ಸ್ಮಾರ್ಟ್‌ಫೋನ್‌ಗಳಲ್ಲೂ ಸುಲಭವಾಗಿ ಕನ್ನಡ ಟೈಪ್‌ ಮಾಡಿ

By Suneel
|

ಪ್ರಸ್ತುತ ದಿನಗಳಲ್ಲಿ ಎಲ್ಲರೂ ಉನ್ನತ ಶಿಕ್ಷಣ ಪಡೆಯದಿರಬಹುದು, ಆದರೆ ಸ್ಮಾರ್ಟ್‌ಫೋನ್‌ ಪಡೆಯದೇ ಇರಲಾರರು. ಕನ್ನಡಿಗರು ಸಾಹಿತ್ಯಿಕವಾಗಿ ಹೆಚ್ಚು ಸೃಜನಶೀಲರು. ಅವರ ಸೃಜನತೆಗೆ ಉತ್ತಮ ವೇದಿಕೆಗಳು ಸಿಗುತ್ತಿಲ್ಲ ಎಂಬ ಕೊರಗು ಹಲವರಿಗಿದೆ.

ಓದಿರಿ: ಮನೆಗಳಿಗಿಂತ ಚಂದ್ರನಲ್ಲಿಯೇ ಅತಿ ವೇಗದ ವೈಫೈ ಸಂಪರ್ಕ

ಸ್ಮಾರ್ಟ್‌ಫೋನ್‌ ಬಳಕೆದಾರರು ಈಗ ತಮ್ಮ ಮೊಬೈಲ್‌ಗಳಲ್ಲಿಯೇ ಕನ್ನಡ ಅಕ್ಷರಗಳನ್ನು ಟೈಪ್‌ ಮಾಡಿ ಸಮಾಜ ಮುಖಿಯಾಗುವ ಹಲವು ಅವಕಾಶಗಳಿವೆ. ರಾಜಕೀಯ, ಸಮಾಜಿಕ, ಆರ್ಥಿಕ ವಿಷಯಗಳು, ಹಾಗೂ ತಮ್ಮ ಆಸಕ್ತ ವಿಷಯಗಳ ಬಗ್ಗೆ ಬರೆದು ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಕಂಪ್ಯೂಟರ್‌ಗಳು ಇಲ್ಲದೇಯೆ ಕೇವಲ ಮೊಬೈಲ್‌ನಲ್ಲೇ ಟೈಪ್‌ ಮಾಡಿ ತಮ್ಮ ಪ್ರತಿಕ್ರಿಯೆ ನೀಡಬಹುದಾಗಿದೆ. ಅದು ಹೇಗೆ ಎಂಬುದನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದೆ.

ಕನ್ನಡ ಟೈಪ್‌ ಮಾಡಲು ಹಲವು ಅಪ್ಲಿಕೇಶನ್‌ಗಳು

ಕನ್ನಡ ಟೈಪ್‌ ಮಾಡಲು ಹಲವು ಅಪ್ಲಿಕೇಶನ್‌ಗಳು

ಕನ್ನಡ ಟೈಪ್‌ ಮಾಡಲು ಹಲವು ಅಪ್ಲಿಕೇಶನ್‌ಗಳು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಲಭ್ಯವಿದ್ದು, ಅವುಗಳನ್ನು ನಿಮ್ಮ ಮೊಬೈಲ್‌ಗೆ ಇನ್ಸ್ಟಾಲ್‌ ಮಾಡಿಕೊಳ್ಳಿ.

ಚಿತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಟೈಪಿಂಗ್ ಅಪ್ಲಿಕೇಶನ್‌ಗಳು

ಕನ್ನಡ ಟೈಪಿಂಗ್ ಅಪ್ಲಿಕೇಶನ್‌ಗಳು

* ಕನ್ನಡ ಕೀಬೋರ್ಡ್‌
* ಗೂಗಲ್‌ ಕನ್ನಡ
* ಟೈಪ್‌ ಕನ್ನಡ
* ಜಸ್ಟ್‌ ಕನ್ನಡ
* ಅಕ್ಷರ
* ಮಲ್ಟಿಲಿಂಗ್ ಕೀಬೋರ್ಡ್‌

ಅಪ್ಲಿಕೇಶಣ್‌ ಪಡೆಯುವುದು ಹೇಗೆ ?

ಅಪ್ಲಿಕೇಶಣ್‌ ಪಡೆಯುವುದು ಹೇಗೆ ?

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಗೆ ಹೋಗಿ ಸರ್ಚ್‌ Kannada Keyboard ಎಂದು ಟೈಪ್‌ ಮಾಡಿ ಸರ್ಚ್‌ ಕೊಡಿ. ನಂತರ ಮೇಲೆ ತಿಳಿಸಿದ ಹಲವು ಅಪ್ಲಿಕೇಶನ್‌ಗಳು ಗೋಚರಿಸುತ್ತವೆ. ಅಲ್ಲಿ ನಿಮಗೆ ಇಷ್ಟವಾದ ಅಪ್ಲಿಕೇಶನ್‌ ಮೇಲೆ ಕ್ಲಿಕ್‌ ಮಾಡಿ ಡೌನ್‌ಲೋಡ್‌ ಕೊಟ್ಟು ಇನ್ಸ್ಟಾಲ್‌ ಮಾಡಿಕೊಳ್ಳಿ.

ಪ್ರಸ್ತುತದಲ್ಲಿ ಹೆಚ್ಚು ಜನರು ಬಳಸುತ್ತಿರುವ ಅಪ್ಲಿಕೇಶನ್‌ - ಜಸ್ಟ್‌ ಕನ್ನಡ

ಪ್ರಸ್ತುತದಲ್ಲಿ ಹೆಚ್ಚು ಜನರು ಬಳಸುತ್ತಿರುವ ಅಪ್ಲಿಕೇಶನ್‌ - ಜಸ್ಟ್‌ ಕನ್ನಡ

ಜಸ್ಟ್‌ ಕನ್ನಡ ಅಪ್ಲಿಕೇಶನ್ ಅನ್ನು ಪ್ಲೆಸ್ಟೋರ್‌ನಿಂದ ಇನ್ಸ್ಟಾಲ್‌ ಮಾಡಿಕೊಳ್ಳಿ.

ಜಸ್ಟ್‌ ಕನ್ನಡ ಬಳಸುವುದು ಹೇಗೆ?

ಜಸ್ಟ್‌ ಕನ್ನಡ ಬಳಸುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಲಾಂಗ್ವೇಜ್‌ ಅಂಡ್‌ ಇನ್‌ಪುಟ್ಸ್‌>>ಕೀಬೋರ್ಡ್‌ ಅಂಡ್‌ ಇನ್‌ಪುಟ್‌ ಮೆಥಾಡ್ಸ್‌>>ಡೀಪಾಲ್ಟ್‌ ಹೀಗೆ ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಜಸ್ಟ್‌ ಕನ್ನಡ ಅಪ್ಲಿಕೇಶನ್‌ ಸಹ ನಿಮಗೆ ಕಾಣಿಸುತ್ತದೆ ಅದನ್ನು ಡೋಪಾಲ್ಟ್‌ ಆಯ್ಕೆ ಮಾಡಬೇಕು.
ಚಿತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಜಸ್ಟ್‌ ಕನ್ನಡ ಬಳಸುವುದು ಹೇಗೆ?

ಜಸ್ಟ್‌ ಕನ್ನಡ ಬಳಸುವುದು ಹೇಗೆ?

