Just In
Don't Miss
- News
ಪ್ರತ್ಯೇಕ ರೈಲ್ವೇ ಬಜೆಟ್ ಮಂಡಿಸುವಂತೆ ಬಿಹಾರ ಸಿಎಂ ಆಗ್ರಹ
- Movies
ದರ್ಶನ್ಗೆ ಈ ನಟಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ: ಅದಕ್ಕೆ ಕಾರಣ ಇದೇನೆ!
- Sports
ಟಾಸ್ ಗೆದ್ದು ಯಾವುದು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನೇ ಮರೆತ ರೋಹಿತ್!: ತಮಾಷೆಯ ವಿಡಿಯೋ
- Finance
Union Budget: ಕೇಂದ್ರ ಬಜೆಟ್ ಸಂಪೂರ್ಣ ವಿವರ ಮೊಬೈಲ್ನಲ್ಲಿ ಪಡೆಯುವುದು ಹೇಗೆ?
- Automobiles
ಸಾಮಾನ್ಯ ಜನರಲ್ಲದೇ ಸೆಲೆಬ್ರಿಟಿಗಳು ಕೂಡ ಟೊಯೊಟಾ ಇನೋವಾ ಕಾರನ್ನು ಇಷ್ಟಪಡಲು ಕಾರಣಗಳು...
- Lifestyle
Horoscope Today 21 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್‌ಸ್ಟಾಗ್ರಾಮ್ ಮೇನ್ ಪೇಜ್‌ನಲ್ಲಿ ಈ ಬದಲಾವಣೆ ಆಗಲಿದೆ; ಇನ್ಮುಂದೆ ಹೊಸ ನೋಟ!
ಮೆಟಾ ಒಡೆತನದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್‌ನಲ್ಲಿ ಕಾಲಕಾಲಕ್ಕೆ ತಕ್ಕಂತೆ ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ಪ್ರತಿ ಪ್ಲಾಟ್‌ಫಾರ್ಮ್‌ಗಳೂ ಸಹ ವಿವಿಧ ರೀತಿಯ ಸೇವೆ ನೀಡುವ ಮೂಲಕ ಬಳಕೆದಾರರಿಗೆ ತಮ್ಮದೇ ಆದ ಸೇವೆ ನೀಡುತ್ತಾ ಬರುತ್ತಿವೆ. ಇದರ ನಡುವೆ ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ಫೀಚರ್ಸ್‌ವೊಂದನ್ನು ಪರಿಚಯಿಸಲಾಗಿದ್ದು, ಹಲವಾರು ಬಳಕೆದಾರರಿಗೆ ಇದು ಅತ್ಯಾವಶ್ಯಕವಾಗಿದೆ.

ಹೌದು, ಈಗಾಗಲೇ ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಾ ಬರುತ್ತಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಬದಲಾವಣೆ ಆಗಿದೆ. ಅದರಲ್ಲೂ ಈ ಬದಲಾವಣೆ ಆನ್‌ಲೈನ್ ಶಾಪಿಂಗ್ ವಿಭಾಗದಲ್ಲಿ ಕಂಡುಬಂದಿದ್ದು, ಬಳಕೆದಾರರಿಗೆ ಮತ್ತಷ್ಟು ವಿಶೇಷ ಸೇವೆಯನ್ನು ಈ ಮೂಲಕ ನೀಡಲು ಮೆಟಾ ಮುಂದಾಗಿದೆ. ಹಾಗಿದ್ರೆ ಶಾಪಿಂಗ್ ವಿಭಾಗದಲ್ಲಿ ಆದ ಬದಲಾವಣೆ ಏನು?, ಯಾಕೆ ಇನ್‌ಸ್ಟಾಗ್ರಾಮ್ ಈ ನಿರ್ಧಾರ ಮಾಡಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಆನ್‌ಲೈನ್ ಶಾಪಿಂಗ್ ಮಾಡಲು ಹಲವಾರು ಇ-ಕಾಮರ್ಸ್ ಸೈಟ್‌ಗಳು ಲಭ್ಯ ಇವೆಯಾದರೂ ಬಹುಪಾಲು ಜನರು ಇನ್‌ಸ್ಟಾಗ್ರಾಮ್ ಮೂಲಕವೂ ಖರೀದಿ ಮಾಡುವುದು ಸಹಜವಾದ ವಿಷಯವಾಗಿದೆ. ಅದರಲ್ಲೂ ಶೂಗಳಿಂದ ಫೋನ್ ಪರಿಕರಗಳು ಹಾಗೂ ಬಟ್ಟೆಗಳಿಂದ ಆಹಾರದವರೆಗೆ ಖರೀದಿ ಮಾಡಬಹುದಾದ ವ್ಯವಸ್ಥೆ ಇದರಲ್ಲಿದ್ದು, ಈ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಶಾಪಿಂಗ್ ಸೌಲಭ್ಯ ಬಹಳ ಸುಲಭವಾಗಿದೆ.

ಮೆಟಾ-ಮಾಲೀಕತ್ವದ ಆಪ್ ಆಗಿರುವ ಇನ್‌ಸ್ಟಾಗ್ರಾಮ್ ಶಾಪಿಂಗ್ ವಿಷಯದಿಂದ ತನ್ನ ಗಮನವನ್ನು ಬದಲಾಯಿಸುತ್ತಿರುವಂತೆ ಕಂಡುಬರುತ್ತಿದೆ. ಹಾಗೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಬದಲಾವಣೆಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದೆ.

