ಗೂಗಲ್‌ನಲ್ಲಿ ಸಿಗುತ್ತೆ ಅಂತಾ ಏನೇನು ಹುಡಕಬೇಡಿ!

Posted By:

ಗೂಗಲ್‌ನಲ್ಲಿ ಯಾವ ವಿಷಯವನ್ನು ಎಷ್ಟು ಸರಿ ಬೇಕಾದ್ರೂ ಸರ್ಚ್‌ ಮಾಡಿದ್ರೂ ಯಾರಿಗೂ ಏನು ಗೊತ್ತಾಗುವುದಿಲ್ಲ ಎಂದು ನೀವೇನಾದ್ರೂ ಎಣಿಸಿಕೊಂಡಿದ್ದರೆ ತಪ್ಪಾದಿತು.ಗೂಗಲ್‌ನಲ್ಲಿ ಯಾವ ವ್ಯಕ್ತಿ ಯಾವ ವಿಷಯವನ್ನು ಎಷ್ಟು ಬಾರಿ ಟೈಪ್‌ ಮಾಡಿದ್ದಾರೆ ಎನ್ನುವುದು ರೆಕಾರ್ಡ್‌ ಅಗುತ್ತದೆ. ಒಂದು ವೇಳೆ ಹೆಚ್ಚು ಬಾರಿ ದೇಶ ಅಂತರಿಕ ವಿಚಾರ ಅಥವಾ ಸೂಕ್ಷ ವಿಚಾರಗಳನ್ನು ಟೈಪ್‌ ಮಾಡಿದ್ರೆ ಭಯೋತ್ಪಾದನಾ ನಿಗ್ರಹ ದಳ ನಿಮ್ಮನ್ನು ವಿಚಾರಣೆಗೆ ಒಳಪಡಿಸಬಹುದು!

ಹೌದು.ಗೂಗಲ್‌ ಸೇರಿದಂತೆ ಇಂಟರ್‌ನೆಟ್‌ ದೈತ್ಯ ಕಂಪೆನಿಗಳು ಎಂದು ಎಣಿಸಿರುವ ಮೈಕ್ರೋಸಾಫ್ಟ್‌,ಟ್ವೀಟರ್‌,ಆಪಲ್‌,ಫೇಸ್‌ಬುಕ್‌ ಕಂಪೆನಿಗಳು ತಮ್ಮಲ್ಲಿ ದಾಖಲಾಗಿರುವ ಮಾಹಿತಿಯನ್ನು ಅಮೆರಿಕಗೆ ನೀಡುತ್ತವೆ ಎನ್ನುವುದನ್ನು ನೀವು ಓದಿರಬಹುದು. ಹಾಗಾಗಿ ವೈಯಕ್ತಿಕ ಖಾತೆಗಳಲ್ಲಿರುವ ಮಾಹಿತಿಯನ್ನು ಮಾತ್ರ ಈ ಕಂಪೆನಿಗಳು ನೀಡುವುದಿಲ್ಲ. ಬದಲಾಗಿ ಸರ್ಚ್‌ ಇಂಜಿನ್‌ನಲ್ಲಿ ಏನೆಲ್ಲಾ ಮಾಹಿತಿಗಳು ಹುಡುಕಿದ್ದಾರೆ? ಯಾವ ದೇಶದ ಯಾವ ಮೂಲೆಯಲ್ಲಿ ಮಾಹಿತಿಯನ್ನು ಯಾರು ಹುಡುಕಿದ್ದಾರೆ? ಎನ್ನುವ ಮಾಹಿತಿಯನ್ನು ಕೊಡುತ್ತವೆ. ಈ ಕಂಪೆನಿಗಳು ನೀಡಿದ ಆಧಾರದ ಮೇಲೆ ಅಮೆರಿಕ ಭಯೋತ್ಪಾದನೆಯ ನಿಗ್ರಹ ದಳ ಐಪಿ ಅಡ್ರೆಸ್‌ ಹುಡುಕಿಕೊಂಡು ನಿಮ್ಮ ಮನೆ ತಟ್ಟಿದ್ದರೂ ಆಶ್ಚರ್ಯವಿಲ್ಲ.

ಗೂಗಲ್‌ನಲ್ಲಿ ಸಿಗುತ್ತೆ ಅಂತಾ ಏನೇನು ಹುಡಕಬೇಡಿ!