ಮೇಲೆ ತಿಳಿಸಿದ ವಿಧಾನದಲ್ಲಿ ಡೀಪಾಲ್ಟ್ ಆಗಿ ಜಸ್ಟ್‌ ಕನ್ನಡ ಆಯ್ಕೆ ಮಾಡಿದ ನಂತರ ನಿಮಗೆ ಇನ್‌ಪುಟ್‌ ಮೆಥಾಡ್‌ ನಲ್ಲಿ ಕನ್ನಡ ಮತ್ತು ಫೊನೆಟಿಕ್ ಎಂದು ಕಾಣುವಲ್ಲಿ ಕನ್ನಡ ಮಾತ್ರ ಆಯ್ಕೆ ಮಾಡಿಕೊಳ್ಳಿ.

ಫೋನೆಟಿಕ್‌ ಆಯ್ಕೆ ಅನುಕೂಲ

ಫೋನೆಟಿಕ್‌ ಆಯ್ಕೆ ಅನುಕೂಲ

ಇನ್‌ಪುಟ್‌ ಮೆಥಾಡ್‌ನಲ್ಲಿ ಫೋನೆಟಿಕ್‌ ಆಯ್ಕೆ ಮಾಡಿದರೆ, ಇಂಗ್ಲೀಷ್‌ ಲೆಟರ್‌ಗಳಿಂದ ಕನ್ನಡ ಟೈಪ್ ಮಾಡುವವರಿಗೆ ಅನುಕೂಲ ವಾಗುತ್ತದೆ.

ಕನ್ನಡ ಆಯ್ಕೆಯ ಅನುಕೂಲ

ಕನ್ನಡ ಆಯ್ಕೆಯ ಅನುಕೂಲ

ಇನ್‌ಪುಟ್‌ ಮೆಥಾಡ್‌ ನಲ್ಲಿ ಕನ್ನಡ ಆಯ್ಕೆ ಮಾಡಿಕೊಂಡರೆ ಕೀಬೋರ್ಡ್‌ ಸಹ ಕನ್ನಡ ಅಕ್ಷರಗಳನ್ನೇ ಹೊಂದಿರುತ್ತದೆ.

ಕನ್ನಡ ಟೈಪ್‌ ಹೇಗೆ

ಕನ್ನಡ ಟೈಪ್‌ ಹೇಗೆ

ನಿಮ್ಮ ಅಭಿಪ್ರಾಯವನ್ನು ಮೆಸೇಜಂರ್‌, ಫೇಸ್‌ಬುಕ್‌, ವಾಟ್ಸಾಪ್ ಅಪ್ಲಿಕೇಶನ್‌ಗಳಲ್ಲಿ ಟೆಕ್ಸ್ಟ್‌ ಬಾರ್‌ ಟಚ್‌ಮಾಡಿದಾಗ ಅಲ್ಲಿ ಗೋಳಾಕಾರದ ಒಂದು ಕೀ ಇರುತ್ತದೆ. ಅದನ್ನು ಟಚ್‌ಮಾಡುವ ಮೂಲಕ ಇಂಗ್ಲೀಷ್ ಅಥವಾ ಕನ್ನಡ ಟೈಪ್‌ ಮಾಡಬಹುದು.

 ಟೈಪಿಂಗ್ ಸುಲಭ

ಟೈಪಿಂಗ್ ಸುಲಭ

ನೀವು ಕಂಪ್ಯೂಟರ್‌ನಲ್ಲಿ ಕನ್ನಡ ಟೈಪ್ ಮಾಡುವುದನ್ನು ತಿಳಿದಿದ್ದರೇ ಟೈಪಿಂಗ್‌ ಸುಲಭ. ಹೊಸ ಬಳಕೆದಾರರಾದಲ್ಲಿ 5 ಸಂದೇಶಗಳನ್ನು ಕಳುಹಿಸುವುದರಲ್ಲಿ ಕೀಬೋರ್ಡ್‌ ಹಿಡಿತ ಸಿಗುತ್ತದೆ.

Best Mobiles in India

English summary
Now you can type Kannada in your Smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X