ಅಂತೂ ಬಂತೂ 'ಇಂಡಿಯನ್‌ ಮೋಟಾರ್‌ಸೈಕಲ್‌'ಗಳಿಗೆ ಟಚ್‌ಸ್ಕ್ರೀನ್ ಸಿಸ್ಟಮ್‌

By Suneel
|

ಅಂತೂ ಬಂತೂ ಮೋಟರ್ ಸೈಕಲ್‌ಗಳಿಗೂ ಟಚ್‌ ಸ್ಕ್ರೀನ್‌ ಸಿಸ್ಟಮ್‌. ಇಷ್ಟು ದಿನ ಕಾರುಗಳಲ್ಲಿ ಮಾತ್ರ ಟಚ್‌ ಸ್ಕ್ರೀನ್‌ ಮಾಹಿತಿ ಮತ್ತು ಮನರಂಜನೆ ನೀಡುವ ಸಿಸ್ಟಮ್‌ ಇತ್ತು. ಅಥವಾ ಕೆಲವರು ಮಾಹಿತಿ ಮತ್ತು ಮನರಂಜನೆಗಾಗಿ ಸ್ಮಾರ್ಟ್‌ಫೋನ್‌ಗಳನ್ನೇ ವಾಹನಗಳಲ್ಲಿ ಬಳಸುತ್ತಿದ್ದರು. ಇನ್ನುಮುಂದೆ ಈ ಫೀಚರ್ ಮೋಟಾರ್‌ ಸೈಕಲ್‌ಗಳಲ್ಲಿ ಇರಲಿದೆ.

ವಿಶೇಷ ಅಂದ್ರೆ 'ಇಂಡಿಯನ್‌ ಮೋಟಾರ್‌ಸೈಕಲ್' ಕಂಪನಿಯ ಮೋಟಾರ್ ಸೈಕಲ್‌ಗಳಲ್ಲಿ ಟಚ್‌ ಸ್ಕ್ರೀನ್ ಸಿಸ್ಟಮ್‌ ಇರಲಿದ್ದು, ಹೊಸ ರೈಡ್‌ ಕಮ್ಯಾಂಡ್ ಸಿಸ್ಟಮ್‌ ಅನ್ನು ಕಂಪನಿ ಸಂಯೋಜಿಸುತ್ತಿದೆಯಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಮೋಟಾರ್‌ ಸೈಕಲ್‌ ಪ್ರಿಯರಂತು ತಪ್ಪದೇ ಓದಿರಿ.

'ಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದು

 'ಇಂಡಿಯನ್‌ ಮೋಟಾರ್‌ಸೈಕಲ್‌' ಕಂಪನಿ

'ಇಂಡಿಯನ್‌ ಮೋಟಾರ್‌ಸೈಕಲ್‌' ಕಂಪನಿ

'ಇಂಡಿಯನ್‌ ಮೋಟಾರ್‌ಸೈಕಲ್‌' ಉತ್ಮಾದನಾ ಕಂಪನಿಯು ಹೊಸ ರೈಡ್‌ ಕಮ್ಯಾಂಡ್ ಸಿಸ್ಟಮ್‌ ಅನ್ನು ಮೋಟಾರ್‌ಸೈಕಲ್‌ಗಳಿಗೆ ಸಂಯೋಜಿಸುತ್ತಿದೆಯಂತೆ. ಕಂಪನಿಯು ಛೀಫ್‌ಟೈನ್‌ ಮತ್ತು ರೋಡ್‌ಮಾಸ್ಟರ್‌ ಮೋಟಾರ್‌ಸೈಕಲ್‌ಗಳಲ್ಲಿ ಸಿಸ್ಟಮ್‌ಗಳನ್ನು 2017ರಿಂದ ಸಂಯೋಜಿಸುವ ಬಗ್ಗೆ ಮಾಹಿತಿ ಪ್ರಕಟಿಸಿದೆ.

