ಇನ್ಫಿನಿಕ್ಸ್ ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ ಫೀಚರ್ಸ್‌ ಬಹಿರಂಗ: ವಿವರ ಇಲ್ಲಿದೆ

|

ಇನ್ಫಿನಿಕ್ಸ್ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಇದರ ಜತೆಗೆ ಕಂಪೆನಿಯು ಈಗ ಆಡಿಯೋ ವಿಭಾಗದಲ್ಲಿ ಹಾಗೂ ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ ವಿಭಾಗದಲ್ಲೂ ಜನಮನ್ನಣೆ ಪಡೆಯಲು ಮುಂದಾಗಿದೆ. ಈ ಮೂಲಕ ಇತರೆ ಕಂಪೆನಿಗಳಿಗೆ ಸ್ಪರ್ಧೆ ನೀಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್‌ಟಿವಿ ಹಾಗೂ ಲ್ಯಾಪ್‌ಟಾಪ್‌ ಮಾರುಕಟ್ಟೆಗೆ ಬರಲಿವೆ. ಸ್ಮಾರ್ಟ್‌ಟಿವಿ ವಿವಿಧ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ಫಿನಿಕ್ಸ್

ಹೌದು, ಇನ್ಫಿನಿಕ್ಸ್ ಕಂಪೆನಿ ಭಾರತದಲ್ಲಿ ಈಗಾಗಲೇ 32Y1 ಎಂಬ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿತ್ತು. ಹಾಗೆಯೇ 43 ಇಂಚಿನ ವೇರಿಯಂಟ್‌ ಸಹ ಇನ್ನೇನು ಕೆಲವು ದಿನಗಳಲ್ಲಿ ಲಭ್ಯ ಆಗಲಿದೆ. ಇದರ ನಡುವೆ ಸಂಸ್ಥೆಯು ಇನ್ಫಿನಿಕ್ಸ್ 43Y1 ಸ್ಮಾರ್ಟ್ ಟಿವಿ ಮತ್ತು ಇನ್‌ಬಾಕ್ಸ್‌ X2 ಪ್ಲಸ್‌ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಲು ನಿಖರ ದಿನಾಂಕವನ್ನು ತಿಳಿಸಿಲ್ಲವಾದರೂ ಸಹ ಅಕ್ಟೋಬರ್‌ ಎರಡನೇ ವಾರದಲ್ಲಿ ಬಿಡುಗಡೆ ಅಗುತ್ತವೆ ಎನ್ನಲಾಗಿದೆ.

ಲ್ಯಾಪ್‌ಟಾಪ್‌

ಅದರಂತೆ ಲ್ಯಾಪ್‌ಟಾಪ್‌ ಸರಣಿಯಲ್ಲಿ ಇನ್ಫಿನಿಕ್ಸ್ ಕಂಪನಿಯು ಇನ್‌ಬಾಕ್ಸ್‌ X1 Neo, ಇನ್‌ಬಾಕ್ಸ್‌ X1 Pro ಮತ್ತು ಇನ್‌ಬಾಕ್ಸ್‌ X1 ಕೋರ್ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಇದರ ನಡುವೆ ತನ್ನ ಮೊದಲ X2 ಸರಣಿಯ ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಲ್ಯಾಪ್‌ಟಾಪ್‌ ಮೂರು ಬಣ್ಣಗಳ ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಇದರ ಪ್ರೊಸೆಸರ್‌ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

ಇನ್ಫಿನಿಕ್ಸ್ 43Y1 ಸ್ಮಾರ್ಟ್ ಟಿವಿ ಫೀಚರ್ಸ್‌

ಇನ್ಫಿನಿಕ್ಸ್ 43Y1 ಸ್ಮಾರ್ಟ್ ಟಿವಿ ಫೀಚರ್ಸ್‌

ಬಜೆಟ್‌ ಬೆಲೆಯಲ್ಲಿ ಉತ್ತಮ ಕ್ವಾಲಿಟಿ ಇರುವ ಸ್ಮಾರ್ಟ್‌ಟಿವಿ ಖರೀದಿಸಬೇಕು ಎಂದುಕೊಂಡಿದ್ದರೆ ಇನ್ಫಿನಿಕ್ಸ್ 43Y1 ಸ್ಮಾರ್ಟ್ ಟಿವಿ ಒಳ್ಳೆಯ ಆಯ್ಕೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಟಿವಿ 43 ಇಂಚಿನ 300nits ಬ್ರೈಟ್‌ನೆಸ್‌ ಆಯ್ಕೆ ಇರುವ ಡಿಸ್‌ಪ್ಲೇ ಜೊತೆಗೆ ಈ FHD+ ರೆಸಲ್ಯೂಶನ್‌ ಫೀಚರ್‌ ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಸ್ಮಾರ್ಟ್‌ಟಿವಿ ಯಾವ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಸುಳಿವು ನೀಡಿಲ್ಲ. ವಿಶೇಷ ಎಂದರೆ ಕೈಗೆಟಕುವ ಬೆಲೆಯಲ್ಲಿ ಈ ಸ್ಮಾರ್ಟ್‌ಟಿವಿ ಲಭ್ಯವಾಗಲಿದೆ ಎಂದಷ್ಟೇ ಕಂಪೆನಿ ದೃಢಪಡಿಸಿದೆ.

