Subscribe to Gizbot

8 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ ಇನ್‌ಫೋಕಸ್ ರೂ 4,999 ಕ್ಕೆ

Written By:

ಯುಎಸ್ ಆಧಾರಿತ ಕಂಪೆನಿ ಇನ್‌ಫೋಕಸ್, ತನ್ನ ಪ್ರಥಮ ಸ್ಮಾರ್ಟ್‌ಫೋನ್ ಮೂಲಕ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಇದು ಇನ್‌ಫೋಕಸ್ ಎಮ್2 ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ಈ ಫೋನ್ ಸ್ನ್ಯಾಪ್‌ಡೀಲ್‌ನಲ್ಲಿ ರೂ 4,999 ಕ್ಕೆ ಲಭ್ಯವಾಗುತ್ತಿದೆ.

8 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ ಇನ್‌ಫೋಕಸ್ ರೂ 4,999 ಕ್ಕೆ

ಫೋಕ್ಸನ್ ಕಂಪೆನಿ ಇನ್‌ಫೋಕಸ್ ಮೊಬೈಲ್‌ಗಳನ್ನು ತಯಾರು ಮಾಡಿದ್ದು ವಿಶ್ವದಲ್ಲಿಯೇ ಮೊಬೈಲ್ ಉತ್ಪನ್ನ ಕಂಪೆನಿಗಳಲ್ಲಿ ಇದೂ ಒಂದಾಗಿದೆ. ಇನ್ನು ಫೋನ್‌ನ ವಿಶೇಷತೆಗಳತ್ತ ಗಮನ ಹರಿಸಿದಾಗ ಇದು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಲ್ಲಿದೆ. ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಈ ಫೋನ್ ಬಂದಿದ್ದು 1.3GHZ ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಜೊತೆಗೆ 1ಜಿಬಿ RAM ಫೋನ್‌ನಲ್ಲಿದೆ. ಇನ್ನು 8 ಜಿಬಿ ಆಂತರಿಕ ಸಂಗ್ರಹಣೆ ಡಿವೈಸ್‌ನಲ್ಲಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 64ಜಿಬಿಗೆ ವಿಸ್ತರಿಸಬಹುದು.

8 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ ಇನ್‌ಫೋಕಸ್ ರೂ 4,999 ಕ್ಕೆ

ಇನ್ನು ಫೋನ್ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮುಂಭಾಗದಲ್ಲಿ ಹೊಂದಿದ್ದು ರಿಯರ್ ಕ್ಯಾಮೆರಾ ಕೂಡ ಇದೇ ಅನುಪಾತ ಪಡೆದುಕೊಂಡಿದೆ. ಎಲ್‌ಇಡಿ ಫ್ಲ್ಯಾಶ್ ಕೂಡ ಡಿವೈಸ್‌ನಲ್ಲಿದೆ. ಫೋನ್ ಬ್ಲ್ಯೂಟೂತ್, ವೈಫೈ, ದೀರ್ಘ ಬಾಳಿಕೆಯ ಬ್ಯಾಟರಿಯನ್ನು ಒಳಗೊಂಡು ಅತ್ಯುತ್ತಮವಾಗಿದೆ.

English summary
This article tells about InFocus M2 With 8-Megapixel Front and Rear Cameras Launched at Rs. 4,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot