ಕೇಂದ್ರ ಸರ್ಕಾರದಿಂದ ದೇಶದ ಮೊದಲ ವರ್ಚುವಲ್ ಸೈನ್ಸ್ ಲ್ಯಾಬ್ ಅನಾವರಣ!

|

ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸದ್ಯ ಇದೀಗ ಮಕ್ಕಳಿಗಾಗಿ ದೇಶದ ಮೊದಲ ವರ್ಚುವಲ್ ಸೈನ್ಸ್ ಲ್ಯಾಬ್ ಅನ್ನು ಲಾಂಚ್‌ ಮಾಡಲಾಗಿದೆ. ಭಾರತದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು CSIR ಜಿಜ್ಞಾಸಾ ಕಾರ್ಯಕ್ರಮದ ಅಡಿಯಲ್ಲಿ ಈ ಲ್ಯಾಬ್‌ ಅನ್ನು ಉದ್ಘಾಟನೆ ಮಾಡಿದ್ದಾರೆ.

ವರ್ಚುವಲ್ ಸೈನ್ಸ್ ಲ್ಯಾಬ್

ಹೌದು, ದೇಶದಲ್ಲಿ ವಿಧ್ಯಾರ್ಥಿಗಳ ಉನ್ನತ ಬೆಳವಣಿಗೆಗಾಗಿ ಹೊಸ ಮೊದಲ ವರ್ಚುವಲ್ ಸೈನ್ಸ್ ಲ್ಯಾಬ್ ಅನ್ನು ಲೋಕಾರ್ಪಣೆ ಮಾಡಲಾಗಿದೆ. ಈ ವರ್ಚುವಲ್ ಸೈನ್ಸ್ ಲ್ಯಾಬ್ ವಿದ್ಯಾರ್ಥಿಗಳಿಗೆ ದೇಶಾದ್ಯಂತ ವಿಜ್ಞಾನಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವರ್ಚುವಲ್ ಲ್ಯಾಬ್ ಒಂದು ಹೊಸ ಆರಂಭವಾಗಿದ್ದು, ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಹೊಸ ಆಲೋಚನೆ ಸೃಷ್ಟಿಸಲು ಸಹಾಯವಾಗಲಿದೆ ಎನ್ನಲಾಗಿದೆ. ಹಾಗಾದ್ರೆ ವರ್ಚುವಲ್‌ ಸೈನ್ಸ್‌ ಲ್ಯಾಬ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸಿಎಸ್‌ಐಆರ್

ಕೇಂದ್ರ ಸಚಿವಾಲಯ ಹೊರಡಿಸಿದ ಪ್ರಕಟಣೆಯ ಪ್ರಕಾರ, ಈ ಹೊಸ ಸೌಲಭ್ಯವು ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ದೇಶದ ಯುವಜನೆತಯನ್ನು ವಿಜ್ಞಾನದತ್ತ ಸೆಳೆಯಲಿದೆ ಮತ್ತು ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸುತ್ತದೆ. ಕಳೆದ ವರ್ಷ ನಡೆದ ಸಿಎಸ್‌ಐಆರ್ ಸೊಸೈಟಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿ-ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮವಾದ ಜಿಜ್ಞಾಸಾವನ್ನು ಶ್ಲಾಘಿಸಿದ್ದರು, ಅಲ್ಲದೆ ಆಗಲೇ ವರ್ಚುವಲ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಒತ್ತಿ ಹೇಳಿದರು.

ವರ್ಚವಲ್‌ ಸೈನ್ಸ್‌ ಲ್ಯಾಬ್‌

ದೇಶದಲ್ಲಿಯೇ ಮೊದಲ ವರ್ಚವಲ್‌ ಸೈನ್ಸ್‌ ಲ್ಯಾಬ್‌ ಅನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಈ ಲ್ಯಾಬ್‌ ಮೂಲಕ ದೇಶದಲ್ಲಿರುವ ವಿಜ್ಞಾನಿಗಳ ಜೊತೆಗೆ ವಿಧ್ಯಾರ್ಥಿಗಳು ಸಂಪರ್ಕ ಸಾಧಿಸಲು ಸಹಾಯವಾಗಲಿದೆ. ತಮ್ಮ ಭವಿಷ್ಯದ ಸಂಶೋದನೆಗಳಿಗೆ ಸೂಕ್ತ ಮಾರ್ಗದರ್ಶನ ಪಡೆಯಲು ಅನುಖುಲರವಾಗಲಿದೆ. ಇನ್ನು ಈ ವರ್ಚುವಲ್‌ ಸೈನ್ಸ್‌ ಲ್ಯಾಬ್ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಸಹ ಹೊಂದಿಕೆಯಾಗುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ವರ್ಚುವಲ್‌ ಸೈನ್ಸ್‌ ಲ್ಯಾಬ್‌