ಫೆಬ್ರವರಿಯಿಂದ, ಇನ್‌ಸ್ಟಾಗ್ರಾಮ್ ತನ್ನ ನ್ಯಾವಿಗೇಷನ್ ಅನ್ನು ಬದಲಾಯಿಸಲು ಪ್ರಾರಂಭಿಸಲಿದ್ದು, ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಆಸಕ್ತಿಗಳೊಂದಿಗೆ ಹಂಚಿಕೊಳ್ಳಲು ಮತ್ತು ಸಂಪರ್ಕಿಸಲು ಸುಲಭವಾಗುತ್ತದೆ ಎಂದು ಮೆಟಾ ಮಾಲೀಕತ್ವದ ಸೇವೆ ತನ್ನ ಅಧಿಕೃತ ಬ್ಲಾಗ್‌ನಲ್ಲಿ ಪ್ರಕಟಿಸಿದೆ.

ಬದಲಾವಣೆ ಏನು?
ಆಪ್‌ನ ಕೆಳಭಾಗದಲ್ಲಿದ್ದ ನ್ಯಾವಿಗೇಷನ್ ಬಾರ್ ಈಗ ಮಧ್ಯದಲ್ಲಿ "+" ಐಕಾನ್ ನೀಡಲಾಗಿದ್ದು ಇದು ಕಂಟೆಂಟ್ ರಚಿಸಲು ಶಾರ್ಟ್‌ಕಟ್ ಮತ್ತು ಇದರ ಬಲಕ್ಕೆ ರೀಲ್ಸ್ ಟ್ಯಾಬ್ ಅನ್ನು ಹೊಂದಿರಲಿದೆ. ಈ ಬದಲಾವಣೆಯ ಭಾಗವಾಗಿ ಇನ್‌ಸ್ಟಾಗ್ರಾಮ್ ತನ್ನ ಶಾಪ್ ಟ್ಯಾಬ್ ಅನ್ನು ತೆಗೆದುಹಾಕಲು ಮುಂದಾಗಿದೆ.

ಈ ರೀತಿ ಮಾಡಿದ್ದಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿನ ಶಾಪಿಂಗ್ ನ ಜನಪ್ರಿಯತೆ ಕಡಿಮೆಯಾಗಿದೆ ಅಂತಲ್ಲ. ಆದರೆ, ಫೀಡ್, ಸ್ಟೋರಿಗಳು, ರೀಲ್‌ಗಳು, ಜಾಹೀರಾತುಗಳು ಮತ್ತು ಹೆಚ್ಚಿನವುಗಳಾದ್ಯಂತ ಜನರು ಮತ್ತು ವ್ಯವಹಾರಗಳಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಶಾಪಿಂಗ್ ಅನುಭವಗಳಲ್ಲಿ ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ಹಾಗೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸ್ಟೋರ್ ಅನ್ನು ರಚಿಸಲು ಮತ್ತು ಸ್ಟೋರ್ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ ಎಂದು ಇನ್‌ಸ್ಟಾಗ್ರಾಮ್ ಮಾಹಿತಿ ನೀಡಿದೆ.

ಈ ಬದಲಾವಣೆ ಯಾಕೆ?
ತನ್ನ ಶಾಪಿಂಗ್ ಫೀಚರ್ಸ್ ಅನ್ನು ಕಡಿತಗೊಳಿಸಲು ಇನ್‌ಸ್ಟಾಗ್ರಾಮ್ ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದಕ್ಕೆ ಕಾರಣ ಸಹ ನೀಡಲಾಗಿದ್ದು, ಕಂಪೆನಿಯು ತನ್ನ ಇ-ಕಾಮರ್ಸ್ ವ್ಯವಹಾರಕ್ಕಿಂತ ಹೆಚ್ಚಾಗಿ ತನ್ನ ಜಾಹೀರಾತು ವ್ಯವಹಾರದ ಮೇಲೆ ಕೇಂದ್ರೀಕರಿಸಲು ಬಯಸಿದೆ ಎಂದು ತಿಳಿಸಿದೆ.

ಇನ್‌ಸ್ಟಾಗ್ರಾಮ್ ಮೊದಲ ಬಾರಿಗೆ 2018 ರಲ್ಲಿ ಶಾಪಿಂಗ್ ಫೀಚರ್ಸ್ ಅನ್ನು ಘೋಷಣೆ ಮಾಡಿತ್ತು. ಇದಾದ ನಂತರ ಸಾಂಕ್ರಾಮಿಕ ಸಮಯದಲ್ಲಿ, ಇನ್‌ಸ್ಟಾಗ್ರಾಮ್ ಹೆಚ್ಚು ಶಾಪರ್ಸ್ ಅನ್ನು ಆಕರ್ಷಿಸಲು ವ್ಯವಹಾರಗಳಿಗೆ ಹೆಚ್ಚಿನ ಫೀಚರ್ಸ್ ಅನ್ನು ಸಹ ಪರಿಚಯಿಸಿತು.

ಇನ್‌ಸ್ಟಾಗ್ರಾಮ್ ಸಿಇಒ ಆಡಮ್ ಮೊಸ್ಸೆರಿ ಈ ಸಂಬಂಧ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಫೋಟೋ ಮತ್ತು ವಿಡಿಯೋ ಹಂಚಿಕೆ ಸೇವೆಯನ್ನು ಸರಳಗೊಳಿಸುವುದು ಬದಲಾವಣೆಯ ಹಿಂದಿನ ಆಲೋಚನೆಯಾಗಿದೆ. ನಾವು ಜನರು ಇಷ್ಟಪಡುವ ವಿಷಯಗಳ ಮೇಲೆ ಸೌಲಭ್ಯ ತರಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಾವು ಮೂರು ವಿಷಯಗಳ ಮೇಲೆ ಕೇಂದ್ರೀಕರಿಸಿದ್ದೇವೆ ಎಂದು ವಿವರಿಸಿದ್ದಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470