2020ರಲ್ಲಿ ನಂಬರ್‌ ಒನ್‌ ಸ್ಥಾನದಿಂದ ಕೆಳಗಿಳಿಯಲಿದೆ ಶಿಯೋಮಿ!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಹೊಸ ಬಗೆಯ ಸ್ಮಾರ್ಟ್‌ಫೊನ್‌ಗಳ ಭರಾಟೆ ನಡೆಯುತ್ತಲೇ ಇರುತ್ತೆ. ಭಿನ್ನ ವಿಭಿನ್ನ ಫೀಚರ್ಸ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗ್ತಾನೆ ಇರುತ್ತವೆ. ಇದರಿಂದ ಸಹಜವಾಗಿಯೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪೈಪೋಟಿ ಇದ್ದೆ ಇರುತ್ತೆ. ಸಧ್ಯ ಕಳೆದ ಎರಡು ವರ್ಷಗಳಿಂದ ಶಿಯೋಮಿ ಸ್ಮಾರ್ಟ್‌ಫೋನ್‌ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲ ನಂಬರ್‌ ಒನ್‌ ಸ್ಥಾನದಲ್ಲಿ ಮುಂದುವರೆದಿತ್ತು. ಆದರೆ 2020ರಲ್ಲಿ ಈ ಸ್ಥಾನವನ್ನ ಶಿಯೋಮಿ ಕಳೆದುಕೊಳ್ಳುವ ಸಾಧ್ಯತೆ ಇದೆ.

ಚೀನಾ

ಹೌದು ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಎನಿಸಿಕೊಂಡಿರೋ ಶಿಯೋಮಿ ಮುಂದಿನ ವರ್ಷದ ವೇಳೆಗೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಿಂದ ಜಾರಿಕೊಳ್ಳಲಿದೆಯಂತೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಬಗೆಯ ಫಿಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಸ್ಮಾರ್ಟ್‌ಫೋನ್‌ ಕಂಪೆನಿಯಾಗಿರೋ ಶಿಯೋಮಿ ಕಂಪೆನಿಗೆ ಮುಂದಿನ ವರ್ಷ ಇತರ ಸ್ಮಾರ್ಟ್‌ಫೋನ್ ತಯಾರಕರಾದ ಒಪ್ಪೊ, ವಿವೊ, ರಿಯಲ್‌ಮಿ ಮತ್ತು ಒನ್‌ಪ್ಲಸ್ ಜೊತೆಗೆ ಸ್ಯಾಮ್‌ಸಂಗ್ ಬಾರಿ ಪೈಪೋಟಿ ನೀಡಲಿದ್ದು ನಂಬರ್‌ ಒನ್‌ ಸ್ಥಾನಕ್ಕೆ ಲಗ್ಗೆ ಹಾಕುವ ಸಾಧ್ಯತೆ ಇದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡಾಟಾ

ಸದ್ಯ ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ವರದಿಯ ಪ್ರಕಾರ, 2019 ಕ್ಯೂ1ರ ಮೊದಲ ತ್ರೈಮಾಸಿಕದ ಕೊನೆಯಲ್ಲಿ, ಶಿಯೋಮಿಯು 30.6% ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಸ್ಯಾಮ್‌ಸಂಗ್ 22.6% ನಷ್ಟು ಪಾಲನ್ನು ಪಡೆದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆದಾಗ್ಯೂ, 2019 ಕ್ಯೂ3 ರ ಹೊತ್ತಿಗೆ, ಶಿಯೋಮಿಯ ಮಾರುಕಟ್ಟೆ ಪಾಲು 27.1% ಕ್ಕೆ ಇಳಿದಿದ್ದರೆ ಸ್ಯಾಮ್‌ಸಂಗ್ ಮಾರುಕಟ್ಟೆ ಪಾಲು 18.9% ಕ್ಕೆ ಇಳಿದಿದೆ. ಆದರೆ ವಿವೋ (15.2%), ರಿಯಲ್‌ಮಿ (14.3%), ಒಪ್ಪೋ (11.8%) ಮತ್ತು ಇತರರು (12.7%) ಇನ್ನುಳಿದ ಸ್ಥಾನದಲ್ಲಿದ್ದಾರೆ.

ಪ್ರೀಮಿಯಂ

ಇನ್ನು ಸ್ಮಾರ್ಟ್‌ಫೋನ್‌ಗಳ ಪ್ರೀಮಿಯಂ ವಿಭಾಗದಲ್ಲಿ, ಆಪಲ್ ಇನ್ನೂ 2019 ಕ್ಯೂ 3 ರಲ್ಲಿ 51.3% ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, 2023 ರ ವೇಳೆಗೆ ಭಾರತೀಯ ಮೊಬೈಲ್ ಮಾರುಕಟ್ಟೆ 252.8 ಬಿಲಿಯನ್ ರೂ.ಗಳನ್ನು ಮುಟ್ಟುವ ನಿರೀಕ್ಷೆಯಿದೆ. ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಯಾಗಿದೆ. ಮತ್ತೊಂದೆಡೆ, ಮೊಬೈಲ್ ಪರಿಕರಗಳ ಮಾರುಕಟ್ಟೆಯ 70% ಇನ್ನೂ ಅಸಂಘಟಿತವಾಗಿ ಉಳಿದಿದ್ದು ಇದು 2026 ರ ವೇಳೆಗೆ 4 ಬಿಲಿಯನ್ ತಲುಪುವ ನಿರೀಕ್ಷೆಯಿದೆ.

ರಿಯಲ್‌ಮಿ

ಮುಂದಿನ ದಿನಗಳಲ್ಲಿ ರಿಯಲ್‌ಮಿ ತನ್ನ ಮಧ್ಯ ಶ್ರೇಣಿಯ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್‌ ಮಾಡಿದಾಗ ಶಿಯೋಮಿ ಬಾರಿ ಪೈಪೋಟಿಯನ್ನ ಎದುರಿಸಬೇಕಾಗಿದ್ದು, ನಂಬರ್‌ ಒನ್‌ ಸ್ಥಾನದಿಂದ ಕೆಳಗಿಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಇನ್ನು 2020 ರಲ್ಲಿ ಐಎನ್‌ಆರ್ 5000 ರೂ ನಿಂದ 10000 ರೂ ಒಳಗಿನ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ 49% ಮತ್ತು ಐಎನ್‌ಆರ್ 10000ರೂ ಗಳಿಂದ ಐಎನ್‌ಆರ್ 25000ರೂ ನಡುವಿನ ಸ್ಮಾರ್ಟ್‌ಫೋನ್‌ಗಳು 44% ಮಾರಾಟವಾಗುವ ನಿರೀಕ್ಷೆಯಿದ್ದು ಈ ಅವಕಾಶವನ್ನ ರಿಯಲ್‌ಮಿ, ವಿವೊ, ಮತ್ತು ಒಪ್ಪೋ ಇತರರು ಬಳಸಿಕೊಳ್ಳುತ್ತಾರೆ. ಇದರಿಂದ ಶಿಯೋಮಿ ಸ್ಥಾನಕ್ಕೆ ದಕ್ಕೆ ಬರೋದು ಖಂಡಿತ ಎಂದು ಹೇಳಲಾಗ್ತಿದೆ.

Most Read Articles
Best Mobiles in India

Read more about:
English summary
Chinese electronics giant Xiaomi is likely to slip from the top spot in the Indian smartphone market by next year, a place it has held for the past two years. The industry experts believe that Samsung could resurface as the leader, alongside emerging smartphone manufacturers such as BBK-owned Oppo, Vivo, Realme and OnePlus among others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X