 ಟಚ್ ಸ್ಕ್ರೀನ್‌ ಸಿಸ್ಟಮ್‌

ಟಚ್ ಸ್ಕ್ರೀನ್‌ ಸಿಸ್ಟಮ್‌

ಮೋಟಾರ್‌ ಸೈಕಲ್‌ನಲ್ಲಿ ಅಳವಡಿಸುವ ಹೊಸ ಸಿಸ್ಟಮ್‌ 7 ಇಂಚಿನ ಹೈ ರೆಸಲ್ಯೂಶನ್‌ ಟಚ್‌ ಸ್ಕ್ರೀನ್ ಆಗಿದ್ದು, ಮಾಟಾರ್‌ ಸೈಕಲ್‌ ರೈಡರ್‌ ವಾಹನದ ಸ್ಥಿತಿ, ವೇಗ, ಇಂಧನ( Fuel) ಮಟ್ಟ, ಎರಡೂ ಪ್ರವಾಸಗಳ ಮೀಟರ್‌ ಮತ್ತು ಕಾರ್ಯದಕ್ಷತೆ ಸೂಚಕಗಳನ್ನು ಆಕ್ಸೆಸ್ ಮಾಡಬಹುದಾಗಿದೆ.

ಟಚ್‌ ಸ್ಕ್ರೀನ್‌ ಫೀಚರ್‌

ಟಚ್‌ ಸ್ಕ್ರೀನ್‌ ಫೀಚರ್‌

ಮೋಟಾರ್‌ ಸೈಕಲ್‌ನಲ್ಲಿ ಜಿಪಿಎಸ್‌ ಡಾಟಾವು ಹೋಗುವ ದಾರಿ ಮತ್ತು ಟೈಮ್‌ಅನ್ನು ಸಹ ತೋರಿಸುತ್ತದೆ. ಅಲ್ಲದೇ ಮನರಂಜನೆ, ಬ್ಲೂಟೂತ್‌ ಮತ್ತು ಸಂಚಾರ ಮಾರ್ಗವನ್ನು ತಿಳಿಸುವ ಫೀಚರ್‌ಗಳಿವೆ.

ಫೋನ್‌ನಿಂದ ಟಚ್‌ಸ್ಕ್ರೀನ್‌ಗೆ ಡಾಟಾ ಡೌನ್‌ಲೋಡ್‌

ಫೋನ್‌ನಿಂದ ಟಚ್‌ಸ್ಕ್ರೀನ್‌ಗೆ ಡಾಟಾ ಡೌನ್‌ಲೋಡ್‌

ಮೋಟಾರ್‌ ಸೈಕಲ್‌ ರೈಡರ್‌ ತನ್ನ ಫೋನ್‌ನಲ್ಲಿ ಇರುವ ಫೋನ್‌ಬುಕ್‌ ಮಾಹಿತಿಗಳನ್ನು ಮೋಟಾರ್‌ಸೈಕಲ್‌ನಲ್ಲಿರುವ ಟಚ್‌ಸ್ಕ್ರೀನ್‌ ಸಿಸ್ಟಮ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಟಚ್‌ಸ್ಕ್ರೀನ್‌ ಸಿಸ್ಟಮ್‌ ವಿಶೇಷತೆ

ಟಚ್‌ಸ್ಕ್ರೀನ್‌ ಸಿಸ್ಟಮ್‌ ವಿಶೇಷತೆ

ಮೋಟಾರ್‌ ಸೈಕಲ್‌ ರೈಡರ್ ಟಚ್‌ ಸ್ಕ್ರೀನ್‌ ಸಿಸ್ಟಮ್‌ನಲ್ಲಿ ಮಾಹಿತಿಗಳನ್ನು ಹೆಚ್ಚು ಜೂಮ್‌ ಮಾಡಿ ಮತ್ತು ಜೂಮ್‌ ಕಡಿಮೆ ಮಾಡಿ ಬಳಸುವ ಅವಕಾಶವು ಇರಲಿದೆ. ಅಲ್ಲದೇ ಅತಿ ಬೇಗ ಟಚ್‌ ಸ್ಕೀನ್‌ ಆಕ್ಸೆಸ್ ಮಾಡಲು 'ಟಚ್‌ ಸ್ಕ್ರೀನ್' ಸಾಧನದ ಕೆಳಗೆ 4 ಕ್ವಿಕ್‌ ಬಟನ್‌ಗಳಿದ್ದು ಜಿಪಿಎಸ್‌, ಮ್ಯೂಸಿಕ್‌, ಫೋನ್‌ ಮತ್ತು ಇತರೆ ಮಾಹಿತಿಗಳನ್ನು ಆಕ್ಸೆಸ್‌ ಮಾಡಬಹುದಾಗಿದೆ.

