ವಿ,ಬಿಎಸ್‌ಎನ್‌ಎಲ್‌ಗೆ ಸಂಕಷ್ಟ; ಮಿಲಿಯನ್‌ಗಟ್ಟಲೆ ಫೋನ್‌ ಸಂಖ್ಯೆಯಿಂದ ಪೋರ್ಟಿಂಗ್‌ಗಾಗಿ ವಿನಂತಿ

|

ಭಾರತದಲ್ಲಿ ಏರ್‌ಟೆಲ್‌, ಜಿಯೋ, ವಿ ಹಾಗೂ ಬಿಎಸ್‌ಎನ್‌ಎಲ್‌ ಸಂಸ್ಥೆಗಳು ಗ್ರಾಹಕರಿಗೆ ತಮ್ಮದೇ ಆದ ಟೆಲಿಕಾಂ ಸೇವೆಗಳನ್ನು ನೀಡುತ್ತಾ ಬರುತ್ತಿವೆ. ಅದರಲ್ಲೂ ಒಂದು ಕಂಪೆನಿಯ ಪ್ಲ್ಯಾನ್‌ ಇನ್ನೊಂದು ಕಂಪೆನಿ ಪ್ಲ್ಯಾನ್‌ಗಳಿಗೆ ಪೈಪೋಟಿ ನೀಡುತ್ತಿರುವುದು ಗಮನಾರ್ಹ ವಿಷಯ. ಈ ಕಾರಣಕ್ಕೆ ಗ್ರಾಹಕರಿಗೆ ಯಾವುದು ಇಷ್ಟವೋ ಆ ಸೇವೆಯನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶ ಇದ್ದು, ಈ ಸೇವೆಗೆ ಪೋರ್ಟ್‌ ಸೌಲಭ್ಯ ಕಲ್ಪಿಸಲಾಗಿದೆ. ಇದರ ನಡಿವೆ ಭಾರತದಲ್ಲಿ ಎಷ್ಟು ಮಂದಿ ತಮ್ಮ ಸಿಮ್‌ ಆಪರೇಟರ್‌ ಅನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನುವುದನ್ನು ತಿಳಿದರೆ ಅಚ್ಚರಿ ಪಡುತ್ತೀರ.

ಭಾರತ

ಹೌದು, ಭಾರತವು ಜಾಗತಿಕವಾಗಿ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಈ ವಿಷಯದಲ್ಲಿ ಬಳಕೆದಾರರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅದರಂತೆ ಇಲ್ಲಿಯವರೆಗೆ, ವಲಯ 1 ರಲ್ಲಿ, ಗರಿಷ್ಠ ಸಂಖ್ಯೆಯ ಎಮ್‌ಎನ್‌ಪಿ ವಿನಂತಿಗಳನ್ನು ಮಹಾರಾಷ್ಟ್ರದಿಂದ ಸ್ವೀಕರಿಸಲಾಗಿದ್ದು, ವಲಯ 2 ರಲ್ಲಿ ಕರ್ನಾಟಕದಿಂದ ಗರಿಷ್ಠ ವಿನಂತಿಗಳು ಬಂದಿವೆ. ಹಾಗಿದ್ರೆ ಎಲ್ಲೆಲ್ಲಿ ಎಷ್ಟು ಸಂಖ್ಯೆಗಳಿಂದ ಪೋರ್ಟಿಂಗ್‌ಗೆ ವಿನಂತಿ ಬಂದಿವೆ?, ಯಾವ ಸಿಮ್‌ಗಳಿಗೆ ಸಂಕಷ್ಟ?, ಯಾವ ಸಿಮ್‌ಗಳು ಹೆಚ್ಚಿನ ಪ್ರಯೋಜನ ಪಡೆಯುತ್ತಿವೆ ಎಂಬುದನ್ನು ತಿಳಿದುಕೊಳ್ಳಿ.

1900

1900 ನಂಬರ್‌ಗೆ ಕರೆ ಮಾಡುವ ಮೂಲಕ ಪೋರ್ಟಿಂಗ್ ವಿನಂತಿ ಮಾಡಬಹುದು. ಈ ಮೂಲಕ ಗ್ರಾಹಕರು ತಮ್ಮ ಆಯ್ಕೆಯ ಪ್ರಕಾರ ತಮ್ಮ ಆದ್ಯತೆಗಳನ್ನು ಬದಲಾಯಿಸಲು ಸರ್ಕಾರ ಅನುವು ಮಾಡಿಕೊಟ್ಟಿವೆ. ಇನ್ನು ಗ್ರಾಹಕರು ತಮ್ಮ ಆಪರೇಟರ್‌ಗಳ ಆಯ್ಕೆಯನ್ನು ಈ ಸೇವೆಯಲ್ಲಿ ಬದಲಾಯಿಸಬಹುದಾಗಿದೆಯೇ ಹೊರತು ಕರೆ ಮಾಡಲು ಮತ್ತು ಸಂದೇಶ ಕಳುಹಿಸಲು ಅದೇ ಸಂಖ್ಯೆಯನ್ನು ಬಳಸಬಹುದಾಗಿದೆ. ಈ ಪೋರ್ಟಿಂಗ್ ಆಯ್ಕೆ ಉಚಿತವಾಗಿದ್ದು, ಯೋಗ್ಯವಾದ ನೆಟ್‌ವರ್ಕ್ ಪಡೆಯಲು ಆಪರೇಟರ್‌ಗಳ ಆಯ್ಕೆಯಲ್ಲಿ ಬದಲಾವಣೆ ಪಡೆಯಬಹುದಾಗಿದೆ.

ಟ್ರಾಯ್‌ ವರದಿಯಲ್ಲೇನಿದೆ?

