ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಗಮನಿಸಿ...ಇನ್ಮುಂದೆ ಈ ಸೇವೆಗೆ ಶುಲ್ಕ ಪಾವತಿ ಮಾಡಬೇಕು!?

|

ಎಲಾನ್‌ ಮಸ್ಕ್‌ ಅವರು ಟ್ವಿಟ್ಟರ್‌ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ ಈ ಪ್ಲಾಟ್‌ಫಾರ್ಮ್‌ನಲ್ಲಿ ಭಾರೀ ಬೆಳವಣಿಗೆ ಕಂಡುಬಂದಿವೆ. ಅದರಲ್ಲೂ ಉದ್ಯೋಗಿಗಳ ವಜಾ ಹಾಗೂ ಕೆಲವು ಸೇವೆಗಳನ್ನು ಪಡೆಯಬೇಕು ಎಂದರೆ ಪಾವತಿ ಮಾಡಬೇಕು ಎಂಬ ನಿರ್ಧಾರಗಳು ಟ್ವಿಟ್ಟರ್‌ ಬಳಕೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅದರಲ್ಲೂ ಬ್ಲೂಟಿಕ್‌ ಚಂದಾದಾರಿಕೆ ಮಾತ್ರ ಭಾರೀ ಸದ್ದು ಮಾಡಿತ್ತು. ವಿಷಯ ಏನೆಂದರೆ ಇದೇ ಚಂದಾದಾರಿಕೆ ಪ್ರಕ್ರಿಯೆ ಇನ್ಮುಂದೆ ಇನ್‌ಸ್ಟಾಗ್ರಾಮ್‌ನಲ್ಲೂ ಕಾಣಿಸಿಕೊಳ್ಳಲಿದೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಗಮನಿಸಿ;ಈ ಸೇವೆಗೆ ಶುಲ್ಕ ಪಾವತಿ ಮಾಡಬೇಕು!?

ಹೌದು, ಮೆಟಾ ಮಾಲೀಕತ್ವದ ಪ್ರಮುಖ ಪ್ಲಾಟ್‌ಫಾರ್ಮ್‌ ಆದ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಮುಖ ಬದಲಾವಣೆ ಸಂಭವಿಸಲಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಗಣ್ಯರು, ತಾರೆಯರು ಇದ್ದು, ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದು ಅವರಿಗೆ ಆದಾಯದ ಒಂದು ಮೂಲವಾಗಿದೆ ಎಂದೂ ಸಹ ಹೇಳಬಹುದು. ಇದನ್ನೇ ಗುರಿಯಾಗಿಸಿಕೊಂಡಿರುವ ಮೆಟಾ ತಾನೂ ಸಹ ಈ ಮೂಲಕ ಆದಾಯ ಗಳಿಸಲು ಸಿದ್ಧತೆ ನಡೆಸಿದೆ. ಹಾಗಿದ್ರೆ, ಮೆಟಾ ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ನೀಡುತ್ತಿರುವ ಶಾಕಿಂಗ್‌ ವಿಷಯ ಏನು?, ಇದರಿಂದ ಇನ್‌ಸ್ಟಾಗ್ರಾಮ್‌ಗೆ ಆಗುವ ಅನುಕೂಲ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲಿಸಿದ ಖಾತೆಗೆ ಶುಲ್ಕ

