ಬಳಕೆದಾರರಿಗೆ ಏಳು ಹೊಸ ಫೀಚರ್ಸ್‌ ಪರಿಚಯಿಸಿದ ಇನ್‌ಸ್ಟಾಗ್ರಾಮ್‌!

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಬಳಕೆದಾರರ ನೆಚ್ಚಿನ ಫೋಟೋ ಮತ್ತು ವೀಡಿಯೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ಬಳಕೆದಾರರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳವನ್ನು ಕಾಣಬಹುದಾಗಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಕೂಡ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಅಪ್ಡೇಟ್‌ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್‌ನಲ್ಲಿ ಇನ್‌ಸ್ಟಾಗ್ರಾಮ್‌ ಏಳು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಏಳು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಅನುಭವ ದೊರೆಯಲಿದೆ ಎಂದು ಹೇಳಲಾಗಿದೆ. ಅದರಂತೆ ಇನ್‌ಸ್ಟಾಗ್ರಾಮ್‌ ಬಳಕೆದಾರರು ಇನ್ಮುಂದೆ ಫೀಡ್ ಮೂಲಕ ಸ್ಕ್ರೋಲಿಂಗ್ ಮಾಡುತ್ತಿರುವಾಗಲೂ ನೇರ ಸಂದೇಶವನ್ನು ಸ್ನೇಹಿತರೊಂದಿಗೆ ಶೇರ್‌ ಮಾಡಬಹುದಾಗಿದೆ. ಇದರ ಜೊತೆಗೆ, ಆಪಲ್ ಮ್ಯೂಸಿಕ್ ಮತ್ತು ಅಮೆಜಾನ್ ಪ್ರೈಮ್‌ನಿಂದ ಶಾರ್ಟ್‌ ಪ್ರಿವ್ಯೂ ಆಫ್‌ ಮ್ಯೂಸಿಕ್‌ ಅನ್ನು ಸ್ನೇಹಿತರ DM ಗಳೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯವನ್ನು ಸೇರಿಸಲಾಗಿದೆ. ಇನ್ನುಳಿದಂತೆ ಇನ್‌ಸ್ಟಾಗ್ರಾಮ್‌ ಸೇರಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ರೌಸ್ ಮಾಡುವಾಗಲೂ ರಿಪ್ಲೇ ಮಾಡಿ

ಬ್ರೌಸ್ ಮಾಡುವಾಗಲೂ ರಿಪ್ಲೇ ಮಾಡಿ

ಇನ್‌ಸ್ಟಾಗ್ರಾಮ್‌ನಲ್ಲಿ ಫೀಡ್ ಬ್ರೌಸ್ ಮಾಡುವಾಗಲೂ ನೀವು ಸ್ವೀಕರಿಸಿದ ಮೆಸೇಜ್‌ಗೆ ರಿಪ್ಲೇ ಮಾಡುವುದಕ್ಕೆ ಈ ಹೊಸ ಫೀಚರ್ಸ್‌ ಅವಕಾಶ ನೀಡಲಿದೆ. ಇದರಿಂದ ಬಳಕೆದಾರರು ತಾವು ಪರಿಶೀಲಿಸುತ್ತಿದ್ದ ಪೋಸ್ಟ್‌ನ ಟ್ರ್ಯಾಕ್ ಅನ್ನು ಕಳೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಇನ್‌ಸ್ಟಾಗ್ರಾಮ್‌ ಶೇರ್‌ ಮಾಡಿದ ಇಮೇಜ್‌ ಫೀಡ್ ಮೂಲಕ ಸ್ಕ್ರೋಲ್ ಮಾಡುವಾಗ ಬಳಕೆದಾರರು ಮೆಸೇಜ್‌ಗೆ ರಿಪ್ಲೇ ಮಾಡಿದರೆ ಅದು ಬ್ಯಾಕ್‌ಗ್ರೌಂಡ್‌ನಲ್ಲಿ ಪೋಸ್ಟ್ ಅನ್ನು ಬ್ಲರ್‌ ಮಾಡಲಿದೆ. ಇದರಲ್ಲಿ ಮೆಸೇಜ್‌ ವಿಂಡೋದ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಆದರೆ ಬಳಕೆದಾರರು ರಿಪ್ಲೇ ಮಾಡುವುದಕ್ಕೆ ಮೆಸೇಜ್‌ ಬಾರ್‌ನ ಕೆಳಭಾಗದಲ್ಲಿ ಅವಕಾಶ ದೊರೆಯಲಿದೆ.

ಕ್ವಿಕ್ಲಿ ಸೆಂಡ್‌ ಫ್ರೆಂಡ್ಸ್‌

ಕ್ವಿಕ್ಲಿ ಸೆಂಡ್‌ ಫ್ರೆಂಡ್ಸ್‌

ಇನ್ನು ಇನ್‌ಸ್ಟಾಗ್ರಾಮ್‌ ಬಳಕೆದಾರರು ಫೀಡ್‌ನಲ್ಲಿದ್ದ ಲೊಕೇಶನ್‌ ಟ್ರ್ಯಾಕ್ ಅನ್ನು ಕಳೆದುಕೊಳ್ಳದೆ ತಮ್ಮ ಸ್ನೇಹಿತರೊಂದಿಗೆ ಪೋಸ್ಟ್ ಅನ್ನು ರಿಶೇರ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದಕ್ಕಾಗಿ ಶೇರ್‌ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಹಿಡಿದಿಟ್ಟುಕೊಳ್ಳುವ ಮೂಲಕ, ಬಳಕೆದಾರರು ನಿಮ್ಮ ಹತ್ತಿರದ ಸ್ನೇಹಿತರಿಗೆ ಪೋಸ್ಟ್‌ಗಳನ್ನು ಸುಲಭವಾಗಿ ಶೇರ್‌ ಮಾಡಬಹುದು.

ಆನ್‌ಲೈನ್‌ನಲ್ಲಿ ಯಾರಿದ್ದಾರೆ ಎಂದು ಪರೀಕ್ಷಿಸಿ

ಆನ್‌ಲೈನ್‌ನಲ್ಲಿ ಯಾರಿದ್ದಾರೆ ಎಂದು ಪರೀಕ್ಷಿಸಿ

ಇನ್‌ಸ್ಟಾಗ್ರಾಮ್‌ನ ಹೊಸ ಫೀಚರ್ಸ್‌ಗಳಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆ ಎಂದು ತಿಳಿಯುವ ಫೀಚರ್ಸ್‌ ಕೂಡ ಸೇರಿದೆ. ಅದರಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡಲು ಬಳಕೆದಾರರಿಗೆ ಸುಲಭವಾಗುವಂತೆ, ಬಳಕೆದಾರರ ಇನ್‌ಬಾಕ್ಸ್‌ನ ಮೇಲ್ಭಾಗದಲ್ಲಿ ಯಾರು ಆನ್‌ಲೈನ್‌ನಲ್ಲಿದ್ದಾರೆ ಎಂದು ತಿಳಿಯಬಹುದು. ಅಂದರೆ ಆ ಕ್ಷಣದಲ್ಲಿ ಯಾರು ಚಾಟ್ ಮಾಡಲು ಮುಕ್ತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

ಪ್ಲೇ ಮಾಡಿ, ವಿರಾಮಗೊಳಿಸಿ ಮತ್ತು ರಿ-ಪ್ಲೇ ಮಾಡಿ

ಪ್ಲೇ ಮಾಡಿ, ವಿರಾಮಗೊಳಿಸಿ ಮತ್ತು ರಿ-ಪ್ಲೇ ಮಾಡಿ

ಇನ್‌ಸ್ಟಾಗ್ರಾಮ್‌ ಈಗ ಬಳಕೆದಾರರಿಗೆ ಮ್ಯೂಸಿಕ್‌ನ 30-ಸೆಕೆಂಡ್ ಪ್ರಿವ್ಯೂ ಅನ್ನು ನೇರವಾಗಿ ಚಾಟ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ಶೇರ್‌ ಮಾಡಲು ಅನುಮತಿಸುತ್ತದೆ. ಈ ಫೀಚರ್ಸ್‌ ಆಪಲ್ ಮ್ಯೂಸಿಕ್ ಮತ್ತು ಅಮೆಜಾನ್ ಮ್ಯೂಸಿಕ್‌ನಿಂದ ಚಾಲಿತವಾಗಿದೆ. ಇದು ಶೀಘ್ರದಲ್ಲೇ ಸ್ಪಾಟಿಫೈ ಅನ್ನು ಕೂಡ ಬೆಂಬಲಿಸುತ್ತದೆ.

ಸದ್ದಿಲ್ಲದೆ ಸಂದೇಶಗಳನ್ನು ಕಳುಹಿಸಿ

ಸದ್ದಿಲ್ಲದೆ ಸಂದೇಶಗಳನ್ನು ಕಳುಹಿಸಿ

ಈಗ ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಸಂದೇಶಗಳಲ್ಲಿ "@silent" ಅನ್ನು ಸೇರಿಸುವ ಮೂಲಕ ಬೇರೆಯವರಿಗೆ ತಿಳಿಸದೆಯೇ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇದು ಶಾರ್ಟ್‌ಕಟ್ ನೋಟಿಫಿಕೇಶನ್‌ ಇಲ್ಲದೆ ಸಂದೇಶವನ್ನು ತಲುಪಿಸುತ್ತದೆ.

ಲೋ-ಫೈನಲ್ಲಿ ಇರಿಸಿಕೊಳ್ಳಿ

ಲೋ-ಫೈನಲ್ಲಿ ಇರಿಸಿಕೊಳ್ಳಿ

ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರ ಸಂಭಾಷಣೆಗಳನ್ನು ಹೆಚ್ಚು ವೈಯಕ್ತಿಕವಾಗಿಸಲು ಹೊಸ ಲೋ-ಫೈ ಚಾಟ್ ಥೀಮ್ ಅನ್ನು ಸೇರಿಸಿದೆ.

ಕ್ರಿಯೆಟ್‌ ಪೋಲ್ ವಿಥ್‌ ಫ್ರೆಂಡ್ಸ್‌

ಕ್ರಿಯೆಟ್‌ ಪೋಲ್ ವಿಥ್‌ ಫ್ರೆಂಡ್ಸ್‌

ಇನ್‌ಸ್ಟಾಗ್ರಾಮ್‌ ಇದೀಗ ನೇರವಾಗಿ ಗ್ರೂಪ್‌ ಚಾಟ್‌ನಲ್ಲಿ ಸಮೀಕ್ಷೆಯನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡಲು ಮುಂದಾಗಿದೆ.

ಸದ್ಯ ಇನ್‌ಸ್ಟಾಗ್ರಾಮ್ ಈ ಕ್ಷಣದಲ್ಲಿ ಆಯ್ದ ದೇಶಗಳಲ್ಲಿ ಮಾತ್ರ ಈ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಶೀಘ್ರದಲ್ಲೇ ಇದನ್ನು ಜಗತ್ತಿನಾದ್ಯಂತ ಎಲ್ಲಾ ಬಳಕೆದಾರರಿಗೆ ಪರಿಚಯಿಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

Best Mobiles in India

Read more about:
English summary
This update brings seven new features to the photo and video sharing platform including the ability to share a direct message

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X