13 ನೇ ಜನ್ ಡೆಸ್ಕ್‌ಟಾಪ್ ಪ್ರೊಸೆಸರ್ ಲಾಂಚ್‌ ಮಾಡಿದ ಇಂಟೆಲ್; ಇದರ ವೇಗ ಎಷ್ಟು ಗೊತ್ತಾ!?

|

ಇಂಟೆಲ್ ಕಂಪೆನಿಯು ಈಗಾಗಲೇ ಲ್ಯಾಪ್‌ಟಾಪ್‌ ಹಾಗೂ ಕಂಪ್ಯೂಟರ್‌ಗಳಿಗೆ ವಿವಿಧ ಸಾಮರ್ಥ್ಯದ ಪ್ರೊಸೆಸರ್ ಅನ್ನು ಪರಿಚಯಿಸಿದೆ. ಸಿಪಿಯು ಎಂದೂ ಕರೆಯಲ್ಪಡುವ ಪ್ರೊಸೆಸರ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ ತನ್ನ ಕೆಲಸವನ್ನು ಮಾಡಲು ಅಗತ್ಯವಿರುವ ಸೂಚನೆಗಳನ್ನು ಮತ್ತು ಸಂಸ್ಕರಣಾ ಶಕ್ತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ಹೆಚ್ಚು ಶಕ್ತಿಶಾಲಿ ಪ್ರೊಸೆಸರ್ ಇರುವ ಡಿವೈಸ್‌ ಬಳಕೆ ಮೂಲಕ, ವೇಗವಾದ ಕೆಲಸಗಳನ್ನು ಮಾಡಲು ಸಾಧ್ಯ. ಅದರಂತೆ ಇದೀಗ ಇಂಟೆಲ್‌ ಹೊಸ ಪ್ರೊಸೆಸರ್‌ ಅನ್ನು ಅನಾವರಣ ಮಾಡಲಾಗಿದೆ.

ಇಂಟೆಲ್

ಹೌದು, ಇಂಟೆಲ್ ಇಂದು ತನ್ನ 13 ನೇ ಜನ್ ಇಂಟೆಲ್ ಕೋರ್ i9-13900KS ಡೆಸ್ಕ್‌ಟಾಪ್ ಪ್ರೊಸೆಸರ್ ಬಗ್ಗೆ ಘೋಷಣೆ ಮಾಡಿದೆ. ಈ ಪ್ರೊಸೆಸರ್‌ ವಿಶ್ವದ ಅತ್ಯಂತ ವೇಗದ ಡೆಸ್ಕ್‌ಟಾಪ್ ಪ್ರೊಸೆಸರ್ ಆಗಿರಲಿದ್ದು, 6GHz ಗರಿಷ್ಠ ಟರ್ಬೊ ಆವರ್ತನದ ಗಡಿಯಾರದ ವೇಗವನ್ನು ನೀಡುತ್ತದೆ ಎಂದು ಇಂಟೆಲ್‌ ಮಾಹಿತಿ ನೀಡಿದೆ. ಹಾಗಿದ್ರೆ ಇದರ ಇನ್ನಿತರೆ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ಹಾಗೂ ಲಭ್ಯತೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

6GHz ವರೆಗೆ ಗರಿಷ್ಠ ಟರ್ಬೊ ಆವರ್ತನ

6GHz ವರೆಗೆ ಗರಿಷ್ಠ ಟರ್ಬೊ ಆವರ್ತನ

ಹೊಸದಾಗಿ ಪ್ರಾರಂಭಿಸಲಾಗುತ್ತಿರುವ ಡೆಸ್ಕ್‌ಟಾಪ್ ಪ್ರೊಸೆಸರ್ ಇಂಟೆಲ್ ಥರ್ಮಲ್ ವೆಲಾಸಿಟಿ ಬೂಸ್ಟ್‌ನೊಂದಿಗೆ 6GHz ವರೆಗೆ ಗರಿಷ್ಠ ಟರ್ಬೊ ಆವರ್ತನವನ್ನು ನೀಡಲಿದೆ ಎಂದು ಹೇಳಲಾಗಿದೆ. ಹಾಗೆಯೇ ಇದು ಪಿಸಿ ಉದ್ಯಮದಲ್ಲಿ ಓವರ್‌ಕ್ಲಾಕಿಂಗ್ ಇಲ್ಲದೆ ಆ ವೇಗವನ್ನು ತಲುಪುವ ಮೊದಲ ಸಿಪಿಯು ಆಗಿರಲಿದೆ.

ಕೋರ್

13 ನೇ ಜನ್ ಇಂಟೆಲ್‌ ಕೋರ್ i9-13900KS ಪ್ರೊಸೆಸರ್ ಇಂಟೆಲ್ ಅಡಾಪ್ಟಿವ್ ಬೂಸ್ಟ್ ಟೆಕ್ನಾಲಜಿಯೊಂದಿಗೆ ಪ್ಯಾಕ್‌ ಆಗಿರಲಿದ್ದು, ಇದು ಹೆಚ್ಚಿನ ಮಲ್ಟಿಕೋರ್ ಟರ್ಬೊ ಆವರ್ತನಗಳನ್ನು ಅಗತ್ಯಕ್ಕೆ ತಕ್ಕಂತೆ ಅನುಮತಿಸುವ ಹಿನ್ನೆಲೆ ಸುಧಾರಿತ ಗೇಮಿಂಗ್ ಕಾರ್ಯಕ್ಷಮತೆಯನ್ನು ನೀಡಲಿದೆ ಎಂದು ಕಂಪೆನಿಯೇ ತಿಳಿಸಿದೆ.

24 ಕೋರ್‌ಗಳ ಆಯ್ಕೆ

24 ಕೋರ್‌ಗಳ ಆಯ್ಕೆ

ಆರ್ಕಿಟೆಕ್ಚರ್‌ ವಿಷಯಕ್ಕೆ ಬರುವುದಾದರೆ, ಈ ಹೊಸ ಪ್ರೊಸೆಸರ್ ಒಟ್ಟಾರೆ 24 ಕೋರ್‌ಗಳನ್ನು ಹೊಂದಿದ್ದು, ಇದರಲ್ಲಿ ಎಂಟು ಕಾರ್ಯಕ್ಷಮತೆ ಕೋರ್‌ಗಳು ಮತ್ತು 16 ದಕ್ಷ ಕೋರ್‌ಗಳು, 32 ಥ್ರೆಡ್‌ಗಳು ಇರಲಿವೆ. ಈ ಮೂಲಕ ಡಿವೈಸ್‌ನಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ಸಾಮಾನ್ಯವಾಗಿ ನಿರೀಕ್ಷಿಸಬಹುದು.

ಪ್ರೊಸೆಸರ್

ಇದರೊಂದಿಗೆ 150W ಪ್ರೊಸೆಸರ್ ಬೇಸ್ ಪವರ್, 36MB ಇಂಟೆಲ್ ಸ್ಮಾರ್ಟ್ ಕ್ಯಾಶ್ ಹಾಗೂ 16 PCIe 5.0 ಲೇನ್‌ಗಳು ಮತ್ತು ನಾಲ್ಕು PCIe 4.0 ಲೇನ್‌ಗಳನ್ನು ಒಳಗೊಂಡಿದ್ದು, ಒಟ್ಟಾರೆ 20 PCIe ಲೇನ್‌ಗಳು ಇದರಲ್ಲಿವೆ. ಇದಷ್ಟೇ ಅಲ್ಲದೆ ಸ್ಟೋರೇಜ್‌ ವಿಷಯಕ್ಕೆ ಸಂಬಂಧಿಸಿದಂತೆ DDR5 5600 MT/s ಮತ್ತು DDR4 3200 MT/s ವರೆಗೆ ಬೆಂಬಲವನ್ನು ನೀಡಲಿದೆ.

Z790, Z690 ಮದರ್‌ಬೋರ್ಡ್‌ಗಳೊಂದಿಗೆ ಹೊಂದಿಕೆ

Z790, Z690 ಮದರ್‌ಬೋರ್ಡ್‌ಗಳೊಂದಿಗೆ ಹೊಂದಿಕೆ

ಇಂಟೆಲ್ ತನ್ನ 13 ನೇ ಜನ್ ಇಂಟೆಲ್ ಕೋರ್ i9-13900KS ಪ್ರೊಸೆಸರ್ Z790 ಮತ್ತು Z690 ಮದರ್‌ಬೋರ್ಡ್‌ಗಳೊಂದಿಗೆ ಹೊಂದಿಕೊಳ್ಳುತ್ತದಂತೆ. ಅದರಲ್ಲೂ ಇತ್ತೀಚಿನ BIOS ನೊಂದಿಗೆ ಉತ್ತಮ ಗೇಮಿಂಗ್ ಮತ್ತು ಕಂಟೆಂಟ್ ರಚನೆಯ ಅನುಭವಕ್ಕಾಗಿಯೂ ಇದನ್ನು ಶಿಫಾರಸು ಮಾಡಲಾಗಿದೆ.

ಇಂಟೆಲ್‌ ಹೇಳಿದ್ದು ಹೀಗೆ...

ಇಂಟೆಲ್‌ ಹೇಳಿದ್ದು ಹೀಗೆ...

ಕೋರ್ i9-13900KS ನಮ್ಮ 13ನೇ ಜನ್ ಇಂಟೆಲ್ ಕೋರ್ ಡೆಸ್ಕ್‌ಟಾಪ್ ಪ್ರೊಸೆಸರ್ ಕೌಟುಂಬಿಕ ಶ್ರೇಷ್ಠತೆಯನ್ನು ಮುಂದುವರೆಸಿದ್ದು, ನಮ್ಮ ಕಾರ್ಯಕ್ಷಮತೆಯ ಹೈಬ್ರಿಡ್ ಆರ್ಕಿಟೆಕ್ಚರ್‌ನಿಂದ ಸಾಧ್ಯವಾದ ಹೊಸ ಕಾರ್ಯಕ್ಷಮತೆಯನ್ನು ಈ ಮೂಲಕ ಪ್ರದರ್ಶಿಸಲಾಗುತ್ತದೆ. ಹಾಗೆಯೇ 6GHz ವೇಗವನ್ನು ನೀಡಲಾಗುವುದರಿಂದ ಗೇಮರ್‌ಗಳು ಹಾಗೂ ಇತರೆ ವೃತ್ತಿಪರರು ಹೆಚ್ಚಿನ ಅನುಭವ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಇಂಟೆಲ್‌ನ ಈ ವಿಶೇಷ ಆವೃತ್ತಿಯ ಪ್ರೊಸೆಸರ್ ಜನವರಿ 12, 2023 ರಿಂದ ಜಾಗತಿಕವಾಗಿ ಲಭ್ಯವಾಗುತ್ತಿದ್ದು, $699 (ಸುಮಾರು 56,813ರೂ. ಗಳು) ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಹಾಗೆಯೇ ಇದನ್ನು ವಿಶ್ವಾದ್ಯಂತ ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಖರೀದಿ ಮಾಡಬಹುದಾಗಿದೆ.

Best Mobiles in India

English summary
Intel Launches 13th Gen Core i9 Processor Check Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X