ಟ್ವಿಟ್ಟರ್‌ ಬ್ಲೂಟಿಕ್‌ ನೀಡಲು ಶಲ್ಕ ಪಡೆದುಕೊಳ್ಳಲು ಮುಂದಾಗಿದೆ. ಇದೇ ಮಾರ್ಗವನ್ನು ಅನುಸರಿಸಿರುವ ಇನ್‌ಸ್ಟಾಗ್ರಾಮ್‌ ಸಹ ಪರಿಶೀಲಿಸಿದ ಖಾತೆಗೆ ಶುಲ್ಕ ವಿಧಿಸಲು ಸಿದ್ಧತೆ ನಡೆಸಿದೆ. ಇನ್ನು ಈ ನಿರ್ಧಾರವನ್ನು ಜಾರಿಗೆ ತಂದರೆ ಖಂಡಿತಾ ಹಲವಾರು ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಶಾಕಿಂಗ್‌ ವಿಷಯವಾಗಲಿದೆ. ಈ ಮೂಲಕ ಅವರು ಹಣ ಪಾವತಿ ಮಾಡಿ ಇನ್‌ಸ್ಟಾಗ್ರಾಮ್‌ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಗಮನಿಸಿ;ಈ ಸೇವೆಗೆ ಶುಲ್ಕ ಪಾವತಿ ಮಾಡಬೇಕು!?
ಇನ್‌ಸ್ಟಾಗ್ರಾಮ್‌ ಪರಿಶೀಲಿಸಿದ ಟಿಕ್‌ನಿಂದ ಪ್ರಯೋಜನ ಏನು?

ಇದೀಗ ಹೇಗೆ ಟ್ವಿಟ್ಟರ್‌ನಲ್ಲಿ ಬ್ಲೂಟಿಕ್‌ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲಿಸಿದ ಬ್ಯಾಡ್ಜ್‌ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೋಸ್ಟ್‌ ಮಾಡಲಾದ ಯಾವುದೇ ಮಾಹಿತಿಯನ್ನು ಜನರು ಸುಲಭವಾಗಿ ನಂಬಬಹುದಾಗಿದೆ. ಹಾಗೂ ಅವರಿಗೆ ವಿಶೇಷ ಸ್ಥಾನಮಾನ ಸಹ ಸಾಮಾಜಿಕ ವಲಯದಲ್ಲಿ ಇರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ IG_NME_PAID_BLUE_BADGE_IDV ಮತ್ತು FB_NME_PAID_BLUE_BADGE_IDV ಎಂದು ಬರೆಯಲಾದ ಸ್ಕ್ರೀನ್‌ ಶಾಟ್‌ವೊಂದನ್ನು ಶೇರ್‌ ಮಾಡಿಕೊಳ್ಳಲಾಗಿದ್ದು, ಈ ಮೂಲಕ ಕೇವಲ ಇನ್‌ಸ್ಟಾಗ್ರಾಮ್‌ ಮಾತ್ರವಲ್ಲದೆ ಫೇಸ್‌ಬುಕ್‌ನಲ್ಲೂ ಸಹ ಈ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದೆ. ಇದರಲ್ಲಿ ಉಲ್ಲೇಖ ಮಾಡಲಾಗಿರುವ IDV ಎಂಬ ಪದ ಗುರುತಿನ ಪರಿಶೀಲನೆ ಎಂದು ತಿಳಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಎಂದಿನಿಂದ ಕಾರ್ಯಾರಂಭ?

ಈ ಪರಿಶೀಲಿಸಿದ ಬ್ಯಾಡ್ಜ್‌ ವ್ಯವಸ್ಥೆ ಯಾವಾಗಲಿಂದ ಬಳಕೆದಾರರಿಗೆ ಲಭ್ಯವಾಗಲಿದೆ ಎಂಬ ಮಾಹಿತಿ ಬಗ್ಗೆ ಮೆಟಾ ಅಧಿಕೃತವಾಗಿ ಇನ್ನು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ ಶೇರ್‌ ಮಾಡಲಾದ ಈ ಸ್ಕ್ರೀನ್‌ ಶಾಟ್‌ ಗಮನಿಸಿದರೆ ಇನ್ನೇನು ಕೆಲವು ದಿನಗಳಲ್ಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಬಳಕೆದಾರರು ಪರಿಶೀಲಿಸಿ ಬ್ಯಾಡ್ಜ್‌ ಪಡೆಯಬಹುದು ಎನ್ನಲಾಗಿದೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಗಮನಿಸಿ;ಈ ಸೇವೆಗೆ ಶುಲ್ಕ ಪಾವತಿ ಮಾಡಬೇಕು!?

