ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಫೋಟ, ವಿಮಾನದಲ್ಲಿ ಡಿವೈಸ್ ಬ್ಯಾನ್

Written By:

ಫೋನ್ ಬ್ಯಾಟರಿ ಚಾರ್ಜ್‌ನಲ್ಲಿರುವಾಗ ಅಥವಾ ಬಿಸಿಯಾದಾಗ ಸ್ಫೋಟಗೊಂಡ ಎಷ್ಟೋ ಉದಾಹರಣೆಗಳನ್ನು ನೀವು ನೋಡಿರುತ್ತೀರಿ. ಇದು ಕಡಿಮೆ ಗುಣಮಟ್ಟದ ಬ್ಯಾಟರಿ ಇಲ್ಲವೇ ಚಾರ್ಜರ್ ಕಾರಣದಿಂದ ಎಂಬುದಾಗಿ ಎಷ್ಟೋ ಲೇಖನಗಳಲ್ಲಿ ನಾವು ಮಾಹಿತಿಯನ್ನು ತಿಳಿಸಿದ್ದೆವು. ಆದರೆ ಉತ್ತಮ ಕಂಪೆನಿಯ ಫೋನ್‌ಗಳೂ ಕೂಡ ಇದೇ ಕಾರಣದಿಂದಾಗಿ ಸ್ಫೋಟಗೊಳ್ಳುತ್ತಿರುವ ವರದಿ ಈಗೀಗ ಬೆಳಕಿಗೆ ಬರುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?

ಇಂದಿನ ಲೇಖನದಲ್ಲಿ ಇಂತಹ ಸಮಸ್ಯೆಗೆ ಗುರಿಯಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಕುರಿತ ವರದಿಯನ್ನು ನಾವು ನೀಡುತ್ತಿದ್ದು ವಿಮಾನ ಪ್ರಯಾಣದ ಸಂದರ್ಭದಲ್ಲಿ ಚೆಕ್ ಇನ್ ಮಾಡುವಾಗ ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಕೆಂಬ ಹೊಸ ಕಾನೂನನ್ನು ವಿಮಾನ ಸಿಬ್ಬಂದಿಗಳು ಜಾರಿಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ನಿಷೇಧ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ನಿಷೇಧ

ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಯನ್ನು ಗಮನಿಸಿಕೊಂಡು, ಭಾರತೀಯ ಅಧಿಕಾರಿಗಳು ವಿಮಾನದಲ್ಲಿ ಪ್ರಯಾಣಿಕರು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಅನ್ನು ಚೆಕ್ ಇನ್ ಲಗೇಜ್‌ನಲ್ಲಿ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದ್ದಾರೆ.

3,500 mAh ಲಿಥಿಯಮ್ - ಐಯಾನ್ ಬ್ಯಾಟರಿ

3,500 mAh ಲಿಥಿಯಮ್ - ಐಯಾನ್ ಬ್ಯಾಟರಿ

ಏರ್‌ಪೋರ್ಟ್ ಸುದ್ದಿಯ ಪ್ರಕಾರ ನೋಟ್ 7, 3,500 mAh ಲಿಥಿಯಮ್ - ಐಯಾನ್ ಬ್ಯಾಟರಿಯನ್ನು ಒಳಗೊಂಡಿದೆ ಇದು ಮಾರುಕಟ್ಟೆಯಲ್ಲಿರುವ ಇತರ ಫೋನ್‌ಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪಡೆದುಕೊಂಡಿದೆ ಮತ್ತು ಇದು ಬಿಸಿಯಾಗುತ್ತಿದೆ.

ಪವರ್ ಬ್ಯಾಂಕ್‌ಗಳ ಬಳಕೆ

ಪವರ್ ಬ್ಯಾಂಕ್‌ಗಳ ಬಳಕೆ

ಅಂತೆಯೇ ಪವರ್ ಬ್ಯಾಂಕ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಸ್ವಿಚ್ ಆಫ್ ಮಾಡಿರುವ ಸ್ಥಿತಿಯಲ್ಲಿ ಫೋನ್ ಅನ್ನು ಬ್ಯಾಗ್‌ನಲ್ಲಿ ಇರಿಸುವ ಅನುಮತಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ್ದಾರೆ.

ಪ್ರಯಾಣಿಕರ ಸುರಕ್ಷತೆ

ಪ್ರಯಾಣಿಕರ ಸುರಕ್ಷತೆ

ವಿಮಾನದಲ್ಲಿರುವ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಭಾರತೀಯ ಅಧಿಕಾರಿಗಳು ಚೆಕ್ ಇನ್ ಲಗ್ಗೇಜ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಅನ್ನು ಬಳಕೆದಾರರು ಕೊಂಡೊಯ್ಯದಂತೆ ನಿಷೇಧಿಸಿದ್ದಾರೆ.

ಚಾರ್ಜಿಂಗ್ ಮಾಡಿದ ನಂತರ ಫೋನ್ ಸ್ಫೋಟ

ಚಾರ್ಜಿಂಗ್ ಮಾಡಿದ ನಂತರ ಫೋನ್ ಸ್ಫೋಟ

ಚಾರ್ಜಿಂಗ್ ಮಾಡಿದ ನಂತರ ಫೋನ್ ಸ್ಫೋಟಗೊಂಡಿರುವ ಹಲವಾರು ದಾಖಲೆಗಳನ್ನು ಆಧರಿಸಿ ಅಧಿಕಾರಿಗಳು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಬ್ಯಾಟರಿಗಳಲ್ಲಿರುವ ದೋಷ

ಬ್ಯಾಟರಿಗಳಲ್ಲಿರುವ ದೋಷ

ಸ್ಯಾಮ್‌ಸಂಗ್ ಕಂಪೆನಿಯು ಹೇಳಿರುವಂತೆ ಬ್ಯಾಟರಿಗಳಲ್ಲಿರುವ ದೋಷದಿಂದಾಗಿ ಈ ಸ್ಫೋಟ ಉಂಟಾಗಿದೆ ಎಂದಾಗಿದೆ. ಈಗಾಗಲೇ ಕಂಪೆನಿಯು ಮಿಲಿಯಗಟ್ಟಲೆ ಡಿವೈಸ್‌ಗಳನ್ನು ಹಿಂದಕ್ಕೆ ಸ್ವೀಕರಿಸಿದ್ದು ಫೋನ್ ಬಳಸದಿರುವಂತೆ ಬಳಕೆದಾರರಲ್ಲಿ ಕಂಪೆನಿ ಕೇಳಿಕೊಂಡಿದೆ. ವರದಿಗಳ ಪ್ರಕಾರ, ಇದುವರೆಗೆ 30 ಸ್ಫೋಟ ವರದಿಗಳು ಉಲ್ಲೇಖಗೊಂಡಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Considering the safety of flight passengers, Indian authorities have banned flyers from carrying Samsung Galaxy Note 7 in Check-In Luggage.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot