ಫೇಸ್‌ಬುಕ್‌ ಬಳಕೆ: 2016ಕ್ಕೆ ಭಾರತ ನಂ. ಒನ್

By Ashwath
|

ಭಾರತದಲ್ಲಿ ಫೇಸ್‌ಬುಕ್‌ ಬಳಸುವ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವರ್ಷ ಸೋಶಿಯಲ್‌ ಮೀಡಿಯಾದ ಬಳಸುವ ಜನರ ಶೇ.37.4 ಬೆಳವಣಿಗೆ ಸಾಧಿಸಿದ್ದು 2016ರ ವೇಳೆಗೆ ಭಾರತ ಅತಿ ಹೆಚ್ಚು ಫೇಸ್‌ಬುಕ್‌ ಬಳಕೆದಾರರಿರುವ ದೇಶವಾಗಿ ಹೊರ ಹೊಮ್ಮಲಿದೆ ಎಂದು ನೂತನ ಅಧ್ಯಯನ ತಿಳಿಸಿದೆ.

ಡಿಜಿಟಲ್‌ ಮೀಡಿಯಾಗಳ ಬಗ್ಗೆ ಅಧ್ಯಯನ ನಡೆಸುವ ಇ ಮಾರ್ಕೆಟರ್‌ ಈ ವರದಿ ನೀಡಿದ್ದು,ಈ ವರ್ಷ ಭಾರತದ ಬಳಿಕ ಇಂಡೋನೇಷ್ಯಾ ಶೇ.28.7,ಮೆಕ್ಸಿಕೋ ಶೇ.21.1ರಷ್ಟು ಸೋಶಿಯಲ್‌ ಮೀಡಿಯಾದದಲ್ಲಿ ಬೆಳವಣಿಗೆ ಹೊಂದಿದೆ ಎಂದು ತಿಳಿಸಿದೆ.

 ಫೇಸ್‌ಬುಕ್‌ ಬಳಕೆ:  2016ಕ್ಕೆ ಭಾರತ ನಂ. ಒನ್

ಅಮೆರಿಕದಲ್ಲಿ ಅತಿ ಹೆಚ್ಚು ಫೇಸ್‌ಬುಕ್‌ ಬಳಕೆದಾರರಿದ್ದು ಎರಡನೇ ಸ್ಥಾನವನ್ನು ಭಾರತ ಪಡೆದಿದ್ದು, ಸದ್ಯದ ವೇಗ ಗಮನಿಸಿದರೆ 2016ರ ವೇಳೆಗೆ ಭಾರತ ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಹೇಳಿದೆ. ಚೀನಾ ಸರ್ಕಾರ ಫೇಸ್‌ಬುಕ್‌ಗೆ ನಿಷೇದ ಹೇರಿರುವುದರಿಂದ ಚೀನಾದಲ್ಲಿ ಯಾರೊಬ್ಬರು ಫೇಸ್‌ಬುಕ್‌ ಅಕೌಂಟ್‌ ಹೊಂದಿಲ್ಲ ಎಂದು ಅಧ್ಯಯನ ಹೇಳಿದೆ. 2017ರ ವೇಳೆಗೆ ವಿಶ್ವದಲ್ಲಿ 233 ಶತ ಕೋಟಿ ಜನರು ಸೋಶಿಯಲ್‌ ಮೀಡಿಯಾವನ್ನು ಅಕೌಂಟ್‌ ಹೊಂದಲಿದ್ದಾರೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X