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಕ್ಯಾಂಡಿಡ್ ಸ್ಟೋರೀಸ್ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಕ್ಯಾಂಡಿಂಡ್‌ ಚಿತ್ರಗಳನ್ನು ಸೆರೆಹಿಡಿದು ಪೋಸ್ಟ್‌ ಮಾಡಲು ಅನುಕೂಲ ಮಾಡಿಕೊಡುತ್ತದೆ. ಆದರೆ ಇದು ತಮ್ಮದೇ ಆದ ಕ್ಯಾಂಡಿಡ್ ಕಥೆಗಳನ್ನು ಶೇರ್‌ ಮಾಡಿಕೊಳ್ಳುವ ಇತರರಿಗೆ ಮಾತ್ರ ಗೋಚರಿಸುತ್ತದೆ. ಇನ್ನು ಈ ಫೀಚರ್ಸ್‌ ಬೀ ರಿಯಲ್‌ ಎಂಬ ಆಪ್‌ ಹೊಂದಿರುವ ಫೀಚರ್ಸ್‌ ಅನ್ನೇ ಹೋಲಲಿದೆ.

ಟ್ವಿಟ್ಟರ್‌ ಚಂದಾದಾರಿಕೆ ಎಷ್ಟಿದೆ?

ಟ್ವಿಟ್ಟರ್‌ನಲ್ಲಿ ಸದ್ಯಕ್ಕೆ ವೆಬ್‌ ಬಳಕೆದಾರರು ಬ್ಲೂಟಿಕ್‌ ಚಂದಾದಾರಿಕೆ ಪಡೆಯಬೇಕು ಎಂದರೆ ತಿಂಗಳಿಗೆ $8 ( 659 ರೂ. ಗಳು) ಶುಲ್ಕ ಪಾವತಿಸಬೇಕಿದೆ. ಇದು ಪರಿಶೀಲನೆ ಬ್ಯಾಡ್ಜ್ ಮತ್ತು ಇತರ ಪ್ರಯೋಜನಗಳನ್ನು ಹೊಂದಿದ್ದು, ಇದೇ ಚಂದಾದಾರಿಕೆಯನ್ನು ಐಓಎಸ್‌ ಹಾಗೂ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಪಡೆಯಬೇಕು ಎಂದರೆ ತಿಂಗಳಿಗೆ $11(907 ರೂ.ಗಳು) ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು ಈ ಚಂದಾದಾರಿಕೆ ಕ್ರಮ ಸದ್ಯಕ್ಕೆ ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಯುಕೆ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಪೋರ್ಚುಗಲ್ ಮತ್ತು ಸ್ಪೇನ್‌ನಲ್ಲಿ ಮಾತ್ರ ಇದೆ.

ಆದರೆ, ಟ್ವಿಟ್ಟರ್‌ ಈ ಯೋಜನೆಯನ್ನು ಭಾರತಕ್ಕೆ ಪರಿಚಯಿಸಿಲ್ಲ. ಇದೇನಾದರೂ ಭಾರತದಲ್ಲಿ ಜಾರಿಗೆ ಬಂದರೆ ತಿಂಗಳಿಗೆ 999 ರೂ. ಗಳನ್ನು ಪಾವತಿ ಮಾಡಬೇಕಿದೆ. ಇನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತದಲ್ಲಿಯೂ ಈ ಯೋಜನೆ ಘೋಷಿಸಲಾಗುವುದು ಎಂದು ಎಲಾನ್‌ ಮಸ್ಕ್ ದೃಢಪಡಿಸಿದ್ದರು. ಆದರೆ ಟೆಕ್‌ ವಲಯದಲ್ಲಿ ಆಗುತ್ತಿರುವ ಏರು ಪೇರುಗಳಿಂದಾಗಿ ಇನ್ನೂ ಸಹ ಭಾರತದಲ್ಲಿ ಈ ಸೌಲಭ್ಯ ಲಭ್ಯವಾಗಿಲ್ಲ.

Best Mobiles in India

English summary
A major change is about to happen on Instagram, In this, Meta has offered to charge for verified accounts.details are in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X