ನಿಮ್ಮನ್ನು ವೇಗದ ಲೋಕಕ್ಕೆ ಕೊಂಡೊಯ್ಯಲಿರುವ 5ಜಿ ವಿಶೇಷತೆ

By Shwetha
|

ಮೊಬೈಲ್‌ ಇದ್ದು ಅದರಲ್ಲೂ ಸ್ಮಾರ್ಟ್‌ಪೋನ್‌ ಇದ್ದು ಇಂಟರ್ನೆಟ್ ಇಲ್ಲದಿದ್ದರೆ ಹೇಗ್ರೀ? ಹೇಳಿದ ಹಾಗೆ ಇಂಟರ್ನೆಟ್ ಕನೆಕ್ಷನ್ ಅನ್ನು ನಿಮ್ಮ ಫೋನ್‌ಗೆ ಹಾಕಿಸುವ ಮುನ್ನ ಕೊಂಚ ಇತ್ತ ನೋಡಿ... ನಿಮಗೆ ಪ್ರಯೋಜನಕಾರಿಯಾದ ಮತ್ತು ಸಂತೋಷಕರವಾದ ವಿಷಯವೊಂದನ್ನು ಈ ಲೇಖನದಲ್ಲಿ ನಿಮ್ಮೊಂದಿಗೆ ನಾವು ಹಂಚಿಕೊಳ್ಳುತ್ತಿದ್ದೇವೆ. ಇನ್ನೂ 2ಜಿ 3ಜಿ 4ಜಿ ಗೂ ಬೈ ಹೇಳುವ ಕಾಲ ಬಂದಾಯಿತು, ಇನ್ನು ನಿಮ್ಮನ್ನು ವೇಗವಾದ ಅಂತರ್ಜಾಲ ಪ್ರಪಂಚಕ್ಕೆ ಕೊಂಡೊಯ್ಯಲು ಬರುತ್ತಿದೆ 5 ಜಿ. ಹಾಗಿದ್ದರೆ ಈ 5ಜಿ ಮಾಡುವ ಕರಾಮತ್ತೇನು ಯಾವಾಗ 5ಜಿ ನಿಮಗೆ ಲಭ್ಯವಾಗುವುದು ಅದರ ವಿಶೇಷತೆಗಳೇನು ತಿಳಿಯಬೇಕೇ? ಹಾಗಿದ್ದರೆ ಲೇಖನ ಓದುವುದನ್ನು ಮುಂದುವರಿಸಿ.

#1

#1

ಕಾಲ ಬದಲಾದಂತೆ ಮಾನವ ಬಳಸುವ ಪ್ರತಿಯೊಂದು ವಸ್ತುವಿನಲ್ಲೂ ಹೊಸತನವನ್ನು ಹುಡುಕುತ್ತಾನೆ. ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ಅದೇ ರೀತಿ ತಂತ್ರಜ್ಞಾನ ಕೂಡ ತನ್ನ ಹಳೆಯ ದಾಖಲೆಗಳನ್ನು ಅಳಿಸುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ. ಮಾರುಕಟ್ಟೆಗೆ ಬರಲಿರುವ 5ಜಿ ತಂತ್ರಜ್ಞಾನ ಬಳಕೆದಾರರಲ್ಲಿ ಸಂತಸದ ಅಲೆಯನ್ನು ತರುವುದಂತೂ ಖಂಡಿತ. ಯಾವುದೇ ತೊಡಕಿಲ್ಲದೆ ಇಂಟರ್ನೆಟ್‌ನಲ್ಲಿ ತಮ್ಮ ಇಷ್ಟದ ಹಾಡು, ವೀಡಿಯೋ, ಚಾಟ್ ಮಾಡುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಬಹುದಾಗಿದೆ.

#2

#2

ಹೊಸ ಹೊಸ ವಿನ್ಯಾಸ ತಂತ್ರಜ್ಞಾನದಲ್ಲಿ ಉಂಟಾದಂತೆ ನೆಟ್‌ವರ್ಕ್ ವಿನ್ಯಾಸ ಕೂಡ ಬದಲಾಗುತ್ತದೆ. ಹೆಚ್ಚು ಔಟ್‌ಪುಟ್ ಹಾಗೂ ಹೆಚ್ಚು ಇನ್‌ಪುಟ್ (ಮಿಮೊ) ಗೆ ಸಂಬಂಧಿಸಿದಂತೆ ನೆಟ್‌ವರ್ಕ್ ವಿನ್ಯಾಸದಲ್ಲಿ ಬದಲಾವಣೆಯಾಗಲಿದೆ.

#3

#3

ಸ್ಪೆಕ್ಟ್ರಮ್ ವೇಗ ಕೂಡ 5ಜಿಗೆ ಸಂಬಂಧಿಸಿದಂತೆ ವೇಗವಾಗಿದ್ದು 10 GHz ಸ್ಪೆಕ್ಟ್ರಮ್ ಲಭ್ಯತೆ ಇದಕ್ಕಿದೆ. 100 GHz ಸ್ಪೆಕ್ಟ್ರಮ್ ಲಭ್ಯತೆ ಇರುವ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೂಡ ಕಂಪೆನಿ ಕಾರ್ಯಪ್ರವೃತ್ತವಾಗಿದೆ.

#4

#4

ಕಡಿಮೆ ಚಾರ್ಜ್‌ನಲ್ಲಿ ಫೈವ್ ಜೀಯನ್ನು ಬಳಸಲು ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪೆನಿ ಶತಪ್ರಯತ್ನಗಳನ್ನು ಮಾಡುತ್ತಿದೆ. ಇದು ಅತಿ ಕಡಿಮೆ ಚಾರ್ಜಿಂಗ್ ಪವರ್ ಅನ್ನು ಬಳಸಿ ನಿಮಗೆ ಹೆಚ್ಚುವರಿ 5ಜಿ ಬೆಂಬಲವನ್ನು ನೀಡಲಿದೆ.

#5

#5

5ಜಿ ಯು ಬಳಕೆದಾರರಿಗೆ ಉತ್ತಮ ಫೋನ್ ವೈಶಿಷ್ಟ್ಯವನ್ನು ನೀಡಿದ್ದು ಅವರ ಮನಗೆಲ್ಲುವ ಸಕಲ ಪ್ರಯತ್ನವನ್ನು ಮಾಡುತ್ತಿದೆ. ಇನ್ನೂ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ.

#6

#6

ಸೂಪರ್ ಫಾಸ್ಟ್ ಇಂಟರ್ನೆಟ್ ವ್ಯವಸ್ಥೆಯನ್ನು 5ಜಿ ನಿಮಗೆ ಒದಗಿಸಲಿದೆ. ನೀವು ಎಷ್ಟು ಡೇಟಾವನ್ನು ಮುಗಿಸುತ್ತೀರಿ ಎಂಬುದು ಇಲ್ಲಿ ಮುಖ್ಯವಾಗಿರುವುದಿಲ್ಲ, ಆದರೆ 5ಜಿಯಲ್ಲಿ ನೀವು ಎಷ್ಟು ವೇಗದಲ್ಲಿ ಈ ಸೇವೆಯನ್ನು ಬಳಸುತ್ತಿದ್ದೀರಿ ಎಂಬುದು ಮುಖ್ಯವಾಗಿದೆ.

#7

#7

5ಜಿ ಸಂಪೂರ್ಣವಾಗಿ ಅನ್ವೇಷಣೆಯನ್ನು ಆಧರಿಸಿದೆ. 5ಜಿ ಕಾಂಪಿಟೇಬಲ್ ಮತ್ತು ಅನ್ವೇಷಣಾ ಗ್ಯಾಜೆಟ್ ಎಂಬುದಾಗಿ ಕರೆಯಬಹುದಾಗಿದೆ.

#8

#8

ವೇಗದ ತಂತ್ರಜ್ಞಾನವನ್ನು ನೀವು ಪಡೆಯುವುದರ ಜೊತೆಗೆ ಇದು ಹೆಚ್ಚು ದುಬಾರಿ ಎಂದೆನಿಸಲಿದೆ. 4ಜಿ ಮತ್ತು 3ಜಿಗಿಂತಲೂ 5ಜಿ ಸ್ವಲ್ಪ ದುಬಾರಿಯಾಗಿದ್ದು ನಿಮ್ಮ ಜೇಬಿಗೆ ಕತ್ತರಿ ಹಾಕುವಂತಿದೆ.

#9

#9

ಕಷ್ಟ ದುಬಾರಿ ತಂತ್ರಜ್ಞಾನ ಇದಾಗಿದ್ದು, ಇದನ್ನು ಅನ್ವಯಿಸಿಕೊಳ್ಳುವುದು ಕಷ್ಟಕರವಾಗಿದೆ. ಇದಕ್ಕೆ ಹೆಚ್ಚಿನ ಮಟ್ಟಿಗಿನ ಹೂಡಿಕೆ ಅಗತ್ಯವಿದ್ದು ಸರಕಾರಿ ಸ್ನೇಹಿ ನೀತಿಗಳ ಪಾಲನೆಯನ್ನು ಮಾಡಬೇಕಾಗುತ್ತದೆ.

#10

#10

ಲೀಡಿಂಗ್ ಗ್ಲೋಬಲ್ ಟೆಲಿಕಾಮ್ ಕಂಪೆನಿಗಳು ಚೀನಾ ಮೊಬೈಲ್, ವೋಡಾಫೋನ್, ಭಾರತಿ ಏರ್‌ಟೆಲ್ ಐದು ವರ್ಷಗಳ ಯೋಜನೆಯನ್ನು ಅನುಷ್ಟಾನಗೊಳಿಸಲು ಜತೆಸೇರಿಕೊಂಡಿವೆ.

Best Mobiles in India

English summary
In this article we are explaining about 5G functionalities which will soon arrive on your devices. So here are the interesting facts on 5G

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X