ಇಂಡಿಯನ್‌ ಮೋಟಾರ್‌ಸೈಕಲ್‌ ಕಂಪನಿ ಹೇಳಿದ್ದೇನು?

ಇಂಡಿಯನ್‌ ಮೋಟಾರ್‌ಸೈಕಲ್‌ ಕಂಪನಿ ಹೇಳಿದ್ದೇನು?

ಇದೇ ಮೊಟ್ಟ ಮೊದಲಬಾರಿಗೆ ಮೋಟಾರ್‌ಸೈಕಲ್‌ನಲ್ಲಿ ಅತಿ ಪ್ರಕಾಶಮಾನವಾದ ಸ್ಕ್ರೀನ್‌ ಅನ್ನು ಬಳಸಲಾಗಿದೆ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ಬಳಸುವ ಸ್ಕ್ರೀನ್‌ಗಿಂತ ಅತಿ ಪ್ರಕಾಶಮಾನವಾದ ಸ್ಕ್ರೀನ್ ಎಂದು ಇಂಡಿಯನ್‌ ಹೇಳಿದೆ.

ಇನ್‌ಫೋಟೈನ್‌ಮೆಂಟ್‌  (ಮಾಹಿತಿ+ಮನರಂಜನೆ)

ಇನ್‌ಫೋಟೈನ್‌ಮೆಂಟ್‌ (ಮಾಹಿತಿ+ಮನರಂಜನೆ)

ಇತ್ತೀಚಿನ ದಿನಗಳಲ್ಲಿ ಕಾರುಗಳಲ್ಲಿ ಬಳಸಲಾಗುತ್ತಿರುವ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಇದಾಗಿದೆ, ಇದನ್ನೇ ಇಂಡಿಯನ್‌ ಮೋಟಾರ್‌ಸೈಕಲ್‌ ಕಂಪನಿ ತನ್ನ ಮೋಟಾರ್‌ಸೈಕಲ್‌ನಲ್ಲಿ ಬಳಸುತ್ತಿದ್ದು, ಛೀಫ್‌ಟೈನ್‌ ಮತ್ತು ರೋಡ್‌ಮಾಸ್ಟರ್‌ಗಳಲ್ಲಿ ಸಿಸ್ಟಮ್‌ ಅಳವಡಿಸಲಿದ್ದು ಆಡಿಯೋ ಸಿಸ್ಟಮ್‌ ಇರಲಿದೆ. ಆಡಿಯೋ ಸಿಸ್ಟಮ್‌ 100W ಮತ್ತು 200W ಸ್ಪೀಕರ್‌ಗಳನ್ನು ಹೊಂದಿದೆ.

ರೈಡ್‌ ಕಮ್ಯಾಂಡ್

ರೈಡ್‌ ಕಮ್ಯಾಂಡ್

2017ರ ಇಂಡಿಯನ್‌ ಛೀಫ್‌ಟೈನ್ ಮತ್ತು ರೋಡ್‌ಮಾಸ್ಟರ್‌ಗಳಲ್ಲಿ ಅತ್ಯುನ್ನತ ಟಚ್‌ಸ್ಕ್ರೀನ್ ರೈಡ್ ಕಮ್ಯಾಂಡ್‌ ಇರಲಿದ್ದು, ಇವುಗಳ ಬೆಲೆ ರೂ 34.82 ಲಕ್ಷ ಮತ್ತು ರೂ 37.95 ಲಕ್ಷ ಇರಲಿದೆಯಂತೆ.

ಗಿಜ್‌ಬಾಟ್‌

ಗಿಜ್‌ಬಾಟ್‌

'ಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದು'ಪೋಕ್ಮನ್‌ ಗೋ' ಗೇಮ್‌ ಆಟದಿಂದ ತಿಂಗಳಿಗೆ 25,000 ರೂ ಗಳಿಸಬಹುದು

2,850 ಉದ್ಯೋಗಗಳನ್ನು ತೆಗೆದುಹಾಕಲಿರುವ ಮೈಕ್ರೋಸಾಫ್ಟ್‌! 2,850 ಉದ್ಯೋಗಗಳನ್ನು ತೆಗೆದುಹಾಕಲಿರುವ ಮೈಕ್ರೋಸಾಫ್ಟ್‌!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Indian Motorcycles to get new Ride Command touchscreen infotainment. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X