ಸ್ಮಾರ್ಟ್‌ಟಿವಿ

ಲೀಕ್‌ ಆದ ಮಾಹಿತಿಗಳ ಪ್ರಕಾರ ಸ್ಮಾರ್ಟ್‌ಟಿವಿ ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್, ಸೋನಿ ಲೈವ್, ZEE5, ಎರೋಸ್‌ನೌ, ಆಜ್‌ತಕ್ ಮತ್ತು ಹಾಟ್‌ಸ್ಟಾರ್‌ನಂತಹ ಇನ್‌ಬಿಲ್ಟ್‌ ಓಟಿಟಿ ಅಪ್ಲಿಕೇಶನ್‌ಗಳನ್ನು ಪಡೆದಿದೆ ಎನ್ನುವ ಮಾತುಗಳು ದೃಢವಾಗಿ ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ, ಡಾಲ್ಬಿ ಸ್ಟಿರಿಯೊ ಸೆಟಪ್‌ನೊಂದಿಗೆ 20W ಸ್ಪೀಕರ್ ಆಯ್ಕೆಯನ್ನು ಇದು ಹೊಂದಿದೆ ಎಂದು ನಂಬಲಾಗಿದೆ.

ಇನ್‌ಬಾಕ್ಸ್‌ X2 ಲ್ಯಾಪ್‌ಟಾಪ್‌ ವಿವರ

ಇನ್‌ಬಾಕ್ಸ್‌ X2 ಲ್ಯಾಪ್‌ಟಾಪ್‌ ವಿವರ

ಇನ್ನು ಸ್ಮಾರ್ಟ್‌ಟಿವಿ ಜೊತೆಗೆ ಬಿಡುಗಡೆಗೆ ಸಜ್ಜಾಗಿರುವ ಇನ್ಫಿನಿಕ್ಸ್ ಇನ್‌ಬಾಕ್ಸ್‌ X2 ಪ್ಲಸ್ ಲ್ಯಾಪ್‌ಟಾಪ್‌ ಬಗ್ಗೆಯೂ ಹೆಚ್ಚಿನ ವಿಷಯ ಹರಿದಾಡುತ್ತಿದೆ. ಈ ಲ್ಯಾಪ್‌ಟಾಪ್‌ 5.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, FHD ರೆಸಲ್ಯೂಶನ್‌ ಆಯ್ಕೆ ಪಡೆದಿದೆ ಎಂದು ನಂಬಲಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ ಬ್ಯಾಕ್‌ಲಿಟ್ ಕೀಬೋರ್ಡ್‌ ಫೀಚರ್‌ ಒಳಗೊಂಡಿದೆ ಎಂದು ತಿಳಿದುಬಂದಿದೆ. ಈ ಲ್ಯಾಪ್‌ಟಾಪ್‌ ಮೂರು ಬಣ್ಣಗಳಲ್ಲಿ ಲಭ್ಯ ಇರಲಿದ್ದು, ಅದರಲ್ಲಿ ಗ್ರೇ, ರೆಡ್‌ ಹಾಗೂ ಬ್ಲೂ ಬಣ್ಣಗಳನ್ನು ಹೊಂದಿದೆ ಎನ್ನುವ ಮಾತು ವೈರಲ್‌ ಆದ ಮಾಹಿತಿ ಪ್ರಕಾರ ಕೇಳಿಬರುತ್ತಿವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಅಲ್ಯೂಮಿನಿಯಂ ಮಿಶ್ರಲೋಹದ ಕ್ರಾಫ್ಟ್ ವಿನ್ಯಾಸವನ್ನು ಪಡೆದಿದ್ದು, ಇದು 1.65 ಕೆಜಿ ತೂಕ ಹಾಗೂ 14.9 ಎಂಎಂ ಅಳತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Infinix has made a name for itself in audio segment as well as in laptop and smart TV segment in India. In between, new Smart TV and laptops are now gearing up for launch in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X