ಫೇಸ್‌ಬುಕ್ ಬಗ್: ಚೆನ್ನೈ ವಿದ್ಯಾರ್ಥಿಗೆ 8 ಲಕ್ಷ ರೂಪಾಯಿ ಬಹುಮಾನ
ಫೇಸ್‌ಬುಕ್‌ನಲ್ಲಿ ಒಂದು ಬಗ್ ಹುಡುಕಿದ್ದಕ್ಕಾಗಿ ತಮಿಳುನಾಡಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ಫೇಸ್‌ಬುಕ್ 8 ಲಕ್ಷ ರೂಪಾಯಿ ನೀಡಿದೆ.
ಫೇಸ್‌ಬುಕ್‌ನಲ್ಲಿ ಬೇರೆಯವರು ಆಪ್‌ಲೋಡ್ ಮಾಡಿರುವ ಯಾವುದಾದರೂ ಫೋಟೋವನ್ನು ಡಿಲೀಟ್ ಮಾಡಬೇಕಾದ್ರೆ ಒಂದು ವಿಧಾನವನ್ನು ಅನುಸರಿ ಡಿಲೀಟ್ ಮಾಡಬೇಕಾಗುತ್ತದೆ. ಡಿಲೀಟ್ ಮಾಡಬೇಕಾದ ಫೋಟೋದ ಕೆಳಗಡೆ ಇರುವ option ಬಟನ್ ಕ್ಲಿಕ್ ಮಾಡಿ Report/Remove ಆಯ್ಕೆಯನ್ನು ಆರಿಸಿ ನಂತರ ಫೋಟೋವನ್ನು untag ಅಥವಾ Remove ಮಾಡಬೇಕಾಗುತ್ತದೆ.
ಆದರೆ ಇಷ್ಟೇಲ್ಲ ಕೆಲಸ ಮಾಡದೇ ಸುಲಭವಾಗಿ ಬಳಕೆದಾರರಿಗೆ ಗೊತ್ತಿಲ್ಲದೇ ಫೋಟೋಗಳನ್ನು ಅವರ ಅಕೌಂಟ್‌ನಿಂದಲೇ ಡಿಲೀಟ್ ಮಾಡಬಹುದು ಎಂದು ಅರುಲ್ ಫೇಸ್‌ಬುಕ್‌ಗೆ ತಿಳಿಸಿಕೊಟ್ಟಿದ್ದರು.

ಚೆನ್ನೈನ 21 ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿದ್ಯಾರ್ಥಿ ಅರುಲ್ ಕುಮಾರ್ ಹೊಸ ಉದ್ಯೋಗಕ್ಕಾಗಿ ಹುಡುಕಾಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಯಾರೋ ಒಬ್ಬರು ಫೇಸ್‌ಬುಕ್ ತನ್ನ ಬಳಕೆದಾರರ ಖಾತೆಯನ್ನು ರಕ್ಷಿಸಲು ಹ್ಯಾಕರ್‌ಗಳಿಗೆ ಉತ್ತೇಜನ ನೀಡುತ್ತಿದ್ದು, ಫೇಸ್‌ಬುಕ್‌ನಲ್ಲಿರುವ ಬಗ್‌ಗಳನ್ನು ತಿಳಿಸಿಕೊಟ್ಟು ಅದನ್ನು ಯಾರಿಗೂ ಪ್ರಯೋಗ ಮಾಡದೇ 24 ಗಂಟೆಯೊಳಗೆ ತಿಳಿಸಿಕೊಟ್ಟಲ್ಲಿ, ಫೇಸ್‌ಬುಕ್ ಆ ಹ್ಯಾಕರ್‌ಗಳಿಗೆ 1500 ಡಾಲರ್ ನೀಡುತ್ತದೆ ಎನ್ನುವ ವಿಷಯವನ್ನು ಹೇಳಿದ್ದರಂತೆ.ಈ ಮಾಹಿತಿ ತಿಳಿದು ಅರುಲ್ ಕುಮಾರ್ ಬಗ್ ಕಂಡು ಹಿಡಿದ ಹಿನ್ನೆಲೆಯಲ್ಲಿ ಫೇಸ್‌ಬುಕ್ ಇವರಿಗೆ 8 ಲಕ್ಷ ರೂಪಾಯಿ ನೀಡಿದೆ.
ಅರುಲ್ ಕುಮಾರ್ ಬ್ಲಾಗ್ ಒದಲು ಇಲ್ಲಿ ಕ್ಲಿಕ್ ಮಾಡಬಹುದು : arulxtronix.blogspot
ಇದನ್ನೂ ಓದಿ: ಫೇಸ್‌ಬುಕ್ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು


Click it and Unblock the Notifications