ಟ್ರಾಯ್‌ ವರದಿಯಲ್ಲೇನಿದೆ?

ಅಕ್ಟೋಬರ್ 2022 ರ ಮಾಸಿಕ ಟೆಲಿಕಾಂ ಕಾರ್ಯಕ್ಷಮತೆಯ ಕುರಿತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ವರದಿ ಬಿಡುಗಡೆ ಮಾಡಿದ್ದು, 11.81 ಮಿಲಿಯನ್ ನಂಬರ್‌ಗಳಿಂದ ಪೋರ್ಟೆಬಿಲಿಟಿ (MNP) ವಿನಂತಿ ಸ್ವೀಕಾರ ಮಾಡಲಾಗಿದೆಯಂತೆ. ಇದರಲ್ಲಿ ಗಮನಿಸುವ ಅಂಶ ಎಂದರೆ 6.97 ಮಿಲಿಯನ್ ಎಮ್‌ಎನ್‌ಪಿ ವಿನಂತಿಗಳು ವಲಯ 1 ರಿಂದ ಬಂದಿದ್ದರೆ, 4.83 ಮಿಲಿಯನ್ ವಿನಂತಿಗಳು ವಲಯ 2 ರಿಂದ ಬಂದಿವೆ.

ವಿ ಹಾಗೂ ಬಿಎಸ್‌ಎನ್‌ಎಲ್‌ಗೆ ನಷ್ಟ

ವಿ ಹಾಗೂ ಬಿಎಸ್‌ಎನ್‌ಎಲ್‌ಗೆ ನಷ್ಟ

ವೊಡಾಫೋನ್ ಐಡಿಯಾ (Vi) ಮತ್ತು ಭಾರತ ಸಂಚಾರ ನಿಗಮ ಲಿಮಿಟೆಡ್‌ (BSNL) ಗ್ರಾಹಕರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಯಾಕೆಂದರೆ ಏರ್‌ಟೆಲ್ ಮತ್ತು ಜಿಯೋ ಎರಡೂ ತಿಂಗಳ ಅವಧಿಯಲ್ಲಿ ಗ್ರಾಹಕರನ್ನು ಹೆಚ್ಚಾಗಿ ಪಡೆದುಕೊಂಡಿವೆ. ಇದರಿಂದ ವಿ ಹಾಗೂ ಬಿಎಸ್‌ಎನ್‌ಎಲ್‌ ಗ್ರಾಹಕರು ಈ ಕಡೆ ಮುಖ ಮಾಡಿದ್ದಾರೆ ಎಂದು ತೋರುತ್ತಿದೆ.

5G ಕೊರತೆ

5G ಕೊರತೆ

ವಿ ಹಾಗೂ ಬಿಎಸ್‌ಎನ್‌ಎಲ್‌ ಕಂಪೆನಿಗಳು ಈವರೆಗೂ 5G ಸೇವೆಯನ್ನು ಅನುಷ್ಠಾನ ಮಾಡಿಲ್ಲ. ಈ ಕಾರಣಕ್ಕೆ ಇವುಗಳ ಗ್ರಾಹಕರು ಏರ್‌ಟೆಲ್‌ ಹಾಗೂ ಜಿಯೋದ ಕಡೆ ಇನ್ನೂ ಹೆಚ್ಚಿನದಾಗಿ ಮುಖಮಾಡುವ ಸಾಧ್ಯತೆ ಇವೆ ಎನ್ನಲಾಗಿದೆ.

ಎಲ್ಲೆಲ್ಲಿ ಎಷ್ಟು ವಿನಂತಿ ಮಾಡಲಾಗಿದೆ?

ಎಲ್ಲೆಲ್ಲಿ ಎಷ್ಟು ವಿನಂತಿ ಮಾಡಲಾಗಿದೆ?

ಇಲ್ಲಿಯವರೆಗೆ, ವಲಯ 1 ರಲ್ಲಿ, ಗರಿಷ್ಠ ಸಂಖ್ಯೆಯ ಎಮ್‌ಎನ್‌ಪಿ ವಿನಂತಿಗಳನ್ನು ಮಹಾರಾಷ್ಟ್ರದಿಂದ ಸ್ವೀಕರಿಸಲಾಗಿದೆ. ಅಂದರೆ ಸುಮಾರು 62.67 ಮಿಲಿಯನ್ ಸಂಖ್ಯೆಗಳು ಪೋರ್ಟ್‌ಗಾಗಿ ವಿನಂತಿಸಿವೆ. ಇದರ ನಂತರ ಯುಪಿಯಲ್ಲಿ 62.65 ಮಿಲಿಯನ್ ವಿನಂತಿಗಳು ವರದಿಯಾಗಿದ್ದು, ವಲಯ 2 ರಲ್ಲಿ ಕರ್ನಾಟಕದಿಂದ ಸುಮಾರು 56.99 ಮಿಲಿಯನ್ ವಿನಂತಿಗಳು ನೋಂದಣಿಯಾಗಿವೆ. ಇದರ ಬಳಿಕ ಮಧ್ಯಪ್ರದೇಶದಿಂದ ಸುಮಾರು 56.72 ಮಿಲಿಯನ್ ವಿನಂತಿಗಳನ್ನು ಮಾಡಲಾಗಿದೆ. ಇನ್ನು 2022 ರ ಅಂತ್ಯದ ವೇಳೆಗೆ ಒಟ್ಟು ಎಮ್‌ಎನ್‌ಪಿ ವಿನಂತಿಗಳು 759.92 ಮಿಲಿಯನ್ ತಲುಪಿದೆ.

Best Mobiles in India

English summary
Indians Made 11.81 Million Mobile Number Porting Requests.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X