ಈ ವರ್ಚುವಲ್‌ ಸೈನ್ಸ್‌ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಆಯ್ಕೆ ಮಾಡಲು ಅವಕಾಶವಿದೆ. ವಿದ್ಯಾರ್ಥಿಗಳ ಆಯ್ಕೆಯ ವಿಚಾರಕ್ಕೆ ಅನುಗುಣವಾಗಿ ಸ್ಟ್ರೀಮ್‌ಗಳ ಪರಿಕಲ್ಪನೆಯನ್ನು ವಿಸರ್ಜಿಸಲಾಗಿದೆ. ಇದರಿಂದ ನೀವು ಈ ಲ್ಯಾಬ್‌ನಲ್ಲಿ ನಿಮಗೆ ಬೇಕಾದ ವಿಚಾರಗಳನ್ನು ತಿಳಿದುಕೊಳ್ಳಲು ಸಾದ್ಯವಾಗಲಿದೆ. ನೀವು ದೇಶದ ಯಾವುದೇ ಮೂಲೆಯಲ್ಲಿದ್ದರೂ ಕೂಡ ವಿಚಾರ ಮಂಥನ ಮಾಡಲು ಇದು ಸೂಕ್ತ ವೇದಿಕೆಯಾಗಲಿದೆ ಅನ್ನೊದು ಸರ್ಕಾರದ ಅಭಿಪ್ರಾಯವಾಗಿದೆ.

ವರ್ಚುವಲ್ ಸೈನ್ಸ್ ಲ್ಯಾಬ್

ಇನ್ನು ಈ ಹೊಸ ವರ್ಚುವಲ್ ಸೈನ್ಸ್ ಲ್ಯಾಬ್ ಸೌಲಭ್ಯವನ್ನು ಸಿಎಸ್‌ಐಆರ್ ಜಿಜ್ಞಾಸಾ ಕಾರ್ಯಕ್ರಮದ ಅಡಿಯಲ್ಲಿ ಐಐಟಿ ಬಾಂಬೆಯ ಸಹಭಾಗಿತ್ವದಲ್ಲಿ ಸಿಎಸ್‌ಐಆರ್ ಅಭಿವೃದ್ಧಿಪಡಿಸಿದೆ. ಇದು ಶಾಲಾ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಸಂಶೋಧನೆಯೊಂದಿಗೆ ತರಗತಿಯ ಕಲಿಕೆಗೆ ಅನುಕೂಲವಾಗುತ್ತದೆ. ವರ್ಚುವಲ್ ಲ್ಯಾಬ್‌ನ ಗುರಿ ಪ್ರೇಕ್ಷಕರು. ಇದರಲ್ಲಿ 11-18 ವರ್ಷ ವಯಸ್ಸಿನ ಮಕ್ಕಳು, VI ರಿಂದ XII ತರಗತಿಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಅಲ್ಲದೆ ತಮ್ಮ ಆಕ್ಟಿವಿಟಿಗಳ ಮೂಲಕ ವಿಜ್ಞಾನವನ್ನು ಅನ್ವೇಷಿಸಬಹುದಾಗಿದೆ.ಇದಲ್ಲದೆ ವರ್ಚುವಲ್ ಲ್ಯಾಬ್ ವಿದ್ಯಾರ್ಥಿಗಳಿಗೆ CSIR ಪ್ರಯೋಗಾಲಯಗಳ ವರ್ಚುವಲ್ ಪ್ರವಾಸವನ್ನು ಸಹ ಆಯೋಜಿಸಲಿದೆ. ಇದು ಸಂಶೋಧನಾ ಮೂಲಸೌಕರ್ಯವನ್ನು ಪ್ರದರ್ಶಿಸುತ್ತದೆ. ಇನ್ನು ಈ ವೇದಿಕೆಯು ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ಅನುವು ಮಾಡಿಕೊಡುತ್ತದೆ.

ಸಿಮ್ಯುಲೇಟೆಡ್

ಇದರಿಂದ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಕುತೂಹಲವನ್ನು ಹೆಚ್ಚಿಸಲು ಸಹಾಯ ಮಾಡಲು ಗುಣಮಟ್ಟದ ಸಂಶೋಧನಾ ಮಾನ್ಯತೆ ಮತ್ತು ನವೀನ ಶಿಕ್ಷಣವನ್ನು ಒದಗಿಸಲಾಗುತ್ತದೆ. ಈ ವೇದಿಕೆಯು ಸಿಮ್ಯುಲೇಟೆಡ್ ಪ್ರಯೋಗಗಳು, ಶಿಕ್ಷಣಶಾಸ್ತ್ರ ಆಧಾರಿತ ವಿಷಯ, ವೀಡಿಯೊಗಳು, ಚಾಟ್ ಫೋರಮ್‌ಗಳು, ಅನಿಮೇಷನ್‌ಗಳು, ಗೇಮಿಂಗ್, ರಸಪ್ರಶ್ನೆ, ಸೌಲಭ್ಯ ಹಂಚಿಕೆ, ವೆಬ್‌ನಾರ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಇನ್ನು ಈ ಲ್ಯಾಬ್‌ನಲ್ಲಿ ಎಲ್ಲಾ ವಿಷಯವನ್ನು ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ವಿಷಯ ಲಭ್ಯವಾಗುವ ಸಾಧ್ಯತೆ ಇದೆ.

Most Read Articles
Best Mobiles in India

Read more about:
English summary
The new virtual science lab facility has been developed by CSIR in partnership with IIT Bombay under the CSIR Jigyasa programme.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X