ತೀಕ್ಷ್ಣ ಒತ್ತಡಕ್ಕೆ ಒಳಗಾಗುತ್ತೀರಿ. ಇನ್ನು ಕೆಲವು ಜನರಿಗಂತೂ ಅದನ್ನು ರಿಪೇರಿ ಮಾಡುವುದರಲ್ಲೇ ಹೆಚ್ಚು ವ್ಯಸ್ತರಾಗಿರುತ್ತಾರೆ.

ಸಮಯ ವ್ಯರ್ಥ

ಸಮಯ ವ್ಯರ್ಥ

ಹೆಚ್ಚು ಕಾಲ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಾವು ಕಳೆಯುತ್ತೇವೆ ಎಂದಾದಲ್ಲಿ ಅದು ಸಮಯ ವ್ಯರ್ಥವಾಗಿದೆ.

Best Mobiles in India

English summary
In this article we can find out some reasons for smartphone problems... these facts makes our life problem full because of smartphones problem.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X