ಈಗ ವಿಶ್ವದ ಮಾಧ್ಯಮಗಳಲ್ಲಿ ಅಮೆರಿಕದ ಲೇಖಕಿಯೊಬ್ಬರು ಸುದ್ದಿಯಾಗುತ್ತಿದ್ದಾರೆ. ಫೋರ್ಬ್ಸ್‌ ಮ್ಯಾಗಜಿನ್‌ನ ಹವ್ಯಾಸಿ ಬರಹಗಾರ್ತಿ‌ ಮಿಷೆಲೆ ಕ್ಯಾಲಟನೋ ಹೊಸ ಕುಕ್ಕರ್‌ಗಾಗಿ ಗೂಗಲ್‌ನಲ್ಲಿ 'pressure cookers' ಅಂತ ಸರ್ಚ್‌ ಮಾಡುತ್ತಿದ್ದಾರಂತೆ.ಈ ಸಂದರ್ಭ‌ದಲ್ಲಿ ಲೇಖಕಿ ಮಗ ಯಾವುದೋ ನ್ಯೂಸ್‌ ವೆಬ್‌ಸೈಟ್‌ನಲ್ಲಿ ಬಾಂಬ್‌ ತಯಾರಿಸುವ ಸುದ್ದಿ ಓದಿದ್ದನಂತೆ. ಈ ಎರಡು ಸರ್ಚ್‌‌ ಆದ ವಾರದಲ್ಲೇ ಬೋಸ್ಟನ್‌‌ನಲ್ಲಿ ಬಾಂಬ್‌ ಸ್ಪೋಟ ಸಂಭವಿಸಿದೆ.ಉಗ್ರರು ಇಲ್ಲಿ ಬಾಂಬ್‌ನ್ನು ಪ್ರೆಷರ್‌ ಕುಕ್ಕರ್‌ನಲ್ಲಿಟ್ಟು ಸ್ಪೋಟಿಸಿದ್ದರು.

ಬಾಂಬ್‌ ಸ್ಟೋಟ ನಡೆಸಿದ ನಂತರ ತನಿಖೆಯನ್ನು ಆರಂಭಿಸಿದ ಅಮೆರಿಕ ಭಯೋತ್ಪಾದನೆಯ ನಿಗ್ರಹ ದಳ ಆ ಸ್ಟೋಟದ ಸಂದರ್ಭದಲ್ಲಿ ಯಾರೆಲ್ಲ ಇಂಟರ್‌ನೆಟ್‌‌ನಲ್ಲಿ ಏನೆಲ್ಲಾ ಮಾಹಿತಿ ಹುಡುಕಿದ್ದಾರೆ ಎನ್ನುವುದನ್ನು ಟ್ಯ್ರಾಕ್‌ ಮಾಡಿದ್ದಾರೆ. ಕಾಕತಾಳೀಯವೆಂಬಂತೆ ಇದೇ ಸಂದರ್ಭದಲ್ಲಿ ಈ ಲೇಖಕಿ ಕಂಪ್ಯೂಟರ್‌ ಸರ್ಚ್‌ನಲ್ಲಿ ಪ್ರೆಷರ್‌ ಕುಕ್ಕರ್‌ ಮತ್ತು ಬಾಂಬ್‌ ಕೀವರ್ಡ್‌ ದಾಖಲಾಗಿದ್ದರಿಂದ ತನಿಖಾ ತಂಡ ಐಪಿ ಅಡ್ರೆಸ್‌ ಹುಡುಕುತ್ತ ಈ ಲೇಖಕಿ ಮನೆಗೆ ಬಂದು ವಿಚಾರಿಸಿದ್ದಾರೆ.

ನಂತರ ತನಿಖಾ ಆರಂಭಿಸಿದ ಬಳಿಕ ಇವರನ್ನು ಸಾಕಷ್ಟು ಬಾರಿ ತನಿಖೆ ನಡೆಸಿದೆ. ಕೊನೆಗೆ ಇವರಿಗೂ ಉಗ್ರ ಸಂಘಟನೆಗೂ ಏನು ಸಂಬಂಧವಿಲ್ಲ ಎಂದು ತಿಳಿದು ವಿಚಾರಣೆಯನ್ನು ನಿಲ್ಲಿಸಿದೆಯಂತೆ. ಈಗ ಲೇಖಕಿ ತನ್ನ ಬ್ಲಾಗ್‌ನಲ್ಲಿ ಸರ್ಚಿಂಗ್‌ನಿಂದ ಅದ ತೊಂದರೆಯನ್ನು ವಿವರಿಸಿದ್ದು, ಜಗತ್ತಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ.

ಇದನ್ನೂ ಓದಿ: ಏನಿದು ಗೂಗಲ್‌ ಸ್ಟ್ರೀಟ್‌ ವ್ಯೂ?

Please Wait while comments are loading...
Opinion Poll

Social Counting